ಇಲ್ಲಿದೆ ನೋಡಿ ನೀತಾ ಅಂಬಾನಿ ಸೌಂದರ್ಯದ ಗುಟ್ಟು!

By Mahmad Rafik  |  First Published Jun 2, 2024, 10:51 AM IST

ನೀತಾ ಅಂಬಾನಿಯ ಸೌಂದರ್ಯದ ಗುಟ್ಟು ಅವರು ಕುಡಿಯುವ ವಿಶೇಷವಾಗಿ ಶುದ್ಧೀಕರಣಗೊಂಡ ನೀರು ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತವೆ. ನೀತಾ ಅಂಬಾನಿ ಕುಡಿಯುವ ಒಂದು ಲೀಟರ್‌ ನೀರಿಗೆ 5 ಸಾವಿರ ರೂಪಾಯಿ ಎಂದು ಹೇಳಲಾಗುತ್ತದೆ. 


ಭಾರತದ ಆಗರ್ಭ ಶ್ರೀಮಂತ ಕುಟುಂಬ ಮುಕೇಶ್ ಅಂಬಾನಿ-ನೀತಾ ಅಂಬಾನಿ (Mukesh Ambani-Neeta Ambani) ಪುತ್ರ ಅನಂತ್ ಮದುವೆ (Anant Ambani Wedding) ಸಂಭ್ರಮದಲ್ಲಿದ್ದಾರೆ. ಮಗನ ವಿವಾಹ ಪೂರ್ವ ಸಮಾರಂಭದಲ್ಲಿ ಅನಂತ್-ರಾಧಿಕಾ ಜೋಡಿಯ ಮಧ್ಯದಲ್ಲಿಯೂ ನೀತಾ ಅಂಬಾನಿಯವರ ಸೌಂದರ್ಯ ಹೆಚ್ಚು ಗಮನ ಸೆಳೆದಿತ್ತು. ವಯಸ್ಸು 60 ಆದ್ರೂ ಯಾವ ಬಾಲಿವುಡ್ ನಟಿಗಿಂತಲೂ ನೀತಾ ಅಂಬಾನಿ ಕಡಿಮೆ ಇಲ್ಲ ಅನ್ನೋ ರೀತಿ ಕಂಗೊಳಿಸುತ್ತಾರೆ. ನೀತಾ ಅಂಬಾನಿಯ ಸೌಂದರ್ಯದ ಗುಟ್ಟು ಅವರು ಕುಡಿಯುವ ವಿಶೇಷವಾಗಿ ಶುದ್ಧೀಕರಣಗೊಂಡ ನೀರು ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತವೆ. ನೀತಾ ಅಂಬಾನಿ ಕುಡಿಯುವ ಒಂದು ಲೀಟರ್‌ ನೀರಿಗೆ 5 ಸಾವಿರ ರೂಪಾಯಿ ಎಂದು ಹೇಳಲಾಗುತ್ತದೆ. 

ಇಡೀ ಜಗತ್ತು ನದಿ ಅಥವಾ ಅಂತರ್ಜಲದಿಂದ ಸಿಗುವ ನೀರು ಕುಡಿಯುತ್ತದೆ. ಆದ್ರೆ ನೀತಾ ಅಂಬಾನಿ ಕುಡಿಯುವ ನೀರು ಬೇರೆಯಾಗಿರುತ್ತದೆ. ಇದು ಅಂತರ್ಜಲದ ನೀರು ಆಗಿದ್ದರೂ, ಅದನ್ನು ಫಿಲ್ಟರ್ ಮಾಡೋಕೆ ವಿಶೇಷ ಮಷಿನ್‌ಗಳಿವೆ. ಈ ಮಷಿನ್‌ಗಳಿಂದ ಶುದ್ಧೀಕರಣಗೊಂಡ ನೀರನ್ನು ಮಾತ್ರ ನೀತಾ ಅಂಬಾನಿ ಬಳಸುತ್ತಾರೆ. ಈ ನೀರಿನ ಬೆಲೆ ಪ್ರತಿ ಲೀಟರ್‌ಗೆ 5,000 ರೂಪಾಯಿ ಎಂದು ಹೇಳಲಾಗುತ್ತದೆ. 

Tap to resize

Latest Videos

ನೀತಾ ಅಂಬಾನಿಯ 500 ಕೋಟಿ ಮೌಲ್ಯದ ಅಭರಣದ ನಕಲು 178 ರೂ.ಗೆ ಮಾರಾಟ! ವೈರಲ್ ಆಯ್ತು ವಿಡಿಯೋ

ಚಿನ್ನದ ಬಾಟೆಲ್‌ನಲ್ಲಿ ಸಂಗ್ರಹವಾಗುತ್ತೆ ನೀರು 

ಇನ್ನು ನೀತಾ ಅಂಬಾನಿ ಕುಡಿಯುವ ನೀರನ್ನು ಸಂಗ್ರಹಿಸಲು ಚಿನ್ನದ ಬಾಟೆಲ್‌ಗಳನ್ನು ಸಿದ್ಧಪಡಿಸಲಾಗುತ್ತದೆ. ಬಾಟೆಲ್ ಆಕೃತಿ ಸಹ ವಿಶೇಷ ವಿನ್ಯಾಸವನ್ನು ಹೊಂದಿದೆ. ಈ ಒಂದು ಬಾಟೆಲ್ ಬೆಲೆ ಸುಮಾರು 68 ಲಕ್ಷ ರೂಪಾಯಿ ಆಗಿದೆ. ವಿಶೇಷ ಯಂತ್ರೋಪಕರಣಗಳಲ್ಲಿ ಫಿಲ್ಟರ್ ಆಗುವ ನೀರು ಚಿನ್ನದ ಬಾಟೆಲ್ ಸೇರೋದರಿಂದ ಇದರ ಗುಣಮಟ್ಟ ಮತ್ತಷ್ಟು ಹೆಚ್ಚಾಗುತ್ತದೆ. ಇಂತಹ ವಿಶೇಷ ನೀರು ಕುಡಿಯುವ ಕಾರಣ ನೀತಾ ಅಂಬಾನಿ ತ್ವಚೆಯ ಕಾಂತಿ ಮತ್ತು ಸೌಂದರ್ಯ ಬಾಲಿವುಡ್ ನಟಿಯರಿಗಿಂತಲೂ ಒಂದು ಕೈ ಮೇಲಿದೆ ಅಂತಾನೇ ಹೇಳಬಹುದು. 

ಫಿಟ್ನೆಸ್‌ಗೆ ಮೊದಲ ಆದ್ಯತೆ 

ವಯಸ್ಸು 60 ಆದರೂ 30 ರಿಂದ 35ರ ಮಹಿಳೆಯಂತೆ ಕಾಣುವ ನೀತಾ ಅಂಬಾನಿ ಫಿಟ್ನೆಸ್‌ಗೆ ಮೊದಲ ಆದ್ಯತೆ ನೀಡುತ್ತಾರಂತೆ. ಎಷ್ಟೇ ಕೆಲಸದ ಒತ್ತಡವಿದ್ರೂ ಮಲಗುವ ಸಮಯ, ಆಹಾರ ಸೇವನೆ ಮತ್ತು ಚರ್ಮದ ಆರೈಕೆಯನ್ನು ತಪ್ಪದೇ ಪಾಲಿಸುತ್ತಾರೆ. ಆಹಾರ ಸೇವನೆಯಲ್ಲಿಯೂ ಅತ್ಯಂತ ಕಾಳಜಿ ತೆಗೆದುಕೊಳ್ಳುತ್ತಾರೆ.

ಭಾವಿ ಸೊಸೆ ರಾಧಿಕಾಗೆ ದುಬೈನಲ್ಲಿ 640 ಕೋಟಿ ಮೌಲ್ಯದ ವಿಲ್ಲಾ ಉಡುಗೊರೆ ನೀಡಿದ ನೀತಾ ಅಂಬಾನಿ; ಇಲ್ಲಿವೆ ಫೋಟೋಸ್

ಜಿಮ್‌ನಲ್ಲಿ ಕಸರತ್ತು

ನೀತಾ ಅಂಬಾನಿ ಉತ್ತಮ ನೃತ್ಯಗಾರ್ತಿಯೂ ಹೌದು. ಈಗಲೂ ಹೆಜ್ಜೆ ಹಾಕುತ್ತಿದ್ರೂ 30ರ ಯುವತಿಯರನ್ನು ನಾಚಿಸುವಂತಿರುತ್ತದೆ. ದೇಹ ಟೋನ್ ಮತ್ತು ಸ್ಲಿಮ್ ಆಗಿರಲು ಜಿಮ್‌ನಲ್ಲಿ ಕಸರತ್ತು ಮಾಡೋದನ್ನು ತಪ್ಪಿಸಲ್ಲ. ವಿಶೇಷ ಆರೋಗ್ಯ ತಜ್ಞರ ಸಲಹೆ ಮೇರೆಗೆ ವಾಕಿಂಗ್, ಪುಶ್‌ಅಪ್, ಪುಲ್‌ಅಪ್‌  ಮಾಡುವ ಮೂಲಕ ಜಿಮ್‌ನಲ್ಲಿ ದೇಹವನ್ನು ದಂಡಿಸುತ್ತಾರೆ. ನೀತಾ ಅಂಬಾನಿ ಗುಜರಾತಿ ಶೈಲಿಯ ಆಹಾರ ಇಷ್ಟಪಡುತ್ತಾರೆ. ಊಟದಲ್ಲಿ ಹಸಿರು ತರಕಾರಿ, ಬೇಳೆಕಾಳಿಗೆ ಮೊದಲ ಆದ್ಯತೆ ನೀಡುತ್ತಾರೆ. ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್‌ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ನೀತಾ ಅಂಬಾನಿ ಸೇವನೆ ಮಾಡುತ್ತಾರೆ.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಮಹೋತ್ಸವಕ್ಕಾಗಿ ಅಂಬಾನಿಗಳು ಈಗಾಗಲೇ 1259 ಕೋಟಿ ರೂ. ಖರ್ಚು ಮಾಡಿದ್ದಾರೆ. ಈ ವಿವಾಹ ಸಮಾರಂಭ ಜುಲೈ ತಿಂಗಳಲ್ಲಿ ನಡೆಯುತ್ತದೆ.

click me!