ಸರ್ಪಂಚ್ ಕನಸು ನನಸಾಗಿಸಲು ಪುಸ್ತಕ ಹಿಡಿದ ಮಹಿಳೆ – 63ನೇ ವಯಸ್ಸಿನಲ್ಲಿ 10ನೇ ತರಗತಿ ಪರೀಕ್ಷೆ ಪಾಸ್

Published : Jul 20, 2026, 11:52 AM IST
achievement

ಸಾರಾಂಶ

ಸಾಧನೆಗೆ ಯಾವುದೇ ವಯಸ್ಸಿನ ಗಡಿ ಇಲ್ಲ. ಯಾರೂ ಬೇಕಾದ್ರೂ ಸಾಧನೆ ಮಾಡ್ಬಹುದು. 63ನೇ ವಯಸ್ಸಿನಲ್ಲಿ 10ನೇ ತರಗತಿ ಪರೀಕ್ಷೆ ಬರೆಯೋದು ಸ್ವಲ್ಪ ಕಷ್ಟ ಆದ್ರೂ ಈ ಮಹಿಳೆ ಸಾಧಿಸಿ ತೋರಿಸಿದ್ದಾರೆ.

ಕಲಿಕೆಗೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಛಲವಿದ್ರೆ, ಆಸಕ್ತಿ ಇದ್ರೆ ಯಾವುದೇ ವಯಸ್ಸಿನಲ್ಲಿ ಕೂಡ ವಿದ್ಯಾಭ್ಯಾಸ ಮುಂದುವರಿಸ್ಬಹುದು. ಇದಕ್ಕೆ ಈ ಮಹಿಳೆ ಸ್ಪೂರ್ತಿ. ವಯಸ್ಸಾಗ್ತಿದ್ದಂತೆ ಜನರು ಓದು, ಪರೀಕ್ಷೆಯಿಂದ ಹಿಂದೆ ಸರಿತಾರೆ. ಆದ್ರೆ 63ನೇ ವಯಸ್ಸಿನಲ್ಲೂ ಓದಿ, ಹತ್ತನೇ ತರಗತಿ ಪಾಸ್ ಆದ ಮಹಿಳೆಯೊಬ್ಬರು, ಓದಿಗೂ ವಯಸ್ಸಿಗೂ ಸಂಬಂಧ ಇಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.

10ನೇ ತರಗತಿಯಲ್ಲಿ ಶೇ 79.6 ಅಂಕ

ಹರಿಯಾಣದ ಮಹೇಂದ್ರಗಢ ಜಿಲ್ಲೆಯ 63 ವರ್ಷದ ಸುಶೀಲಾ ದೇವಿ ಹತ್ತನೇ ತರಗತಿಯನ್ನು ಯಶಸ್ಸಿಯಾಗಿ ಪಾಸ್ ಆದ ಮಹಿಳೆ. ಐದನೇ ತರಗತಿಯ ನಂತರ ಅವರು ಓದಲು ಸಾಧ್ಯ ಆಗಿರಲಿಲ್ಲ. ಆದ್ರೆ 58 ವರ್ಷಗಳ ನಂತ್ರ ಮತ್ತೆ ಪುಸ್ತಕ ಹಿಡಿದು, ಛಲದಿಂದ ಓದಿ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (NIOS) 10 ನೇ ತರಗತಿಯ ಪರೀಕ್ಷೆ ಬರೆದಿದ್ದಾರೆ. ಬರೀ ಪರೀಕ್ಷೆ ಬರೆದಿದ್ದು ಮಾತ್ರವಲ್ಲ ಪರೀಕ್ಷೆಯಲ್ಲಿ ಅವರು ಶೇಕಡಾ 79.6 ಅಂಕ ಪಡೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದು ತಮ್ಮ ಶಿಕ್ಷಣವನ್ನು ಮುಂದುವರಿಸಲು ಮತ್ತು ಸರಪಂಚ ಹುದ್ದೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಸುಶೀಲಾ ದೇವಿ ಹೇಳಿದ್ದಾರೆ.

ಗಂಡನಿಲ್ಲದೆ ಹೆಂಡತಿ ಎಂದಿಗೂ ಹೋಗಬಾರದ ಸ್ಥಳಗಳಿವು

ಐದನೇ ತರಗತಿಗೆ ಓದು ಬಿಟ್ರೂ ಸುಶೀಲಾ ದೇವಿಗೆ ಓದುವ ಉತ್ಸಾಹ ಕಡಿಮೆಯಾಗಿರಲಿಲ್ಲ. ಮದುವೆಯ ನಂತರವೂ ಅವರು ನಿಯಮಿತವಾಗಿ ಪತ್ರಿಕೆಗಳನ್ನು ಓದುವುದನ್ನು ಮತ್ತು ಜ್ಞಾನದ ಮೂಲಗಳನ್ನು ಹುಡುಕುವುದನ್ನು ಮುಂದುವರೆಸಿದ್ದರು. ಒಂದು ದಿನ, ಅವರ ಮಗ ವಿಷ್ಣು ತಮ್ಮ ತಾಯಿಯ ಶಿಕ್ಷಣದ ಆಸಕ್ತಿಯನ್ನು ಗಂಭೀರವಾಗಿ ಪರಿಗಣಿಸಿ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (NIOS) ನಲ್ಲಿ 10 ನೇ ತರಗತಿಯ ಫಾರ್ಮ್ ಭರ್ತಿ ಮಾಡಲು ಸಹಾಯ ಮಾಡಿದನು. ಆರಂಭದಲ್ಲಿ, 10 ನೇ ತರಗತಿಯ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ಪಠ್ಯಕ್ರಮವು ಕಷ್ಟಕರವೆಂದು ತೋರುತ್ತಿತ್ತು. ಅವರ ಮಗ, ಹೆಣ್ಣುಮಕ್ಕಳು ಮತ್ತು ಗಂಡನ ಬೆಂಬಲದೊಂದಿಗೆ, ಅವರು ಪರೀಕ್ಷೆ ಬರೆದ್ರು. ಪರೀಕ್ಷೆಗೆ ತಯಾರಿ ನಡೆಸಲು ಅವರು ಪ್ರತಿದಿನ ಮೂರರಿಂದ ನಾಲ್ಕು ಗಂಟೆಗಳ ಕಾಲ ಅಧ್ಯಯನ ಮಾಡಿದರು.

3 ಕೋಟಿ ರೂ.ಕಾರಲ್ಲಿ ಮನೆಗೆಲಸ ಮಾಡಲು ಬರುವಾಕೆ! ಜಾಲತಾಣದಲ್ಲಿ ಈಕೆಯದ್ದೇ ಹವಾ

ಸುಶೀಲಾ ದೇವಿ ಇಂಗ್ಲಿಷ್ನಲ್ಲಿ 89, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ 88, ಗಣಿತದಲ್ಲಿ 78, ಚಿತ್ರಕಲೆಯಲ್ಲಿ 76 ಮತ್ತು ಹಿಂದಿಯಲ್ಲಿ 67 ಅಂಕಗಳನ್ನು ಗಳಿಸಿದ್ದಾರೆ. 10 ನೇ ತರಗತಿಯ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ, ಕನಸುಗಳು ಮತ್ತು ದೃಢಸಂಕಲ್ಪದ ನಡುವೆ ವಯಸ್ಸು ಎಂದಿಗೂ ತಡೆಗೋಡೆಯಾಗಲು ಸಾಧ್ಯವಿಲ್ಲ ಎಂದು ಸುಶೀಲಾ ದೇವಿ ಸಾಬೀತುಪಡಿಸಿದ್ದಾರೆ. ಸರ್ಪಂಚ್ ಹುದ್ದೆಗೆ ಸ್ಪರ್ಧೆ ನಡೆಸುವುದು ಅವರ ಗುರಿಯಾಗಿದ್ದು, ಅದಕ್ಕೆ ಅಗತ್ಯವಿರುವ ಶಿಕ್ಷಣವನ್ನು ಸುಶೀಲಾ ದೇವಿ ಪೂರ್ಣಗೊಳಿಸಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈರುಳ್ಳಿ ಫ್ರೈ ಮಾಡುವಾಗ ಒಂದು ಚಿಟಿಕೆ ಸಕ್ಕರೆ ಸೇರಿಸುವುದೇಕೆ? ಇದರ ಹಿಂದಿದೆ ಸೂಪರ್ ಕಿಚನ್ ಸೀಕ್ರೆಟ್!
Pasa Design: ವಧುವಿನ ಸೌಂದರ್ಯ ಹೆಚ್ಚಿಸುವ 6 ಟ್ರೆಂಡಿ ಪಾಸಾ ಡಿಸೈನ್‌ಗಳು