ಕನ್ನಡತಿ ಸುಧಾಮೂರ್ತಿ ರಾಜ್ಯಸಭೆಗೆ ನಾಮನಿರ್ದೇಶನ, ಇಲ್ಲಿದೆ ಇಂಟ್ರೆಸ್ಟಿಂಗ್‌ ಸಂಗತಿಗಳು

By Suvarna NewsFirst Published Mar 8, 2024, 2:52 PM IST
Highlights

ರಾಜ್ಯಸಭೆಗೆ ನಾಮನಿರ್ದೇಶನ ಗೊಂಡಿರುವ ಸುಧಾಮೂರ್ತಿ ಅವರ ಬಗೆಗಿನ ಕುತೂಹಲಕಾರಿ ಸಂಗತಿಗಳು ಇಲ್ಲಿದೆ.

ಬೆಂಗಳೂರು (ಮಾ.8): ಶಿಕ್ಷಣತಜ್ಞೆ, ಲೇಖಕಿ, ಸಮಾಜಸೇವಕಿ ಮತ್ತು ಇನ್ಫೋಸಿಸ್ ಫೌಂಡೇಶನ್ ಸ್ಥಾಪಕಿ, ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ  ಸುಧಾಮೂರ್ತಿ   ಅವರನ್ನು ಬಿಜೆಪಿ ಪಕ್ಷದಿಂದ ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ. ಸಮಾಜಸೇವೆ, ಪರೋಪಕಾರ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸುಧಾ ಮೂರ್ತಿ ಅವರ ಕೊಡುಗಡ ಗಮನಿಸಿ ಈ ಆಯ್ಕೆ ಮಾಡಲಾಗಿದೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನ ಈ ಮಹತ್ವದ ಘೋಷಣೆ ಆಗಿದ್ದು, ಅನೇಕರಿಗೆ ಇದು ಸಂತಸದ ವಿಷಯವಾಗಿದೆ. ಸುಧಾಮೂರ್ತಿ ಹೆಸರು ಕೇಳಿದರೆ ಸಾಕು ಎಂಥವರಿಗಾದರೂ ಅವರ ಮೇಲಿನ ಗೌರವ ಹೆಚ್ಚುವುದು.

Latest Videos

Breaking: ಬಿಜೆಪಿಯಿಂದ ರಾಜ್ಯಸಭೆಗೆ ಸುಧಾಮೂರ್ತಿ ನಾಮನಿರ್ದೇಶನ

73 ವರ್ಷದ ಸುಧಾಮೂರ್ತಿ  19 ಆಗಸ್ಟ್ 1950 ರಂದು ಕರ್ನಾಟಕದ ಹಾವೇರಿಯ ಶಿಗ್ಗಾಂವ್‌ನಲ್ಲಿ ಜನಿಸಿದರು. ಶಸ್ತ್ರಚಿಕಿತ್ಸಕರಾದ RH ಕುಲಕರ್ಣಿ ಮತ್ತು  ವಿಮಲಾ ಕುಲಕರ್ಣಿ ಇವರ ತಂದೆ ತಾಯಿ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ MEng ಪದವಿ ಪಡೆದಿದ್ದಾರೆ.  ಸುಧಾ ಮೂರ್ತಿ ಅವರು ಭಾರತದ ಅತಿದೊಡ್ಡ ವಾಹನ ತಯಾರಕ ಟಾಟಾ ಇಂಜಿನಿಯರಿಂಗ್ ಮತ್ತು ಲೊಕೊಮೊಟಿವ್ ಕಂಪನಿಯಲ್ಲಿ (ಟೆಲ್ಕೊ) ನೇಮಕಗೊಂಡ ಮೊದಲ ಮಹಿಳಾ ಎಂಜಿನಿಯರ್ ಆಗಿದ್ದಾರೆ. 

ಇನ್ಫೋಸಿಸ್‌ನ ಸಹ-ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ ಅವರನ್ನು ವಿವಾಹವಾಗಿದ್ದು, ಉದ್ಯಮಿ ರೋಹನ್ ಮೂರ್ತಿ, ಫ್ಯಾಷನ್‌ ಡಿಸೈನರ್‌ ಅಕ್ಷತಾ ಮೂರ್ತಿ (ಇಂಗ್ಲೆಂಡ್‌ ಪ್ರಧಾನಿ ರಿಷಿ ಸುನಕ್ ಪತ್ನಿ) ಮಕ್ಕಳು.  2006ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ, 2023ರಲ್ಲಿ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿದೆ. 

ಒಂದೇ ಮನೆಗೆ ಇಬ್ಬರು ಮಾಲೀಕರ ಕಿತ್ತಾಟ , ಕೆಲಸಕ್ಕೆ ಬಂದ ಮಹಿಳೆಯರು ಮನೆಯೊಳಗೆ ಲಾಕ್‌! ಇನ್ಸ್‌ಪೆಕ್ಟರ್ ಶಾಮೀಲಾದ್ರಾ?

 ಸುಧಾ ಮೂರ್ತಿ ಅವರ ಜೀವನಾನುಭವದ ಮಾತುಗಳು ಅನೇಕ ಜೀವನದಲ್ಲಿ ಪ್ರಭಾವ ಬೀರಿದೆ. ಅವರ ಮಾತುಗಳು ಸತ್ಯಕ್ಕೆ ಅಷ್ಟು ಹತ್ತಿರವಾಗಿದೆ. ಆಕೆಯ ಸರಳ ಜೀವನ ಅನೇಕರಿಗೆ ಸ್ಪೂರ್ತಿಯಾಗಿದೆ. ಅವರ  ಪ್ರಮುಖ ಕೋಟ್‌ಗಳು ಇಲ್ಲಿದೆ.

ಏಣಿಯನ್ನು ಹತ್ತಿದ ಮೇಲೆ ಒದ್ದು ಬೀಳಿಸುವುದು ಸುಲಭ, ಆದರೆ ಎಂದೆಂದಿಗೂ ಮೇಲೆಯೇ ಕೂರಲು ಸಾಧ್ಯವಿಲ್ಲ ಎಂಬುವುದನ್ನು ಮರೆಯಬಾರದು, ಎತ್ತರ ಹೋದಂತೆ The higher you go, the longer is the fall'-ಸುಧಾಮೂರ್ತಿ

"ಪ್ರಾಮಾಣಿಕತೆಯನ್ನು ಯಾವುದೇ ವಿಶ್ವವಿದ್ಯಾಲಯದಲ್ಲಿ ಹೇಳಿಕೊಡಲ್ಲ. ಬಹುತೇಕ ಜನರಲ್ಲಿ ಅದು ಅವರ ಅಂತರಂಗದಿಂದಲೇ ಸ್ಫುರಿಸಿ ಹೊರಬರುತ್ತದೆ"  -ಸುಧಾಮೂರ್ತಿ

'ಕೋಗಿಲೆ ನೃತ್ಯ ಮಾಡೋಕೆ ಹೋಗಬಾರದು, ನವಿಲು ಹಡಲು ಹೋಗಬಾರದು'-ಸುಧಾಮೂರ್ತಿ

"ಕ್ರಿಯೆಯೇ ಇಲ್ಲದ ಮುನ್ನೋಟ ಇದ್ದರೆ ಅದು ಕನಸು ಮಾತ್ರ; ಇನ್ನು ಮುನ್ನೋಟ ಇಲ್ಲದೇ ಕ್ರಿಯೆ ಮಾತ್ರ ಇದ್ದರೆ ಅದು ಟೈಮ್‌ ಪಾಸ್. ಅದುವೇ ಮುನ್ನೋಟ ಮತ್ತು ಕ್ರಿಯೆ ಎರಡೂ ಸೇರಿದರೆ ಜಗತ್ತನ್ನೇ ಬದಲಾಯಿಸಬಹುದು" -ಸುಧಾಮೂರ್ತಿ

ನೀವು ಇತರರನ್ನು ಮೆಚ್ಚಿಸಲು ಪ್ರಯತ್ನಿಸಿದರೆ ನಿಮಗೆ ಯಾರನ್ನೂ ಮೆಚ್ಚಿಸಲು ಸಾಧ್ಯವಾಗಲ್ಲ. ನಿಮ್ಮ ಬದುಕನ್ನು ಇತರರ ಖುಷಿಗಾಗಿ ಬದುಕಲು ಸಾಧ್ಯವೇ ಇಲ್ಲ-ಸುಧಾಮೂರ್ತಿ

click me!