ಒಣ ಕೊಬ್ಬರಿ ನೋಡಿದ್ರೆ ಬಾಯಲ್ಲಿ ನೀರು ಬಂದೇ ಬರುತ್ತೆ. ಕೊಬ್ಬರಿ ಚೂರು ಬಾಯಿ ಸೇರೋದು ಗ್ಯಾರಂಟಿ. ಹೆಚ್ಚು ರುಚಿಯಾಗಿರುವ ಈ ಒಣ ಕೊಬ್ಬರಿ ಆರೋಗ್ಯಕ್ಕೂ ಒಳ್ಳೆಯದು. ಮಹಿಳೆಯರು ಇದನ್ನು ಅವಶ್ಯವಾಗಿ ತಿನ್ಬೇಕು.
ಒಣ ಕೊಬ್ಬರಿ ಬಲು ರುಚಿ. ಅನೇಕ ಆಹಾರದ ರುಚಿಯನ್ನು ಇದು ಹೆಚ್ಚಿಸುತ್ತದೆ. ಒಣ ಕೊಬ್ಬರಿ ಬರೀ ಅಡುಗೆಗೆ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು. ಒಣ ಕೊಬ್ಬರಿಯಲ್ಲಿ ವಿಟಮಿನ್, ಪ್ರೋಟೀನ್, ಕಬ್ಬಿಣ, ಕ್ಯಾಲ್ಸಿಯಂ, ಮ್ಯಾಂಗನೀಸ್ ಮತ್ತು ಸೆಲೆನಿಯಂನಂತಹ ಪೋಷಕಾಂಶಗಳು ಸಾಕಷ್ಟಿದೆ. ಅನೇಕ ಆರೋಗ್ಯ ಸಮಸ್ಯೆಗೆ ಇದು ಔಷಧಿ ರೀತಿಯಲ್ಲಿ ಕೆಲಸ ಮಾಡುತ್ತದೆ. ತಜ್ಞರ ಪ್ರಕಾರ, ಒಣ ಕೊಬ್ಬರಿ ಮಹಿಳೆಯರಿ ಬಹಳ ಪ್ರಯೋಜನಕಾರಿ. ಮಹಿಳೆಯರ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಒಣ ಕೊಬ್ಬರಿ ರಕ್ತ ಹೀನತೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಗರ್ಭಿಣಿಯರು ಕೂಡ ಇದನ್ನು ಸೇವನೆ ಮಾಡಬಹುದು. ಸಾಕಷ್ಟು ಔಷಧಿ ಗುಣವನ್ನು ಹೊಂದಿರುವ ಈ ಒಣ ಕೊಬ್ಬರಿ ಮಹಿಳೆಯರಿಗೆ ಹೇಗೆ ಪ್ರಯೋಜನಕಾರಿ ಎಂಬುದನ್ನು ನಾವಿಂದು ಹೇಳ್ತೇವೆ.
ಒಣ ಕೊಬ್ಬರಿ (Dry Coconut) ಯಿಂದ ಮಹಿಳೆಯರಿಗೆ ಆಗುವ ಪ್ರಯೋಜನ (Benefit) :
ಮೂತ್ರದ ಸೋಂಕಿ (Urine Infection) ಗೆ ಪರಿಹಾರ ನೀಡುತ್ತೆ ಒಣ ಕೊಬ್ಬರಿ: ಪುರುಷರಿಗೆ ಹೋಲಿಕೆ ಮಾಡಿದ್ರೆ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಮೂತ್ರದ ಸೋಂಕಿಗೆ ಒಳಗಾಗ್ತಾರೆ. ಕೆಲ ಮಹಿಳೆಯರು ಪದೇ ಒದೇ ಮೂತ್ರದ ಸೋಂಕಿಗೆ ತುತ್ತಾಗ್ತಾರೆ. ಮೂತ್ರದ ಸೋಂಕಿನಿಂದ ಬಳಲುವ ಮಹಿಳೆಯರಿಗೆ ಒಣ ಕೊಬ್ಬರಿ ಸೇವನೆ ಪ್ರಯೋಜನ ನೀಡುತ್ತದೆ. ಒಣ ಕೊಬ್ಬರಿ ಸೇವನೆ ಮಾಡುವುದ್ರಿಂದ ಮೂತ್ರದ ಸೋಂಕನ್ನು ತಡೆಯಬಹುದು. ಒಣ ಕೊಬ್ಬರಿಯಲ್ಲಿ ಮೂತ್ರದ ಸೋಂಕನ್ನು ಉಂಟುಮಾಡುವ ಬ್ಯಾಕ್ಟೀರಿಯಾ ತಡೆಯುವ ಶಕ್ತಿಯಿದೆ. ಯುಟಿಐನಂತಹ ಗಂಭೀರ ಸೋಂಕು ತಡೆಯಲು ಕೂಡ ಇದು ಪರಿಣಾಮಕಾರಿಯಾಗಿದೆ.
MOBILE ADDICTION, ಸಿಸ್ಟಮ್ ಮುಂದೆ ಗಂಟೆಗಟ್ಟಲೆ ಕೂತರೆ ಈ ಸಮಸ್ಯೆ ಕಾಡೋದು ಗ್ಯಾರಂಟಿ
ರಕ್ತಹೀನತೆಗೆ (Sleepness) ಒಣ ಕೊಬ್ಬರಿ ಮದ್ದು : ಹೆಚ್ಚಿನ ಮಹಿಳೆಯರು ರಕ್ತಹೀನತೆ ಸಮಸ್ಯೆಯನ್ನು ಕೂಡ ಎದುರಿಸ್ತಾರೆ. ರಕ್ತ ಹೀನತೆ ಸಮಸ್ಯೆ ಇರುವ ಮಹಿಳೆಯರು ಒಣ ಕೊಬ್ಬರಿ ತಿನ್ನಬೇಕು ಎನ್ನುತ್ತಾರೆ ತಜ್ಞರು. ಒಣ ಕೊಬ್ಬರಿಯಲ್ಲಿ ಕಬ್ಬಿಣದ ಅಂಶ ಹೇರಳವಾಗಿ ಕಂಡುಬರುತ್ತದೆ. ಇದು ಮಹಿಳೆಯರಲ್ಲಿ ರಕ್ತಹೀನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ಇದು ರಕ್ತದಲ್ಲಿ ಸುಲಭವಾಗಿ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸುತ್ತದೆ.
ಗರ್ಭಿಣಿಯರೂ (Pregnancy) ತಿನ್ಬಹುದು ಒಣ ಕೊಬ್ಬರಿ : ಒಣ ಕೊಬ್ಬರಿ ಸೇವನೆ ಗರ್ಭಿಣಿಯರಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಒಣ ಕೊಬ್ಬರಿಯಲ್ಲಿ ಕೊಬ್ಬಿನಾಮ್ಲಗಳಿವೆ. ಇದು ಹೊಟ್ಟೆಯಲ್ಲಿರುವ ಮಗುವಿನ ಬೆಳವಣಿಗೆ ಸಹಾಯ ಮಾಡುತ್ತದೆ. ಆದ್ದರಿಂದ ಗರ್ಭಿಣಿಯರು ಗರ್ಭಾವಸ್ಥೆಯಲ್ಲಿ ಒಣ ತೆಂಗಿನ ಕಾಯಿಯನ್ನು ಸೇವಿಸಬೇಕು.
ಸಂಧಿವಾತಕ್ಕೆ (arthritis) ಒಣ ಕೊಬ್ಬರಿ ಪ್ರಯೋಜನಕಾರಿ : ಮಹಿಳೆಯರಿಗೆ ರೋಗ ಕಾಡೋದು ಹೆಚ್ಚು. ಸಂಧಿವಾತ ಕೂಡ ಹೆಚ್ಚಿನ ಮಹಿಳೆಯರನ್ನು ಕಾಡುತ್ತದೆ. ಸಂಧಿವಾತ ಸಮಸ್ಯೆಯಿಂದ ಬಳಲುವ ಮಹಿಳೆಯರು ಒಣ ಕೊಬ್ಬರಿ ಸೇವಿಸುವ ಮೂಲಕ ಅದರ ಪ್ರಯೋಜನವನ್ನು ಪಡೆಯಬೇಕು. ಒಣ ಕೊಬ್ಬರಿಯಲ್ಲಿ ಕ್ಯಾಲ್ಸಿಯಂನೊಂದಿಗೆ ಇತರ ಪೋಷಕಾಂಶಗಳು ಕಂಡುಬರುತ್ತವೆ. ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ಸಂಧಿವಾತದ ಸಮಸ್ಯೆಯಿಂದ ಪರಿಹಾರವನ್ನು ನೀಡುತ್ತದೆ.
ಹೃದಯಕ್ಕೆ ಪ್ರಯೋಜನಕಾರಿ ಒಣ ಕೊಬ್ಬರಿ : ಒಣಗಿದ ಕೊಬ್ಬರಿ ಬಹಳಷ್ಟು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ತೆಂಗಿನಕಾಯಿ ಅಪಧಮನಿಗಳಲ್ಲಿ ಪ್ಲೇಕ್ ರಚನೆಯನ್ನು ತಡೆಯುತ್ತದೆ. ಇದು ಹೃದಯದ ಬ್ಲಾಕೇಜ್ ತಡೆಯುತ್ತದೆ.
ಮುಖದ ಸೌಂದರ್ಯ ಹೆಚ್ಚಿಸುತ್ತೆ ಒಣ ಕೊಬ್ಬರಿ : ಒಣ ಕೊಬ್ಬರಿ ಸೇವನೆ ಮಾಡಿದ್ರೆ ಮುಖಕ್ಕೆ ವ್ಯಾಯಾಮವಾಗುತ್ತದೆ. ಅದನ್ನು ಜಗಿಯುವುದ್ರಿಂದ ಇಡೀ ಮುಖದ ಸ್ನಾಯುಗಳಿಗೆ ವ್ಯಾಯಾಮವಾಗುತ್ತದೆ. ಇದು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಸುಕ್ಕನ್ನು ಕಡಿಮೆ ಮಾಡುತ್ತದೆ.
Pregnancy Care : ಗರ್ಭಾವಸ್ಥೆಯಲ್ಲಿ ಮೆಕ್ಕೆ ಜೋಳ ತಿಂದ್ರೆ ಪರ್ವಾಗಿಲ್ವಾ?
ರೋಗ ನಿರೋಧಕ ಶಕ್ತಿ ವೃದ್ಧಿ : ಒಣ ಕೊಬ್ಬರಿಯಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ. ವಿಟಮಿನ್, ಕ್ಯಾಲ್ಸಿಯಂ, ಮ್ಯಾಂಗನೀಸ್, ಪ್ರೋಟೀನ್ ಮತ್ತು ಕಬ್ಬಿಣವು ಹೆಚ್ಚಿದೆ. ಇದ್ರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.