ನಡುರಸ್ತೆಯಲ್ಲಿ ಸ್ಕೂಟಿ ಮೇಲೆ ಬ್ಯೂಟಿಯ ಯೋಗಾಯೋಗ: ವಿಡಿಯೋ ವೈರಲ್

Published : Apr 23, 2023, 11:57 AM IST
ನಡುರಸ್ತೆಯಲ್ಲಿ ಸ್ಕೂಟಿ ಮೇಲೆ ಬ್ಯೂಟಿಯ ಯೋಗಾಯೋಗ: ವಿಡಿಯೋ ವೈರಲ್

ಸಾರಾಂಶ

ಇಲ್ಲೊಬ್ಬಳು ಹುಡುಗಿ ಸ್ಕೂಟಿ ಮೇಲೆ ಯೋಗ ಮಾಡಿದ್ದಾಳೆ. ಆ ವಿಡಿಯೋ ಈಗ ಆಕೆ ಎಣಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದು ಸೋಶಿಯಲ್ ಮೀಡಿಯಾ ಯುಗ. ಅಲ್ಲಿ ಇರದ ವಿಚಾರಗಳಿಲ್ಲ, ಹಾಸ್ಯ, ಆರೋಗ್ಯ, ಆಹಾರ, ಜ್ಯೋತಿಷ್ಯ, ಮನೋರಂಜನೆ, ಸಾಹಸ, ಪ್ರವಾಸ ಹೀಗೆ ಪ್ರತಿಯೊಂದರ ಬಗ್ಗೆ ಅಲ್ಲಿ ನಿಮಗೆ ಸಾಕಷ್ಟು ವಿಡಿಯೋಗಳು ಸಿಗುತ್ತವೆ. ಅನೇಕರು ತಮ್ಮ ಕ್ಷೇತ್ರದ ಅನುಭವಗಳನ್ನು ಅಲ್ಲಿ ವೀಡಿಯೋ ರೂಪಕ್ಕೆ ಇಳಿಸಿರುತ್ತಾರೆ. ನೀವು ಸಾಮಾಜಿಕ ಜಾಲತಾಣ ಬಳಕೆದಾರರಾಗಿದ್ದರೆ ಕೈಲಿ ಫೋನ್ ಇದ್ದಾಗ, ಟೈಮ್‌ ಸಿಕಿದಾಗಲೆಲ್ಲಾ ನೀವು ಇನ್ಸ್ಟಾಗ್ರಾಮ್ ಸ್ಕ್ರಾಲ್ ಮಾಡುವವರಾಗಿದ್ದರೆ, ಈ ವಿಚಾರ ನಿಮಗೆ ತಿಳಿದೇ ಇರುತ್ತದೆ. ಅನೇಕರ ಪಾಲಿಗೆ ಅದು ಹಣ ಗಳಿಸುವ ವೇದಿಕೆಯಾಗಿದೆ. 
ಸೋಶಿಯಲ್ ಮೀಡಿಯಾಗಳಿಂದ ರಾತ್ರೋರಾತ್ರಿ ಅನೇಕರು ಸೆಲೆಬ್ರಿಟಿಗಳಾಗಿದ್ದಾರೆ, ಮಾಡೆಲ್, ಇನ್‌ಫ್ಲುಯೆನ್ಸರ್‌ಗಳಾಗಿದ್ದಾರೆ. ಇಲ್ಲಿ ಸಿಗುವ ಒಂದೊಂದು ಲೈಕ್ ಒಂದೊಂದು ಕಾಮೆಂಟ್‌ಗಳಿಗಾಗಿ ಯುವ ಬಳಕೆದಾರರು ಹಾತೊರೆಯುತ್ತಿರುತ್ತಾರೆ. ಈ ಲೈಕ್ ಕಾಮೆಂಟ್‌ಗಳಿಗಾಗಿ ಇನ್ನಿಲ್ಲದ ಸಾಹಸ ಮಾಡಲು ಮುಂದಾಗುತ್ತಾರೆ. ಹಲವು ಸಾಹಸಗಳನ್ನು ವಿಭಿನ್ನವಾಗಿ ಮಾಡಲು ಪ್ರಯತ್ನಿಸುತ್ತಾರೆ. ಏನು ಮಾಡಿದರೂ ವಿಭಿನ್ನವಾಗಿರಬೇಕು ಅದು ಜನರ ಸೆಳೆಯಬೇಕು, ಲೈಕ್ಸ್ ಜಾಸ್ತಿ ಬರಬೇಕು ಎಂದು ಇನ್‌ಫ್ಲುಯೆನ್ಸರ್‌ಗಳು ಬಯಸುತ್ತಾರೆ. ಅದೇ ರೀತಿ ಇಲ್ಲೊಬ್ಬಳು ಹುಡುಗಿ ಸ್ಕೂಟಿ ಮೇಲೆ ಯೋಗ ಮಾಡಿದ್ದಾಳೆ. ಆ ವಿಡಿಯೋ ಈಗ ಆಕೆ ಎಣಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನೆಲದ ಮೇಲೆ ಯೋಗ (Yoga) ಮಾಡೋದು ಸಾಮಾನ್ಯ. ಯೋಗ ದಿನಾಚರಣೆಯಂದು ದೊಡ್ಡ ದೊಡ್ಡ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಯೋಗ ಮಾಡುವುದನ್ನು ನೀವು ನೋಡಿರಬಹುದು. ಆದರೆ ರಸ್ತೆ ಮಧ್ಯೆ ಸ್ಕೂಟಿ (Scooty) ನಿಲ್ಲಿಸಿ ಸ್ಕೂಟಿ ಮೇಲೆ ಯೋಗ ಮಾಡುವುದನ್ನು ನೋಡಿದ್ದೀರಾ? ಇಲ್ಲ ಎಂದಾದಲ್ಲಿ ಇಲ್ಲೊಂದು ವೀಡಿಯೋ ಇದೆ ನೋಡಿ. 

ಹಿಂದೊಬ್ಳು ಮುಂದೊಬ್ಳ ಕೂರಿಸ್ಕೊಂಡು ಬೈಕ್ ಸ್ಟಂಟ್ : ಹಿಸ್ಟರಿ ಶೀಟರ್‌ ಅಂದರ್

ಸುಂದರ ಹುಡುಗಿಯೊಬ್ಬಳು ಜಿಮ್ ಸೂಟ್‌ನಲ್ಲಿ  ರಸ್ತೆ ಮಧ್ಯೆಯೇ ಸ್ಕೂಟಿ ನಿಲ್ಲಿಸಿ ಸ್ಕೂಟಿ ಮೇಲೆಯೇ ಯೋಗ ಸಾಹಸ ಪ್ರದರ್ಶಿಸಿದ್ದಾಳೆ. ಹೀಗೆ ಸಾಹಸ ಮಾಡಿದ ಯುವತಿಯ ಹೆಸರು ಮುಸ್ಕಾನ್ ರಾಣಾ. ಈಕೆ ತನ್ನ ಇನ್ಸ್ಟಾಗ್ರಾಮ್‌ನಲ್ಲಿ  Muskan Rana Yoga ಎಂದು ಖಾತೆ ಹೊಂದಿದ್ದು, ಈಕೆ ತನ್ನ ಪ್ರೊಫೈಲ್‌ನಲ್ಲಿ ಹಾಕಿರುವಂತೆ ಈಕೆಯೊಬ್ಬಳು ಯೋಗಪಟು, ಫಿಟ್‌ನೆಸ್ ಟ್ರೈನರ್ ಕೂಡ ಆಗಿದ್ದಾಳೆ. ಯೋಗದಲ್ಲಿ ಡಿಪ್ಲೋಮಾ ಮಾಡಿರುವ ಆಕೆಯ ಇನ್ಸ್ಟಾಗ್ರಾಮ್‌ನಲ್ಲಿ (Instagram) ಹಲವು ಯೋಗ ಸಾಹಸಗಳ ವಿಡಿಯೋಗಳಿವೆ. 

ವಿಡಿಯೋದಲ್ಲಿ ಕಾಣಿಸುವಂತೆ ಖಾಲಿ ರಸ್ತೆಯಲ್ಲಿ ಸ್ಕೂಟಿ ನಿಲ್ಲಿಸಿರುವ ಈಕೆ ಸ್ಕೂಟಿ ಸೀಟಿನ ಹಿಂಭಾಗಕ್ಕೆ ಅಂಗಾತ ಮಲಗಿ ಸ್ಕೂಟಿ ಹಿಂಭಾಗದಿಂದ ತಲೆಯನ್ನು ನೆಲಕ್ಕೆ ಮುಟ್ಟಿಸಿ ನಂತರ ಉಲ್ಟಾ ಪಲ್ಟಿ ಹೊಡೆದಿದ್ದಾಳೆ.  ಆದರೆ ವೀಡಿಯೋದ ಹಿನ್ನೆಲೆಯಲ್ಲಿ ಎಮ್ಮೆಗಳ ಹಿಂಡು ಸಾಗುತ್ತಿದೆ.  ವಿಡಿಯೋದಲ್ಲಿ ಇದನ್ನು ಗಮನಿಸಿದ ಕಾಮೆಂಟಿಗರೊಬ್ಬರು ಹಿಂದೆ ಎಮ್ಮೆಗಳೆಷ್ಟಿವೆ ಲೆಕ್ಕ ಹಾಕಿ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇದೊಂದು ಒಳ್ಳೆಯ ಸಾಹಸ ಎಂದು ಆಕೆಯನ್ನು ಬೆಂಬಲಿಸಿದ್ದಾರೆ. 

ಮದ್ವೆ ಮಂಟಪದಲ್ಲೇ ವಧು-ವರರ ಗನ್‌ ಸ್ಟಂಟ್‌, ಕ್ಷಣದಲ್ಲೇ ಎಂಥಾ ಅನಾಹುತವಾಯ್ತು ನೋಡಿ!

ಅದೇನೆ ಇರಲಿ ಯೋಗ ಅಥವಾ ಇನ್ನಾವುದೇ ಸಾಹಸ ಮಾಡುವಾಗ ತರಬೇತುದಾರರ ಸಲಹೆ ಪಡೆಯುವುದು ಅತೀ ಅಗತ್ಯ. ಇಲ್ಲದೇ ಹೋದರೆ ಸಾಹಸಗಳು ನಿಮ್ಮ ಜೀವಕ್ಕೆ ಅಪಾಯಕಾರಿಯಾಗಬಹುದು. ಏಕೆಂದರೆ ಕೆಲವು ವಿಭಿನ್ನ ಸಾಹಸ ಮಾಡಲು ಹೋಗಿ ತಮ್ಮ ಜೀವಕ್ಕೆ ಹಾನಿ ತಂದುಕೊಂಡು ಅನೇಕರು ಜೀವ ಕಳೆದುಕೊಂಡ ನಿದರ್ಶನಗಳು ಈ ಹಿಂದೆ ನಡೆದಿವೆ. 

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!