ಸಂತಾನ ಫಲವತ್ತತೆ ಬಗ್ಗೆ ಪುರುಷರಿಗೆ ಹೋಲಿಕೆ ಮಾಡಿದರೆ ಹೆಣ್ಣು ಮಕ್ಕಳಿಗೆ ಇರುವ ಸಮಯ ತುಂಬಾ ಕಡಿಮೆ. ಆದರೂ ಇಂದು ಬಹುತೇಕ ಮಹಿಳೆಯರು ಮಗುವೋ ಉದ್ಯೋಗವೋ ಎಂಬ ಆಯ್ಕೆ ಬಂದಾಗ ಉದ್ಯೋಗದ ಬೆನ್ನು ಬೀಳುತ್ತಾರೆ. ಇಂತಹ ಹೆಣ್ಣು ಮಕ್ಕಳಿಗೆ ನಟ ರಾಮ್ ಚರಣ್ ಪತ್ನಿ ಉಪಾಸನಾ ಒಂದು ಸಲಹೆ ನೀಡಿದ್ದಾರೆ.
ಸಂತಾನ ಫಲವತ್ತತೆ ಬಗ್ಗೆ ಪುರುಷರಿಗೆ ಹೋಲಿಕೆ ಮಾಡಿದರೆ ಹೆಣ್ಣು ಮಕ್ಕಳಿಗೆ ಇರುವ ಸಮಯ ತುಂಬಾ ಕಡಿಮೆ. ಆದರೂ ಇಂದು ಬಹುತೇಕ ಮಹಿಳೆಯರು ಮಗುವೋ ಉದ್ಯೋಗವೋ ಎಂಬ ಆಯ್ಕೆ ಬಂದಾಗ ಉದ್ಯೋಗದ ಬೆನ್ನು ಬೀಳುತ್ತಾರೆ. ಮೊದಲು ಲೈಫ್ ಸೆಟ್ಲ್ ಆಗಿರಬೇಕು ನಂತರ ಮಕ್ಕಳು ಎನ್ನುತ್ತಾರೆ. ಆದರೆ ನಂತರ ಮಕ್ಕಳಿಗಾಗಿ ಪಡಬಾರದ ಪಾಡು ಪಡುತ್ತಾರೆ. ಆದರೆ ಇಂತಹ ಹೆಣ್ಣು ಮಕ್ಕಳಿಗೆ ನಟ ರಾಮ್ ಚರಣ್ ಪತ್ನಿ ಉಪಾಸನಾ ಒಂದು ಸಲಹೆ ನೀಡಿದ್ದಾರೆ.
ತೆಲುಗು ನಟ ರಾಮ್ ಚರಣ್ ಪತ್ನಿ ಉಪಾಸನಾ ಅವರು ಮಹಿಳೆಯರು ಎಗ್ ಫ್ರಿಜ್ ಮಾಡುವುದರ ಮಹತ್ವದ ಬಗ್ಗೆ ಈ ಹಿಂದೆಯೂ ಮಾತನಾಡಿದ್ದರು. 2012ರಲ್ಲಿ ಉಪಾಸನಾ ನಟ ರಾಮ್ ಚರಣ್ ಅವರನ್ನು ಮದುವೆಯಾದರೂ ಕಳೆದ ವರ್ಷವಷ್ಟೇ ಅಂದರೆ ಬರೋಬ್ಬರಿ 10 ವರ್ಷಗಳ ನಂತರ ಅವರು ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಅಲ್ಲದೇ ತಾನು ತನ್ನ ಎಗ್ ಫ್ರಿಜ್ ಮಾಡಿದ್ದಾಗಿ ನಟಿ ಹೇಳಿಕೊಂಡಿದ್ದರು. ಈಗ ಮತ್ತೆ ಅಂತಾರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಮತ್ತೆ ಮಹಿಳೆಯರು ಎಗ್ ಫ್ರೀಜಿಂಗ್ ಮಾಡುವುದರ ಮಹತ್ವದ ಬಗ್ಗೆ ಮಾತನಾಡಿದ್ದಾರೆ ಉಪಾನಸಾ.
ಎಗ್ ಫ್ರೀಜಿಂಗ್: ಮಕ್ಕಳು ಮಾಡಿ ಕೊಳ್ಳೋ ಪ್ಲ್ಯಾನ್ ಈಗಿಲ್ಲವೆಂದರೆ, ಭವಿಷ್ಯದ ಬಗ್ಗೆ ಯೋಚಿಸ್ಬೇಡಿ!
ಉಪಾಸನಾ ಕಾಮಿನೇನಿ ಕೊನಿಡೆಲಾ ಕೇವಲ ರಾಮ್ ಚರಣ್ ಪತ್ನಿ ಮಾತ್ರವಲ್ಲ, ಓರ್ವ ಯಶಸ್ವಿ ಉದ್ಯಮಿ, ಆರೋಗ್ಯ ಕ್ಷೇತ್ರದಲ್ಲಿ ಹೆಸರಾಗಿರುವ ಸಿಎಸ್‌ಆರ್ ಅಪೊಲೋ ಆಸ್ಪತ್ರೆ ಗ್ರೂಪ್ ಎಂಡಿ ಆಗಿರುವ ಉಪಾಸನಾ ಆರೋಗ್ಯ ಕ್ಷೇತ್ರದಲ್ಲಿರುವವರಿಗೆ ತಿಳಿದಿರುವ ಹೆಸರು, ಇವರು ಕಾರ್ಪೋರೇಟ್ ಜಗತ್ತಿನಲ್ಲಿ ಕೆಲಸ ಮಾಡುವ ಅಮ್ಮಂದಿರು ಎದುರಿಸುವ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ. ಒಬ್ಬಳು ಉದ್ಯೋಗದಲ್ಲಿರುವ ಹೆಣ್ಣು ಮದುವೆಯಾಗಲು ನಿರ್ಧರಿಸಿದಾಗ ಅಥವಾ ತಾಯಿಯಾಗಲು ನಿರ್ಧರಿಸಿದಾಗ ಎಂತಹ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂಬ ವಿಚಾರವನ್ನು ಉಪಾಸನಾ ತೆರೆದಿಟ್ಟಿದ್ದಾರೆ.
ರಾಮ್‌ಚರಣ್ ಜೊತೆ ದಶಕದ ಹಿಂದೆ ಮದುವೆಯಾದ ಉಪಾಸನಾ ಕಳೆದ ವರ್ಷವಷ್ಟೇ ಜನಿಸಿದ ತನ್ನ ಮಗಳು ಕ್ಲಿನ್ ಕಾರಾಳನ್ನು ನೋಡಿಕೊಳ್ಳುತ್ತ ಕೆಲಸ ಹಾಗೂ ವೈಯಕ್ತಿಕ ಬದುಕಿನ ತಾಯ್ತನದ ನಡುವೆ ಹಗ್ಗಜಗ್ಗಾಟ ನಡೆಸುತ್ತಿದ್ದಾರೆ. ಮದುವೆಯಾಗಿ ಮಕ್ಕಳಾದ ನಂತರ ಹೆಣ್ಣು ಮಕ್ಕಳು ಕೆಲಸ ತೊರೆಯುವುದು ಹೆಚ್ಚಾಗಿದೆ. ಮಹಿಳೆಯರು ತಮ್ಮ ಬದುಕಿನಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತಾರೆ. ಎರಡನ್ನೂ ಸಮವಾಗಿ ನಿಭಾಯಿಸುವುದು ನನಗೆ ಸುಲಭವಲ್ಲ, ಆದರೂ ನಾನು ಈ ಎರಡನ್ನೂ ಸಮವಾಗಿ ನಿಭಾಯಿಸಲು ಬಹಳ ಪ್ರಯತ್ನ ಪಡುತ್ತಿದ್ದು, ಮುಂದೆ ಅದರಲ್ಲಿ ಯಶಸ್ವಿಯಾಗುವೆ ಎಂದು ನನಗೆ ತಿಳಿದಿದೆ ಎಂದು ಉಪಾಸನಾ ಹೇಳಿದ್ದಾರೆ.
ಲೇಟಾಗಿ ಮದ್ವೆ ಆಗ್ತಿದ್ರೆ ಮಕ್ಕಳು ಮಾಡ್ಕೊಳ್ಳೋಕೆ Egg Freezing ಮಾಡೋದನ್ನು ಮರೀಬೇಡಿ!
ಮಹಿಳೆಯರು ತಮ್ಮ ವೈಯಕ್ತಿಕ ಬದುಕು ಹಾಗೂ ವೃತ್ತಿ ಎರಡರಲ್ಲೂ ಬದಲಾವಣೆಗಳನ್ನು ತರಲು ಕಾರ್ಪೋರೇಟ್ ಜಗತ್ತಿನ ಮನಸ್ಥಿತಿಯೂ ಬದಲಾಗಬೇಕು. ಭಾರತದಲ್ಲಿ ಮಹಿಳೆಯರಿಗೆ ಸುಲಭವಾಗುವಂತೆ ಕಾರ್ಪೊರೇಟ್ ಭಾರತ ತಿದ್ದುಪಡಿಗಳನ್ನು ಮಾಡಬೇಕು. ಪೋಶ್ ಕಮಿಟಿ ಇದಕ್ಕೆ ನೆರವಾಗುತ್ತಿದೆ. ನಮಗೆ ಹೊಂದಿಕೊಳ್ಳುವಂತೆ ಮಾತೃತ್ವ ರಜೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದೇನೆ. ಇದರ ಜೊತೆಗೆ ನಾನು ನಿಜವಾಗಿಯೂ ಇಷ್ಟಪಡುವ ಇನ್ನೊಂದು ವಿಚಾರವೆಂದರೆ ಮಹಿಳೆಯರು ತಮ್ಮ ಅಂಡಾಣುವನ್ನು ರಕ್ಷಿಸಿ ಇಡುವುದು ಎಂದು ಅವರು ಹೇಳಿದ್ದಾರೆ. ವಿಮೆಯ ಮೂಲಕ ಮಹಿಳೆಯರು ತಮ್ಮ ಅಂಡಾಣು ಅಥವಾ ಎಗ್ ಅನ್ನು ಉಳಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಮಹಿಳೆಯರಿಗೆ ಕೆಲಸ ಮಾಡಲು ಆರಾಮದಾಯಕ ವಾತಾವರಣ ಕಲ್ಪಿಸುವುದಕ್ಕಾಗಿ ಈ ಯುವ ಉದ್ಯಮಿ ಉಪಾಸನಾ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಅಲ್ಲದೇ ತಾಯ್ತನವ ಉದ್ಯೋಗವ ಎಂಬ ಆಯ್ಕೆ ಎದುರಾದರೆ ಹೇಗೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವ ಮಹಿಳೆ ಮಕ್ಕಳ ಬದಲು ಕೆರಿಯರ್ ಮುಖ್ಯ ಎಂದು ಬಯಸುತ್ತಾರೋ ಅವರು ಪಾಕೆಟ್ ಮನಿಯಿಂದ ಬದುಕಬೇಕಾದಂತಹ ಅನಿವಾರ್ಯತೆ ಇರುವುದಿಲ್ಲ, ಹೀಗಾಗಿ ಅಂತವರು ತಮ್ಮ ಎಗ್ ಪ್ರಿಜ್ ಮಾಡುವುದು ಒಳಿತು ಎಂದು ಹೇಳಿದ್ದಾರೆ
ನಾನೂ ನನ್ನ ಅಂಡಾಣುಗಳನ್ನು ರಕ್ಷಣೆ ಮಾಡಿದ್ದೆ ಅಲ್ಲದೇ ರಾಮ್ ಹಾಗೂ ನಾನು ನಮಗೆ ಬೇಕೆನಿಸಿದಾಗ ಮಕ್ಕಳನ್ನು ಪಡೆಯಲು ನಿರ್ಧರಿಸಿದೆವು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವೆ ಎಂದು ಉಪಾಸನಾ ಹೇಳಿದ್ದಾರೆ. ನೀವು ಮಕ್ಕಳನ್ನು ಮಾಡಿಕೊಳ್ಳಲು ಸಿದ್ಧರಾಗಿದ್ದಾಗ, ಅದಕ್ಕೆ ಬೇಕಾದಷ್ಟು ಶ್ರೀಮಂತಿಕೆಯೂ ಇದ್ದಾಗ ಮಕ್ಕಳ ಮಾಡಿಕೊಂಡರೆ ಅದು ಮಹಿಳೆ ಹಾಗೂ ದೇಶದ ಪ್ರಗತಿಗೂ ಸಹಾಯ ಮಾಡುತ್ತದೆ ಎಂದು ಉಪಾಸನಾ ಹೇಳಿದ್ದಾರೆ.
ಎಗ್ ಪ್ರೀಜಿಂಗ್ ಎಂದರೇನು?
ವಯಸ್ಸಾದಂತೆ ಮಹಿಳೆಯರು ಗರ್ಭ ಧರಿಸುವುದು ಕಷ್ಟ ಆದರೆ ಎಗ್ ಪ್ರೀಜಿಂಗ್ ಅಥವಾ Egg Freezing ಸುಧಾರಿತ ತಂತ್ರಜ್ಞಾನವಾಗಿದ್ದು, ಇದರ ಸಹಾಯದಿಂದ ಇಂದಿನ ಮಹಿಳೆಯರು ಬಯೋಲಾಜಿಕಲ್ ಕ್ಲಾಕ್ ಬಗ್ಗೆ ಚಿಂತಿಸದೇ ವೃತ್ತಿಜೀವನದ ಬಗ್ಗೆ ಯೋಜಿಸಿ, ಮಗುವನ್ನು ತಡವಾಗಿ ಪಡೆಯಬಹುದು. ತಾಯಿಯಾಗುವ ಸಂತೋಷವನ್ನು ಆನಂದಿಸಬಹುದು. ಈ ವಿಧಾನದಲ್ಲಿ, ಔಷಧಿಗಳ ಸಹಾಯದಿಂದ ಅಂಡಾಣು ಸಂಖ್ಯೆಯನ್ನು (eggs count) ಹೆಚ್ಚಿಸಲಾಗುತ್ತದೆ, ನಂತರ ಅವುಗಳನ್ನು ಅಂಡಾಶಯಗಳಿಂದ ತೆಗೆದು ಹೆಪ್ಪುಗಟ್ಟಿಸಲಾಗುತ್ತದೆ. ಭ್ರೂಣ ತಯಾರಿಸಲು, ಅವುಗಳನ್ನು ಕೋಣೆಯ ತಾಪಮಾನಕ್ಕೆ ತರಲಾಗುತ್ತದೆ ಮತ್ತು ವೀರ್ಯಾಣುಗಳೊಂದಿಗೆ ಬೆರೆಸಲಾಗುತ್ತದೆ. ನಂತರ ಭ್ರೂಣದ ವರ್ಗಾವಣೆ ಚಕ್ರದ ಸಮಯದಲ್ಲಿ, ಭ್ರೂಣವನ್ನು ಗರ್ಭಾಶಯಕ್ಕೆ ವರ್ಗಾಯಿಸಲಾಗುತ್ತದೆ.