
ಸೋಷಿಯಲ್ ಮೀಡಿಯಾ ಹೊರತುಪಡಿಸಿದ ಒಂದು ಜೀವನವನ್ನು ಊಹಿಸುವುದು ಸಹ ಕಷ್ಟ. ಹೀಗಾಗಿಯೇ ಇವತ್ತಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಎಲ್ಲರೂ ಆಂಡ್ರಾಯ್ಡ್ ಮೊಬೈಲ್ ಬಳಸ್ತಾರೆ. ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂನ್ನು ಡೌನ್‌ಲೋಡ್ ಮಾಡಿಕೊಳ್ತಾರೆ. ಯುವಜನರು ಈ ಸಾಮಾಜಿಕ ಜಾಲತಾಣ (Social media)ಗಳನ್ನು ರೀಲ್ಸ್, ವೀಡಿಯೋ ನೋಡೋಕೆ ಹೆಚ್ಚು ಬಳಸ್ತಾರೆ. ಅದನ್ನು ಹೊರತುಪಡಿಸಿ ಚಾಟಿಂಗ್, ವೀಡಿಯೋ ಕಾಲ್ ಅಂತ ಮಾಡ್ತಾರೆ. ಇನ್ನೂ ಕೆಲವೊಬ್ಬರು ಈ ಸಾಮಾಜಿಕ ಜಾಲತಾಣದಲ್ಲಿ ಫ್ರೆಂಡ್ಸ್‌ನ್ನು ಮಾಡಿಕೊಳ್ತಾರೆ. ನನಗ್ಯಾರೂ ಫ್ರೆಂಡ್ಸೇ ಇಲ್ಲ ಎಂದು ಅಂದ್ಕೊಳ್ಳೋರು, ಒಂಟಿ (Alone)ಯಾಗಿರುವವರು ಹೀಗೆಲ್ಲಾ ಮಾಡೋದು ಹೆಚ್ಚು ಆದ್ರೆ ಇದು ಎಷ್ಟೋ ಬಾರಿ ಯಡವಟ್ಟಿಗೂ ಕಾರಣವಾಗುತ್ತೆ.
ಬೋರಾಗ್ತಿದೆ ಅಂತ ಸೋಷಿಯಲ್ ಮೀಡಿಯಾ ಬಳಸಲು ಆರಂಭಿಸಿದವರು ಅದಕ್ಕೆ ಅಡಿಕ್ಟ್ ಆಗಿ ಬಿಡ್ತಾರೆ. ಜೀವನದ ಸಮಸ್ಯೆಗಳಿಂದ ಹೊರ ಬಂದು ರಿಲ್ಯಾಕ್ಸ್ ಆಗೋಕೆ ಇವುಗಳ ಬಳಕೆ ತುಂಬಾ ಬೆಸ್ಟ್ ಅನಿಸೋಕೆ ಶುರುವಾಗುತ್ತೆ. ಹೀಗಾಗಿಯೇ ಶಾಲೆ ಬಿಟ್ಟ ಹುಡುಗರು ಅಪ್ಪನ ಬೈಗುಳದಿಂದ ಬೇಸತ್ತು, ಗೃಹಿಣಿಯರು (Housewife) ಗಂಡನ ಕಿರುಕುಳದಿಂದ ರೋಸಿ ಹೋಗಿ, ಹುಡುಗಿ, ಬಾಯ್‌ಫ್ರೆಂಡ್ ನೆಗ್ಲೆಕ್ಟ್ ಮಾಡ್ತಿದ್ದಾನೆ ಅನ್ನೋ ಕಾರಣ ಕೊಟ್ಟು ಇಂಥಾ ಸೋಷಿಯಲ್ ಮೀಡಿಯಾವನ್ನೇ ನೆಚ್ಚಿಕೊಳ್ತಾರೆ. ಅದರಲ್ಲೂ ಹೆಚ್ಚಿನವರು ತಪ್ಪದೇ ಫೇಸ್‌ಬುಕ್ ಬಳಸ್ತಾರೆ. ತಾವು ಹೋದ ಸ್ಥಳಗಳು, ಫೋಟೋಗಳನ್ನು ಇದರಲ್ಲಿ ಶೇರ್ ಮಾಡ್ತಾರೆ.
WhatsApp Hack: 50 ಕೋಟಿ ಜನರ ವಾಟ್ಸಪ್ ಡೇಟಾ ಸೇಲ್..! 60 ಲಕ್ಷ ಭಾರತೀಯರ ವಾಟ್ಸಪ್ ನಂಬರ್‌ಗೂ ಕುತ್ತು..!
ಫೇಸ್‌ಬುಕ್‌ನಲ್ಲಿ ಫ್ರೆಂಡ್ಸ್ ಮಾಡ್ಕೊಳ್ಳೋದು ಸರೀನಾ ?
ಫೇಸ್‌ಬುಕ್ ಸಮಯ ಕಳೆಯೋಕೆ ಹೆಚ್ಚಿನವರು ಬಳಸೋ ಸಾಧನ. ಹಾಗೆ ಸುಮ್ನೆ ಸ್ಕ್ರಾಲ್ ಮಾಡ್ತಾ ಮತ್ತೊಬ್ಬರ ಪೋಟೋಗೆ ಲೈಕ್ ಕೊಡ್ತಾ ಹೋಗೋದು ಅಷ್ಟೆ. ಆದರೆ ಕೆಲವೊಬ್ಬರು ಅದನ್ನೋ ಮೀರಿ ತಮ್ಮ ಸಮಸ್ಯೆಗಳಿಗೆ (Problems) ಅಲ್ಲಿ ಪರಿಹಾರ ಹುಡುಕೋಕೆ ಶುರು ಮಾಡ್ತಾರೆ. ಹಾಯ್ ಎಂದು ಕಳುಹಿಸಿದವರಿಗೆ ಹಲೋ ಎಂದು ಕಳುಹಿಸಿ, ತಿಂಡಿ ಆಯ್ತಾ, ಊಟ ಆಯ್ತಾ ಎಂದು ಆರಂಭಿಸಿ ಎಲ್ಲಾ ಪರ್ಸನಲ್ ವಿಚಾರಗಳನ್ನು ಹಂಚಿಕೊಳ್ಳೋಕೆ ಶುರು ಮಾಡ್ತಾರೆ. ಅದೆಷ್ಟೋ ಬಾರಿ ಮನೆಯಲ್ಲಿನ ಸಮಸ್ಯೆಗಳಿಂದ ಹೊರಬರೋಕೆ ಇಂಥಾ ಫ್ರೆಂಡ್ಸ್ ಸಾಂತ್ವನ ನೀಡುವ ಹೆಗಲು ಅಂತನಿಸಬಹುದು. ಆದ್ರೆ ಹೀಗೆ ಫೇಸ್ ಬುಕ್ ಮೂಲಕ ಫ್ರೆಂಡ್ಸ್ ಆದವರು ಎಲ್ಲಿಯವರು, ಎಂಥವರು ಎಂದು ನಮಗೆ ತಿಳಿದಿರುವುದಿಲ್ಲ. ಫೇಕ್ ವ್ಯಕ್ತಿಯೂ ಆಗಿರಬಹುದು ಹೀಗಾಗಿ ಇಲ್ಲಿ ಅದೆಷ್ಟೋ ಬಾರಿ ಅನಾಹುತಗಳು ನಡೆಯುತ್ತವೆ.
ಹುಡುಗಿಯರಿಗೆ ಮೋಸ, ಬ್ಲ್ಯಾಕ್‌ಮೇಲ್
ಸುಮ್ನೆ ಚಾಟ್ ಮಾಡ್ತೀನಿ ಅಂತ ಹೊರಟ ಹುಡುಗಿ, ಹುಡುಗನನ್ನು ಹಚ್ಚಿಕೊಳ್ತಾಳೆ. ತನ್ನ ಎಲ್ಲಾ ಮಾಹಿತಿಯನ್ನು ಹೇಳ್ತಾಳೆ. ಬಣ್ಣದ ಮಾತುಗಳಿಗೆ ಮರುಳಾಗಿ ಆತ ಹೇಳಿದ ರೀತಿಯ ಅಶ್ಲೀಲ ಫೋಟೋ, ವೀಡಿಯೋಗಳನ್ನು ಮಾಡಿ ಕಳುಹಿಸ್ತಾಳೆ. ಇದನ್ನೇ ದಾಳವಾಗಿಟ್ಟು ಯುವಕ, ಆಕೆಗೆ ಭವಿಷ್ಯದಲ್ಲಿ (Future) ಟಾರ್ಷರ್ ಕೊಡಲು ಆರಂಭಿಸುತ್ತಾನೆ. ಆಕೆಯ ಫೋಟೋಗಳನ್ನು ಇಟ್ಟುಕೊಂಡು ಹಣಕ್ಕಾಗಿ, ಒಡವೆಗಾಗಿ, ಹೊಟೇಲ್‌ಗೆ ಬರುವಂತೆ ಒತ್ತಾಯಿಸುತ್ತಾನೆ. ಹೀಗೆ ಮೋಸ ಹೋದವರಲ್ಲಿ ಮಹಿಳೆಯರೂ ಸೇರಿದ್ದಾರೆ.
ಹೊಸ ಫ್ರೆಂಡ್ಸ್ ಮಾಡಿಕೊಳ್ಳಲು ಕಷ್ಟವಾದರೆ,ಚುಯಿಂಗ್ ಗಮ್ ಹೆಲ್ಪ್‌ಗೆ ಬರುತ್ತೆ, ಹೇಗೆ?
ಮದುವೆಯಾದ ಗೃಹಿಣಿಯರು ಸಹ ಗಂಡನ ವರ್ತನೆಯಿಂದ ಬೇಸತ್ತು ಅಥವಾ ಕೆಲವೊಮ್ಮೆ ಟೈಂಪಾಸ್‌ಗಾಗಿ ಎಫ್‌ಬಿಯಲ್ಲಿ ಟೆಕ್ಸ್ ಮಾಡುವವರ ಜೊತೆ ಚಾಟ್ ಶುರು ಮಾಡುತ್ತಾರೆ. ತಮ್ಮ ಮನೆಯ ಸಮಸ್ಯೆಯಿಂದ ರಿಲೀಫ್ ಪಡೆಯಲು ಈ ರೀತಿ ಫ್ಲರ್ಟ್ ಮಾಡೋದೆ ಉತ್ತಮ ಪರಿಹಾರ ಎಂದುಕೊಳ್ಳುತ್ತಾರೆ. ಕೊನೆಗೊಮ್ಮೆ ಅದುವೇ ಉರುಳಾಗಿ ಬಿಡುತ್ತದೆ.
ಎಲ್ಲಾ ರೀತಿಯಲ್ಲಿ ಚಾಟ್ ಮಾಡಿದ ನಂತರ ಗಂಡಸರು ಅದೇ ಚಾಳಿಯನ್ನು ಮುಂದುವರಿಸುತ್ತಾರೆ. ಆದರೆ ಗೃಹಿಣಿಯಾದವಳು ಎಚ್ಚೆತ್ತು ವಾಪಾಸ್ ತನ್ನ ಕೌಟುಂಬಿಕ ಜೀವನಕ್ಕೆ ಬರಬೇಕೆಂದು ಬಯಸುತ್ತಾಳೆ. ಆದರೆ ಈ ಸಂದರ್ಭದಲ್ಲಿ ಹುಡುಗನ ಕಿರುಕುಳ, ಹಣದ ಡಿಮ್ಯಾಂಡ್ , ಮನೆ ಮಂದಿಗೆ ತಿಳಿಸಿಬಿಡುತ್ತೇನೆ ಎಂಬ ಬೆದರಿಕೆ ಮೊದಲಾದ ಕಾರಣದಿಂದ ಇದು ಸಾಧ್ಯವಾಗುವುದಿಲ್ಲ. ಹೀಗೆ ಮೋಸ ಹೋಗುವ ಅದೆಷ್ಟೋ ಹುಡುಗರು, ಗೃಹಿಣಿಯರು ಇದ್ದಾರೆ. ಸಮಸ್ಯೆಯ ಸುಳಿಯಿಂದ ಹೊರಬರಲಾಗದೆ ಒದ್ದಾಡುತ್ತಾರೆ. ಹೀಗಾಗಿ ಯಾವಾಗಲೂ ಎಫ್‌ಬಿಯಲ್ಲಿ ಫ್ರೆಂಡ್ಸ್ ಮಾಡ್ಕೊಳ್ಳೋ ಮುನ್ನ ಎಚ್ಚರವಿರಲಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.