ಕನ್ನಡಕ ಇಲ್ದೆ ಸೂಜಿಗೆ ಅದೆಷ್ಟು ಬೇಗ ದಾರ ಹಾಕ್ತಾರೆ ಅಜ್ಜಿ, ಅವರ ಕಸೂತಿಗೆ ಮಾರುಹೋದ ಜನ

Published : Nov 21, 2025, 04:25 PM IST
Embroidery Grandma

ಸಾರಾಂಶ

ಇಳಿ ವಯಸ್ಸಿನಲ್ಲಿ, ರಾಮಾ – ಕೃಷ್ಣ ಅಂತ ಇರೋರ ಮಧ್ಯೆ ಇವರು ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ಇವರ ಕಲೆ ಯುವಕರನ್ನು ನಾಚಿಸುವಂತಿದೆ. ಕಸೂತಿಗೆ ಜೀವ ತುಂಬಿದ ಅಜ್ಜಿ ಈಗ ಫೇಮಸ್ ಆಗಿದ್ದಾರೆ.

ಕಲೆಗೆ ವಯಸ್ಸಿಲ್ಲ. ಯಾವ ವಯಸ್ಸಿನಲ್ಲಿ ಬೇಕಾದ್ರೂ ನೀವು ನಿಮ್ಮ ಕಲೆ ಪ್ರದರ್ಶನ ಮಾಡ್ಬಹುದು. ಅದನ್ನೇ ಬಂಡವಾಳ ಮಾಡ್ಕೊಂಡು ಬ್ಯುಸಿನೆಸ್ ಶುರು ಮಾಡ್ಬಹುದು. ವರ್ಷ 60 ದಾಟ್ತು, ನಿವೃತ್ತಿ ಟೈಂ ಇದು, ಬಿಪಿ, ಶುಗರ್ ಮಾತ್ರೆ ತೆಗೆದುಕೊಳ್ತಾ, ಟಿವಿ ಸೀರಿಯಲ್ ನೋಡ್ತಾ ಮನೆಯಲ್ಲಿ ರೆಸ್ಟ್ ಮಾಡ್ತೇನೆ ಅನ್ನೋರಿಗೆ ಈ ಅಜ್ಜಿ ತದ್ವಿರುದ್ಧ. ವಯಸ್ಸು ಬರೀ ಲೆಕ್ಕಕ್ಕೆ. ಆಸಕ್ತಿ ಇದ್ರೆ ವಯಸ್ಸು, ವಯಸ್ಸಿಗೆ ಬರೋ ಖಾಯಿಲೆ ಎಲ್ಲವೂ ಓಡಿ ಹೋಗುತ್ತೆ ಎಂಬುದನ್ನು ಅವರು ಸಾಭೀತು ಮಾಡ್ತಿದ್ದಾರೆ. ಇಳಿ ವಯಸ್ಸಿನಲ್ಲೂ ಫಟಾ ಫಟ್ ಅಂತ ಸೂಜಿಗೆ ದಾರ ಹಾಕಿ, ಸೀರೆ ಮೇಲೆ ಡಿಸೈನ್ ಮಾಡುವ ಅಜ್ಜಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ.

ಸೀರೆಗೆ ಸುಂದರ ಕಸೂತಿ (Embroidery) ಮಾಡುವ ಅಜ್ಜಿ :

ಅಜ್ಜಿ ಹೆಸರು ಸುಶೀಲಾ ಶಾ. ಅಹಮದಾಬಾದ್ ನ ಸುಶೀಲಾ ಶಾ, ಅಜ್ಜಿ ಅಂತ್ಲೇ ಫೇಮಸ್. ಸೂಜಿ ಮತ್ತು ದಾರದಿಂದ ಹೊಸ ಅಧ್ಯಾಯ ಬರೆದಿದ್ದಾರೆ ಅಜ್ಜಿ. ಮೊದಲಿನಿಂದಲೂ ಹೊಸತನ್ನು ಮಾಡುವ ಉತ್ಸಾಹ ಅವರಲ್ಲಿತ್ತು. ಎಲ್ಲ ಜವಾಬ್ದಾರಿ ಕಳೆದು ರೆಸ್ಟ್ ಮಾಡುವ ಟೈಂನಲ್ಲಿ ಅಜ್ಜಿ ಸೂಜಿ – ದಾರವನ್ನು ಹಿಡಿದ್ರು. ಮತ್ತೆ ತನ್ನ ಕಾಲ ಮೇಲೆ ತಾನು ನಿಲ್ಬೇಕು, ಏನಾದ್ರೂ ಸಾಧನೆ ಮಾಡ್ಬೇಕು ಎನ್ನುವ ನಿರ್ಧಾರಕ್ಕೆ ಬಂದ್ರು. ಸೂಚಿ – ದಾರವನ್ನು ತೆಗೆದುಕೊಂಡು ದುಪಟ್ಟಾ, ಟಾಪ್ಸ್, ಸೀರೆಗೆ ಡಿಸೈನ್ ಮಾಡಲು ಶುರು ಮಾಡಿದ್ರು.

ಭಾರತದ ಬೀದಿ ಹುಡುಗ ಕೆನಡಾದಲ್ಲಿ ಬೆಳೆದು ವಿಶ್ವವಿಖ್ಯಾತ ಶೆಫ್ ಆಗಿರೋ ಬಗ್ಗೆ ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು?

ಅಜ್ಜಿ ನಿನಗೆ ವಯಸ್ಸಾಯ್ತು, ರೆಸ್ಟ್ ಮಾಡು ಅಂದ್ರೆ ಮುಗುಳು ನಗುವ ಅಜ್ಜಿ, ಇನ್ಮುಂದೆ ನನ್ನ ದಾರಗಳು ಮಾತನಾಡ್ತವೆ ಅಂತ ಕಸೂತಿ ಮಾಡ್ತಾರೆ. ಸೀರೆ, ಬಟ್ಟೆ ಮೇಲೆ ಅತಿ ವೇಗದಲ್ಲಿ ಅವರು ಮಾಡುವ ಕಸೂತಿ ನೋಡೋದೇ ಚಂದ. ವಯಸ್ಸಿನ ವಿಶ್ರಾಂತಿ ಬದಲು ಉತ್ಸಾಹವನ್ನು ಆರಿಸಿಕೊಂಡ ಅಜ್ಜಿ, ಎಲ್ಲರೂ ಬೆರಗಾಗುವಂತ ತಮ್ಮ ಕಲೆ ಪ್ರದರ್ಶಿಸ್ತಿದ್ದಾರೆ. ಅಜ್ಜಿ ಕಸೂತಿಗೆ ಮಕ್ಕಳು, ಮೊಮ್ಮಕ್ಕಳ ಒಪ್ಪಿಗೆ ಇಲ್ಲ. ಅಜ್ಜಿ ಮಾತ್ರ ಹಠ ಬಿಟ್ಟಿಲ್ಲ. ಅಸಮ್ಮತಿ ಮಧ್ಯೆಯೂ ಅಜ್ಜಿ ಸಾಧಿಸಿ ತೋರಿಸಿದ್ದಾರೆ. ಸೂಜಿ – ದಾರದ ಮೂಲಕ ತಮ್ಮ ಕಲೆಗೆ ಜೀವ ತುಂಬಿದ್ದಾರೆ.

50ರ ವಯಸ್ಸಿನ ಮೇಲೆ ಮಹಿಳೆಯರು ಯಾವ ರೀತಿ ಡಯಟ್ ಮಾಡಬೇಕು? ಇಲ್ಲಿದೆ ನೋಡಿ ಸೂಕ್ತ ಸಲಹೆ!

ಅತ್ಯಂತ ಶ್ರದ್ಧೆಯಿಂದ ಕೆಲ್ಸ ಮಾಡುವ ಅವರ ಆತ್ಮವಿಶ್ವಾಸ, ಪ್ರೀತಿ ಮತ್ತು ಕಾಂತಿ ಪ್ರತಿಯೊಂದು ವಿನ್ಯಾಸದಲ್ಲೂ ಕಾಣಸಿಗುತ್ತದೆ. ನಿಜವಾದ ಉತ್ಸಾಹವಿದ್ದರೆ ವಯಸ್ಸು ಕೇವಲ ಒಂದು ಸಂಖ್ಯೆ ಎಂದು ಸುಶೀಲಾ ಅಜ್ಜಿ ಮತ್ತೊಮ್ಮೆ ಸಾಭೀತುಪಡಿಸಿದ್ದಾರೆ. ಅಜ್ಜಿಯ ಕಲೆಯನ್ನು ವಿಶ್ವದಾದ್ಯಂತ ಪ್ರದರ್ಶಿಸಲು ಅವರ ಮೊಮ್ಮಗಳು ಇನ್ಸ್ಟಾಗ್ರಾಮ್ ಖಾತೆ ತೆರೆದಿದ್ದಾರೆ. @dadi_kithread ಹೆಸರಿನ ಇನ್ಸ್ಟಾ ಖಾತೆಯಲ್ಲಿ ಅಜ್ಜಿಯ ಕಸೂತಿ ವಿಡಿಯೋಗಳನ್ನು ನೀವು ಕಾಣ್ಬಹುದು. 22 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಅಜ್ಜಿಯ ಕಸೂತಿ ಈಗ ಮನೆ ಮಾತಾಗಿದೆ. ಅನೇಕರು ಅಜ್ಜಿಯ ಡಿಸೈನ್ ಮೆಚ್ಚಿ ಆರ್ಡರ್ ನೀಡ್ತಿದ್ದಾರೆ. ಆನ್ಲೈನ್ ನಲ್ಲಿಯೇ ಅಜ್ಜಿ ಆರ್ಡರ್ ತೆಗೆದುಕೊಳ್ತಿದ್ದಾರೆ. ಅಜ್ಜಿಯ ಉತ್ಸಾಹಕ್ಕೊಂದು ಸಲಾಂ. ಕೆಲ್ಸ ಇಲ್ಲ ಅಂತ ಮನೆಯಲ್ಲಿ ಕುಳಿತುಕೊಳ್ಳುವ ಜನರು ಅಜ್ಜಿ ನೋಡಿ ಕಲಿಯಬೇಕು, ಸಾಧಿಸೋ ಛಲ ಇದ್ರೆ ದಾರಿ ನೂರಾರಿದೆ ಅಂತ ಜನರು ಕಮೆಂಟ್ ಮಾಡಿದ್ದಾರೆ. ಇಲ್ಲಿ ಬಹುತೇಕ ಎಲ್ಲರನ್ನು ಅಚ್ಚರಿಗೊಳಿಸಿದ್ದು ಗ್ಲಾಸ್ ಇಲ್ದೆ ಅಜ್ಜಿ ಮಾಡ್ತಿರುವ ಕಸೂತಿ. ಸೂಜಿಗೆ ದಾರ ಹಾಕೋದ್ರಿಂದ ಹಿಡಿದು, ಕಸೂತಿ ಮಾಡೋವರೆಗೂ ಅಜ್ಜಿ ಗ್ಲಾಸ್ ಬಳಸಿಲ್ಲ. ನಾವು ಈ ವಿಡಿಯೋ ನೋಡೋಕೇ ಗ್ಲಾಸ್ ಹಾಕಿದ್ದೇವೆ. ಈ ವಯಸ್ಸಿನಲ್ಲಿ ಗ್ಲಾಸ್ ಇಲ್ದೆ ಇಂಥ ಸೂಕ್ಷ್ಮ ಕೆಲಸ ಮಾಡೋದು ಗ್ರೇಟ್ ಎಂದಿದ್ದಾರೆ ಬಳಕೆದಾರರು.

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುರುಷರ ಈ ವರ್ತನೆ ಬಗ್ಗೆ ಹೆಣ್ಣಿಗೆ ಮಾತ್ರವಲ್ಲ ಮನೆಯ ಸಾಕು ಬೆಕ್ಕಿಗೂ ಗೊತ್ತು....!
World Idli Day: ಇಡ್ಲಿ ದಿನದಂದೇ ದೋಸೆ ತಿಂದ ಕಥೆ ನಿಮಗೆ ಗೊತ್ತಾ? ದೀಪಿಕಾ ಪಡುಕೋಣೆ ಈ ಯಡವಟ್ಟು ಮಾಡಿದ್ಯಾಕೆ?