ಮಹಿಳಾ ದಿನಾಚರಣೆ ಅಂಗವಾಗಿ ಬ್ಯಾಂಕ್ ಆಫ್ ಬರೋಡಾ ವಿಶೇಷ ಆಫರ್ ನೀಡ್ತಿದೆ. ಬ್ಯಾಂಕ್ ಮಹಿಳೆಯರಿಗಾಗಿ ಎರಡು ಯೋಜನೆ ಶುರು ಮಾಡಿದೆ. ಆ ಯೋಜನೆಯಲ್ಲಿ ಖಾತೆ ತೆರೆಯೋರಿಗೆ ಏನೆಲ್ಲ ಲಾಭವಿದೆ ಗೊತ್ತಾ?
ಇಂದು ಅಂತರಾಷ್ಟ್ರೀಯ ಮಹಿಳಾ ದಿನವಾಗಿದ್ದು, ಅನೇಕ ಕಂಪನಿಗಳು ಮಹಿಳೆಯರಿಗೆ ವಿಶೇಷ ಕೊಡುಗೆಗಳನ್ನು ನೀಡ್ತಿವೆ. ಬ್ಯಾಂಕ್ ಆಫ್ ಬರೋಡ ಕೂಡ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ವಿಶೇಷ ಉಡುಗೊರೆ ಘೋಷಣೆ ಮಾಡಿದೆ. ಬ್ಯಾಂಕ್ ಆಫ್ ಬರೋಡಾದಲ್ಲಿ ಖಾತೆ ತೆರೆಯುವ ಮಹಿಳೆಯರಿಗೆ ಬ್ಯಾಂಕ್ ಅಗ್ಗದ ದರದಲ್ಲಿ ಸಾಲ ಸೌಲಭ್ಯ ನೀಡಲಿದೆ. ಅಲ್ಲದೆ ಕೆಲ ಸೌಲಭ್ಯಗಳನ್ನು ಮಹಿಳೆಯರಿಗೆ ನೀಡಲಿದೆ. ಇಷ್ಟೇ ಅಲ್ಲ ಮಹಿಳೆಯರ ಖಾತೆಯಲ್ಲಿ 25 ಲಕ್ಷ ರೂಪಾಯಿ ಇರಲಿದ್ದು, ಅದನ್ನು ಮಹಿಳೆಯರು ಯಾವಾಗ ಬೇಕಾದ್ರೂ ಬಳಸಿಕೊಳ್ಳಬಹುದು ಎಂದು ಬ್ಯಾಂಕ್ ಹೇಳಿದೆ.
ಬ್ಯಾಂಕ್ ಆಫರ್ ಬರೋಡಾ (Bank Of Baroda) ವಿಶೇಷ ಆಫರ್ : ಬ್ಯಾಂಕ್ ಆಫ್ ಬರೋಡಾ, ಮಹಿಳಾ ದಿನದ ಅಂಗವಾಗಿ ಮಹಿಳೆಯರಿಗಾಗಿ ಎರಡು ವಿಶೇಷ ಉಳಿತಾಯ ಖಾತೆಗಳನ್ನು ಆರಂಭಿಸಿದೆ. ಒಂದು ಮಹಿಳಾ (Women) ಶಕ್ತಿ ಉಳಿತಾಯ ಖಾತೆ ಮತ್ತೊಂದು ಮಹಿಳಾ ಶಕ್ತಿ ಕರಂಗ್ ಖಾತೆ. ಮಹಿಳೆಯರಿಗೆ ಜೂನ್ 30, 2024 ರವರೆಗೆ ಅವಕಾಶವಿದೆ. ಈ ಸಮಯದ ಮೊದಲು ಮಹಿಳೆ ಈ ವಿಶೇಷ ವೈಶಿಷ್ಟ್ಯಗಳೊಂದಿಗೆ ಖಾತೆ (account) ತೆರೆಯಬಹುದು. ಇಷ್ಟೇ ಅಲ್ಲ ಈ ವರ್ಷದ ಕೊನೆ ಅಂದ್ರೆ ಡಿಸೆಂಬರ್ 31, 2024 ರವರೆಗೆ ಈ ಖಾತೆಯನ್ನು ಹೊಂದಿರುವ ಮಹಿಳೆ ಸಾಲ ಸೌಲಭ್ಯವನ್ನು ಕೂಡ ಪಡೆಯಬಹುದು.
ಎಲ್ಲರನ್ನೂ ಒಂದಾಗಿಸುವವರು ಮಹಿಳೆಯರು: ಶ್ರೀ ಶ್ರೀ ರವಿಶಂಕರ್ ಗುರೂಜಿ
ಬ್ಯಾಂಕ್ ಆಫ್ ಬರೋಡಾದ ಮಹಿಳಾ ಶಕ್ತಿ ಉಳಿತಾಯ ಖಾತೆ ಮತ್ತೊಂದು ಮಹಿಳಾ ಶಕ್ತಿ ಕರಂಗ್ ಖಾತೆಯ ಮೂಲಕ ಮಹಿಳೆಯರು ವಿವಿಧ ಸೌಲಭ್ಯಗಳನ್ನು ಪಡೆಯಬಹುದು. ಇದರಲ್ಲಿ 25 ಲಕ್ಷ ರೂಪಾಯಿಗಳ ಓವರ್‌ಡ್ರಾಫ್ಟ್ ಸೌಲಭ್ಯ ಮಹತ್ವಪಡೆದಿದೆ.
ಬ್ಯಾಂಕ್ ಆಫ್ ಬರೋಡಾ ಈ ಖಾತೆಯಿಂದ ಮಹಿಳೆಯರಿಗೆ ಸಿಗಲಿದೆ ಈ ಎಲ್ಲ ಸೌಲಭ್ಯ : ಮಹಿಳಾ ಶಕ್ತಿ ಉಳಿತಾಯ ಖಾತೆ ಮತ್ತೊಂದು ಮಹಿಳಾ ಶಕ್ತಿ ಕರಂಗ್ ಖಾತೆ ತೆರೆದ ಮಹಿಳೆಯರಿಗೆ ಬ್ಯಾಂಕ್ ಎಲ್ಲಾ ರೀತಿಯ ಚಿಲ್ಲರೆ ಸಾಲಗಳ ಮೇಲೆ 25 ಮೂಲ ಅಂಕ ಅಂದರೆ ಶೇಕಡಾ 0.25ರಷ್ಟು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಿದೆ. ದ್ವಿಚಕ್ರ ವಾಹನ ಸಾಲದ ಮೇಲೆ 25 ಮೂಲ ಅಂಕದಲ್ಲಿ ಸಾಲ ಸಿಗಲಿದೆ. 15 ಮೂಲ ಅಂಕಗಳಲ್ಲಿ ಶಿಕ್ಷಣ ಸಾಲ ಸಿಗಲಿದೆ. ಕಾರು ಮತ್ತು ಗೃಹ ಸಾಲದ ಮೇಲಿನ ಬಡ್ಡಿಯಲ್ಲಿ 10 ಮೂಲ ಅಂಕಗಳ ರಿಯಾಯಿತಿ ಸಿಗಲಿದೆ.
ಬ್ಯಾಂಕ್ ಲಾಕರ್ ಶುಲ್ಕದಲ್ಲಿ ವಾರ್ಷಿಕ ಶೇಕಡಾ 50 ರಷ್ಟು ರಿಯಾಯಿತಿಯನ್ನು ನೀಡುತ್ತದೆ. ಬ್ಯಾಂಕ್ ಪ್ರಕ್ರಿಯೆ ಶುಲ್ಕವನ್ನು ಸಂಪೂರ್ಣ ಮನ್ನಾ ಮಾಡಲಿದೆ. ರುಪೇ ಪ್ಲಾಟಿನಂ ಡೆಬಿಟ್ ಕಾರ್ಡ್‌ನಲ್ಲಿ ಉಚಿತ ವಿಮೆ, 2 ಲಕ್ಷ ರೂಪಾಯಿವರೆಗೆ ಅಪಘಾತ ರಕ್ಷಣೆ ಸೌಲಭ್ಯವನ್ನು ಬ್ಯಾಂಕ್ ನೀಡಲಿದೆ. ದಿನಕ್ಕೆ 1 ಲಕ್ಷದವರೆಗಿನ ಠೇವಣಿಯನ್ನು ಉಚಿತವಾಗಿ ಮಾಡಬಹುದು. ಒಂದು ವರ್ಷದಲ್ಲಿ 10 ಠೇವಣಿಗಳಿಗೆ ಈ ಸೌಲಭ್ಯ ಸಿಗಲಿದೆ.
Women's Day: ಈ ಮಹಿಳೆಯರಿಗೆ ತುಂಬಾ ಧೈರ್ಯ, ಯಾರನ್ನು ಬೇಕಾದರೂ ಆಳುವ ಛಲ ಹೊಂದಿರುತ್ತಾರೆ!
ಮಹಿಳೆಯರು ಬ್ಯಾಂಕ್ ಆಫ್ ಬರೋಡಾದಲ್ಲಿ ಈ ಎರಡು ಖಾತೆ ತೆರೆದರೆ ಚೆಕ್‌ನ 50 ಪ್ರತಿಗಳು ವಾರ್ಷಿಕವಾಗಿ ಸಂಪೂರ್ಣವಾಗಿ ಉಚಿತವಾಗಿ ಸಿಗಲಿದೆ. ಜೀವಮಾನ ಉಚಿತ ಕಾರ್ಪೊರೇಟ್ ಕ್ರೆಡಿಟ್ ಕಾರ್ಡ್ ಲಭ್ಯವಾಗಲಿದೆ. ಖಾತೆಯಲ್ಲಿ ಹತ್ತು ಸಾವಿರ ರೂಪಾಯಿ ಬ್ಯಾಲೆನ್ಸ್ ಇರಬೇಕು. ಎಸ್ ಎಂಎಸ್ ಅಲರ್ಟ್ ಮತ್ತು ಆಟೋ ಸ್ವೀಪ್ ಸೌಲಭ್ಯ ಕೂಡ ಇದರಲ್ಲಿ ಸಿಗಲಿದೆ. ಬ್ಯಾಂಕ್ ಖಾತೆದಾರರಿಗೆ ಖಾತೆಯಲ್ಲಿ 25 ಲಕ್ಷ ರೂಪಾಯಿಗಳ ಓವರ್‌ಡ್ರಾಫ್ಟ್ ಸೌಲಭ್ಯ ನೀಡಲಿದೆ. ಪ್ರತಿ ತ್ರೈಮಾಸಿಕದಲ್ಲಿ ಎರಡು ಬಾರಿ ಏರ್‌ಪೋರ್ಟ್ ಲಾಂಜ್‌ನಲ್ಲಿ ಉಳಿಯುವ ಸೌಲಭ್ಯವನ್ನು ಕೂಡ ಬ್ಯಾಂಕ್ ಖಾತೆದಾರರಿಗೆ ನೀಡ್ತಿದೆ.