ಹಿಜಾಬ್ ಧರಿಸಿದ, ಕುಂಚ ಹಿಡಿದ ಮಹಿಳೆ ಇಂದಿನ Google doodleನಲ್ಲಿ.. ಯಾರೀಕೆ?

Published : Apr 23, 2022, 02:01 PM IST
ಹಿಜಾಬ್ ಧರಿಸಿದ, ಕುಂಚ ಹಿಡಿದ ಮಹಿಳೆ ಇಂದಿನ Google doodleನಲ್ಲಿ.. ಯಾರೀಕೆ?

ಸಾರಾಂಶ

ಇಂದು ಗೂಗಲ್ ಡೂಡಲ್‌ನಲ್ಲಿ ಮಹಿಳೆಯೊಬ್ಬರ ಚಿತ್ರ ಕಾಣಬಹುದಾಗಿದೆ. ಒಂದು ಕೈಲಿ ಪೇಂಟ್ ಬ್ರಶ್ ಹಿಡಿದ, ಮತ್ತರ್ಧ ಭಾಗದಲ್ಲಿ ಹಿಜಾಬ್ ಧರಿಸಿದರಂತೆ ಕಾಣುವ ಈಕೆ ಯಾರು?

ಗೂಗಲ್ ಡೂಡಲ್‌(Google Doodle)ನಲ್ಲಿ ಪ್ರತಿ ದಿನ ಒಂದೊಂದು ವಿಚಾರವನ್ನು, ವ್ಯಕ್ತಿಗಳನ್ನು, ಘಟನೆಗಳನ್ನು ಸೆಲೆಬ್ರೇಟ್ ಮಾಡಲಾಗುತ್ತದೆ. ಈ ಮೂಲಕ ಜಗತ್ತಿನ ಪ್ರಮುಖ ವಿಚಾರಗಳಿಗೆ ಬೆಳಕು ಚೆಲ್ಲಲಾಗುತ್ತದೆ. ಗೂಗಲ್ ಡೂಡಲ್ ಎಂಬುದು ಗೂಗಲ್ ಸರ್ಚ್ ಎಂಜಿನ್‌ನ ಮುಖಪುಟ. ಅದರಲ್ಲಿ ಕಾಣಿಸಿಕೊಳ್ಳುವುದು ಇಡೀ ಜಗತ್ತಿನ ಗಮನ ಸೆಳೆಯುತ್ತದೆ. ಹಾಗಾಗಿ ಡೂಡಲ್‌ನಲ್ಲಿ ಕಾಣಿಸಿಕೊಳ್ಳುವುದು ಹೆಮ್ಮೆಯ ವಿಚಾರವೇ. 
ಇಂದಿನ ಗೂಗಲ್ ಡೂಡಲ್‌ನಲ್ಲಿ ಮಹಿಳೆಯೊಬ್ಬರನ್ನು ಕಾಣಬಹುದು. ಆಕೆಯ ಅರ್ಧ ಭಾಗ ಕಾಣಿಸುವಂತೆ ಪೇಂಟ್ ಬ್ರಸ್ ಹಿಡಿದು ಚಿತ್ರ ಬಿಡಿಸುತ್ತಿದ್ದರೆ ಮತ್ತರ್ಧ ಭಾಗದಲ್ಲಿ ಹಿಜಾಬ್ ಧರಿಸಿದ ಮಹಿಳೆಯಾಗಿ ಕಾಣುತ್ತಾರೆ. ಯಾರಪ್ಪಾ ಇವರು ಎಂದು ಚಿತ್ರದ ಮೇಲೆ ಕ್ಲಿಕ್ ಮಾಡಿದರೆ ಕಾಣಿಸುವ ಹೆಸರೇ ನಝಿಹಾ ಸಲೀಂ(Naziha Salim). ಯಾರು ಈ ನಝಿಹಾ ಸಲೀಂ? ಅವರ ಸಾಧನೆಯೇನು?

ಇರಾಕ್‌(Iraq)ನ ಸಮಕಾಲೀನ ಕಲಾಜಗತ್ತಿನತ್ತ ಕಣ್ಣು ಹಾಯಿಸಿದರೆ ಅಲ್ಲಿನ ಅತ್ಯಂತ ಪ್ರಭಾವಿ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ ನಝಿಹಾ ಸಲೀಂ. ಆಕೆ ಕೇವಲ ಕಲಾವಿದೆಯಲ್ಲ, ವೃತ್ತಿಯಲ್ಲಿ ಫ್ರೊಫೆಸರ್ ಕೂಡಾ ಹೌದು. 

ಆಕೆಯ ಬಹುತೇಕ ಕಲೆಯು ಇರಾಕಿನ ಹಳ್ಳಿಯ ಮಹಿಳೆಯನ್ನು ಹಾಗೂ ಅಲ್ಲಿನ ರೈತ ಜೀವನವನ್ನು ಬಿಂಬಿಸುತ್ತದೆ. 

ಟರ್ಕಿಯಲ್ಲಿರುವ ಇರಾಕಿ ಕಲಾವಿದರ ಕುಟುಂಬದಲ್ಲಿ ಜನಿಸಿದ ನಝಿಹಾ ಸಲೀಂ ತಂದೆ ಕೂಡಾ ಚಿತ್ರ ಕಲಾವಿದರೇ. ಆಕೆಯ ತಾಯಿ ನುರಿತ ಕಸೂತಿ ಕಲಾವಿದೆ. ಗೂಗಲ್ ಪ್ರಕಾರ, ಆಕೆಯ ಎಲ್ಲ ಮೂವರು ಸಹೋದರರೂ ಕಲಾರಂಗದಲ್ಲೇ ಕೆಲಸ ಮಾಡಿದವರು. ಆಕೆಯ ಓರ್ವ ಸಹೋದರ ಜವಾದ್ ಕೂಡಾ ಇರಾಕಿನ ಅತಿ ಪ್ರಭಾವಿ ಶಿಲ್ಪಕಾರ ಎನಿಸಿಕೊಂಡಿದ್ದಾರೆ. 

ಗರ್ಭಾವಸ್ಥೆಯ ಕಡುಬಯಕೆಯಲ್ಲಿ ಯಾವ ಆಹಾರ ಸೇವಿಸುವುದು ಒಳ್ಳೆಯದು

ಚಿಕ್ಕಂದಿನ ಜೀವನ
ನಝಿಹಾ ಸಲೀಂ ಅವರು ಬಾಗ್ದಾದ್ ಫೈನ್ ಆರ್ಟ್ಸ್ ಇನ್ಸ್ಟಿಟ್ಯೂಟ್‌ಗೆ ಸೇರಿಕೊಂಡು, ಅಲ್ಲಿ ಚಿತ್ರಕಲೆ ಅಧ್ಯಯನ ಮಾಡಿದರು. ಡಿಸ್ಟಿಂಕ್ಷನ್ನಲ್ಲಿ ಪದವಿ ಪಡೆದ ಆಕೆಯ ಕಠಿಣ ಪರಿಶ್ರಮ ಮತ್ತು ಕಲೆಯ ಮೇಲಿನ ಉತ್ಸಾಹದಿಂದಾಗಿ ಅವರು ಪ್ಯಾರಿಸ್‌ನಲ್ಲಿ ಎಕೋಲ್ ನ್ಯಾಶನಲ್ ಸುಪರಿಯೂರ್ ಡೆಸ್ ಬ್ಯೂಕ್ಸ್-ಆರ್ಟ್ಸ್‌ನಲ್ಲಿ ತನ್ನ ಶಿಕ್ಷಣವನ್ನು ಮುಂದುವರಿಸಲು ವಿದ್ಯಾರ್ಥಿವೇತನವನ್ನು ಪಡೆದ ಮೊದಲ ಮಹಿಳೆ ಎನಿಸಿಕೊಂಡರು. 

ಪ್ಯಾರಿಸ್‌ನಲ್ಲಿದ್ದ ಸಂದರ್ಭದಲ್ಲಿ ನಝಿಹಾ ಫ್ರೆಸ್ಕೋ ಹಾಗೂ ಮ್ಯೂರಲ್ ಪೇಂಟಿಂಗ್‌(fresco and mural painting)ನಲ್ಲಿ ವಿಶೇಷ ಕೌಶಲ ಪಡೆದರು. ಪದವಿಯ ನಂತರ, ಅವರು ಇನ್ನೂ ಹಲವಾರು ವರ್ಷಗಳನ್ನು ವಿದೇಶದಲ್ಲಿ ಕಳೆದರು, ಕಲೆ ಮತ್ತು ಸಂಸ್ಕೃತಿಯಲ್ಲಿ ಮುಳುಗಿದರು ಹಾಗೂ ಪಳಗಿದರು. 

ಇರಾಕ್‌ನ ಕಲಾ ಸಮುದಾಯದಲ್ಲಿ ಸಕ್ರಿಯ
ನಝಿಹಾ ಅಂತಿಮವಾಗಿ ಬಾಗ್ದಾದ್‌ಗೆ ಫೈನ್ ಆರ್ಟ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಕೆಲಸ ಮಾಡಲು ಹಿಂದಿರುಗಿದರು. ಅಲ್ಲಿ ಆಕೆ ನಿವೃತ್ತಿಯವರೆಗೂ ಕಲಿಸುತ್ತಿದ್ದರು. ಅವರು ಇರಾಕ್‌ನ ಕಲಾ ಸಮುದಾಯದಲ್ಲಿ ಸಕ್ರಿಯರಾಗಿದ್ದರು ಮತ್ತು ವಿದೇಶದಲ್ಲಿ ಅಧ್ಯಯನ ಮಾಡುವ ಮತ್ತು ಯುರೋಪಿಯನ್ ಕಲಾ ತಂತ್ರಗಳನ್ನು ಇರಾಕಿನ ಸೌಂದರ್ಯದಲ್ಲಿ ಸಂಯೋಜಿಸುವ ಕಲಾವಿದರ ಸಮುದಾಯವಾದ ಅಲ್-ರುವ್ವಾಡ್‌ನ ಸ್ಥಾಪಕ ಸದಸ್ಯರಲ್ಲಿ ಒಬ್ಬರು. ನಂತರ ತಮ್ಮ ವೃತ್ತಿ ಜೀವನದಲ್ಲಿ ನಝಿಹಾ, ಇರಾಕ್: ಕಂಟೆಂಪರರಿ ಆರ್ಟ್, ಆ್ಯನ್ ಇಂಪಾರ್ಟೆಂಟ್ ರಿಸೋರ್ಸ್ ಫಾರ್ ದ ಅರ್ಲಿ ಡೆವಲಪ್‌ಮೆಂಟ್ ಆಫ್ ಇರಾಕ್ಸ್ ಮಾಡರ್ನ್ ಆರ್ಟ್ ಮೂವ್‌ಮೆಂಟ್ ಎಂಬ ಹೆಸರಿನ ಪುಸ್ತಕದ ಲೇಖಕರಾದರು. 

ಬೇಸಿಗೆಯಲ್ಲಿ ಆಯಾಸ ಉಂಟಾಗದಂತೆ ತಡೆಯಲು ಈ ಆಹಾರ ಸೇವಿಸಿ

ಗೂಗಲ್ ಡೂಡಲ್ ಇಂದೇಕೆ ಆಕೆಯನ್ನು ಸೆಲೆಬ್ರೇಟ್ ಮಾಡ್ತಿದೆ?
ನಾಝಿಹಾ ಸಲೀಂ ಅವರ ಕಲಾಕೃತಿಯು ಶಾರ್ಜಾ ಆರ್ಟ್ ಮ್ಯೂಸಿಯಂ ಮತ್ತು ಮಾಡರ್ನ್ ಆರ್ಟ್ ಇರಾಕಿ ಆರ್ಕೈವ್‌ನಲ್ಲಿ ತೂಗು ಹಾಕಲಾಗಿದೆ. ಕಲಾ ಜಗತ್ತಿಗೆ ಆಕೆಯ ಅಪಾರ ಕೊಡುಗೆಗಳನ್ನು ಗಮನಿಸಿ ಗೂಗಲ್ ಇಂದು ಅವರಿಗೆ ಗೌರವ ಸಮರ್ಪಿಸಲು ಡೂಡಲ್ ರಚಿಸಿದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಸಾಲೆ ಪೌಡರ್ ಮಾಡುವಾಗ ಸ್ವಲ್ವೇ ಸ್ವಲ್ಪ ಅಕ್ಕಿ ಸೇರಿಸಿ, ಅಡುಗೆ ರುಚಿ ಡಬ್ಬಲ್ ಆಗುತ್ತೆ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!