
ಇದೇನಿದ್ರೂ ಸ್ಮಾರ್ಟ್ ಯುಗ. ಎಲ್ಲರೂ ಸ್ಮಾರ್ಟ್ ಆಗಿದ್ದಾರೆ. ಜೊತೆಗೇ ಸ್ಮಾರ್ಟ್ ವಸ್ತುಗಳನ್ನೇ ಬಳಸಬೇಕೆಂದೇ ಬಯಸುತ್ತಾರೆ ಕೂಡಾ. ಹಾಗಾಗಿಯೇ ಸ್ಮಾರ್ಟ್ ಫೋನ್, ಸ್ಮಾರ್ಟ್ ವಾಚ್‌ಗಳು ಹೆಚ್ಚು ಬಳಕೆಯಲ್ಲಿವೆ. ಸ್ಟೈಲಿಸ್ಟ್ ಲುಕ್ ಗಳುಳ್ಳ, ಹಲವಾರು ಫೀಚರ್ಸ್ ನ ಸ್ಮಾರ್ಟ್ ವಾಚ್ ಗಳನ್ನು ಕೈಗೆ ಧರಿಸಿಕೊಳ್ಳುವುದು ಯುವ ಪೀಳಿಗೆಯ ಫ್ಯಾಶನ್. ಸಾಮಾನ್ಯವಾಗಿ ವಾಚ್ ಗಳನ್ನು ಸಮಯ ನೋಡುವುದಕ್ಕೆ ಬಳಸಲಾಗುತ್ತದೆ. ಆದರೆ ಈಗಿನ ಸ್ಮಾರ್ಟ್ ವಾಚ್ ಗಳು ಸಮಯ ಮಾತ್ರವಲ್ಲ, ಆರೋಗ್ಯದ ಕಾಳಜಿ ವಹಿಸಲು ಸಹ ನೆರವಾಗುತ್ತದೆ. ನಾವು ಎಷ್ಟು ನಡೆದಿದ್ದೇವೆ. ಸೈಕ್ಲಿಂಗ್, ಕಾಲ್, ಮೆಸೇಜ್ ಗಳ ಬಗ್ಗೆ ಆಲರ್ಟ್ ಮಾಡುತ್ತದೆ. ಆದರೆ ಇಲ್ಲೊಬ್ಬ ಮಹಿಳೆಗೆ ಸ್ಮಾರ್ಟ್ ವಾಚ್ ನಿಂದ ಇದೆಲ್ಲಕ್ಕಿಂತ ದೊಡ್ಡ ಉಪಯೋಗವೇ ಆಗಿದೆ.
ಗರ್ಭಾವಸ್ಥೆಯನ್ನು ಪತ್ತೆ ಹಚ್ಚಿದ ಆ್ಯಪಲ್ ವಾಚ್
ತಂತ್ರಜ್ಞಾನವು (Technology) ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಈ ಅಪ್‌ಡೇಟೆಡ್ ಗ್ಯಾಜೆಟ್‌ಗಳು ದೈಹಿಕ ಕಾರ್ಯಗಳಲ್ಲಿ ವ್ಯತ್ಯಾಸವನ್ನು ಸೂಚಿಸುವ ಮೂಲಕ ಜೀವರಕ್ಷಕಗಳಾಗಿ ಕಾರ್ಯನಿರ್ವಹಿಸಲು ಸುಸಜ್ಜಿತವಾಗಿವೆ. ಇತ್ತೀಚೆಗೆ, ಮಹಿಳೆ (Woman)ಯೊಬ್ಬರು ಕ್ಲಿನಿಕಲ್ ಪರೀಕ್ಷೆಗೆ ಮುಂಚೆಯೇ ತಾನು ಗರ್ಭಿಣಿ (Pregnant) ಎಂಬುದನ್ನು ತಿಳಿದುಕೊಂಡಿದ್ದಾರೆ. ತನ್ನ ಗರ್ಭಾವಸ್ಥೆಯನ್ನು ಪತ್ತೆಹಚ್ಚಲು ತನ್ನ ಆ್ಯಪಲ್ ವಾಚ್ ಹೇಗೆ ಸಹಾಯ (Help) ಮಾಡಿತು ಎಂಬುದರ ಕುರಿತು ಸಾಮಾಜಿಕ ಜಾಲತಾಣದಲ್ಲಿ (Social media) ತಿಳಿಸಿದ್ದಾರೆ.
ಅಬ್ಬಾ.... ಆಪಲ್ ವಾಚ್‌ನಿಂದಲೇ ಜೀವ ಉಳಿಯಿತು!
ಮಹಿಳೆ ಹೃದಯ ಬಡಿತವು (Heart beat) ಸಾಮಾನ್ಯವಾಗಿ 57ರಷ್ಟಿದೆ ಎಂದು ಅವರು ಹೇಳಿದ್ದಾರೆ. ಆದರೆ, ಒಂದು ದಿನ, ಆಕೆಯ ಆ್ಯಪಲ್ ವಾಚ್ ಅವಳ ಹೃದಯ ಬಡಿತದಲ್ಲಿ ಏರಿಳಿತಗಳನ್ನು ಸೂಚಿಸಿತು. ಆಕೆಯ ಹೃದಯ ಬಡಿತವು 72ಕ್ಕೆ ಏರಿರುವುದಾಗಿ ಅದರಲ್ಲಿ ತೋರಿಸಾಯಿತು. ಮುಂದಿನ 15 ದಿನಗಳ ವರೆಗೆ ಹೃದಯ ಬಡಿತವು ಅದೇ ರೀತಿ ಮುಂದುವರಿದಾಗ ಮಹಿಳೆ ಚಿಂತಿಸತೊಡಗಿದಳು. ಹೀಗೆ ಹೆಚ್ಚಿದ ಹೃದಯ ಬಡಿತಕ್ಕೆ ಕಾರಣವಾದ ಯಾವುದೇ ಅಂಶಗಳಿವೆಯೇ ಎಂದು ಅರ್ಥಮಾಡಿಕೊಳ್ಳಲು ಮಹಿಳೆ ಇಂಟರ್ನೆಟ್ ಅನ್ನು ಬ್ರೌಸ್ ಮಾಡಿದರು.
ಹೃದಯ ಬಡಿತ ಹೆಚ್ಚಿದ್ದಕ್ಕೆ ಹಲವು ಪರೀಕ್ಷೆ ನಡೆಸಿದ ಮಹಿಳೆ
ಯಾವುದಾದರೂ ಕಾಯಿಲೆ (Disease)ಯಿದೆಯೇ ಎಂದು ಪತ್ತೆಹಚ್ಚಲು ಹಲವು ಟೆಸ್ಟ್‌ಗಳನ್ನು ನಡೆಸಿದರು. COVID-19 ಪರೀಕ್ಷೆಯನ್ನು ತೆಗೆದುಕೊಂಡರು. ತನಗೆ ವೈರಸ್ ಇಲ್ಲ ಎಂದು ತಿಳಿದ ನಂತರ ಮಹಿಳೆ ಆನ್‌ಲೈನ್‌ನಲ್ಲಿ ಬ್ರೌಸ್ ಮಾಡುವುದನ್ನು ಮುಂದುವರೆಸಿದಳು. ಅಂತಿಮವಾಗಿ, ಹೆಚ್ಚಿದ ಹೃದಯ ಬಡಿತವು ಗರ್ಭಾವಸ್ಥೆಯೊಂದಿಗೆ ಸಂಬಂಧಿಸಿದೆ ಎಂದು ಅವರು ಕಂಡುಕೊಂಡರು. ಆ್ಯಪಲ್ ವಾಚ್‌ನ ಸಹಾಯದಿಂದ ತಾನು ಗರ್ಭಿಣಿ ಎಂಬುದನ್ನು ತಿಳಿದುಕೊಂಡರು.
ಮಹಿಳೆ 'ಆರಂಭದಲ್ಲಿ ನಾನು ಕೋವಿಡ್ ಪರೀಕ್ಷೆ ಮಾಡಿಸಿದೆ. ಜ್ವರದ ಪರೀಕ್ಷೆ ಮಾಡಿಸಿದೆ ಎಲ್ಲವೂ ನಾರ್ಮಲ್ ಆಗಿಯೇ ಇತ್ತು. ಆನ್ಲೈನ್ ನಲ್ಲಿ ಕೆಲವೊಂದು ಅರ್ಟಿಕಲ್ ಗಳನ್ನು ಓದಿದ ಮೇಲೆ ಇದು ಆರಂಭಿಕ ಗರ್ಭಾವಸ್ಥೆಯ ಸಮಯದಲ್ಲಿ ಆಗಬಹುದಾದ ಪ್ರಕ್ರಿಯೆ ಎನ್ನುವುದು ಗೊತ್ತಾಯಿತು. ಕೂಡಲೇ ವೈದ್ಯರ ಬಳಿ ಪರೀಕ್ಷಿಸಿದೆ ಅಲ್ಲಿ ಪಾಸಿಟಿವ್ ಬಂತು' ಎಂದು ಬರೆದುಕೊಂಡಿದ್ದಾರೆ.
ಪತಿಯ ಜೀವ ಉಳಿಸಿದ ಆ್ಯಪಲ್ ವಾಚ್: ಸಿಇಒ ಟಿಮ್ ಕುಕ್‌ಗೆ ಕೃತಜ್ಞತೆ ಸಲ್ಲಿಸಿದ ಪತ್ನಿ!
ಮಹಿಳೆ ನಾಲ್ಕು ವಾರಗಳ ಗರ್ಭಿಣಿ ಎಂದು ಖಚಿತಪಡಿಸಿದ ವೈದ್ಯರು
ಗರ್ಭಿಣಿಯೆಂಬುದನ್ನು ಖಚಿತಪಡಿಸಿಕೊಳ್ಳಲು ಮಹಿಳೆ ಆ ಬಳಿಕ ವೈದ್ಯರ ಬಳಿಗೆ ಹೋದರು. ಪರೀಕ್ಷೆಗಳನ್ನು ನಡೆಸಿದ ವೈದ್ಯರು, ಆಕೆ ನಾಲ್ಕು ವಾರಗಳ ಗರ್ಭಿಣಿ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಘಟನೆಯ ಕುರಿತು ಮಾತನಾಡಿದ ಮಹಿಳೆ, ಆ ಸಮಯದಲ್ಲಿ ತನ್ನ ದೇಹವು ವಿಭಿನ್ನ ಹೃದಯ ಬಡಿತದ ಮಟ್ಟಕ್ಕಿಂತ ಬೇರೆ ಯಾವುದೇ ಲಕ್ಷಣಗಳನ್ನು ತೋರಿಸುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ತನ್ನ ಗರ್ಭಾವಸ್ಥೆಯ ಸುದ್ದಿಯನ್ನು ಕಂಡುಹಿಡಿಯಲು ಸಹಾಯ ಮಾಡಿದ್ದಕ್ಕಾಗಿ ಅವರು ಆಪಲ್ ವಾಚ್‌ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಇತರ ಆಪಲ್ ವಾಚ್ ಬಳಕೆದಾರರು ತಮ್ಮ ಹೃದಯ ಬಡಿತದ ಅಂಕೆಗಳಿಗೆ ಗಮನ ಕೊಡುವಂತೆ ಅವರು ಒತ್ತಾಯಿಸಿದ್ದಾರೆ. ಆ್ಯಪಲ್ ವಾಚ್ ಕೇವಲ ಹಾರ್ಟ್ ಬೀಟ್ ಮಾತ್ರವಲ್ಲ ಇಸಿಜಿ, ಆಕ್ಸಿಮೀಟರ್ ಮತ್ತು ಋತುಚಕ್ರವನ್ನು ಸಹ ಮೇಲ್ವಿಚಾರಣೆ ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.