ಕೈಗಳನ್ನು ಕಟ್ಟಿ ಪೆರಿಯರ್‌ ನದಿಯುದ್ದಕ್ಕೂ ಈಜಿ ಜೈಸಿದ 70ರ ಅಜ್ಜಿ

By Anusha KbFirst Published Jun 27, 2022, 5:12 PM IST
Highlights

ಸಾಧನೆಗೆ ವಯಸ್ಸಿನ ಹಂಗಿಲ್ಲ, ಸಾಧಿಸುವ ಛಲವೊಂದಿದ್ದರೆ ವಯಸ್ಸು ಕೇವಲ ಸಂಖ್ಯೆ ಮಾತ್ರ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ತಮ್ಮ ವಯಸ್ಸನ್ನು ಬದಿಗಿಟ್ಟು ಹಲವು ಸಾಧನೆ ಮಾಡಿ ತೋರಿದ ಅನೇಕರು ನಮ್ಮ ಸಮಾಜದಲ್ಲಿದ್ದಾರೆ. ಅಂತಹವರ ಸಾಲಿಗೆ ಮತ್ತೊಂದು ಸೇರ್ಪಡೆ ಕೇರಳದ 70 ವರ್ಷದ ಈ ವೃದ್ಧೆ.

ಕೊಚ್ಚಿ: ಸಾಧನೆಗೆ ವಯಸ್ಸಿನ ಹಂಗಿಲ್ಲ, ಸಾಧಿಸುವ ಛಲವೊಂದಿದ್ದರೆ ವಯಸ್ಸು ಕೇವಲ ಸಂಖ್ಯೆ ಮಾತ್ರ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ತಮ್ಮ ವಯಸ್ಸನ್ನು ಬದಿಗಿಟ್ಟು ಹಲವು ಸಾಧನೆ ಮಾಡಿ ತೋರಿದ ಅನೇಕರು ನಮ್ಮ ಸಮಾಜದಲ್ಲಿದ್ದಾರೆ. ಅಂತಹವರ ಸಾಲಿಗೆ ಮತ್ತೊಂದು ಸೇರ್ಪಡೆ ಕೇರಳದ 70 ವರ್ಷದ ಈ ವೃದ್ಧೆ. ಈ ಇಳಿವಯಸ್ಸಿನಲ್ಲಿ ಅಜ್ಜಿ ಕೈಗಳನ್ನು ಕಟ್ಟಿಕೊಂಡು ಪೆರಿಯರ್‌ ನದಿಯಲ್ಲಿ ಈಜಿದ್ದಾರೆ ಈಜಿ ಜೈಸಿದ್ದಾರೆ. 

ಎಲ್ಲಾ ವಯೋಮಾನದವರಿಗೂ ಈಜು ಕಲಿಯಲು ಉತ್ತೇಜನ ನೀಡಲು ಇಲ್ಲಿನ ವಲಸ್ಸೆರಿ ರಿವರ್ ಸ್ವಿಮ್ಮಿಂಗ್ ಕ್ಲಬ್ ಭಾನುವಾರ ಈ ಈಜು ಕಾರ್ಯಕ್ರಮವನ್ನು ಆಯೋಜಿಸಿತ್ತು. ಇದರಲ್ಲಿ 70 ವರ್ಷದ ಮಹಿಳೆಯೊಬ್ಬರು 780 ಮೀಟರ್ ಅಗಲದ ಪೆರಿಯಾರ್ ನದಿಯಲ್ಲಿ ಕೈಗಳನ್ನು ಕಟ್ಟಿಕೊಂಡು ಈಜಿದ್ದಾರೆ.

ಆಲುವಾದ (Aluva) ತೈಕ್ಕಟ್ಟುಕರದ (Thaikkattukara) ಆರಿಫಾ ವಿ ಕೆ (Arifa V K) , ಕುನ್ನುಂಪುರಂನ (Kunnumpuram) 11 ವರ್ಷದ ಭರತ್ ಕೃಷ್ಣ (Bharath Krishna) ಮತ್ತು ಅಶೋಕಪುರಂನ(Asokapuram)  38 ವರ್ಷದ ಧನ್ಯ ಕೆ ಜಿ (Dhanya K G) ಅವರೊಂದಿಗೆ ಮಡಪಂ ಕಡವುನಿಂದ (Madapam Kadavu) ಮಣಪ್ಪುರಂ ದೇಸೊಮ್ ಕಡವುವರೆಗೆ (Manappuram Desom Kadavu) ಈಜಿದರು.

ವಿಮಾನದಿಂದ ಜಿಗಿದು ಹಾರುತ್ತಲೇ ಭೂಮಿಗೆ ಲ್ಯಾಂಡ್ ಆದ 103 ವರ್ಷದ ಅಜ್ಜಿ..!

ಇದೇ ಅಕಾಡೆಮಿಯಲ್ಲಿ ತರಬೇತಿ ಪಡೆದ ನನ್ನ ಮಕ್ಕಳನ್ನು ನೋಡಿ ನಾನು ಈಜು ಕಲಿಯಲು ನಿರ್ಧರಿಸಿದೆ. ನನ್ನ ಕುಟುಂಬದ ಒಂಬತ್ತು ಮಂದಿಗೆ ಈಜು ಗೊತ್ತು. ಈ ವರ್ಷದ ಆರಂಭದಲ್ಲಿ, ನಾನು ಪೆರಿಯಾರ್ ನದಿಯಲ್ಲಿ ಈಜುತ್ತಿದ್ದೆ. ನನ್ನ ತರಬೇತುದಾರ ಸಾಜಿ ವಳಸ್ಸೆರಿ ಅವರು ಕೈಗಳನ್ನು ಕಟ್ಟಿಕೊಂಡು ಈಜಲು ಪ್ರಯತ್ನಿಸಲು ನನಗೆ ಆತ್ಮವಿಶ್ವಾಸವನ್ನು ತುಂಬಿದರು. ಈ ಪ್ರಯತ್ನದಿಂದ ನಾನು ಹೇಳಲು  ಬಯಸುವ ಸಂದೇಶವೆಂದರೆ ಎಲ್ಲರೂ ಈಜುವುದನ್ನು ಕಲಿಯಬೇಕು. ಮುಳುಗುವ ಭಯದಿಂದ ಜನರು ಈಜು ಕಲಿಯಲು ಹಿಂಜರಿಯಬಾರದು ಎಂದು ಅವರು ಹೇಳಿದರು.

ಈ ಮೂವರೂ ಈಜುಪಟುಗಳಿಗೆ (swimmers) ಕಳೆದ ವಾರದಿಂದ ಸಾಜಿ ಮತ್ತು ಅವರ ತಂಡ ವಿಶೇಷ ತರಬೇತಿ (special training) ನೀಡಿತ್ತು. ಪ್ರತಿಯೊಬ್ಬರೂ ಹೀಗೆ ಕೈಗಳನ್ನು ಕಟ್ಟಿ ಈಜುವ ಮೊದಲು ಸರಿಯಾದ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದ್ದರು. ಮೂವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಪರಿಣಿತ ಈಜುಗಾರರ ಗುಂಪು ಅವರನ್ನು ದೋಣಿಗಳಲ್ಲಿ (boats) ಹಿಂಬಾಲಿಸಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಈಜು ಆರಂಭಿಸಿದ ಅವರು ಬೆಳಗ್ಗೆ 8.45 ರ ಸುಮಾರಿಗೆ ಯಶಸ್ವಿಯಾಗಿ ನದಿ ದಾಟಿದರು. ಜನರಿಗೆ ಈಜು ಕಲಿಯಲು ವಯಸ್ಸು ಅಡ್ಡಿಯಾಗುವುದಿಲ್ಲ. ಈ ಸಂದೇಶ ಸಾರುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಘಟನೆ ನಡೆದ ದಿನವೂ ರಾಜ್ಯದಲ್ಲಿ ನೀರಲ್ಲಿ ಮುಳುಗಿದ ಪ್ರಕರಣಗಳು ವರದಿಯಾಗಿವೆ. ಈ ಕಾರಣಕ್ಕಾದರೂ ಪೋಷಕರು ಮಕ್ಕಳನ್ನು ಈಜು ಕಲಿಕೆಗೆ ಕಳಿಸಬೇಕು ಎಂದು ಸಾಜಿ (Saji) ಹೇಳಿದರು.

ಅಜ್ಜ-ಅಜ್ಜಿ ಅತಿ ಮುದ್ದಿನಿಂದ ಮೊಮ್ಮಕ್ಕಳು ಹಾಳಾಗ್ತಾರಾ? Study ಹೇಳುವುದೇನು?
 

ಪೆರಿಯಾರ್ ನದಿಯೂ ಎರ್ನಾಕುಲಂ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮೂಲಕ ಹಾದು ಹೋಗುತ್ತದೆ, ಪೆರೆಯರ್ ನದಿಯಲ್ಲಿ ಕಳೆದ ವರ್ಷ 102 ಜನರು ಮುಳುಗಿದ್ದರು. ಇದರಲ್ಲಿ 77 ಜನ ಆಕಸ್ಮಿಕವಾಗಿ ಸಾವನ್ನಪ್ಪಿದ್ದರೆ 25 ಜನರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಕಸ್ಮಿಕವಾಗಿ ಮುಳುಗಿದ ಘಟನೆಗಳಲ್ಲಿ 62 ಪುರುಷರು ಮತ್ತು 15 ಮಹಿಳೆಯರು ಎಂದು ತಿಳಿದು ಬಂದಿದೆ.

click me!