ಅಫ್ಘಾನಿಸ್ತಾನದಲ್ಲಿ ಗರ್ಭ ನಿರೋಧಕ ಮಾತ್ರೆ, ಔಷಧಗಳ ಮಾರಾಟ ನಿಷೇಧ

By Vinutha Perla  |  First Published Feb 18, 2023, 8:55 AM IST

ಅಫ್ಘಾನಿಸ್ತಾನದ ಅಧಿಕಾರ ತಾಲೀಬಾನ್ ಉಗ್ರರ ಕೈಗೆ ಬಂದಾಗಿನಿಂದ ವಿಚಿತ್ರ ಕಾನೂನುಗಳು ಜಾರಿಗೆ ಬರುತ್ತಿವೆ. ಇಲ್ಲಿನ ಜನರು ಮಾನವ ಹಕ್ಕುಗಳನ್ನೇ ಕಳೆದುಕೊಂಡು ಹೈರಾಣಾಗಿದ್ದಾರೆ. ಈ ಹಿಂದೆ ಹಲವು ಅಸಮರ್ಪಕ ಕಾನೂನುಗಳನ್ನು ಮಾಡಿದ್ದ ತಾಲಿಬಾನ್ ಈ ಬಾರಿ ಮಹಿಳೆಯರು ಗರ್ಭ ನಿರೋಧಕ ಮಾತ್ರೆ ಮತ್ತು ಔಷಧಗಳನ್ನು ತೆಗೆದುಕೊಳ್ಳಬಾರದು ಎಂದು ಆದೇಶ ಹೊರಡಿಸಿದೆ.


ಕಾಬೂಲ್‌: ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಮಹಿಳೆಯರ ಹಕ್ಕುಗಳನ್ನು (Womens Rights) ಹತ್ತಿಕ್ಕಲು ಪ್ರಯತ್ನಿಸುತ್ತಿರುವ ತಾಲಿಬಾನ್‌ ಸದ್ಯ ಮಹಿಳೆಯರು ಗರ್ಭ ನಿರೋಧಕ ಮಾತ್ರೆ ಮತ್ತು ಔಷಧಗಳನ್ನು ತೆಗೆದುಕೊಳ್ಳಬಾರದು ಎಂದು ಆದೇಶ ಹೊರಡಿಸಿದೆ. ಇಂಥ ಔಷಧಗಳು, ಮಾತ್ರೆಗಳ ಮೂಲಕ ಪಾಶ್ಚಿಮಾತ್ಯ ರಾಷ್ಟ್ರಗಳು ಮುಸ್ಲಿಂ ಸಮುದಾಯವನ್ನು ನಿಯಂತ್ರಿಸಲು ರೂಪಿಸಿವೆ ಎಂದು ಉಗ್ರರ ಸರ್ಕಾರ ಹೊಸ ವಾದ ಮಂಡಿಸಿದೆ. ಜತೆಗೆ ಎರಡು ನಗರಗಳಲ್ಲಿ ಅವುಗಳ ಮಾರಾಟ ಮಾಡದೇ ಇರುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.

ತಾಲಿಬಾನ್ ಹೋರಾಟಗಾರರು ಅಫ್ಘಾನಿಸ್ತಾನದ ಎರಡು ಪ್ರಮುಖ ನಗರಗಳಲ್ಲಿ ಗರ್ಭನಿರೋಧಕಗಳ ( contraceptive pills) ಮಾರಾಟವನ್ನು ನಿಲ್ಲಿಸಿದ್ದಾರೆ, ಮಹಿಳೆಯರು ಅವುಗಳ ಬಳಕೆಯನ್ನು ಮುಸ್ಲಿಂ ಜನಸಂಖ್ಯೆ (Population)ಯನ್ನು ನಿಯಂತ್ರಿಸುವ ಪಾಶ್ಚಿಮಾತ್ಯ ಪಿತೂರಿ ಎಂದು ಆರೋಪಿಸಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. ಕಾಬೂಲ್‌ನಲ್ಲಿ ಇರುವ ಔಷಧ ಮಳಿಗೆಯ ಮಾಲೀಕರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. 'ಇಬ್ಬರು ಬಂದೂಕುಧಾರಿಗಳು ಎರಡು ಬಾರಿ ನನ್ನ ಅಂಗಡಿಗೆ ಎಂದು ಗರ್ಭ ನಿರೋಧಕ ಮಾತ್ರೆ ಮತ್ತು ಔಷಧಗಳನ್ನು ಮಾರಾಟ (Sale) ಮಾಡಲೇಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಜತೆಗೆ ನನ್ನ ಬಳಿ ಇರುವ ಔಷಧಗಳ ಸಂಗ್ರಹವನ್ನು ನಿಯಮಿತವಾಗಿ ತಪಾಸಣೆ ನಡೆಸುತ್ತಿದ್ದಾರೆ' ಎಂದು ಹೇಳಿದ್ದಾನೆ.

Latest Videos

undefined

ತಾಲಿಬಾನ್ ಉಗ್ರರು ಕಲ್ಲೆಸೆದು ಕೊಲ್ಲೋ ಮೊದಲು ಸಾವಿಗೆ ಶರಣಾದ ಮಹಿಳೆ

ಜನನ ನಿಯಂತ್ರಣ ಔಷಧಗಳನ್ನು ಮಾರಾಟ ಮಾಡದಂತೆ ಫಾರ್ಮಸಿಗಳಿಗೆ ಬೆದರಿಕೆ
ತಾಲಿಬಾನ್‌ಗಳು ಮನೆ ಮನೆಗೆ ಹೋಗುತ್ತಿದ್ದಾರೆ, ಸೂಲಗಿತ್ತಿಯರನ್ನು ಬೆದರಿಸುತ್ತಿದ್ದಾರೆ ಮತ್ತು ಎಲ್ಲಾ ಜನನ ನಿಯಂತ್ರಣ ಔಷಧಗಳು ಮತ್ತು ಸಾಧನಗಳಿಂದ ಅವರ ಕಪಾಟನ್ನು ತೆರವುಗೊಳಿಸುವಂತೆ ಫಾರ್ಮಸಿಗಳಿಗೆ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ. 'ಅವರು ಎರಡು ಬಾರಿ ಬಂದೂಕುಗಳೊಂದಿಗೆ ನನ್ನ ಅಂಗಡಿಗೆ ಬಂದರು ಮತ್ತು ಗರ್ಭನಿರೋಧಕ ಮಾತ್ರೆಗಳನ್ನು ಮಾರಾಟಕ್ಕೆ ಇಡದಂತೆ ನನಗೆ ಬೆದರಿಕೆ ಹಾಕಿದರು. ಅವರು ಕಾಬೂಲ್‌ನಲ್ಲಿರುವ ಪ್ರತಿ ಫಾರ್ಮಸಿಯನ್ನು ನಿಯಮಿತವಾಗಿ ಪರಿಶೀಲಿಸುತ್ತಿದ್ದಾರೆ ಮತ್ತು ನಾವು ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಿದ್ದೇವೆ' ಎಂದು ಮೆಡಿಕಲ್ ಶಾಪ್‌ ಮಾಲೀಕರು ಹೇಳಿದರು.

ಹಲವಾರು ಬಾರಿ ಬೆದರಿಕೆ ಹಾಕಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಶುಶ್ರೂಷಕಿಯೊಬ್ಬರು ಹೇಳಿದ್ದಾರೆ.'ಜನಸಂಖ್ಯೆಯನ್ನು ನಿಯಂತ್ರಿಸುವ ಪಾಶ್ಚಿಮಾತ್ಯ ಪರಿಕಲ್ಪನೆಯನ್ನು (Western culture) ಪ್ರಚಾರ ಮಾಡಲು ನಿಮಗೆ ಅನುಮತಿಸಲಾಗುವುದಿಲ್ಲ ಮತ್ತು ಇದು ಅನಗತ್ಯ ಕೆಲಸ' ಎಂದು ತಾಲಿಬಾನ್ ಕಮಾಂಡರ್ ತನಗೆ ಹೇಳಿದ್ದಾಗಿ ಮಹಿಳೆ ಹೇಳಿದರು.

ಮಹಿಳೆಯರಿಗೆ ಶಾಲೆ, ಕಾಲೇಜು ಶಿಕ್ಷಣ ನಿಷೇಧಿಸಿದ ತಾಲಿಬಾನ್
ಅಫ್ಘಾನಿಸ್ತಾನದಲ್ಲಿ ಈ ಹಿಂದೆಯೇ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳಲ್ಲಿ ಮಹಿಳೆಯರಿಗೆ ನಿಷೇಧ (Ban) ವಿಧಿಸಿದೆ. ಈಗಾಗಲೇ ಉದ್ಯಾನಗಳಲ್ಲೂ ಮಹಿಳೆಯರಿಗೆ ನಿರ್ಬಂಧ ಹೇರಲಾಗಿದೆ. ಅಷ್ಘಾನಿಸ್ತಾನ ವಶಪಡಿಸಿಕೊಂಡ ಬಳಿಕ ನೀಡಿದ್ದ ಸೌಮ್ಯ ಆಡಳಿತ ಹಾಗೂ ಅಲ್ಪಸಂಖ್ಯಾತ ಹಕ್ಕುಗಳ ಭರವಸೆಯ ಹೊರತಾಗಿಯೂ ತಾಲೀಬಾನ್‌ ಷರಿಯಾ ಕಾನೂನನ್ನು ದೇಶದಲ್ಲಿ ವ್ಯಾಪಕವಾಗಿ ಜಾರಿಗೊಳಿಸಿದೆ. ಅಫ್ಘಾನಿಸ್ತಾನದ ತಾಲಿಬಾನ್ ನಡೆಸುತ್ತಿರುವ ಉನ್ನತ ಶಿಕ್ಷಣ ಸಚಿವಾಲಯವು (Education Ministry) ಮುಂದಿನ ಸೂಚನೆ ಬರುವವರೆಗೂ ದೇಶದ ವಿಶ್ವವಿದ್ಯಾಲಯಗಳಿಗೆ ವಿದ್ಯಾರ್ಥಿನಿಯರಿಗೆ ಪ್ರವೇಶವನ್ನು ಅನುಮತಿಸಲಾಗುವುದಿಲ್ಲ ಎಂದು ಹೇಳಿದೆ. 

ಅಫ್ಘಾನಿಸ್ತಾನದಲ್ಲಿ ವಿದ್ಯಾರ್ಥಿನಿಯರ ಓದಿಗೆ ಕೊಳ್ಳಿ: ಇರಾನಿನಲ್ಲಿ ಹಿಜಾಬ್ ವಾರ್

ಮಹಿಳೆಯರಿಗೆ ಜಿಮ್, ಪಾರ್ಕ್‌ ಪ್ರವೇಶಕ್ಕೂ ನಿಷೇಧ
ಕಾಬೂಲ್‌: ಜಿಮ್‌ ಮತ್ತು ಪಾರ್ಕ್‌ಗಳಿಂದ ಮಹಿಳೆಯರನ್ನು ನಿಷೇಧಿಸಲು ಅಫ್ಘಾನಿಸ್ತಾನದ ತಾಲಿಬಾನ್‌ ಸರ್ಕಾರ ನಿರ್ಧರಿಸಿದೆ. ಕಡ್ಡಾಯವಾಗಿ ಹಿಜಾಬ್‌ ಧರಿಸಬೇಕೆಂಬ ಆದೇಶ ಪಾಲಿಸದ  ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಗುರುವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೇ ‘ಈ ನಿಯಮವನ್ನು ಜಾರಿಗೊಳಿಸಂತೆ ತಡೆಯಲು ನಾವು ಯತ್ನಿಸಿದೆವು ಹಾಗೂ ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ದಿನಗಳನ್ನು ನಿಗದಿ ಮಾಡಲು ಸಾಕಷ್ಟು ಪ್ರಯತ್ನಿಸಿದೆವು. ಆದರೂ ಫಲಕಾರಿಯಾಗಲಿಲ್ಲ’ ಎಂದು ತಾಲಿಬಾನ್‌ ವಕ್ತಾರ ಮೊಹಮ್ಮದ್‌ ಅಕೆಫ್‌ ಮೊಹಜರ್‌ (Mohammad Akef Mohajer) ಹೇಳಿದ್ದಾನೆ.

click me!