
ಭಾರತದಲ್ಲಿ ವರದಕ್ಷಿಣೆ ನಿಷೇಧಿಸಲಾಗಿದ್ದರೂ ಇವತ್ತಿಗೂ ಹಲವು ಕಡೆ ವರದಕ್ಷಿಣೆ ಕೊಡುವುದು ಮತ್ತು ಪಡೆದುಕೊಳ್ಳುವ ಅನಿಷ್ಟ ಪದ್ಧತಿ ಚಾಲ್ತಿಯಲ್ಲಿದೆ. ಹಾಗೆಯೇ ವರದಕ್ಷಿಣೆ ಹೆಸರಲ್ಲಿ ನೀಡೋ ಕಿರುಕುಳ ಸಹ ತಪ್ಪಲ್ಲ. ಕಾನ್ಪುರದಲ್ಲಿ ಹೀಗೆ ವ್ಯಕ್ತಿಯೊಬ್ಬ ಪತ್ನಿಗೆ ತವರು ಮನೆಯಿಂದ 5 ಲಕ್ಷ ವರದಕ್ಷಿಣೆ ತರುವಂತೆ ಕಿರುಕುಳ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವ್ಯಕ್ತಿ 5 ಲಕ್ಷ ವರದಕ್ಷಿಣೆ ತೆಗೆದುಕೊಂಡು ಬಾ, ಇಲ್ಲದಿದ್ದರೆ ತಮ್ಮನ ಜೊತೆ ಮಲಗು ಹೆಂಡತಿಗೆ ಒತ್ತಾಯಿಸಿದ್ದಾನೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಸಂತ್ರಸ್ತೆಯ ಸಹೋದರನ ಪ್ರಕಾರ, ನೌಬಸ್ತಾದ ನಿವಾಸಿಯಾದ ಆತನ ಸಹೋದರಿಯು 15 ಜನವರಿ 2023ರಂದು ವಿವಾಹವಾದರು. ಮದುವೆಯಾದ ಕೆಲವೇ ದಿನಗಳಲ್ಲಿ, ಅತ್ತೆಯಂದಿರು ಐದು ಲಕ್ಷ ರೂಪಾಯಿಗಳ ಹೆಚ್ಚುವರಿ ವರದಕ್ಷಿಣೆಗಾಗಿ ಒತ್ತಾಯಿಸಲು ಪ್ರಾರಂಭಿಸಿದರು. ಪತಿ ತನ್ನ ಸಹೋದರನೊಂದಿಗೆ ಸಂಬಂಧ ಬೆಳೆಸುವಂತೆ ಸಹೋದರಿಗೆ ಒತ್ತಡ ಹೇರಿದ್ದಲ್ಲದೆ ಇಬ್ಬರನ್ನೂ ಬಲವಂತವಾಗಿ ಕೊಠಡಿಯಲ್ಲಿ ಬೀಗ ಹಾಕಿದ್ದನು ಎಂದು ಸಂತ್ರಸ್ಥೆಯ ಸಹೋದರ ಆರೋಪಿಸಿದ್ದಾನೆ.
ಇಷ್ಟು ಮಾತ್ರವಲ್ಲದೆ ಸಂತ್ರಸ್ತೆಯ ಮೇಲೆ ಸೀಮೆ ಎಣ್ಣೆ ಸುರಿದು ಸಾಯಿಸಲು ಸಹ ಯತ್ನಿಸಿದ್ದಾರೆ. ಪತಿ ಮತ್ತು ಅವರ ಸಹೋದರ ಸಹೋದರಿಯ ಹೊಟ್ಟೆಗೆ ಒದ್ದರು, ಇದು ಆಕೆಯ ಮೂರು ತಿಂಗಳ ಗರ್ಭಪಾತಕ್ಕೆ ಕಾರಣವಾಯಿತು ಎಂದು ಸಂತ್ರಸ್ತೆಯ ಸಹೋದರ ತಿಳಿಸಿದ್ದಾನೆ.
ಸಹೋದರನ ಪ್ರಕಾರ, ಅವನು 30 ಮೇ 2024 ರಂದು ತನ್ನ ಸಹೋದರಿಯ ಅತ್ತೆಯ ಮನೆಗೆ ಹೋದಾಗ, ಅವನನ್ನು ನಿಂದಿಸಿ, ಹೊಡೆದು ಮನೆಯಿಂದ ಹೊರಹಾಕಲಾಯಿತು. ಪ್ರಕರಣದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿ ಮನೆಯಿಂದ ಬಂದಿಲ್ಲ ಬುಲೆಟ್ ಬೈಕ್, 2 ಲಕ್ಷ ರೂ ವರದಕ್ಷಿಣೆ, ಫೋನ್‌ನಲ್ಲೇ ಡಿವೋರ್ಸ್ ನೀಡಿದ ಪತಿ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.