Women harassment ಕನ್ಯತ್ವ ಪರೀಕ್ಷೆಯಲ್ಲಿ ಮದುಮಗಳು ಫೇಲ್, 10 ಲಕ್ಷ ರೂಪಾಯಿಗೆ ಅತ್ತೆಯ ಡಿಮ್ಯಾಂಡ್!

By Suvarna NewsFirst Published Sep 5, 2022, 8:04 PM IST
Highlights

ಮದುವೆಯಾಗಿ ಮನೆ ಸೇರುವ ಮೊದಲೇ ಗಂಡ, ಅತ್ತೆ ಹಾಗೂ ಕುಟುಂಬಸ್ಥರು ಕನ್ಯತ್ವ ಪರೀಕ್ಷೆ ಮಾಡಿಸಿದ್ದಾರೆ. ಈ ಪರೀಕ್ಷೆಯಲ್ಲಿ ಸೊಸೆ ಪಾಸ್ ಆಗಿಲ್ಲ. ರೊಚ್ಚಿಗೆದ್ದ ಗಂಡ ಹಾಗೂ ಅತ್ತೆ ಹಲ್ಲೆ ಮಾಡಿದ್ದಾರೆ. ಇಷ್ಟೇ ಅಲ್ಲ ಪಂಚಾಯಿತಿ ಮಾಡಿ 10 ಲಕ್ಷ ರೂಪಾಯಿ ಪರಿಹಾರ ಕೇಳಿದ ಘಟನೆ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಬಿಲ್ವಾರ(ಸೆ.05): ಮದುವೆಯಾಗಿ ಮನೆಗೆ ಬಂದ ಸೊಸೆಯನ್ನು ಸ್ವಾಗತಿಸುವ ಬದಲು ಅತ್ತೆ, ಗಂಡ ಹಾಗೂ ಕುಟುಂಬಸ್ಥರು ನೇರವಾಗಿ ಕನ್ಯತ್ವ ಪರೀಕ್ಷೆಗೆ ಒಳಪಡಿಸಿದ್ದಾರೆ. ಇದು ಅನುಮಾನಗೊಂಡು ಮಾಡಿಸಿದ ಕತೆಯಲ್ಲ. ಇಲ್ಲಿ ಇದುವೇ ಸಂಪ್ರದಾಯ. ಮದುವೆಯಾಗುವ ಮೊದಲು ಅಥವಾ ಮದವೆಯಾದ ಬೆನ್ನಲ್ಲೇ ಹೆಣ್ಣು ಕನ್ಯತ್ವ ಸಾಬೀತುಪಡಿಸಿ ಗಂಡನ ಮನೆ ಸೇರಿಕೊಳ್ಳಬೇಕು. ಆದರೆ ಈ ಕನ್ಯತ್ವ ಪರೀಕ್ಷೆಯಲ್ಲಿ ಮದುಮಗಳು ಫೇಲ್ ಆಗಿದ್ದಾಳೆ. ಕನ್ಯತ್ವ ಪರೀಕ್ಷೆಯಲ್ಲಿ ಪಾಸ್ ಆಗದ ಸೊಸೆಯನ್ನು ಅತ್ತೆ ಹಿಗ್ಗಾ ಮುಗ್ಗಾ ಜಾಡಿಸಿದರೆ, ಗಂಡ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಇಷ್ಟಕ್ಕೆ ಪ್ರಕರಣ ಮುಗಿದಿಲ್ಲ. ಪಂಚಾಯತಿ ಮಾಡಲಾಗಿದೆ. ಇಲ್ಲಿ ಮತ್ತೊಂದು ಶಾಕಿಂಗ್ ಆದೇಶ ನೀಡಲಾಗಿದೆ. ಕನ್ಯತ್ವ ಸಾಬೀತಪಡಿಸಲು ವಿಫಲವಾದ ಸೊಸೆ ಹಾಗೂ ಆಕೆಯ ಕುಟುಂಬಸ್ಥರು ಪರಿಹಾರವಾಗಿ 10 ಲಕ್ಷ ರೂಪಾಯಿ ನೀಡಬೇಕು ಎಂದು ಆದೇಶಿಸಿದ್ದಾರೆ. ಇಷ್ಟೇ ಅಲ್ಲ ಹಣ ತರುವವರೆಗೂ ಮನೆ ಒಳ ಪ್ರವೇಶಿಸದಂತೆ ನಿರ್ಬಂಧ ವಿದಿಸಿದ್ದಾರೆ. ಬೇರೆ ದಾರಿ ಕಾಣದ ಯುವತಿ ನೇರವಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಆದರೆ ಈ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್ ಇದೆ. ಅದೇನೆಂದರೆ ಮದುವೆಗೂ ಕೆಲ ದಿನಗಳ ಮುಂಚೆ ಈಕೆಯ ಮೇಲೆ ಅತ್ಯಾಚಾರವಾಗಿದೆ. ಈ ದುರ್ಘಟನೆ ನಡೆದಿರುವುದು ರಾಜಸ್ಥಾನದ ಬಿಲ್ವಾರದಲ್ಲಿ,.

ರಾಜಸ್ಥಾನದ ಬಿಲ್ವಾರದಲ್ಲಿ(Rajasthan Bhilwara) ಮದುವೆಯಾಗುವ ಹೆಣ್ಣು ಕನ್ಯತ್ವ ಪರೀಕ್ಷೆಯಲ್ಲಿ(Virginity Test) ಪಾಸ್ ಆಗಬೇಕು. ಇದು ಕಡ್ಡಾಯ ಮಾತ್ರವಲ್ಲ, ಸಂಪ್ರದಾಯವೂ(social evil ) ಹೌದು. ಕನ್ಯತ್ವ ಫೇಲ್ ಆದ ಹೆಣ್ಣಿಗೆ(Woman) ಇಲ್ಲಿ ಪ್ರವೇಶವಿಲ್ಲ, ಮದುವೆಯೂ(Marriage) ಇಲ್ಲ. ಹೀಗಾಗಿ ಮದುವೆಗೂ ಮೊದಲೇ ಕನ್ಯತ್ವ(Kukadi Pratha) ಸಾಬೀತುಪಡಿಸಬೇಕು. ಮದುವಗೂ ಮೊದಲು ಹಲವು ಕಾರಣಗಳಿಂದ ಕನ್ಯತ್ವ ಪರೀಕ್ಷೆ ಮಾಡಿಸಲು ಹುಡುಗನ ಕುಟಂಬಸ್ಥರಿಗೆ ಆಗಲಿಲ್ಲ. ಹೀಗಾಗಿ ಮಂಟಪದಲ್ಲಿ ಮದುವೆ ಕಾರ್ಯಕ್ರಮ ಮುಗಿದ ಬಳಿಕ ನೇರವಾಗಿ ಸೊಸೆಯನ್ನು ನೇರವಾಗಿ ಮನೆಗೆ ಸ್ವಾಗತಿಸುವ ಬದಲು ಕನ್ಯತ್ವ ಪರೀಕ್ಷೆಗೆ ಒಳಪಡಿಸಿದ್ದಾರೆ. 

ಇದೆಂಥಾ ಸಂಪ್ರದಾಯ … Virginity testಲ್ಲಿ ಫೇಲ್ ಆದ್ರೆ ವಧುವಿಗೆ ಅಗ್ನಿ ಪರೀಕ್ಷೆ!

 24 ವರ್ಷದ ಮಹಿಳೆಯ ಕನ್ಯತ್ವ ಪರೀಕ್ಷೆ ವರದಿ ಗಂಡ ಹಾಗೂ ಆತನ ಕುಟುಂಬಸ್ಥರಲ್ಲಿ ಆಕ್ರೋಶ ಹೆಚ್ಚಿಸಿದೆ. ಗಂಡ ಆಕೆಯ ಮೇಲೆ ಹಲ್ಲೆ ಮಾಡಿದರೆ, ಅತ್ತೆ ಮನೆಗೆ ಸೇರಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಮೊದಲ ರಾತ್ರಿ ಆರೋಪ, ಹಲ್ಲೆಯ ರಾತ್ರಿಯಾಗಿದೆ. ಗಂಡನ ಕೋಪ ಆರುತ್ತಲೇ ಇಲ್ಲ. ಹಲ್ಲೆ ಮುಂದುವರಿದಿದೆ. ಈ ಮಧ್ಯ ರಾತ್ರಿ ಮನೆಯಿಂದ ಹೊರಗೆ ಹಾಗುವ ತೀರ್ಮಾನಕ್ಕೆ ಬರಲಾಗಿದೆ. ಈ ವೇಳೆ ಈಕೆ ಮದುವೆಗೂ ಕೆಲ ದಿನಗಳ ಮೊದಲು ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಬಾಯ್ಬಿಟ್ಟಿದ್ದಾಳೆ. ಇದು ಗಂಡನ ಕುಟಂಬಸ್ಥರನ್ನು ಮತ್ತಷ್ಟು ಕೆರಳಿಸಿದೆ. ಪ್ರಕರಣ ಮುಚ್ಚಿ ಹಾಕಿ ನಮಗೆ ಮೋಸ ಮಾಡಿದ್ದೀರಿ ಎಂದು ಮತ್ತೆ ಹಲ್ಲೆ ಶುರುಮಾಡಿದ್ದಾರೆ.

ಮರುದಿನ ಪಂಚಾಯಿತಿ ಮಾಡಲಾಗಿದೆ. ಸಂಪ್ರದಾಯದ ಪ್ರಕಾರ ಕನ್ಯತ್ವ ಸಾಬೀತು ಪಡಿಸಿಲ್ಲ. ಇಷ್ಟೇ ಅಲ್ಲ ಅತ್ಯಾಚಾರವಾಗಿರುವುದನ್ನು ಮುಚ್ಚಿಟ್ಟು ಮದುವೆಯಾಗಿದ್ದಾಳೆ. ಹೀಗಾಗಿ ಗಂಡನಿಗೆ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸೂಚಿಸಲಾಗಿದೆ. ಕಂಗೆಟ್ಟ ಮಹಿಳೆ ಪೊಲೀಸ್ ಠಾಣೆಯಲ್ಲಿ(Police) ದೂರು ನೀಡಿದ್ದಾಳೆ. ಈ ವೇಳೆ ಅತ್ಯಾಚಾರ ಕುರಿತು ಮಾಹಿತಿ ನೀಡಿದ್ದಾಳೆ. ಇದೀಗ ಎರೆಡೆರಡು ಪ್ರಕರಣ(Case) ದಾಖಲಾಗಿದೆ. ಒಂದು ಗಂಡನ ಮನೆಯಲ್ಲಿನ ಹಲ್ಲೆ, ಮಹಿಳೆ ಮೇಲೆ ದೌರ್ಜನ್ಯ, ವರದಕ್ಷಿಣೆ ಕೇಸ್ ದಾಖಲಾಗಿದ್ದರೆ, ಮದುವೆಗೂ ಮೊದಲು ನಡೆದ ಅತ್ಯಾಚಾರ ಕೇಸ್ ಕೂಡ ದಾಖಲಾಗಿದೆ.

click me!