
ಮಕ್ಕಳಾ (Children) ದ್ಮೇಲೆ ತಾಯಿ (Mother) ಯ ದೇಹದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಗರ್ಭ (Pregnancy) ಧರಿಸಿದ ನಂತ್ರ ಮಹಿಳೆಯ ತೂಕ (Weight) ಹೆಚ್ಚಾಗಲು ಶುರುವಾಗುತ್ತದೆ. ಹೆರಿಗೆಯಾದ ನಂತ್ರವೂ ತೂಕ ಇಳಿಸಿಕೊಳ್ಳುವುದು ಸುಲಭವಲ್ಲ. ಹೆರಿಗೆ ನಂತರ ತಾಯಿಯ ದೇಹವು ಚೇತರಿಸಿಕೊಳ್ಳಲು ಮತ್ತು ವಿಶ್ರಾಂತಿ ಪಡೆಯಲು ಸಮಯ ಬೇಕಾಗುತ್ತದೆ. ಮಾನಸಿಕ ಆರೋಗ್ಯದಲ್ಲೂ ಬದಲಾವಣೆಯಾಗುವ ಕಾರಣ ಅದ್ರಿಂದ ಚೇತರಿಸಿಕೊಳ್ಳುವುದು ಕಷ್ಟ. ಹೆರಿಗೆ ನಂತ್ರ ತೂಕ ಇಳಿಸಿಕೊಳ್ಳುವುದು ಬಹಳ ಮುಖ್ಯ. ಡಿಲೆವರಿ ನಂತ್ರ ಯೋಗವನ್ನು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಮಗುವಿಗೆ ಜನ್ಮ ನೀಡಿದ ನಂತರ ಒತ್ತಡ ಮತ್ತು ಖಿನ್ನತೆಯನ್ನು ಯೋಗದ ಮೂಲಕ ಕಡಿಮೆ ಮಾಡಬಹುದು. ತಜ್ಞರ ಪ್ರಕಾರ, ಯೋಗಾಭ್ಯಾಸವನ್ನು ಮಗುವಿನ ಜನನದ ನಂತರ ಕೆಲವು ದಿನಗಳ ಒಳಗೆ ಪ್ರಾರಂಭಿಸಬೇಕು. ಆದ್ರೆ ಹೆರಿಗೆ ಯಾವ ರೀತಿಯಲ್ಲಾಗಿದೆ ಎಂಬುದು ಮುಖ್ಯವಾಗುತ್ತದೆ.
ಹೆರಿಗೆಯ ನಂತರ ಯೋಗವನ್ನು ಅಭ್ಯಾಸ ಮಾಡುವುದು ತಾಯಿಗೆ ತುಂಬಾ ಪ್ರಯೋಜನಕಾರಿ. ಯೋಗ ಮಾಡ್ಬೇಕೆನ್ನುವ ಕಾರಣಕ್ಕೆ ಒಂದೇ ಬಾರಿ ಎಲ್ಲ ರೀತಿಯ ಯೋಗವನ್ನು ಪ್ರಯತ್ನಿಸಬಾರದು. ತಾಯಿಯ ಸಾಮರ್ಥ್ಯಕ್ಕೆ ಅನುಗುಣವಾಗಿ ಯೋಗವನ್ನು ಮಾಡ್ಬೇಕು. ಹಾಗೆ ಕ್ರಮೇಣ ಯೋಗದ ಅವಧಿಯನ್ನು ಹೆಚ್ಚು ಮಾಡ್ಬೇಕು. ಹೆರಿಗೆ ನಂತ್ರ ಯೋಗ ಹಾಗೂ ಅದ್ರ ಪ್ರಯೋಜನವೇನು ಎಂಬುದನ್ನು ಹೇಳ್ತೇವೆ.
ಹೆರಿಗೆ ನಂತ್ರದ ಯೋಗ ಎಂದ್ರೇನು? : ಹೆರಿಗೆ ನಂತ್ರದ ಯೋಗವು ಮಾರ್ಪಡಿಸಿದ ಯೋಗಾಭ್ಯಾಸವಾಗಿದೆ. ಮಗುವಿನ ಜನನದ ನಂತರ, ತಾಯಿಯ ದೇಹದಲ್ಲಿ ಅನೇಕ ಬದಲಾವಣೆಗಳು ನಡೆಯುತ್ತವೆ. ತಾಯಿಯ ದೇಹ ಚೇತರಿಸಿಕೊಳ್ಳಲು ಸಮಯಬೇಕು. ಹಾಗಾಗಿ ಹೆರಿಗೆ ನಂತ್ರ ಸೂಚಿಸುವ ಯೋಗವನ್ನು ಮಾತ್ರ ಮಾಡಬೇಕು.
ಹೆರಿಗೆ ನಂತ್ರದ ಯೋಗದ ಪ್ರಯೋಜನಗಳು : ಹೆರಿಗೆ ನಂತರ ಇಡೀ ದಿನ ಮಕ್ಕಳ ಪಾಲನೆ – ಪೋಷಣೆಯಲ್ಲಿರಬೇಕು. ಮಕ್ಕಳಿಗೆ ಹಾಲುಣಿಸುವುದರಿಂದ ಹಿಡಿದು ಅನೇಕ ಹೊಸ ಜವಾಬ್ದಾರಿಗಳು ಬರುತ್ತವೆ. ರಾತ್ರಿ ಸರಿಯಾಗಿ ನಿದ್ರೆಯಾಗುವುದಿಲ್ಲ. ಇಂಥ ಸಂದರ್ಭದಲ್ಲಿ
ತಾಯಿಯಾದವಳಿಗೆ ಖಿನ್ನತೆ ಕಾಡುವ ಅಪಾಯವಿರುತ್ತದೆ. ಯೋಗದ ಮೂಲಕ ಈ ಖಿನ್ನತೆಯನ್ನು ಕಡಿಮೆ ಮಾಡಬಹುದು.
ಇಷ್ಟೇ ಅಲ್ಲ ನಿಯಮಿತವಾಗಿ ಯೋಗ ಮಾಡುವುದ್ರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ. ಯೋಗ ರಕ್ತದೊತ್ತಡವನ್ನು ಸಮತೋಲನಗೊಳಿಸುತ್ತದೆ.
ಹೆರಿಗೆ ನಂತ್ರ ಕಾಡುವ ಒತ್ತಡ ಮತ್ತು ಆತಂಕವನ್ನು ಕೂಡ ಯೋಗ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಯೋಗವನ್ನು ಮಾಡುವುದ್ರಿಂದ ಕಿರಿಕಿರಿ ಮತ್ತು ಕೋಪ ಕಡಿಮೆಯಾಗುತ್ತದೆ.
ಮೊದಲೇ ಹೇಳಿದಂತೆ ಹೆರಿಗೆ ನಂತ್ರ ಅನೇಕ ಹೊಸ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಯೋಗಾಭ್ಯಾಸ ಮಾಡಬೇಕು. ಇದ್ರಿಂದ ಸ್ನಾಯು ಸೆಳೆತ ಕಡಿಮೆಯಾಗುತ್ತದೆ.
ಚಾಲನೆ ಮಾಡುವಾಗ ಮಧುಮೇಹ ರೋಗಿಗಳಿಗಿರಲಿ ಎಚ್ಚರಿಕೆ
ಇಷ್ಟೇ ಅಲ್ಲ ಯೋಗ ಮೂಡ್ ಸ್ವಿಂಗ್ ನಿಯಂತ್ರಿಸುತ್ತದೆ. ಆಗಾಗ ಹೇಳದೆ – ಕೇಳದೆ ಬರುವ ಅಳುವನ್ನು ಕೂಡ ಕಡಿಮೆ ಮಾಡುತ್ತದೆ. ಹಸಿವಿನ ಕೊರತೆಯ ಸಮಸ್ಯೆ ಕಡಿಮೆ ಮಾಡುತ್ತದೆ. ಇದಲ್ಲದೆ ಸಾಮಾನ್ಯಕ್ಕಿಂತ ಹೆಚ್ಚು ತಿನ್ನುವ ಅಭ್ಯಾಸವನ್ನು ನಿಯಂತ್ರಿಸುತ್ತದೆ.
ನಿದ್ರಾಹೀನತೆ ಅಥವಾ ಹೆಚ್ಚು ನಿದ್ರಿಸುವ ಸಮಸ್ಯೆಯನ್ನೂ ಕಡಿಮೆ ಮಾಡುತ್ತದೆ. ವಿಪರೀತ ಆಯಾಸ, ಒಳ್ಳೆಯ ತಾಯಿಯಾಗುವುದಿಲ್ಲ ಎಂಬ ಭಯ, ಹತಾಶತೆ ಅಥವಾ ಅವಮಾನ ಅಥವಾ ಅಪರಾಧದ ಭಾವನೆ ಇವೆಲ್ಲವನ್ನೂ ಯೋಗ ಕಡಿಮೆ ಮಾಡುತ್ತದೆ. ಯೋಗ ತೂಕವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಯೋಗ ಹೊಟ್ಟೆ ಬೊಜ್ಜನ್ನು ಕಡಿಮೆ ಮಾಡುವುದಲ್ಲದೆ ಫಿಟ್ನೆಸ್ ಮೆಂಟೇನ್ ಮಾಡಲು ನೆರವಾಗುತ್ತದೆ.
Relationship Tips : ಸಹೋದ್ಯೋಗಿ ಜೊತೆ ಓವರ್ ಫ್ರೆಂಡ್ಲಿ ಆಗಿದ್ದೇ ತಪ್ಪಾಯ್ತು..!
ಹೆರಿಗೆಯಾದ್ಮೇಲೆ ಈ ಎಲ್ಲ ಸಮಸ್ಯೆಗಳು ಕಾಡುವುದು ಸಾಮಾನ್ಯ. ಆದ್ರೆ ಅದನ್ನು ಎಂದಿಗೂ ನಿರ್ಲಕ್ಷ್ಯಿಸಬಾರದು. ಈ ಸಮಸ್ಯೆಗಳು ವಿಪರೀತವಾಗ್ತಿದೆ ಅನ್ನಿಸಿದ್ರೆ ಅವಶ್ಯಕವಾಗಿ ವೈದ್ಯರನ್ನು ಭೇಟಿಯಾಗಿ. ಇದಕ್ಕೆ ಸೂಕ್ತ ಚಿಕಿತ್ಸೆ ಪಡೆಯಿರಿ. ಹಾಗೆ ಯಾವಾಗ ಯೋಗ ಮಾಡುವುದು ಸೂಕ್ತ ಎಂಬುದನ್ನು ತಿಳಿದುಕೊಂಡು ಅಭ್ಯಾಸ ಶುರು ಮಾಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.