ದೇಶದ ಸಂಸ್ಕೃತಿ ಸಾರಲು ಮರಾಠಿ ಸೀರೆಯುಟ್ಟು ಬೈಕ್ ಸವಾರಿ ಮಾಡೋ ನಾರಿ

By Suvarna News  |  First Published Mar 14, 2023, 5:37 PM IST

ಅನೇಕ ಸಂಸ್ಕೃತಿಗಳು ಭಾರತದಲ್ಲಿ ನೆಲೆಯೂರಿವೆ. ಮಹಿಳೆಯರ ಸಂಪ್ರದಾಯಿಕ ಉಡುಗೆ ಸೀರೆಯಾದ್ರೂ ಅದನ್ನು ಧರಿಸುವ ವಿಧಾನ ಬೇರೆ ಬೇರೆ. ಈ ಸಂಗತಿಗಳು ವಿದೇಶಿಗರಿಗೆ ಸರಿಯಾಗಿ ತಿಳಿದಿಲ್ಲ. ಭಾರತದ ಸಂಸ್ಕೃತಿ, ಸಂಪ್ರದಾಯ, ಪದ್ಧತಿಯನ್ನು ತಿಳಿಸಲು ಈ ಮಹಿಳೆ ಸಂಕಲ್ಪತೊಟ್ಟು, ಸಾಹಸಕ್ಕೆ ಕೈ ಹಾಕಿದ್ದಾಳೆ.  
 


ತಮ್ಮ ಕೆಲಸದ ಮೂಲಕ ನಮ್ಮ ದೇಶದ ಕೀರ್ತಿಯನ್ನು ಬೆಳಗಿಸುವ ಮಹತ್ವಾಕಾಂಕ್ಷೆ ಹೊಂದಿರುವ ಅನೇಕ ಮಂದಿ ಭಾರತದಲ್ಲಿದ್ದಾರೆ. ವಿಶ್ವ ಕೇಳರಿಯದ ಕೆಲಸವನ್ನು ಮಾಡಿ ತೋರಿಸಿದ ಜನರು ನಮ್ಮಲ್ಲಿದ್ದಾರೆ. ಇದಕ್ಕೆ ಇನ್ನೊಂದು ಉದಾಹರಣೆ ರಮಿಲಾ ಲತ್ಪಟೆ. 27 ವರ್ಷದ ಮಹಿಳಾ ಉದ್ಯಮಿ ನಂಬಲಾಗದ ಕನಸನ್ನು ಈಡೇರಿಸಲು ಹೊರಟಿದ್ದಾರೆ. ಅವರು ತಮ್ಮ ಮೋಟಾರ್ ಸೈಕಲ್ ಮೂಲಕ 20 ರಿಂದ 30 ದೇಶ ಸುತ್ತಲಿದ್ದಾರೆ. ಸುಮಾರ 100,000 ಕಿಲೋಮೀಟರ್ ದೂರವನ್ನು ಮೋಟರ್ ಸೈಕಲ್ ನಲ್ಲಿ ಕ್ರಮಿಸಲಿದ್ದಾರೆ.  

ಅದ್ರಲ್ಲಿ ಏನಿದೆ ವಿಶೇಷ ಅಂತಾ ನೀವು ಕೇಳ್ಬಹುದು. ರಮಿಲಾ (Ramila), ಪ್ಯಾಂಟ್, ಟೀ ಶರ್ಟ್ ಧರಿಸಿ ಬೈಕ್ ಏರಿಲ್ಲ. ರಮಿಲಾ ಸಾಂಪ್ರದಾಯಿಕ ಮರಾಠಿ (Marathi) ಸೀರೆಯನ್ನು ಧರಿಸಿ ಮೋಟಾರ್‌ಸೈಕಲ್‌ನಲ್ಲಿ ಈ ಪ್ರಯಾಣ ಶುರು ಮಾಡಿದ್ದಾರೆ.  

Tap to resize

Latest Videos

ಈ ಮುಸ್ಲಿಂ ಪರಮ ಸುಂದರಿ ರಾಜಕುಮಾರಿಗೆ ಹಿಂದೂ ಧರ್ಮವೆಂದ್ರೆ ಇಷ್ಟವಂತೆ!

ಇಲ್ಲಿಂದ ಶುರುವಾಗಿದೆ ರಮಿಲಾ ಲತ್ಪೆಟೆ ಯಾತ್ರೆ : ಮಾರ್ಚ್ 9 ರಂದು ಸಂಜೆ  4 ಗಂಟೆ 30 ನಿಮಿಷಕ್ಕೆ ಮುಂಬೈ (Mumbai) ನ ಗೇಟ್‌ವೇ ಆಫ್ ಇಂಡಿಯಾದಿಂದ ರಮಿಲಾ ಲತ್ಪಟೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ. ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಸೇರಿದಂತೆ ಅನೇಕ ನಾಯಕರು ರಮಿಲಾ ಲತ್ಪೆಟ್ ಯಾತ್ರೆಗೆ ಶುಭಕೋರಿದ್ರು. ಲತ್ಪೆಟ್, ಮಾರ್ಚ್ 8, 2024 ರಂದು ತಮ್ಮ ಪ್ರಯಾಣವನ್ನು ಮುಗಿಸಿ ವಾಪಸ್ ಆಗುವ ಗುರಿ ಹೊಂದಿದ್ದಾರೆ. 

ಸೀರೆಯುಟ್ಟು ಬೈಕ್ ಏರಿದ ಲತ್ಪೆಟ್ ಗುರಿ ಏನು? : ಈ ಪ್ರವಾಸದ ಮೂಲಕ ರಾಜ್ಯದ ವಿಶಿಷ್ಟ ಉತ್ಪನ್ನಗಳು ಮತ್ತು ಕೊಡುಗೆಗಳನ್ನು ಜನರಿಗೆ ಪರಿಚಯೊಸುವುದು, ಮಹಾರಾಷ್ಟ್ರ ಸಂಸ್ಕೃತಿಯ ವಿವಿಧ ಅಂಶಗಳನ್ನು ಪ್ರಚಾರ ಮಾಡುವುದು ರಮಿಲಾ ಲತ್ಪಟೆ ಉದ್ದೇಶವಾಗಿದೆ. ಭೇಟಿ ನೀಡುವ ಪ್ರತಿಯೊಂದು ಸ್ಥಳದಲ್ಲೂ ಭಾರತೀಯ ಸಂಸ್ಕೃತಿಯನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ಗುರಿಯನ್ನು ಹೊಂದಿದ್ದಾರೆ. ಇದೇ ಕಾರಣಕ್ಕೆ ರಮಿಲಾ, ಸೀರೆಯುಟ್ಟು ಪ್ರಯಾಣ ಬೆಳೆಸುತ್ತಿದ್ದಾರೆ. 

Bengaluru: ಸಮೋಸಾ ಮಾರಿ ದಿನಕ್ಕೆ 12ಲಕ್ಷ ರೂ. ಗಳಿಸುತ್ತಿದ್ದಾರೆ ಈ ಮಹಿಳಾ ಉದ್ಯಮಿ!

ರಮಿಲಾ ಲತ್ಪೆಟ್ ಗೆ ಸೋಲೋ ಟ್ರಿಪ್ ಹೊಸದಲ್ಲ : ರಮಿಲಾ ಈ ಹಿಂದೆಯೂ ಸಾಕಷ್ಟು ಸೋಲೋ ಟ್ರಿಪ್ ಮಾಡಿದ್ದಾರೆ. ತಮ್ಮ 16ನೇ ವಯಸ್ಸಿನಲ್ಲಿಯೇ ಅವರು ಮೊದಲ ಸೋಲೋ ಟ್ರಿಪ್ ಹೋಗಿದ್ದರಂತೆ. ಅವರು ಚಿಕ್ಕವರಿದ್ದಾಗ ಅವರ ತಂದೆ ಪ್ರತಿ ವರ್ಷ ಬೇರೆ ಬೇರೆ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಿದ್ದರಂತೆ. ನಾನಾ ಸ್ಥಳಗಳಿಗೆ ಭೇಟಿ ನೀಡುವ ಒಲವು ಅಲ್ಲಿಂದ ಶುರುವಾಯ್ತಂತೆ. ರಮಿಲಾ ನಮ್ಮ ದೇಶದ ಅನೇಕ ಸ್ಥಳಗಳಲ್ಲದೆ ಕೆಲ ವಿದೇಶಿ ಸ್ಥಳಗಳನ್ನು ಸುತ್ತಿ ಬಂದಿದ್ದಾರೆ. ಆದ್ರೆ ಭಾರತದ ಸಂಸ್ಕೃತಿ, ಸಂಪ್ರದಾಯಗಳು, ವೈವಿಧ್ಯತೆಗಳು ಅನೇಕ ಕಡೆ ತಲುಪಿಲ್ಲ ಎಂಬುದು ಈ ಭೇಟಿಗಳ ವೇಳೆ ಅವರ ಅರಿವಿಗೆ ಬಂದಿದೆ. ಹಾಗಾಗಿ ವಿಶ್ವ ಪ್ರವಾಸವನ್ನು ಕೈಗೊಳ್ಳಲು ಅವರು ನಿರ್ಧರಿಸಿದ್ದಾರೆ. 

ರಮಿಲಾ ತಮ್ಮೊಂದಿಗೆ ಏಳು ಸೀರೆಗಳನ್ನು ಮಾತ್ರ ತೆಗೆದುಕೊಂಡು ಹೋಗ್ತಿದ್ದಾರೆ. ಕೆಲವು ಸ್ಥಳಗಳಲ್ಲಿ ಕೆಲವು ಕಾರ್ಯಕ್ರಮಗಳನ್ನು ನೀಡಲಿರುವ ರಮಿಲಾ, ಮಧ್ಯಪ್ರದೇಶದ ಮಹೇಶ್ವರಿ ರೇಷ್ಮೆ ಮತ್ತು ಮಹಾರಾಷ್ಟ್ರದ ಪೈಥೈನಿ ರೇಷ್ಮೆಯಂತಹ ರೇಷ್ಮೆ ಸೀರೆಗಳನ್ನು ಪ್ರದರ್ಶಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕಂಡ ಭಾರತ್ ಕಿ ಭೇಟಿ ಕನಸು ಇದು ಎಂದು ರಮಿಲಾ ಹೇಳಿದ್ದಾರೆ.

ರೈಡಿಂಗ್ ಗೇರ್ ಇಲ್ಲದೆ ಸವಾರಿ ಮಾಡೋದು ಸುರಕ್ಷಿತವೇ? : ಸಂಸ್ಕೃತಿಯನ್ನು ಉತ್ತೇಜಿಸುವುದು ಮತ್ತು ಹೊಸ ದೇಶಗಳಿಗೆ ಪ್ರಯಾಣಿಸುವುದು ಸಾಕಷ್ಟು ರೋಮಾಂಚನಕಾರಿಯಾಗಿದೆ. ಆದರೆ   ಬೂಟುಗಳು ಮತ್ತು ಹೆಲ್ಮೆಟ್ ಅನ್ನು ಹೊರತುಪಡಿಸಿ ರೈಡಿಂಗ್ ಗೇರ್ ಇಲ್ಲದೆ ಸೀರೆಯನ್ನು ಧರಿಸಿ ಮೋಟಾರ್ಸೈಕಲ್ ಸವಾರಿ ಮಾಡುವುದು ಅಪಾಯಕಾರಿ.  ಈ ಬಗ್ಗೆ ಮಾತನಾಡಿದ ರಮಿಲಾ, ರೈಡಿಂಗ್ ಗೇರ್, ಅನೇಕ ಜನರ ಜೀವ ರಕ್ಷಕ ಎಂದು ಸಾಬೀತಾಗಿದೆ. ಭಾರತೀಯ ಸಂಸ್ಕೃತಿಯನ್ನು ಉತ್ತೇಜಿಸುವುದು ಸಕಾರಾತ್ಮಕ ಕೆಲಸವಾಗಿದ್ರೆ ಸುರಕ್ಷತೆಗೆ ಆದ್ಯತೆ ನೀಡುವುದು ಅಷ್ಟೇ ಮುಖ್ಯ ಎಂದಿದ್ದಾರೆ. 
 

click me!