Latest Videos

ಹೇರ್ ಸ್ಟೈಲಿಸ್ಟ್ ಮೇಲೆ ರಾಣಿ‌ ಮುಖರ್ಜಿ‌ ಕೋಪ, ಸಿಟ್ಟಲ್ಲಿ ಶಾಪ ಕೊಟ್ಟಿದ್ದಕ್ಕೆ ಪ್ಲಾಪ್ ಆಯ್ತಾ ಮೂವಿ?

By Roopa HegdeFirst Published Jun 14, 2024, 2:13 PM IST
Highlights

ಬಾಲಿವುಡ್, ಸ್ಯಾಂಡಲ್ ವುಡ್ ಸೇರಿದಂತೆ ಸ್ಟಾರ್ಸ್ ಜೀವನದ ಬಗ್ಗೆ ತಿಳಿಯಲು ಅಭಿಮಾನಿಗಳು ಕುತೂಹಲದಿಂದ ಕಾಯ್ತಿರುತ್ತಾರೆ. ಯಾರ ಸ್ವಭಾವ ಹೇಗೆ ಎಂಬುದನ್ನು ಅರಿಯಲು ಮುಂದಾಗ್ತಾರೆ. ಈಗ ಅನುಭವಿ ಹೇರ್ ಸ್ಟೈಲಿಸ್ಟ್ ಒಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
 

ಸೆಲೆಬ್ರಿಟಿ ಹಿಂದೊಂದಿಷ್ಟು ಜನ ಮುಂದೊಂದಿಷ್ಟು ಜನ ಇರ್ಲೇಬೇಕು. ಅವರ ಡ್ರೆಸ್, ಹೇರ್ ಸ್ಟೈಲ್, ಮೇಕಪ್ ಎಲ್ಲವನ್ನೂ ನೋಡಿಕೊಳ್ಳಲು ಸಿಬ್ಬಂದಿ ಇರ್ತಾರೆ. ತೆರೆ ಮರೆಯಲ್ಲಿ ಕೆಲಸ ಮಾಡುವ ಅವರ ಬಗ್ಗೆ ಜನರಿಗೆ ಯಾವುದೇ ಮಾಹಿತಿ ಇರೋದಿಲ್ಲ. ತೆರೆ ಮೇಲೆ ಸುಂದರವಾಗಿ ಕಾಣುವ ನಟ- ನಟಿಯರು ಇವರಿಲ್ಲದೆ ಮಿಂಚಲು ಸಾಧ್ಯವೇ ಇಲ್ಲ. ಇಂಥ ಸಿಬ್ಬಂದಿಯನ್ನು ಕಲಾವಿದರ ಪ್ರತಿ ದಿನ ನೋಡ್ತಾರಾದ್ರೂ ಎಲ್ಲರನ್ನು ನೆನಪಿಟ್ಟುಕೊಳ್ಳೋದಿಲ್ಲ. ಅವರ ಕೆಲಸಕ್ಕೆ ಮನ್ನಣೆ ಸಿಗೋದು ಕೂಡ ಅಪರೂಪ. ಅನೇಕ ಕಲಾವಿದರು, ಹೇರ್ ಸ್ಟೈಲಿಸ್ಟ್, ಮೇಕಪ್ ಆರ್ಟಿಸ್ಟ್ ಸೇರಿದಂತೆ ಬಹುತೇಕ ಸಿಬ್ಬಂದಿಯನ್ನು ನಿರ್ಲಕ್ಷ್ಯ ಮಾಡ್ತಾರೆ ಎನ್ನುವ ಆರೋಪ ಕೂಡ ಆಗಾಗ ಕೇಳಿ ಬರ್ತಿರುತ್ತದೆ. ಈಗ  ಅನುಭವಿ ಹೇರ್ ಸ್ಟೈಲಿಸ್ಟ್ ಮಾರಿಯಾ ಈ ಬಗ್ಗೆ ಮಾತನಾಡಿದ್ದಾರೆ. ಬಿ-ಟೌನ್ ನ ಅನೇಕ ನಟಿಯರೊಂದಿಗೆ ಕೆಲಸ ಮಾಡಿದ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ. ನಟಿ ರಾಣಿ ಮುಖರ್ಜಿ ಬಗ್ಗೆ ಅವರು ಹೇಳಿದ ಮಾತು ಅಚ್ಚರಿ ಹುಟ್ಟಿಸುವಂತಿದೆ.

ಮೊದಲ ಹಾಗೂ ಈಗಿನ ನಟಿಯರನ್ನು ಹೋಲಿಕೆ ಮಾಡಿದ ನಟಿ: ಹೇರ್ ಸ್ಟೈಲಿಸ್ಟ್ (Hair Stylist) ಮಾರಿಯಾ (Maria), ಹಿಂದಿನ ಕಲಾವಿದರು ಹಾಗೂ ಈಗಿನ ಕಲಾವಿದರನ್ನು ಹೋಲಿಸಿದ್ದಾರೆ. ಹಿಂದಿನ ಸೆಲೆಬ್ರಿಟಿ (celebrity) ಗಳು ತಮ್ಮ ಇಡೀ ತಂಡವನ್ನು ಗೌರವಿಸುತ್ತಿದ್ದರು ಮತ್ತು ಅವರ ಬಗ್ಗೆ ಕಾಳಜಿ ವಹಿಸುತ್ತಿದ್ದರು ಎಂದಿದ್ದಾರೆ. 

ಸೌಂದರ್ಯ ಸ್ಪರ್ಧೆ ಕಿರೀಟ ಮಾರಾಟಕ್ಕಿದೆ! ಬ್ಯೂಟಿ ಸ್ಪರ್ಧೆಯ ಶಾಕಿಂಗ್ ವಿಷ್ಯ ರಿವೀಲ್​ ಮಾಡಿದ ​ಮಿಸಸ್​ ವರ್ಲ್ಡ್​

ಕೋಪ ತೋರಿದ ರಾಣಿ ಮುಖರ್ಜಿಗೆ ಶಾಪ ನೀಡಿದ್ದ ಮಾರಿಯಾ: ಸಂದರ್ಶನದಲ್ಲಿ ಮಾರಿಯಾ ಈ ವಿಷ್ಯವನ್ನೂ ಹೇಳಿದ್ದಾರೆ. ರಾಣಿ ಮುಖರ್ಜಿಗೆ ಕೋಪ. ಹೇರ್ ಸ್ಟೈಲ್ ವಿಷ್ಯದಲ್ಲಿ ಗಲಾಟೆ ಮಾಡ್ತಿದ್ದರು ಎಂದು ಮಾರಿಯಾ ಹೇಳಿದ್ದಾರೆ. ಹೊಟೇಲ್‌ಗೆ ಕರೆಯುತ್ತಿದ್ದ ರಾಣಿ, ನಂತ್ರ ಇಲ್ಲಿಗೆ ಬರಬೇಡಿ, ಶೂಟಿಂಗ್‌ನಲ್ಲಿ ಹೇರ್ ಸ್ಟೈಲ್ ಮಾಡಿ ಎನ್ನುತ್ತಿದ್ದರು. ಅಲ್ಲಿಗೆ ಬಂದ್ರೂ ಅವರಿಗೆ ಅವರಿಗೆ ಯಾವುದೇ ಹೇರ್ ಸ್ಟೈಲ್ ಇಷ್ಟ ಆಗ್ತಿರಲಿಲ್ಲ. ಪದೇ ಪದೇ ಸ್ಟೈಲ್ ಚೇಂಜ್ ಮಾಡುವಂತೆ ಕೂಗಾಡ್ತಿದ್ದರು. ಎಷ್ಟೊಂದು ದೊಡ್ಡ ಕಲಾವಿದರ ಜೊತೆ ಕೆಲಸ ಮಾಡಿದ್ದ ನನ್ನನ್ನು ಅವರು ಹೀಗೆ ನೋಡ್ತಿದ್ದಿದ್ದು ನನಗೆ ಇಷ್ಟವಾಗ್ತಿರಲಿಲ್ಲ. ಕೊನೆಯಲ್ಲಿ ಮಾರಿಯಾ ಬಿಟ್ಟು ಕಂಪನಿ ಹೇರ್ ಸ್ಟೈಲಿಸ್ಟ್ ಬಳಿ ರಾಣಿ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದರಂತೆ. ಸುಶ್ಮಿತಾ ಸೇನ್, ಹೇಮಾ ಮಾಲಿನಿ, ಶರ್ಮಿಳಾ ಟ್ಯಾಗೋರ್ ಎಲ್ಲರ ಜೊತೆ ನಾನು ಕೆಲಸ ಮಾಡಿದ್ದೇನೆ. ನನ್ನ ಕೆಲಸವನ್ನು ಪ್ರತಿಯೊಬ್ಬರೂ ಮೆಚ್ಚಿದ್ದರು. ಆದ್ರೆ ರಾಣಿ ಸ್ವಭಾವ ನನಗೆ ಗೊತ್ತಿಲ್ಲ, ನಾನೇನು ಮಾಡಿದ್ರೂ ಅವರಿಗೆ ಇಷ್ಟವಾಗ್ತಿರಲಿಲ್ಲ. ನನ್ನ ಜೊತೆ ಹೀಗೆ ವರ್ತಿಸಿದ್ದು ನನಗೆ ಇಷ್ಟವಾಗ್ಲಿಲ್ಲ. ಬೇಸರವಾಯ್ತು. ಕೋಪದಲ್ಲಿ ಸಿನಿಮಾ ಹಿಟ್ ಆಗದಿರಲಿ ಎಂದು ಶಾಪ ನೀಡಿದ್ದೆ. ಹಾಗೇ ಆಯ್ತು ಎಂದು ಮಾರಿಯಾ ಹೇಳಿದ್ದಾರೆ. ಆಕೆ ತುಂಬಾ ಕೋಪಿಷ್ಠ ಹುಡುಗಿ ಎಂದು ಮಾರಿಯಾ ಹೇಳಿದ್ದಾರೆ.

ಕೋಟ್​ ಧರಿಸಿಯೇ ಭೂಮಿಕಾ ಜೊತೆ ಮಲಗಿ ನಕ್ಷತ್ರ ಎಣಿಸಿದ ಗೌತಮ್​: ಏನಿದರ ಗುಟ್ಟು?

ಐಶ್ವರ್ಯ ರೈ ಹೊಗಳಿದ ಮಾರಿಯಾ : ಮಾತು ಮುಂದುವರೆಸಿದ ಮಾರಿಯಾ, ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಅವರನ್ನು ಹೊಗಳಿದ್ದಾರೆ. ದೇವದಾಸ್ ಚಿತ್ರದ ಸಿಲ್ಸಿಲಾ ಯೇ ಚಾಹತ್ ಕಾ ಹಾಡಿಗೆ ಐಶ್ವರ್ಯಾ ಹೇರ್ ಸ್ಟೈಲ್ ಮಾಡಿದ್ದು ಮಾರಿಯಾ. ಒಂದು ದಿನ ಮಾರಿಯಾ, ಕಂಗನಾ ರನೌತ್ ಜೊತೆ ಗ್ರೀಸ್ ಗೆ ಹೋಗಿದ್ದರಂತೆ. ಅಲ್ಲಿ ಸ್ವಲ್ಪ ಕತ್ತಲೆ ತುಂಬಿದ್ದ ಮೆಟ್ಟಿಲು ಏರುವಾಗ, ಎದುರು ಬದಿಯಿಂದ ಐಶ್ವರ್ಯ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಬರ್ತಿದ್ದರು. ಇಷ್ಟು ವರ್ಷದ ಮೇಲೆ ಅವರು ನನ್ನನ್ನು ಗುರುತಿಸಲು ಸಾಧ್ಯವಿಲ್ಲ ಎನ್ನುತ್ತಲೇ ಮಾರಿಯಾ ಮೆಟ್ಟಿಲು ಏರುತ್ತಿದ್ದರು. ಆದ್ರೆ ಐಶ್ವರ್ಯ ರೈ ಅವರನ್ನು ಗುರುತಿಸಿದ್ದಲ್ಲದೆ, ಇಲ್ಲಿಗೆ ಹೇಗೆ ಬಂದ್ರಿ ಎಂದು ಕೇಳಿದ್ದರಂತೆ. ಅದು ನನಗೆ ಖುಷಿ ನೀಡಿತ್ತು ಎಂದು ಮಾರಿಯಾ ಹಿಂದಿನ ದಿನಗಳನ್ನು ಮೆಲುಕು ಹಾಕಿದ್ದಾರೆ. 
 

click me!