ಜಿಮ್‌ಗೆ ಬಂದ್ರೂ ಹರಟೆ ಹೊಡೆಯೋ ಮಹಿಳೆಯರು! ನೀವು ಬರ್ಲೇ ಬೇಡಿ ಅಂದಿದ್ದಕ್ಕೆ ಗಲಾಟೆ!

By Roopa Hegde  |  First Published Jun 14, 2024, 4:20 PM IST

ದಕ್ಷಿಣ ಕೊರಿಯಾದ ಜಿಮ್ ವಿಶೇಷ ನಿಯಮ ಜಾರಿಗೊಳಿಸಿದೆ. ಈ ನಿಯಮ ಆಂಟಿಗಳ ಕೋಪಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಅಲ್ಲಿರೋದು ಏನು? ಯಾಕೆ ಆಂಟಿಯರೇ ಟಾರ್ಗೆಟ್ ಎಂಬ ವಿವರ ಇಲ್ಲಿದೆ.
 


ಫಿಟ್ನೆಸ್ ಕಾಯ್ದುಕೊಳ್ಳಲು (Women Fitness) ವಯಸ್ಸಿನ ಮಿತಿ ಇಲ್ಲ. ಯಾರು ಬೇಕಾದ್ರೂ ಯೋಗ, ಜಿಮ್ ಅಂತ ಮಾಡ್ಬಹುದು. ಆದ್ರೆ ಒಂದು ವಯಸ್ಸಿನ ನಂತ್ರ ಹೆಚ್ಚು ಬೆವರಿಳಿಸುವ ವ್ಯಾಯಾಮ ಮಾಡದಂತೆ ವೈದ್ಯರು ಸಲಹೆ ನೀಡ್ತಾರೆ. ಸರಳ ವ್ಯಾಯಾಮ, ವಾಕಿಂಗ್ ಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸ್ತಾರೆ. ಹಾಗಂತ ಎಲ್ಲರೂ ಇದಕ್ಕೆ ಅಂಟಿಕೊಳ್ಳೋದಿಲ್ಲ. ಈಗಿನ ದಿನಗಳಲ್ಲಿ 80 ವರ್ಷದ ವ್ಯಕ್ತಿಗಳು ರನ್ನಿಂಗ್, ಜಾಗಿಂಗ್ ಅಂತ ಮಾಡೋದನ್ನು ನೀವು ನೋಡಿರ್ತೀರಿ. ಕೆಲವರು ವಯಸ್ಸಾದ್ಮೇಲೂ ಜಿಮ್ ಗೆ ಹೋಗಲು ಆಸಕ್ತಿ ತೋರುತ್ತಾರೆ. ಆದ್ರೆ ದಕ್ಷಿಣ ಕೋರಿಯಾದ ಜಿಮ್ ಒಂದು ವಿಶೇಷ ನಿಯಮ ಶುರು ಮಾಡಿದೆ. ಇದು ವಯಸ್ಸಾದ ಆಂಟಿಯರ ಕಣ್ಣು ಕೆಂಪು ಮಾಡಿದೆ. 

ಜಿಮ್ (Gym) ಗೆ ವಯಸ್ಸಾದ ಮಹಿಳೆಯರ ಪ್ರವೇಶ ನಿಷಿದ್ಧ : ಜಿಮ್ ಗೆ ಬರುವ ಜನರು ವರ್ಕೌಟ್ (Workout) ಮಾಡಿ ಫಿಟ್ನೆಸ್ (Fitness) ಕಾಯ್ದುಕೊಳ್ತಾರೆ. ಈಗ ಜಿಮ್ ನಲ್ಲಿ ರೀಲ್ಸ್ ಮಾಡೋರ ಸಂಖ್ಯೆ ಹೆಚ್ಚಾಗಿದೆ. ಇನ್ನು ಫ್ರೆಂಡ್ಸ್ ಜೊತೆ ಜಿಮ್ ಗೆ ಬರೋರು, ವರ್ಕ್ ಔಟ್ ಮಾಡೋ ಬದಲು ಹರಟೆ ಹೊಡೆಯುತ್ತ ಕುಳಿತಿರ್ತಾರೆ. ಈ ಹರಟೆ, ಗಲಾಟೆಯೇ ದಕ್ಷಿಣ ಕೊರಿಯಾ ಮಹಿಳೆಯರಿಗೆ ಮುಳುವಾಗಿದೆ. ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್ ಸಮೀಪದ ಇಂಚಿಯಾನ್ ನಗರದ ಜಿಮ್‌ ಸದ್ಯ ಚರ್ಚೆಯಲ್ಲಿದೆ. ಇಲ್ಲಿ ಅಜುಮ್ಮಾಗೆ ಪ್ರವೇಶ ನಿಷೇಧಿಸಲಾಗಿದೆ ಮತ್ತು ಸುಸಂಸ್ಕೃತ ಮತ್ತು ಸುಂದರ ಮಹಿಳೆಯರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ಇದೆ ಎಂಬ ಫಲಕವನ್ನು ಜಿಮ್ ಮುಂದೆ ನೇತುಹಾಕಲಾಗಿದೆ. ದಕ್ಷಿಣ ಕೋರಿಯಾದಲ್ಲಿ ಅಜುಮ್ಮಾ ಅಂದ್ರೆ ವಯಸ್ಸಾದ ಮಹಿಳೆಯರು ಎಂದರ್ಥ. ಸಾಮಾನ್ಯವಾಗಿ ಇಲ್ಲಿ 30 ವರ್ಷ ಮೇಲ್ಪಟ್ಟ ಮಹಿಳೆಯರನ್ನು ಅಜುಮ್ಮಾ ಎಂದು ಕರೆಯಲಾಗುತ್ತದೆ. 

Latest Videos

undefined

ಹೇರ್ ಸ್ಟೈಲಿಸ್ಟ್ ಮೇಲೆ ರಾಣಿ‌ ಮುಖರ್ಜಿ‌ ಕೋಪ, ಸಿಟ್ಟಲ್ಲಿ ಶಾಪ ಕೊಟ್ಟಿದ್ದಕ್ಕೆ ಪ್ಲಾಪ್ ಆಯ್ತಾ ಮೂವಿ?

ಈ ಜಿಮ್ ಗೆ ಬರ್ತಿದ್ದ ಕೆಲ ಮಹಿಳೆಯರ ಅಸಭ್ಯ ವರ್ತನೆಯನ್ನು ನೋಡಿ ಜಿಮ್ ಈ ನಿರ್ಧಾರಕ್ಕೆ ಬಂದಿದೆ. ಜಿಮ್ ಗೆ ಬರುವವರು ವರ್ಕೌಟ್ ಮಾಡಿ ಹೋಗ್ಬೇಕು. ಆದ್ರೆ ಅಲ್ಲಿಗೆ ಬರುವ ಮಹಿಳೆಯರು ವರ್ಕೌಟ್ ಬದಲು ಮೋಜು ಮಾಡಲು ಬರ್ತಿದ್ದರು. ವ್ಯರ್ಥ ಸಮಯ ಹೇಳು ಮಾಡ್ತಿದ್ದರು. ಜಿಮ್ ನಲ್ಲಿರುವ ಬಟ್ಟೆ, ಸೋಪ್, ಟವೆಲ್, ಹೇರ್ ಡ್ರೈಯರ್ ಸೇರಿದಂತೆ ಅನೇಕ ವಸ್ತುಗಳನ್ನು ಕದ್ದೊಯ್ಯುತ್ತಿದ್ದರು. ಮಹಿಳೆಯರ ಈ ಕೆಲಸದಿಂದ ಜಿಮ್ ಗೆ ಭಾರೀ ನಷ್ಟವಾಗಿತ್ತು.

ಬರೀ ಇಷ್ಟಾದ್ರೆ ಸರಿ, ಜಿಮ್ ಗೆ ಬರುವ ಇನ್ನೊಂದಿಷ್ಟು ಮಹಿಳೆಯರ ದೇಹದ ಆಕಾರವನ್ನು ಅವರು ಅವಹೇಳನ ಮಾಡುತ್ತಿದ್ದರು. ಇತರರ ಕಾಲೆಳೆಯುವ ಕೆಲಸ ನಡೆಯುತ್ತಿತ್ತು. ಇದ್ರಿಂದಾಗಿ ಉಳಿದವರಿಗೆ ತೊಂದ್ರೆ ಆಗ್ತಿತ್ತು. ಅನೇಕರು ಈ ಮಹಿಳೆಯರ ಕಾಟ ತಾಳಲಾರದೆ ಜಿಮ್ ತೊರೆದಿದ್ದರು ಎಂದು ಜಿಮ್ ಮಾಲೀಕರು ಹೇಳಿದ್ದಾರೆ.

ಜಿಮ್ ಮುಂದೆ ಈ ಫಲಕ ಹಾಕಿರೋದಕ್ಕೆ ವಿರೋಧ ಕೇಳಿ ಬರ್ತಿದೆ. ಹಿರಿಯ ಮಹಿಳೆಯರಿಗೆ ಇಲ್ಲಿ ಅವಹೇಳನ ಮಾಡಲಾಗಿದೆ, ದೇಶದಲ್ಲಿ ವಯಸ್ಸಾದ ಮಹಿಳೆಯರ ವಿರುದ್ಧ ತಾರತಮ್ಯವಾಗ್ತಿದೆ ಎನ್ನುವ ಚರ್ಚೆ ಮತ್ತೆ ಚುರುಕು ಪಡೆದಿದೆ. 

70ರ ವರ, 28ರ ವಧು! ನಡೀತು ಅದ್ಧೂರಿ ಮದುವೆ, ಹುಡುಗಿ ಬುದ್ಧಿವಂತೆ ಎಂದಿದ್ಯಾಕೆ ನೆಟ್ಟಿಗರು?

ಜಿಮ್‌ಗೆ ಹೋಗಲು ಯಾವುದು ಸರಿಯಾದ ವಯಸ್ಸು? : ಈಗ ಹದಿಹರೆಯದಲ್ಲೇ ಹುಡುಗರು ಬಾಡಿ ಬಿಲ್ಡ್ ಮಾಡಲು ಬಯಸ್ತಾರೆ. ಆದ್ರೆ ಅದು ಸರಿಯಲ್ಲ. 13 -14ನೇ ವಯಸ್ಸಿನಲ್ಲಿ ಜಿಮ್ ಗೆ ಹೋಗೋದು ಸೂಕ್ತ ಆಯ್ಕೆಯಲ್ಲ. ಮಕ್ಕಳನ್ನು ಜಿಮ್ಗೆ ಕಳುಹಿಸಲು ಸರಿಯಾದ ವಯಸ್ಸು 20 ವರ್ಷದಿಂದ 50 ವರ್ಷ. ನೀವು ಬಯಸಿದರೆ, 17-18 ವರ್ಷ ವಯಸ್ಸಿನಲ್ಲೂ ಜಿಮ್‌ಗೆ ಸೇರಬಹುದು. ಸಮಯ ಮತ್ತು ತೂಕದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. 

click me!