110 ವರ್ಷದ ಅಜ್ಜಿಗೆ ತಲೆ ತುಂಬಾ ಕೂದಲು, ಹೊಸ ಹಲ್ಲು ಕೂಡಾ ಬಂತು!

Published : Feb 12, 2023, 03:09 PM ISTUpdated : Feb 12, 2023, 03:13 PM IST
110 ವರ್ಷದ ಅಜ್ಜಿಗೆ ತಲೆ ತುಂಬಾ ಕೂದಲು, ಹೊಸ ಹಲ್ಲು ಕೂಡಾ ಬಂತು!

ಸಾರಾಂಶ

ಚಿಕ್ಕ ಮಕ್ಕಳಿಗೆ ಹೊಸ ಕೂದಲು, ಹಲ್ಲು ಬೆಳೆಯುವ ಬಗ್ಗೆ ನಾವೆಲ್ಲರೂ ಕೇಳಿದ್ದೇವೆ, ನೋಡಿದ್ದೇವೆ. ಆದ್ರೆ ಪಶ್ಚಿಮ ಬಂಗಾಳದಲ್ಲಿ 110 ವರ್ಷ ವಯಸ್ಸಿನ ಮಹಿಳೆಯೊಬ್ಬರು ಹೊಸ ಹಲ್ಲು ಮತ್ತು ಕೂದಲನ್ನು ಪಡೆದಿರೋದು ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದೆ.

ಇವತ್ತಿನ ದಿನಗಳಲ್ಲಿ ಎಲ್ಲಾ ಸವಲತ್ತುಗಳಿದ್ದರೂ ಮನುಷ್ಯದಲ್ಲಿ ಜೀವಿಸುವ ಉತ್ಸಾಹವೇ ಕಡಿಮೆಯಾಗಿದೆ. ಸಣ್ಣಪುಟ್ಟ ಕಾರಣಗಳಿಗೆ ಟೆನ್ಶನ್‌ ಮಾಡಿಕೊಳ್ಳುವುದು, ವಿಪರೀತ ಒತ್ತಡವನ್ನು ಅನುಭವಿಸುವ ಅಭ್ಯಾಸ ಹೆಚ್ಚಾಗಿದೆ. ಹೀಗಿರುವಾಗ ಇಲ್ಲೊಬ್ಬ ವೃದ್ಧೆಗೆ ಅದೆಂಥಾ ಜೀವನೋತ್ಸಾಹವಿದೆ ನೋಡಿ. ಈಕೆ 110 ನೇ ವಯಸ್ಸಿನಲ್ಲಿ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ. ಅದರಲ್ಲೂ ಅಚ್ಚರಿಯ ವಿಚಾರವೆಂದರೆ ಈ ಇಳಿ ವಯಸ್ಸಿನಲ್ಲೂ ಅವರಿಗೆ ಹೊಸ ಕೂದಲು (Hai) ಮತ್ತು ಹಲ್ಲುಗಳು (Teeth) ಬಂದಿವೆ. ಇದು ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ. ಇಂತಹದೊಂದು ಅಚ್ಚರಿಯ ಘಟನೆ ಪಶ್ಚಿಮ ಬಂಗಾಳದ ರಾಮಚಂದ್ರಾಪುರದ ಬಡ್ಜ್ ನಲ್ಲಿ ನಡೆದಿದೆ. ವೃದ್ಧೆಯ ಹೆಸರು ಸಖಿಬಾಲಾ ಮಂಡಲ್. ವೃದ್ಧೆಯ (Old woman) ಜನ್ಮದಿನವನ್ನು ಆಚರಿಸುವ ಸಂದರ್ಭ ಈ ವಿಚಾರ ಬೆಳಕಿಗೆ ಬಂದಿದೆ.

110 ವರ್ಷಕ್ಕೆ ಹೊಸ ಕೂದಲು ಮತ್ತು ಹಲ್ಲಿನ ಸೆಟ್‌
110 ವರ್ಷದ ಮಹಿಳೆಯೊಬ್ಬರು ಹೊಸ ಜೋಡಿ ಹಲ್ಲುಗಳೊಂದಿಗೆ ಮತ್ತು ಕೂದಲನ್ನು ಇಟ್ಟುಕೊಂಡು ಹುಟ್ಟುಹಬ್ಬವನ್ನು (Birthday) ಆಚರಿಸಿಕೊಂಡರು. ಸಖಿಬಾಲಾ ಮೊಂಡಲ್ ಅವರ 110 ನೇ ಹುಟ್ಟುಹಬ್ಬವನ್ನು ಆಚರಿಸಲು ಸಂತೋಷವಾಗಿದೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಸಖಿಬಾಲಾ ಮೊಂಡಲ್ ಅವರ 80 ವರ್ಷದ ಮಗಳು, ಮೊಮ್ಮಗ, ಮೊಮ್ಮಗಳು, ಅವರ ಪುತ್ರರು, ಪುತ್ರಿಯರು ಮತ್ತು ಇತರ ಕುಟುಂಬ ಸದಸ್ಯರು ಅಲ್ಲಿದ್ದರು. ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಲಾಯಿತು. ನಂತರ ಸಖಿಬಾಲಾ ಮೊಂಡಲ್ ಅವರಿಗೆ ಸಸ್ಯಾಹಾರಿ ಆಹಾರವನ್ನು ನೀಡಲಾಯಿತು. ಎಲ್ಲರೂ ವೃದ್ಧೆ ಇನ್ನೂ ಹಲವು ವರ್ಷಗಳ ಕಾಲ ಆರೋಗ್ಯ (Healthy)ವಾಗಿರಲಿ ಎಂದು ಹಾರೈಸಿದರು.

ಪೂರ್ವಜರು ತಿಳಿಸಿದ ನಿಯಮ ಫಾಲೋ ಮಾಡಿದ್ರೆ ದೀರ್ಘಾಯಸ್ಸು ಗ್ಯಾರಂಟಿ !

ದಂತವೈದ್ಯ ಶ್ಯಾಮಲ್ ಸೇನ್ ಮಾತನಾಡಿ, ವೃದ್ಧೆ ಹೊಸ ಕೂದಲು ಮತ್ತು ಹಲ್ಲುಗಳನ್ನು ಪಡೆಯುತ್ತಿದ್ದಾರೆ. ವಯಸ್ಸಾದವರಲ್ಲಿ ಹೊಸ ಹಲ್ಲುಗಳು ಮತ್ತು ಕೂದಲು ಬೆಳೆಯುವುದು ಅಪರೂಪ, ಆದರೆ ಅಸಾಧ್ಯವಲ್ಲ. ಒಂದು ವರ್ಷದ ಹಿಂದೆ ಘಟಾಲ್‌ನಲ್ಲಿ 100 ವರ್ಷದ ಮಹಿಳೆಯೊಬ್ಬರು ಹೊಸ ಹಲ್ಲುಗಳನ್ನು ಪಡೆದರು. ಸಸ್ತನಿಗಳು ಯಾವುದೇ ಸಮಯದಲ್ಲಿ ಹೊಸ ಕೂದಲು ಮತ್ತು ಹಲ್ಲುಗಳನ್ನು ಬೆಳೆಯಬಹುದು. ಆದರೆ ಸಾಮಾನ್ಯವಾಗಿ ವೃದ್ಧಾಪ್ಯದಲ್ಲಿ ದೇಹವು ಹೊಸ ಹಲ್ಲುಗಳ ಬೆಳವಣಿಗೆಗೆ ಅಗತ್ಯವಾದ ಗರಿಷ್ಠ ಪ್ರಮಾಣದ ಕ್ಯಾಲ್ಸಿಯಂ ಮತ್ತು ಇತರ ಖನಿಜಗಳನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಇಂತಹ ಘಟನೆಗಳು ತೀರಾ ವಿರಳ ಎಂದು ಹೇಳಿದ್ದಾರೆ.

ನೂರು ವರ್ಷ ಕಾಲ ಬದುಕೋ ಆಸೆ ಇದ್ದರೆ ಈ ಆಹಾರ ಸೇವಿಸಿ
ನಿಮ್ಮ ಜೀವನವನ್ನು ನೀವು ಹೇಗೆ ಬದುಕಲು ಬಯಸುತ್ತೀರಿ ಎಂಬುದು ಸಂಪೂರ್ಣವಾಗಿ ನಿಮ್ಮ ಮೇಲೆ ಅವಲಂಬಿತವಾಗಿರುತ್ತೆ. ಯಾಕಂದ್ರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಿಯಾದ ಆಹಾರ ಆಯ್ಕೆ ಮಾಡೋದು ಬಹಳ ಮುಖ್ಯ. ಆಹಾರ ಸರಿಯಾಗಿದ್ದರೆ, ಈಗಿನ ಸಮಯದಲ್ಲೂ ನೀವು ದೀರ್ಘಾಯುಷ್ಯವನ್ನು ಹೊಂದಬಹುದು. ಇಂದಿನ ಕಾಲದಲ್ಲಿ ಸರಾಸರಿ ಜೀವಿತಾವಧಿಯನ್ನು 60 ರಿಂದ 70 ವರ್ಷಗಳಿಗೆ ಇಳಿಸಲಾಗಿದೆ. ಹಾಗಿದ್ರೆ ದೀರ್ಘಾಯುಷ್ಯ ನಿಮ್ಮದಾಗಲು ಏನು ಆಹಾರ ಸೇವಿಸಬೇಕು ನೋಡೋಣ.

ದೀರ್ಘಾಯುಷ್ಯ ಪಡೆಯಬೇಕು ಎಂದಾದರೆ ಇಡೀ ದೇಹದ ಮೇಲೆ ಸಮಾನವಾಗಿ ಕಾರ್ಯನಿರ್ವಹಿಸುವ ಮತ್ತು ದೇಹದ ಪ್ರತಿಯೊಂದು ಭಾಗಕ್ಕೂ ಸಾಕಷ್ಟು ಪೋಷಣೆಯನ್ನು ನೀಡುವ ಆಹಾರ ನಮಗೆ ಬೇಕು. ಇಡೀ ದೇಹವನ್ನು ಪೋಷಿಸುವ ಮತ್ತು ಇಡೀ ದೇಹಕ್ಕೆ ಪ್ರೋಟೀನ್ (Protein)ಅಗತ್ಯವಿರುವ ಆಹಾರ ಮತ್ತು ದೇಹವನ್ನು ಪೋಷಿಸದ ಆಹಾರಗಳ ನಡುವಿನ ವ್ಯತ್ಯಾಸವನ್ನು ನೀವು ಅರ್ಥಮಾಡಿಕೊಳ್ಳಬಹುದು. ಇದರಿಂದ ಸ್ನಾಯುಗಳು ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತವೆ.

110 year old woman ಕ್ಯಾಲ್ಸಿಯಂ(Calcium) ಇಡೀ ದೇಹಕ್ಕೆ ಅಗತ್ಯವಿದೆ, ಆದರೆ ಅದರ ಹೆಚ್ಚಿನ ಪರಿಣಾಮವು ಮೂಳೆಗಳ ಮೇಲೆ ಆಗುತ್ತೆ. ಆದರೆ ನೀವು ಹಸಿರು ತರಕಾರಿ ಅಥವಾ ಸಂಪೂರ್ಣ ಧಾನ್ಯಗಳನ್ನು ಸೇವಿಸಿದಾಗ, ಅವುಗಳಲ್ಲಿರುವ ಪೋಷಕಾಂಶಗಳು ಇಡೀ ದೇಹಕ್ಕೆ ಒಟ್ಟಿಗೆ ಪ್ರಯೋಜನಕಾರಿಯಾಗುತ್ತವೆ.ಯಾವೆಲ್ಲಾ ಆಹಾರ ಸೇವಿಸೋದ್ರಿಂದ ಆಯಸ್ಸು ಹೆಚ್ಚುತ್ತೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!