Reusable Ideas : ಡೇಟ್ ಬಾರ್ ಆದ ಕ್ರೆಡಿಟ್ ಕಾರ್ಡ್ ಹೀಗೆ ಬಳಸಿ

By Suvarna News  |  First Published Feb 11, 2023, 5:22 PM IST

ಬಳಕೆಗೆ ಬರ್ತಿಲ್ಲ ಎಂದಾಗ ಜನರು ಆ ವಸ್ತುಗಳನ್ನು ಎಸೆಯುತ್ತಾರೆ. ಕೆಲವೊಂದು ವಸ್ತುಗಳನ್ನು ನಾವು ಕಸಕ್ಕೆ ಹಾಕ್ದೆ ಮರು ಬಳಕೆ ಮಾಡಬಹುದು. ಅದ್ರಲ್ಲಿ ಕ್ರೆಡಿಟ್ ಕಾರ್ಡ್ ಕೂಡ ಸೇರಿದೆ. ಅದನ್ನು ನಾವು ಮನೆಯಲ್ಲಿ ಬೇರೆ ಬೇರೆ ಕೆಲಸಕ್ಕೆ ಬಳಕೆ ಮಾಡ್ಬಹುದು.
 


ಕ್ರೆಡಿಟ್ ಕಾರ್ಡ್ ಈಗಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಅಗತ್ಯ. ಬಹುತೇಕ ಎಲ್ಲರೂ ಕ್ರೆಡಿಟ್ ಕಾರ್ಡ್ ಬಳಸ್ತಾರೆ. ಕೆಲವರು ಎರಡು – ಮೂರು ಕ್ರೆಡಿಟ್ ಕಾರ್ಡ್ ಹೊಂದಿರುತ್ತಾರೆ. ಕ್ರೆಡಿಟ್ ಕಾರ್ಟ್ ಗಳನ್ನು ಬಳಸಿ ವಿವಿಧ ವಸ್ತುಗಳನ್ನು ನಾವು ಖರೀದಿ ಮಾಡ್ಬಹುದು. ಕ್ರೆಡಿಟ್ ಕಾರ್ಡ್ ಒಂದು ಡೇಟ್ ಹೊಂದಿರುತ್ತದೆ.

ಕ್ರೆಡಿಟ್ ಕಾರ್ಡ್ (Credit Card) ದಿನಾಂಕ ಮುಗಿದಿದೆ ಅಂದ್ರೆ ನಮ್ಮ ಖಾತೆ ಮುಚ್ಚಿದೆ ಎಂದಲ್ಲ. ಬ್ಯಾಂಕ್ ನಮಗೆ ಹೊಸ ಕ್ರೆಡಿಟ್ ಕಾರ್ಡ್ ನೀಡುತ್ತದೆ. ನಾವು ಬ್ಯಾಂಕ್ (Bank) ಗೆ ಅರ್ಜಿ ಸಲ್ಲಿಸುವ ಮೂಲಕ ಇದನ್ನು ಪಡೆಯಬಹುದು. ಕೆಲ ಬ್ಯಾಂಕ್ ಗಳು ಸ್ವಯಂ ಚಾಲಿತವಾಗಿ ಕ್ರೆಡಿಟ್ ಕಾರ್ಡನ್ನು ನಮಗೆ ನೀಡ್ತವೆ. ಹೊಸ ಕಾರ್ಡ್ ಬರ್ತಿದ್ದಂತೆ ನಾವು ಹಳೆ ಕಾರ್ಡ್ ಎಸೆಯುತ್ತೇವೆ. ಆದ್ರೆ ಈ ಕಾರ್ಡ್ ಎಸೆಯುವ ಬದಲು ನಾವು ಅದನ್ನು ಬೇರೆ ಬೇರೆ ಕೆಲಸಕ್ಕೆ ಬಳಕೆ ಮಾಡ್ಬಹುದು. ನಾವಿಂದು ಡೇಟ್ ಬಾರ್ ಆದ ಕ್ರೆಡಿಟ್ ಕಾರ್ಡನ್ನು ಹೇಗೆಲ್ಲ ಬಳಕೆ ಮಾಡ್ಬಹುದು ಎಂಬುದನ್ನು ನಿಮಗೆ ಹೇಳ್ತೆವೆ.

Tap to resize

Latest Videos

ಹಳೆ (Old) ಕ್ರೆಡಿಟ್ ಕಾರ್ಡ್ ಹೀಗೆ ಬಳಸಿ : 

ಬುಕ್ಮಾರ್ಕ್ ಆಗಿ ಬಳಸಿ : ಹಳೆಯ ಕ್ರೆಡಿಟ್ ಕಾರ್ಡ್ ಅನ್ನು ನೀವು ಬುಕ್ ಮಾರ್ಕ್ ರೂಪದಲ್ಲಿ ಬಳಕೆ ಮಾಡಬಹುದು. ಪುಸ್ತಕಗಳನ್ನು ಓದುವ ಅಭ್ಯಾಸ ನಿಮಗಿದ್ದರೆ, ಅರ್ಥ ಓದಿದ ಪುಸ್ತಕದ ಹಾಳೆಯನ್ನು ನಾವು ಮಡಚಿಡ್ತೇವೆ. ಇದ್ರಿಂದ ಪುಸ್ತಕ ಹಾಳಾಗುತ್ತದೆ. ನಾವು ಹಾಳೆ ಮಡಚಿಡುವ ಬದಲು ಪುಸ್ತಕದ ಮಧ್ಯೆ ಕ್ರೆಡಿಟ್ ಕಾರ್ಡ್ ಇಡಬಹುದು.  ಇದ್ರಿಂದ ಪುಸ್ತಕ ಹಾಳಾಗುವುದಿಲ್ಲ. ಹಾಗೆಯೇ ನಿಮಗೆ ಪುಟ ಹುಡುಕಲು ಸುಲಭವಾಗುತ್ತದೆ. 

WORKING WOMEN: ಮನೆಯೋ, ಉದ್ಯೋಗವೋ? ಎರಡನ್ನೂ ತೂಗಿಸುವಲ್ಲಿ ಉದ್ಯೋಗಸ್ಥ ಮಹಿಳೆ ಹೈರಾಣ

ಇಯರ್ ಫೋನ್ ಇಡಲು ಬಳಸಿ : ಮೊಬೈಲ್ ಇದೆ ಅಂದ್ಮೇಲೆ ಇಯರ್ ಫೋನ್ ಬಳಸೆ ಬಳಸ್ತೆವೆ. ಮೊಬೈಲ್ ಚಾರ್ಜಿಂಗ್ ಕೂಡ ನಮಗೆ ಬೇಕೇಬೇಕು. ಸಾಮಾನ್ಯವಾಗಿ ಇಯರ್ ಫೋನ್ ಅಥವಾ ಮೊಬೈಲ್ ಚಾರ್ಜಿಂಗ್ ಬಳಸಿದ ನಂತ್ರ ಅದನ್ನು ಹಾಗೆ ಸುತ್ತಿಡುತ್ತೇವೆ. ಮತ್ತೆ ಅದನ್ನು ಹೊರತೆಗೆದಾಗ ಅದು ಗಂಟಾಗಿರುತ್ತದೆ. ಅದನ್ನು ಸರಿಮಾಡೋದು ಒಂದು ಸಾಹಸದ ಕೆಲಸ. ನೀವು ಇಯರ್ ಫೋನ್ ಇಡಲು ಕ್ರೆಡಿಟ್ ಕಾರ್ಡ್ ಬಳಸಬಹುದು. ಕ್ರೆಡಿಟ್ ಕಾರ್ಡ್ ಗೆ ಇಯರ್ ಫೋನ್ ಅನ್ನು ನೀಟಾಗಿ ಸುತ್ತಿಡಬೇಕು. ಆಗ ಅದು ಸುತ್ತಿಕೊಳ್ಳೋದಿಲ್ಲ. ಬಳಸಲು ಸುಲಭವಾಗುತ್ತದೆ. ಬಾಳಿಕೆ ಕೂಡ ಬರುತ್ತದೆ. 

ಫೋನ್ ಸ್ಟ್ಯಾಂಡ್ ಆಗಿ ಬಳಕೆ ಮಾಡ್ಬಹುದು : ಡೇಟ್ ಮುಗಿದ ಒಂದೆರಡು ಕ್ರೆಡಿಟ್ ಕಾರ್ಡ್ ನಿಮ್ಮ ಬಳಿ ಇದ್ರೆ ನೀವು ಅದರ ಸಹಾಯದಿಂದ ಫೋನ್ ಸ್ಟ್ಯಾಂಡ್ ತಯಾರಿಸಬಹುದು. ಸಿನಿಮಾ ವೀಕ್ಷಣೆ ಮಾಡುವಾಗ ಅಥವಾ ಮೊಬೈಲ್ ವೀಕ್ಷಣೆ ಮಾಡುವಾಗ ಕೈನಲ್ಲಿ ಅದನ್ನು ಹಿಡಿಯುವ ಕಷ್ಟ ತಪ್ಪುತ್ತದೆ. ಆರಾಮವಾಗಿ ಕ್ರೆಡಿಟ್ ಕಾರ್ಡ್ ನಿಂದ ಸಿದ್ಧವಾದ ಫೋನ್ ಸ್ಟ್ಯಾಂಡ್ ನಲ್ಲಿ ಫೋನ್ ಇಟ್ಟು ವೀಕ್ಷಣೆ ಮಾಡಬಹುದು. 

ದೋಸೆ ಮಾಡೋಕೆ ಕ್ರೆಡಿಟ್ ಕಾರ್ಡ್ : ಯಸ್, ದೋಸೆ ಮಾಡಲು ಕ್ರೆಡಿಟ್ ಬೆಸ್ಟ್ ಅಂದ್ರೆ ನೀವು ನಂಬಲೇಬೇಕು. ತೆಳುವಾದ ದೋಸೆ ಮಾಡಲು ನೀವು ಬಯಸಿದ್ರೆ ಕ್ರೆಡಿಟ್ ಕಾರ್ಡ್ ಸಹಾಯ ಪಡೆಯಿರಿ. ಬಾಣಲೆ ಮೇಲೆ ದೋಸೆ ಹಿಟ್ಟನ್ನು ಹಾಕಿದ ನಂತ್ರ ಕ್ರೆಡಿಟ್ ಕಾರ್ಡ್ ಸಹಾಯದಿಂದ ಅದನ್ನು ಬಾಣಲೆಗೆ ಹರಡಬೇಕು. ಆಗ ತೆಳುವಾದ ದೋಸೆಯನ್ನು ನೀವು ಸುಲಭವಾಗಿ ಮಾಡಬಹುದು. 

Business Ideas : ಹೆಂಗಳೆಯರ ಅಚ್ಚುಮೆಚ್ಚಿನ ಸೀರೆ ಮಾರಾಟ ಮಾಡಿ ಹಣ ಗಳಿಸಿ

ಸ್ಕ್ರಾಪರ್ ಆಗಿ ಬಳಸಿ : ಕ್ರೆಡಿಟ್ ಕಾರ್ಡ್ ಉತ್ತಮ ಸ್ಕ್ರಾಪರ್ ಆಗಿಯೂ ಬಳಸಬಹುದು. ನೆಲದ ಮೇಲೆ ಏನಾದರೂ ಅಂಟಿಕೊಂಡಿದ್ದರೆ ಅಥವಾ ನೀವು ಫ್ರಿಡ್ಜ್ ನಿಂದ ಐಸ್ ತೆಗೆಯಲು ಬಯಸಿದ್ದರೆ ನೀವು ಕ್ರೆಡಿಟ್ ಕಾರ್ಡ್ ಬಳಸಬಹುದು.  
 

click me!