
ಕೂದಲು ಹೆಣ್ಣುಮಕ್ಕಳ ಸೌಂದರ್ಯದ ಒಂದು ಭಾಗ. ಕೂದಲನ್ನ(Hair) ವಿವಿಧ ರೀತಿಯಲ್ಲಿ ವಿನ್ಯಾಸ ಮಾಡಿಕೊಂಡು ಮಿಂಚುವುದು ಸಹಜ. ಸಾಮಾನ್ಯವಾಗಿ ಇಗಿನ ತಲೆಮಾರಿನ ಹೆಣ್ಣುಮಕ್ಕಳು ಕೂದಲನ್ನ ಕಟ್ಟಿಕೊಳ್ಳುವುದಕ್ಕಿಂತ ಹಾಗೇ ಬಿಡುವುದೇ ಹೆಚ್ಚು. ಕೂದಲು ಕಟ್ಟಿಕೊಳ್ಳುವುದರಿಂದ ಹಲವಾರು ಪ್ರಯೋಜನಗಳು ಇವೆ. ಕೇವಲ ಸೌಂದರ್ಯಕ್ಕಾಗಿ ಮಾತ್ರ ಅಲ್ಲದೆ ಆರೋಗ್ಯದ ಗುಟ್ಟುಗಳು ಸಹ ಕೂದಲು ಕಟ್ಟಿಕೋಳ್ಳುವುದರಲ್ಲಿದೆ. ಇದು ಮಹಿಳೆಯರಲ್ಲಿ ಪರಂಪರಾನುಗತವಾಗಿ ನಡೆದುಕೊಂದು ಬಂದಿದೆ. ಸಾಮಾನ್ಯವಾಗಿ ಮನೆಗಳಲ್ಲಿ ಕೂದಲು ಬಿಟ್ಟುಕೊಂಡಿದ್ದರೆ ಮನೆಯಲ್ಲಿ ಅಮ್ಮ, ಅಜ್ಜಿ ತಲೆ ಕಟ್ಟಿಕೊ ಎಂದು ಬೈಯುವುದು ಸಾಮಾನ್ಯ. ಹಾಗೇ ಎಲ್ಲಾರು ಬೈಸಿಕೊಂಡಿರುತ್ತೇವೆ. ಆದರೆ ಇದರ ಹಿಂದೆ ನಮಗೆ ಗೊತ್ತೇ ಇರದಂತಹ ಸಾಕಷ್ಟು ಉಪಯೋಗಗಳು ಇವೆ. ಹೌದು ಕೂದಲು ಬಿಡದೇ ಜಡೆ ಹಾಕುವುದರಿಂದ (Womens Braids) ನಮ್ಮ ದೇಹ (Body) ಆರೋಗ್ಯವಾಗಿರುತ್ತೆ ಎಂದರೆ ನೀವು ನಂಬಲೇ ಬೇಕು. ಹಾಗಾದರೆ ಇದರಿಂದ ಆರೋಗ್ಯಕ್ಕೆ(Health) ಯಾವ ರೀತಿಯ ಪ್ರಯೋಜನಗಳಿವೆ? ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ನಮ್ಮ ಹಿಂದೂ ಸಂಪ್ರದಾಯದಲ್ಲಿ ಹೆಣ್ಣಿನ ಜಡೆಗೆ ವಿಶೇಷವಾದ ಸ್ಥಾನವಿದೆ. ಹೆಣ್ಣುಮಕ್ಕಳ ಸೌಂದರ್ಯದ ಪ್ರತೀಕ ಎಂದು ಕೂದಲನ್ನ ಪರಿಗಣಿಸಲಾಗುತ್ತದೆ. ಕೆಲವರು ಕೂದಲು ಜಡೆ (Braiding) ಹಾಕುವುದು ಕೇವಲ ಅಲಂಕಾರಕ್ಕೆ ಎಂದು ಭಾವಿಸುವವರಿದ್ದಾರೆ. ಹಾಗಾಗಿ ಕೆಲವು ವಿಶೇಷ ಕಾರ್ಯಕ್ರಮಗಳಲ್ಲಿ ಮಾತ್ರ ಜಡೆ ಹೆಣೆದುಕೊಂಡು. ಅದಕ್ಕೆ ವಿವಿಧ ಅಲಂಕಾರವನ್ನ ಮಾಡುವುದು. ಸಾಮಾನ್ಯವಾಗಿ ಕೂದಲು ಬಿಟ್ಟುಕೊಂಡಿರುವ ಹುಡುಗಿಯರಿಗಿಂತ ಲಕ್ಷಣವಾಗಿ ಜಡೆ ಹೆಣೆದುಕೊಂಡಿರುವವರು (Girls Braiding) ಬೇಗ ಆಕರ್ಷಕವಾಗಿ ಕಾಣುತ್ತಾರೆ. ಪ್ರತಿನಿತ್ಯವೂ ಕೂದಲು ಬಿಟ್ಟುಕೊಂಡಿರುವುದಕ್ಕಿಂತ ಜಡೆ ಹಾಕಿಕೊಳ್ಳುವ ಅಭ್ಯಾಸ ಮಾಡಿಕೊಂಡರೆ ನಿಮ್ಮ ಆರೋಗ್ಯದಲ್ಲಿ (Health) ಕೆಲವು ಬದಲಾವಣೆಯನ್ನ ಕಾಣಬಹುದು.
ಕೂದಲಿಗೆ ಪ್ರತಿನಿತ್ಯ ಜಡೆ ಹಾಕುವುದರಿಂದ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ. ಇಗಿನ ವಾತಾವರಣದಲ್ಲಿ ನೀರು, ಬೆಳಕು,ಗಾಳಿ ಎಲ್ಲವೂ ಮಾಲಿನ್ಯದಿಂದ ಕೂಡಿರುವುದರಿಂದ ಕೂದಲು ಒಡೆಯುವಂತಹ ಸಾಧ್ಯತೆ ಹೆಚ್ಚು. ಹೀಗಾದಾಗ ಇದು ಕೂದಲು ಉದುರುವಿಕೆಗೆ ಹೆಚ್ಚಾಗುತ್ತದೆ. ಇದರಿಂದ ಕೂದಲು ತೆಳುವಾಗುತ್ತದೆ. ಪ್ರತಿನಿತ್ಯ ಬೇರೆ ಬೇರೆ ರೀತಿಯ ಹೇರ್ ಸ್ಟೈಲ್ ಮಾಡುವುದು, ಮೃದು ಹಾಗೂ ಶೈನಿಯಾಗಿ ಮಾಡಲು ವಿವಿಧ ಉಪಕರಣಗಳನ್ನ ಬಳಸುವುದರಿಂದ ಕೂಡ ಕೂದಲಿನ ತುದಿಗಳಿಗೆ ಹಾನಿಯಾಗುವುದಕ್ಕೆ ಪ್ರಮುಖ ಕಾರಣವಾಗಬಹುದು. ಆದ್ದರಿಂದ, ಕೂದಲನ್ನು ಕಟ್ಟುವುದರಿಂದ ಅದಕ್ಕೆ ಪೋಷಣೆ ಸಿಗುತ್ತದೆ. ಇದರಿಂದ ಕೂದಲ ತುದಿ ಒಡೆಯುವ ಸಮಸ್ಯೆ ಕಡಿಮೆಯಾಗುತ್ತದೆ. ಕೂದಲು ಉದುರುವುದಿಲ್ಲ ಇದರಿಂದ ಆರೋಗ್ಯಕರ ಕೂದಲಿನ ಬೆಳವಣಿಗೆಗೆ ಸಹಾಯವಾಗುತ್ತದೆ.
ಹಾಗೇ ಜಡೆಯನ್ನ ಹಾಕುವುದರಿಂದ ನೆತ್ತಿಯ ತೇವಾಂಶವನ್ನ ಕಾಯ್ದುಕೊಳ್ಳಬಹುದು. ಕೂದಲು ದಷ್ಟ ಪುಷ್ಟವಾಗಿ ಬೆಳೆಯಬೇಕೆಂದರೆ ಎಂದರೆ ನೆತ್ತಿಯ ಮೇಲಿನ ಚರ್ಮ ಚೆನ್ನಾಗಿರುವುದು ಬಹಳ ಮುಖ್ಯವಾಗುತ್ತದೆ. ಒಂದು ವೇಳೆ ನೆತ್ತಿಯ ಮೇಲಿನ ಚರ್ಮ ಒಣಗಿದರೆ ಹೊಟ್ಟು ಆಗುವ ಸಾಧ್ಯತೆ ಹೆಚ್ಚು. ಹೀಗೆ ಹೊಟ್ಟಿನ ಸಮಸ್ಯೆ ಶುರುವಾದರೆ ಕೂದಲು(Hair)ಆರೋಗ್ಯವಾಗಿ ಬೆಳೆಯುವುದಿಲ್ಲ. ಹಾಗೆ ಮುಖದ ಮೇಲೆ ಮೊಡವೆಗಳು ಆಗುವಂತಹ ಸಾಧ್ಯತೆಗಳು ಸಹ ಇರುತ್ತದೆ. ನೆತ್ತಿಯ ಮೇಲಿನ ಚರ್ಮ ಒಣಗದಂತೆ ನೋಡಿಕೊಳ್ಳಲು, ವಾರದಲ್ಲಿ ಎರಡು ಬಾರಿಯಾದರೂ ಕೊಬ್ಬರಿ ಎಣ್ಣೆಯನ್ನ ಹಾಕಿ ಜೊತೆಗೆ ರಾತ್ರಿ ಜಡೆ ಹಾಕಿಕೊಳ್ಳುವುದು ಕೂಡ ಒಳ್ಳೆಯದು. ಏಕೆಂದರೆ ಇದು ನೆತ್ತಿಯ ಮೇಲಿನ ಶಿಲೀಂಧ್ರ ಸಮಸ್ಯೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ಹಾಗೂ ಯಾವಾಗಲೂ ಕೂದಲ ಬುಡದಲ್ಲಿ ದೀರ್ಘಕಾಲದ ವರೆಗೆ ತೇವಾಂಶವನ್ನ ಕಾಪಾಡುತ್ತದೆ. ಪರಿಣಾಮವಾಗಿ ಯಾವುದೇ ರೀತಿಯಲ್ಲಿಯೂ ತುರಿಕೆ ಮತ್ತು ತಲೆಹೊಟ್ಟಿನ (Dandruff) ಸಮಸ್ಯೆ ಕಂಡು ಬರುವುದಿಲ್ಲ. ಇದೆಲ್ಲದರ ಜೊತೆಗೆ ಕೂದಲು ಬಿಡುವುದರಿಂದ ನಕಾರಾತ್ಮಕ ಶಕ್ತಿಗಳು ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತವೆ ಎಂದು ಕೂಡ ಹೇಳಗಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.