ಒಂದು ಮನೆಯೊಳಗೆ ಹೊಕ್ಕರೆ ಸಾಕು, ಆ ಮನೆಯವರ ಮನಸ್ಸು ಹೇಗಿದೆ ಎಂಬುದನ್ನು ಅರ್ಥ ಮಾಡ್ಕೊಳ್ಳಬಹುದು ಎನ್ನುತ್ತಾರೆ ಹಿರಿಯರು. ನಮ್ಮ ಮನೆ ನಮ್ಮ ಮನಸ್ಸನ್ನು ಹೇಳುತ್ತೆ ಎಂದಾಯ್ತು. ಕೆಲವೊಮ್ಮೆ ಮನೆಯನ್ನು ಚೆಂದ ಇಟ್ಕೊಳ್ಬೇಕು ಅನ್ನಿಸಿದ್ರೂ ಸಾಧ್ಯವಾಗೊಲ್ಲ. ದುಬಾರಿ ವಸ್ತುವನ್ನಿಟ್ರೂ ಮನೆ ಆಕರ್ಷಿಸೋದಿಲ್ಲ. ಅದಕ್ಕೆ ಕಾರಣ ಇವು.
ಮನೆ ಚಿಕ್ಕದಾಗಿದ್ರೂ ಚೊಕ್ಕದಾಗಿರಬೇಕು. ಕೆಲವರ ಮನೆ ಸಣ್ಣದಾಗಿದ್ರೂ ದೊಡ್ಡ ಜಾಗವಿದ್ದಂತೆ ಕಾಣುತ್ತದೆ. ಎಲ್ಲ ವಸ್ತುಗಳು ಇರೋ ಜಾಗದಲ್ಲಿ ಇದೆ ಎನ್ನಿಸುತ್ತದೆ. ಮನೆ ತುಂಬಾ ಆಕರ್ಷಕವಾಗಿ ಕಾಣುತ್ತದೆ. ಇನ್ನು ಕೆಲವರ ಮನೆ ಎಷ್ಟೇ ದೊಡ್ದದಿರಲಿ ಜಾಗವಿಲ್ಲ ಎನ್ನಿಸುವಷ್ಟು ಚಿಕ್ಕದೆನ್ನಿಸುತ್ತದೆ. ಮನೆಯಲ್ಲಿರುವ ವಸ್ತುಗಳೆಲ್ಲ ಇರಬೇಕಾದ ಜಾಗದಲ್ಲಿ ಇಲ್ಲ ಎನ್ನಿಸುವ ಜೊತೆಗೆ ಮನೆ ಗಮನ ಸೆಳೆಯಲು ವಿಫಲವಾಗುತ್ತದೆ.
ನಮ್ಮ ಮನೆ (House) ಬೇರೆಯವರಿಗೆ ಚೆಂದ ಕಾಣಲಿ ಬಿಡಲಿ ನಮಗೆ ನೆಮ್ಮದಿ ನೀಡಬೇಕು. ಸ್ವಚ್ಛವಾದ ಹಾಗೂ ಸುಂದರ (Beautiful) ವಾದ ಮನೆ ಮನಸ್ಸಿಗೆ ಖುಷಿ ನೀಡುತ್ತದೆ. ಒತ್ತಡ (Stress) ದಿಂದ ಮನೆಯೊಳಗೆ ಬಂದಾಗ ಮನಸ್ಸು ಶಾಂತಗೊಳ್ಳುತ್ತದೆ. ನಿಮ್ಮ ಮನೆ ಚಿಕ್ಕದಿರಲಿ ಇಲ್ಲ ದೊಡ್ಡದಿರಲಿ ನೀವು ಮನೆಯನ್ನು ಹೇಗೆ ಡಿಸೈನ್ ಮಾಡ್ತಿರಿ ಎಂಬುದರ ಮೇಲೆ ಅದ್ರ ಸೌಂದರ್ಯ ನಿಂತಿದೆ.
ನೀವು ಮನೆಯನ್ನು ಆಕರ್ಷಕಗೊಳಿಸಬೇಕೆಂದ್ರೆ ದುಬಾರಿ ವಸ್ತು (Material) ಗಳನ್ನು ತಂದು ಮನೆಯಲ್ಲಿಡಬೇಕಾಗಿಲ್ಲ. ಅಥವಾ ಹೆಚ್ಚು ವಿಭಿನ್ನವಾಗಿ ಆಲೋಚನೆ ಮಾಡ್ಬೇಕಾಗಿಲ್ಲ. ಮನೆ ನಿರ್ಮಾಣದ ವೇಳೆ ಸಣ್ಣಪುಟ್ಟ ಸಂಗತಿಯನ್ನು ಗಮನದಲ್ಲಿಟ್ಟುಕೊಂಡ್ರೆ ಸಾಕು. ನಾವಿಂದು ಮನೆ ಅಲಂಕಾರದಲ್ಲಿ ಏನೆಲ್ಲ ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದನ್ನು ನಿಮಗೆ ಹೇಳ್ತೆವೆ.
ಮನೆಯ ಫಿನಿಶಿಂಗ್ ಮುಖ್ಯ : ಮನೆಯ ಫಿನಿಶಿಂಗ್ ತುಂಬಾ ಮುಖ್ಯವಾಗುತ್ತದೆ. ಫಿನಿಶಿಂಗ್ ವೇಳೆ ನೀವು ಮಾಡುವ ಸಣ್ಣ ತಪ್ಪು ನಿಮ್ಮ ಮನೆಯ ಸೌಂದರ್ಯ ಹಾಳು ಮಾಡುತ್ತದೆ. ನೀವು ಮನೆ ನಿರ್ಮಾಣ ಮಾಡುವ ವೇಳೆ ಗೋಡೆ, ಕಿಟಕಿ, ಬಾಗಿಲು, ನೆಲ ಎಲ್ಲದರ ಗಾತ್ರಕ್ಕೆ ಆದ್ಯತೆ ನೀಡ್ಬೇಕು. ಎಲ್ಲ ಗಾತ್ರಗಳನ್ನು ಸರಿಯಾಗಿ ನೋಡಿಕೊಳ್ಳಿ. ಒಂದು ಕಿಟಕಿ ದೊಡ್ಡದಿದ್ದು, ಇನ್ನೊಂದು ಚಿಕ್ಕದಿದ್ರೆ, ಒಂದು ಬಾಗಿಲಿನ ಆಕಾರ ಒಂದು ರೀತಿ ಇನ್ನೊಂದು ಬಾಗಿಲಿನ ಆಕಾರ ಬೇರೆಯಾಗಿದ್ದರೆ ಮನೆ ಚೆಂದವೆನ್ನಿಸುವುದಿಲ್ಲ.
WORKING WOMEN: ಮನೆಯೋ, ಉದ್ಯೋಗವೋ? ಎರಡನ್ನೂ ತೂಗಿಸುವಲ್ಲಿ ಉದ್ಯೋಗಸ್ಥ ಮಹಿಳೆ ಹೈರಾಣ
ಮನೆಗೆ ಹಚ್ಚುವ ಬಣ್ಣ ಕೂಡ ಮುಖ್ಯ : ನೀವು ಬಾಡಿಗೆ ಮನೆಯಲ್ಲಿದ್ದೀರಿ ಎಂದೋ ಅಥವಾ ಈಗಾಗಲೇ ಮನೆ ನಿರ್ಮಾಣ ಮಾಡಿಯಾಗಿದೆ ಎಂದೋ ಕಾರಣ ಹೇಳ್ತಿದ್ದರೆ ಆಗ್ಲೂ ನಿಮಗೆ ಮನೆಯ ಸೌಂದರ್ಯ ಹೆಚ್ಚಿಸಲು ಅವಕಾಶವಿದೆ. ನೀವು ಮನೆಯ ಗೋಡೆಗೆ ಬಳಿಯುವ ಬಣ್ಣದಲ್ಲಿ ಬದಲಾವಣೆ ಮಾಡಬಹುದು. ದೀರ್ಘ ಕಾಲದಿಂದ ಮನೆಗೆ ಬಣ್ಣ ಬಳಿದಿರೋದಿಲ್ಲ. ಇದು ಕೂಡ ಮನೆಯ ಅಲಂಕಾರಕ್ಕೆ ಅಡ್ಡಿಯಾಗುತ್ತದೆ. ನೀವು ಮನೆಗೆ ಸೂಕ್ತ ಬಣ್ಣ ಬಳಿಯುವ ಮೂಲಕ ನಿಮಿಷದಲ್ಲಿ ಮೇಕ್ ಓವರ್ ಮಾಡ್ಬಹುದು. ಎಲ್ಲಿ, ಯಾವ ಬಣ್ಣ ಬಳಿಯಬೇಕು ಎಂಬುದು ನಿಮಗೆ ತಿಳಿದಿರಬೇಕು. ಹಾಲ್, ಕಿಚನ್, ಬೆಡ್ ರೂಮ್ ಗೆ ಸೂಕ್ತವಾದ ಬಣ್ಣ ಬಳಿಯಬೇಕು. ತಪ್ಪು ಬಣ್ಣ ಹಾಗೂ ತಪ್ಪು ಕಾಂಬಿನೇಷನ್ ಕೂಡ ಮನೆಯ ಸೌಂದರ್ಯವನ್ನು ಕೆಡಿಸುತ್ತದೆ.
ಗರ್ಭಿಣಿಯರು ಈ ಅಭ್ಯಾಸ ಬಿಟ್ಬಿಡಿ, ಇಲ್ಲಾಂದ್ರೆ ಮಗುವಿಗೆ ಬೆಳವಣಿಗೆ ಕುಂಠಿತವಾಗುತ್ತೆ
ಮನೆ ಅಂದ ಹೆಚ್ಚಿಸುತ್ತೆ ಲೈಟಿಂಗ್ : ಈಗ ಪ್ರತಿಯೊಬ್ಬರು, ಮನೆಯ ಇಂಟಿರಿಯರ್ ಗೆ ಆದ್ಯತೆ ನೀಡ್ತಿದ್ದಾರೆ. ಮನೆಯ ಒಳಗೆ ಸಾಕಷ್ಟು ಲೈಟ್ ವ್ಯವಸ್ಥೆ ಮಾಡ್ತಾರೆ. ಈ ಲೈಟ್ ಆಯ್ಕೆ ಕೂಡ ಮಹತ್ವ ಪಡೆಯುತ್ತದೆ. ತಪ್ಪು ಬಣ್ಣದ ಲೈಟ್ ಮನೆಯ ಅಂದ ಹಾಳು ಮಾಡುವ ಜೊತೆಗೆ ಮೂಡ್ ಕೂಡ ಹಾಳು ಮಾಡುತ್ತದೆ. ಮನೆಯಲ್ಲಿ ಸರಿಯಾದ ಗಾಳಿ ಮತ್ತು ಬೆಳಕು ಹೇಗೆ ಮುಖ್ಯವೋ ಅದೇ ರೀತಿ ಲೈಟಿನ ಬಣ್ಣ ಕೂಡ ಮುಖ್ಯ. ಕೆಲವೊಂದು ಬಣ್ಣದ ಲೈಟ್ ಮನಸ್ಸು ಮಬ್ಬು ಹಿಡಿಯುವಂತೆ ಮಾಡುತ್ತದೆ. ಉತ್ಸಾಹವನ್ನು ತಗ್ಗಿಸುತ್ತದೆ. ಹಾಗಾಗಿ ನೀವು ಮನೆಗೆ ಲೈಟಿಂಗ್ ವ್ಯವಸ್ಥೆ ಮಾಡ್ತಿದ್ದರೆ ಎಲ್ಲಿ ಯಾವ ಲೈಟ್ ಬಳಸ್ಬೇಕು ಎಂಬುದನ್ನು ಗಮನಿಸಿ. ಬೆಳಕು ಸರಿಯಾಗಿದ್ದರೆ ನಿಮ್ಮ ಮನೆ ಸೌಂದರ್ಯ ದುಪ್ಪಟ್ಟಾಗುತ್ತದೆ.