ಹಣವನ್ನು ಗಳಿಸಿದ್ರೆ ಸಾಲದು, ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಬಾಲಿವುಡ್ ನಟಿ ಆಲಿಯಾ ಭಟ್ ಇದ್ರಲ್ಲಿ ಮುಂದಿದ್ದಾರೆ. ಕೋಟಿ ಕೋಟಿ ಸಂಪಾದನೆ ಮಾಡುವ ಬೆಡಗಿ ಹಣವನ್ನು ಸುರಕ್ಷಿತವಾಗಿ ಹೂಡಿಕೆ ಮಾಡೋದ್ರಲ್ಲೂ ನಂಬರ್ ಒನ್.
ಬಾಲಿವುಡ್ ಬೆಡಗಿ ಆಲಿಯಾ ಭಟ್‌ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಆಲಿಯಾ 30ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಕಂಪ್ಲೀಟ್ ವುಮೆನ್ ಎಂದೇ ಹೆಸರು ಪಡೆದಿರುವ ಆಲಿಯಾ, ಹತ್ತು ವರ್ಷದ ವೃತ್ತಿ ಜೀವನದಲ್ಲಿಯೇ ಆಕಾಶ ಮುಟ್ಟಿದ್ದಾರೆ. ಆಲಿಯಾ ವೃತ್ತಿಯಲ್ಲಿ ನಟಿ. ಅವರು ಮಗಳಾಗಿ, ಸೊಸೆಯಾಗಿ, ಪತ್ನಿಯಾಗಿ, ತಾಯಿಯಾಗಿ ಎಲ್ಲ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸ್ತಿದ್ದಾರೆ. ಪ್ರತಿಯೊಂದು ಹೆಜ್ಜೆಯನ್ನೂ ಆಲಿಯಾ ಯಶಸ್ವಿಯಾಗಿ ಇಡ್ತಿದ್ದಾರೆ.
ಆಲಿಯಾ (Alia) ಬರೀ ನಟನೆಯನ್ನು ಮಾತ್ರ ನಂಬಿಕೊಂಡಿಲ್ಲ. ಆಲಿಯಾ ಉದ್ಯಮಿ (Businessman) ಯಾಗಿಯೂ ಸಾಕಷ್ಟು ಪ್ರಗತಿ ಸಾಧಿಸುತ್ತಿದ್ದಾರೆ. ಆಲಿಯಾ ಇತ್ತೀಚೆಗಷ್ಟೇ ತನ್ನ ಸ್ವಂತ ಉದ್ಯಮವನ್ನು ಆರಂಭಿಸಿದ್ದಾಳೆ. ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಆಲಿಯಾ Ed-a-Mamma ಹೆಸರಿನ ಫ್ಯಾಷನ್ ಲೇಬಲನ್ನು ಮರುಪ್ರಾರಂಭಿಸಿದ್ದಾರೆ. ಅಕ್ಟೋಬರ್ 2020 ರಲ್ಲಿ ಸಾಂಕ್ರಾಮಿಕ ರೋಗ ಕೊರೊನಾ ಸಮಯದಲ್ಲಿ ಆಲಿಯಾ ಈ ವ್ಯವಹಾರವನ್ನು ಪ್ರಾರಂಭಿಸಿದ್ದರು. ಗರ್ಭಿಣಿಯಾದ ಸಂದರ್ಭದಲ್ಲಿ ಅದಕ್ಕೆ ಮತ್ತೆ ಮರುಜೀವ ನೀಡಿದ್ದಾರೆ.ಇದು ಕಿಡ್ಸ್ ವೇರ್ ಬ್ರಾಂಡ್ ಆಗಿದ್ದು, ಇದರಲ್ಲಿ ಆಲಿಯಾ ಮಾತೃತ್ವ ಬಟ್ಟೆಗಳನ್ನು ಸಹ ಸೇರಿಸಿದ್ದಾರೆ. ಆಲಿಯಾ ವ್ಯಾಪಾರದಲ್ಲೂ ಮುಂದಿದ್ದಾರೆ. ಅವರು ವ್ಯಾಪಾರ ಪ್ರಜ್ಞೆ ಮೆಚ್ಚುವಂತಹದ್ದು. ಯಾಕೆಂದ್ರೆ ಕೇವಲ 1600 ಔಟ್‌ಫಿಟ್ ನಲ್ಲಿ ಶುರು ಮಾಡಿದ್ದ ಬ್ಯುಸಿನೆಸ್ ಈಗ ಕೋಟಿ ದಾಟಿದೆ. ಆಲಿಯಾ ಆರಂಭದಲ್ಲಿ ಇದನ್ನು ಕೇವಲ ಆನ್ಲೈನ್ ನಲ್ಲಿ ಮಾರಾಟ ಮಾಡ್ತಿದ್ದರು. ಆದ್ರೀಗ ಅವರ ಬ್ರ್ಯಾಂಡ್ ಅನೇಕ ಅಂಗಡಿಗಳಲ್ಲಿ ಲಭ್ಯವಿದೆ. ಅಭಿಮಾನಿಗಳು ಹಾಗೂ ಗ್ರಾಹಕರಲ್ಲಿ ಈ ಬ್ರ್ಯಾಂಡ್ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ.
ಯಾರೀಕೆ ಮಾಯಾ ಟಾಟಾ? ರತನ್ ಟಾಟಾ ಉತ್ತರಾಧಿಕಾರಿ ಇವರೇನಾ?
Ed-a-Mamma ಮಾತ್ರವಲ್ಲ ಆಲಿಯಾ ಇನ್ನೂ ಅನೇಕ ಕಡೆ ಇನ್ವೆಸ್ಟ್ ಮಾಡಿದ್ದಾರೆ. ಆಲಿಯಾ Phool.co ನಲ್ಲೂ ಹಣ ಹೂಡಿಕೆ ಮಾಡಿದ್ದಾರೆ. ನೀರಿಗೆ ಎಸೆಯುವ ತ್ಯಾಜ್ಯವನ್ನು ಮರುಬಳಕೆ ಮಾಡುವ ಕೆಲಸವನ್ನು ಈ ಕಂಪನಿ ಮಾಡುತ್ತದೆ. ಇದಲ್ಲದೆ, ನಟಿ ಆಲಿಯಾ ಭಟ್, ಸೌಂದರ್ಯ ಮತ್ತು ಫ್ಯಾಷನ್ ವೇದಿಕೆ ನೈಕಾ (NYKAA) ಮತ್ತು ವೈಯಕ್ತಿಕ ಸ್ಟೈಲಿಂಗ್ ಪ್ಲಾಟ್‌ಫಾರ್ಮ್ ಸ್ಟೈಲ್‌ಕ್ರಾಕರ್ (StyleCracker) ನಲ್ಲಿ ಹೂಡಿಕೆ ಮಾಡಿದ್ದಾರೆ. ಯಾವುದೇ ಕಂಪನಿಯ ದೃಷ್ಟಿಕೋನ ನನಗೆ ಇಷ್ಟವಾದಲ್ಲಿ ಮಾತ್ರ ನಾನು ಹಣ ಹೂಡಿಕೆ ಮಾಡ್ತೇನೆ ಎಂದು ಆಲಿಯಾ ನೈಕಾ ಸೇರುವ ಸಂದರ್ಭದಲ್ಲಿ ಹೇಳಿದ್ದರು.
ಆಲಿಯಾ 2014 ರಲ್ಲಿ ಜಬಾಂಗ್ ಆನ್‌ಲೈನ್ ವೆಬ್‌ಸೈಟ್‌ನೊಂದಿಗೆ ಸಹ ಒಪ್ಪಂದ ಮಾಡಿಕೊಂಡಿದ್ದರು. ಆದ್ರೆ ಅದು ಯಶಸ್ವಿಯಾಗಲಿಲ್ಲ. ಸಂದರ್ಶನವೊಂದರಲ್ಲಿ ಮಾತನಾಡಿದ ಆಲಿಯಾ, ನಾನು ಬ್ಯುಸಿನೆಸ್ ಹಾಗೂ ಮಾರ್ಕೆಟಿಂಗ್ ಎಕ್ಸ್ಫರ್ಟ್ ಅಲ್ಲ. ನಾನು ಜನರನ್ನು ನೋಡ್ತೇವೆ. ಆಮೇಲೆ ವಿಷ್ಯ ಅರ್ಥ ಮಾಡಿಕೊಳ್ಳುತ್ತೇನೆ ಎಂದಿದ್ದರು. ಆ ತಕ್ಷಣಕ್ಕೆ ಎಷ್ಟು ಲಾಭ ಬರುತ್ತದೆ ಎಂಬುದನ್ನು ನಾನು ನೋಡುವುದಿಲ್ಲ. ಯಾವುದೇ ವ್ಯವಹಾರದಲ್ಲಿಯಾದ್ರೂ ಕಾಯುವಿಕೆ ಮುಖ್ಯ. ವ್ಯವಹಾರದಲ್ಲಿ ರಿಸ್ಕ್ ಇದೆ ಎಂಬುದು ನನಗೆ ಗೊತ್ತಿದೆ. ಇದಕ್ಕೆ ನಾವು ಸಿದ್ಧರಾಗಿರಬೇಕು. ನಾನೊಬ್ಬ ಸ್ಟೋರೆ ಟೆಲ್ಲರ್. ನಾನು ಜನರ ಮೇಲೆ ಹೂಡಿಕೆ ಮಾಡ್ತೇನೆ. ಯಾರ ಐಡಿಯಾ ಗ್ರಾಹಕರನ್ನು ತಲುಪಲು ಸಾಧ್ಯವಾಗುತ್ತದೆಯೋ ಅವರ ಬ್ಯುಸಿನೆಸ್ ಯಶಸ್ವಿಯಾಗುತ್ತದೆ ಎಂದು ಆಲಿಯಾ ಹೇಳ್ತಾರೆ.
Bengaluru: ಸಮೋಸಾ ಮಾರಿ ದಿನಕ್ಕೆ 12ಲಕ್ಷ ರೂ. ಗಳಿಸುತ್ತಿದ್ದಾರೆ ಈ ಮಹಿಳಾ ಉದ್ಯಮಿ!
ಆಲಿಯಾ ಭಟ್ ಆಸ್ತಿ ಎಷ್ಟು ಗೊತ್ತಾ? : ಆಲಿಯಾ ಭಟ್ ನಿವ್ವಳ ಆಸ್ತಿ 299 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಆಲಿಯಾ ಒಂದು ಚಿತ್ರಕ್ಕೆ 20 ಕೋಟಿಗಿಂತ ಹೆಚ್ಚು ಹಣ ಪಡೆಯುತ್ತಾರೆ. ಸಿನಿಮಾದಲ್ಲಿ ತನ್ನ ಪಾತ್ರ ಯಾವುದು ಮತ್ತೆ ಏನು ಎಂಬುದರ ಆಧಾರದ ಮೇಲೆ ಆಲಿಯಾ ಸಂಭಾವನೆ ಪಡೆಯುತ್ತಾರಂತೆ. ಮುಂಬೈನಲ್ಲಿ ಎರಡು ಹಾಗೂ ಲಂಡನ್ ನಲ್ಲಿ ಒಂದು ಮನೆ ಹೊಂದಿದ್ದಾರೆ ಆಲಿಯಾ. ಲಂಡನ್ ನಲ್ಲಿರುವ ಮನೆ ಬೆಲೆ ಸುಮಾರು 37 ಕೋಟಿ ಮೌಲ್ಯದ್ದು ಎನ್ನಲಾಗಿದೆ. ಮುಂಬೈನಲ್ಲಿರುವ ಒಂದು ಮನೆ ಬೆಲೆ 13 ಕೋಟಿಯಾದ್ರೆ ಇನ್ನೊಂದು ಮನೆ ಬೆಲೆ 37 ಕೋಟಿ ಮೌಲ್ಯದ್ದಾಗಿದೆ. ಆಲಿಯಾ ಬಹುತೇಕ ಹಣವನ್ನು ಎಫ್ ಡಿ ಹಾಗೂ ಬಾಂಡ್ ಗಳ ಮೂಲಕ ಸುರಕ್ಷಿತವಾಗಿಡಲು ಬಯಸ್ತಾರೆ.