
ಓರ್ವ ಹೆಣ್ಣು ತಾಯಿಯಾಗಲು ರೆಡಿಯಾಗಿದ್ದಾಳೆ ಎಂದು ತೋರಿಸುವ ಅದ್ಭುತ ಪ್ರಕೃತಿ ಕ್ರಿಯೆಯೇ ಮುಟ್ಟು ಎಂದು ಹೇಳಲಾಗುತ್ತದೆಯಾದರೂ, ಮುಟ್ಟಿನ ದಿನಗಳಲ್ಲಿ ಹಲವು ಹೆಣ್ಣುಮಕ್ಕಳು, ಮಹಿಳೆಯರು ಅನುಭವಿಸುವ ಯಾತನೆ ಯಾರಿಗೂ ಬೇಡ. ಹೊಟ್ಟೆನೋವು, ತಲೆನೋವು, ಸೊಂಟದ ನೋವು, ಕೈಕಾಲು ಸೆಳೆತ... ಹೀಗೆ ಆ ದಿನಗಳಲ್ಲಿ ಹಲವರು ಅನುಭವಿಸುವ ಹಿಂಸೆ ಹೇಳಿಕೊಳ್ಳಲು ಆಗದಂಥದ್ದು. ದೇವರೇ ಈ ಹೆಣ್ಣು ಜನ್ಮ ಯಾಕೆ ಕೊಟ್ಯಪ್ಪಾ ಎಂದು ಈ ದಿನಗಳಲ್ಲಿ ಹೇಳಿಕೊಳ್ಳುವ ಹೆಣ್ಣುಮಕ್ಕಳು ಅದೆಷ್ಟೋ ಮಂದಿ! ಅದರಲ್ಲಿಯೂ ಕೆಲಸಕ್ಕೆ ಹೋಗುವವರ ಪಾಡಂತೂ ಹೇಳುವುದೇ ಬೇಡ. ಇದು ಇವರ ಪಾಡಾದರೆ ಇನ್ನು ಕ್ರೀಡಾ ಪಟುಗಳಿಗೆ ಹೇಗಾಗಬೇಡ? ಪೀರಿಯಡ್ಸ್ ಟೈಂನಲ್ಲಿಯೇ ದೊಡ್ಡ ಮಟ್ಟದಲ್ಲಿ ಸ್ಪರ್ಧಿಸಬೇಕು ಎಂದರೆ ಅದು ಹೇಳಿಕೊಳ್ಳಲು ಆಗದ ಸಂಕಟ. ಇನ್ನು ಇಂಥ ಸಂದರ್ಭದಲ್ಲಿ ವಿಶ್ವ ಮಟ್ಟದ ಆಟದಲ್ಲಿ ಇತರ ದೇಶಗಳ ಸ್ಪರ್ಧಿಗಳೊಂದಿಗೆ ಕಣಕ್ಕೆ ಇಳಿಯುವುದು ಎಂದರೆ ಸುಲಭದ ಮಾತೆ? ಇದೀಗ ಅದರ ಬಗ್ಗೆ ಹೇಳಿಕೊಂಡಿದ್ದಾರೆ ಭಾರತದ ಮಹಿಳಾ ಬಾಕ್ಸಿಂಗ್ ದಂತಕಥೆಯೆಂದೇ ಹೇಳುವ ಮೇರಿ ಕೋಮ್.
ಮೇರಿಕೋಂ ಕುರಿತು ಹೇಳುವ ಅಗತ್ಯವೇ ಇಲ್ಲ. ಒಲಿಂಪಿಕ್ಸ್ನಲ್ಲಿ ಪದಕ ಜಯಿಸಿದ ಮೊದಲ ಭಾರತದ ಬಾಕ್ಸರ್ ಎಂಬ ಹೆಗ್ಗಳಿಕೆ ಪಡೆದಿರುವ ಬಾಕ್ಸಿಂಗ್ ತಾರೆ ಮೇರಿಕೋಮ್. ಒಟ್ಟಾರೆ 8 ಬಾರಿ ವಿಶ್ವ ಚಾಂಪಿಯನ್, 7 ಬಾರಿ ಏಷ್ಯಾನ್ ಚಾಂಪಿಯನ್ ಶಿಪ್ , 2 ಬಾರಿ ಏಷ್ಯಾನ್ ಗೇಮ್ಸ್ ಜಯಿಸಿರುವುದಲ್ಲದೆ, ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದು ಬೀಗಿದವರು. ಭಾರತದ ಬಾಕ್ಸಿಂಗ್ ಲೋಕದ ದಿಗ್ಗಜೆ ಎಂದು ಕರೆಸಿಕೊಂಡಿರುವ ಮೇರಿಕೋಂ, 2012ರಲ್ಲಿ ನಡೆದಿದ್ದ ಲಂಡನ್ ಒಲಿಂಪಿಕ್ಸ್ ನ 51 ಕೆಜಿ ವಿಭಾಗದಲ್ಲಿ ಕಾಣಿಸಿಕೊಂಡಿದ್ದರು. ಫೈನಲ್ ಹಂತ ತಲುಪುವಲ್ಲಿ ಎಡವಿದರೂ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು. ಈ ಪ್ರಶಸ್ತಿ ಜಯಿಸುವ ಮುನ್ನ ಅವರು 5 ಬಾರಿ ವಿಶ್ವ ಚಾಂಪಿಯನ್ ಗೆದ್ದಿದ್ದರು. ಕೊನೆಯ ಬಾರಿ 2021ರಲ್ಲಿ ಆಯೋಜನೆಗೊಂಡಿದ್ದ ಏಷ್ಯಾನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಪಡೆದುಕೊಂಡರು.
ಆರೋಗ್ಯಕರ ನೆಲ್ಲಿಕಾಯಿ ಜ್ಯೂಸ್ ಮಾಡೋ ಸರಿ ವಿಧಾನ ಯಾವುದು? ಡಾ. ಪದ್ಮಿನಿ ಪ್ರಸಾದ್ ಮಾಡಿ ತೋರಿಸಿದ್ದಾರೆ ನೋಡಿ...
ಬಾಕ್ಸಿಂಗ್ ಲೋಕದ ಜೀವನಕ್ಕೆ ಕಳೆದ ಜನವರಿಯಲ್ಲಿ ವಿದಾಯ ಘೋಷಿಸಿರುವ ಈ ಧೀರೆ, ಈಗ ಮುಟ್ಟಿನ ದಿನಗಳಲ್ಲಿ ತಮಗಾಗಿರುವ ವಿಚಿತ್ರ ಅನುಭವದ ಕುರಿತು ಮಾತನಾಡಿದ್ದಾರೆ. 'ಮುಟ್ಟಿನ ದಿನಗಳಲ್ಲಿ ಆಡುವುದು ಅದರಲ್ಲಿಯೂ ಬಾಕ್ಸಿಂಗ್ ಆಡುವುದು ಎಂದರೆ ಸುಲಭದ ಮಾತಲ್ಲ. ವಿಚಿತ್ರ ಎಂದರೆ ನಾನು ಸ್ಪರ್ಧಿಸಬೇಕಿದ್ದ ಎರಡೂ ವರ್ಲ್ಡ್ ಚಾಂಪಿಯನ್ಷಿಪ್ ಸಂದರ್ಭದಲ್ಲಿಯೇ ಋತುಸ್ರಾವ ಆಗಿಹೋಯ್ತು. ಆರಂಭದಲ್ಲಿ ನನಗೆ ಭಯವೇ ಆಯ್ತು, ಅದು ಮುಜುಗರ ತರುವ ವಿಷಯ ಕೂಡ' ಎನ್ನುತ್ತಲೇ ಆ ದಿನಗಳಲ್ಲಿ ಅದೇನೋ ಗೊತ್ತಿಲ್ಲ ನನ್ನ ದೇಹದಲ್ಲಿ ಹಲವು ಬದಲಾವಣೆ ಆಗಿ ಡಬಲ್ ಎನರ್ಜಿ ಸಿಕ್ಕಿಬಿಟ್ಟಿತು. ಎರಡೂ ಬಾರಿಯೂ ಇದೇ ರೀತಿಯ ಫೀಲ್ ಆಯಿತು. ಇದೇ ನನ್ನ ಸ್ಟ್ರೆಂಗ್ತ್ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಅಂದಹಾಗೆ ಮೇರಿಕೋಮ್ 2021ರ ಟೊಕಿಯೋ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮೇರಿಕೋಮ್ ಅವರು ಪದಕ ಜಯಿಸದೆ ನಿರಾಸೆ ಮೂಡಿಸಿದ್ದರು. ಮಹಿಳೆಯರ ಫ್ಲೈವೇಟ್ ವಿಭಾಗದ ಫ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಗ್ರಿಡ್ ವೇಲೆನ್ಸಿಯಾ ವಿರುದ್ಧ ಸೋಲು ಕಂಡ ಮೇರಿಕೋಮ್ ತಮ್ಮ ಪಯಣ ಮುಗಿಸಿದ್ದರು. 2019ರಲ್ಲಿ ವಿಶ್ವ ಚಾಂಪಿಯನ್ ಪದಕ ಜಯಿಸಿದ್ದ ಮೇರಿಕೋಮ್ ಮಹಿಳಾ ವಿಭಾಗದಲ್ಲಿ ಒಟ್ಟಾರೆ 8 ವಿಶ್ವ ಚಾಂಪಿಯನ್ ಪದಕ ಗೆದ್ದು ವಿಶ್ವದಾಖಲೆ ನಿರ್ಮಿಸಿದ್ದಾರೆ.
ಆರೋಗ್ಯಪೂರ್ಣ ಮಗುವಿಗೆ, ಸುಲಭದ ಹೆರಿಗೆಗೆ ನಟಿ ಅದಿತಿ ಪ್ರಭುದೇವ ಮಾಡಿದ್ದೇನು? ವಿಡಿಯೋ ನೋಡಿ..
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.