140 ದಿನಗಳಲ್ಲಿ 4,841 ಕಿ.ಮೀ. ಚಾರಣ ನಡೆಸಿ, ದಾಖಲೆ ಬರೆದ 50 ದಾಟಿದ 11 ಮಂದಿ ಮಹಿಳೆಯರ ತಂಡ
ಮೈಸೂರು(ಸೆ.03): ವಯಸ್ಸು ಐವತ್ತು ದಾಟಿದರೆ ಮುಗಿದೇ ಹೋಯಿತು ಎಂದು ಚಿಂತಿಸುವವರ ನಡುವೆ 50 ದಾಟಿದ 11 ಮಂದಿ ಮಹಿಳೆಯರ ತಂಡವೊಂದು 140 ದಿನಗಳಲ್ಲಿ 4,841 ಕಿ.ಮೀ. ಚಾರಣ ನಡೆಸಿ, ದಾಖಲೆ ಬರೆದಿದೆ. ಈ ತಂಡದಲ್ಲಿದ್ದವರ ಪೈಕಿ ಕರ್ನಾಟಕದವರು ಇಬ್ಬರೇ. ಅವರಲ್ಲಿ ಒಬ್ಬರು ಬೆಂಗಳೂರಿನ ವಸುಮತಿ ಶ್ರೀನಿವಾಸನ್, ಮತ್ತೊಬ್ಬರು ಮೈಸೂರಿನ ಶ್ಯಾಮಲಾ ಪದ್ಮನಾಭನ್ (64) ಅವರು. ಎಂಭತ್ತರ ದಶಕದಲ್ಲಿ ಮೈಸೂರಿನಲ್ಲಿ ಪತ್ರಕರ್ತೆಯಾಗಿದ್ದ ಶ್ಯಾಮಲಾ ನಂತರ ಬೆಂಗಳೂರಿನಲ್ಲಿ ಪತ್ರಿಕೋದ್ಯಮ ಉಪನ್ಯಾಸಕಿ. ಅಲ್ಲಿಂದ ಮುಂಬೈಗೆ ಸ್ಥಳಾಂತರವಾಗಿ ಟಿಸಿಎಸ್ ಕಂಪನಿಯಲ್ಲಿ ಎರಡೂವರೆ ದಶಕಗಳ ಸೇವೆ. ನಿವೃತ್ತಿಯ ನಂತರ ಮೈಸೂರಿಗೆ ವಾಪಸ್ ಆಗಿದ್ದಾರೆ.
ಫಿಟ್ ಆ್ಯಟ್ 50 ಪ್ಲಸ್ ಹೆಸರಿನ ಈ ಚಾರಣವನ್ನು ಟಾಟಾ ಸ್ಟೀಲ್ ಅಡ್ವೆಂಚರ್ ಫೌಂಡೇಷನ್ (ಟಿಎಸ್‌ಎಎಫ್) ಕೇಂದ್ರ ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಯೋಗ, ಭಾರತೀಯ ಸೇನೆಯ ಸಹಕಾರದಲ್ಲಿ ನಡೆಸಿತು. ಈ ಮೂಲಕ ಹೊಸ ದಾಖಲೆ ಸೃಷ್ಟಿಸಿದ ಪರ್ವತಾರೋಹಿ, ಪದ್ಮಭೂಷಣ ಬಜೇಂದ್ರಿ ಪಾಲ್ ನೇತೃತ್ವದ ಈ ತಂಡ ತಮ್ಮ ಚಾರಣದ ಯಶಸ್ಸನ್ನು ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಸಮರ್ಪಿಸಿದೆ.
undefined
24 ಗಂಟೆಯಲ್ಲಿ 81 ಆನ್‌ಲೈನ್ ಕೋರ್ಸ್: ಹೊಸ ದಾಖಲೆ ಬರೆದ 'ಮಲ್ಲು ಕುಟ್ಟಿ'
ಅಂತಾರಾಷ್ಟ್ರೀಯ ಮಹಿಳಾ ದಿನದಂದು (ಮಾ.8) ಚಾರಣಕ್ಕೆ ಭಾರತ- ಮೈನ್ಮಾರ್ ಗಡಿಯಲ್ಲಿ ಹಸಿರು ನಿಶಾನೆ ತೋರಿಸಲಾಗಿತ್ತು. ಅರುಣಾಚಲಪ್ರದೇಶ, ಅಸೋಮ್, ಪಶ್ಚಿಮ ಬಂಗಾಳ, ಸಿಕ್ಕಿಂ, ನೇಪಾಳ, ಕುಮಾನ್, ಗರ್ವಾಲ್, ಹಿಮಾಚಲ್, ಸ್ವಿಟಿ, ಲೇ ಲಡಾಖ್ ಮೂಲಕ ಜು.24 ರಂದು ಕಾರ್ಗಿಲ್ ಯುದ್ಧ ಸ್ಮಾರಕದ ಬಳಿ ಚಾರಣವನ್ನು ಅಂತ್ಯಗೊಳಿಸಿತು. ಅಂದು ಕಾರ್ಗಿಲ್ ವಿಜಯೋತ್ಸವ ದಿನವಾಗಿತ್ತು. 35 ಅತಿ ಎತ್ತರದ ಪರ್ವತಗಳ ಮೂಲಕ ಚಾರಣ ಸಾಗಿದ್ದು ವಿಶೇಷ.
ಮಹಿಳೆಯರು ಅದರಲ್ಲೂ ಹಿರಿಯರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಹಾಗೂ ದೇಹದಾರ್ಢ್ಯ ಕಾಪಾಡಿಕೊಳ್ಳಬೇಕಾದ ಉದ್ದೇಶದಿಂದ ಈ ಚಾರಣ ನಡೆಸಲಾಯಿತು. ಈ ತಂಡದಲ್ಲಿ 54 ರಿಂದ 68 ಪರ್ಷದೊಳಗಿನ ಮಹಿಳೆಯರು ಇದ್ದರು. ಈ ತಂಡ ನಂತರ ರಾಷ್ಟಪತಿ ದ್ರೌಪದಿ ಮುರ್ಮು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತಿತರ ಗಣ್ಯರನ್ನು ಭೇಟಿ ಮಾಡಿತ್ತು.
Rare Disease: ಈಕೆಗೆ ಮೂರು ನಿಮಿಷಕ್ಕಿಂತ ಹೆಚ್ಚು ಕಾಲ ನಿಲ್ಲೋಕೆ ಆಗಲ್ಲ, ಇದೆಂಥಾ ವಿಚಿತ್ರ ಕಾಯಿಲೆ !
3,6,9.ಜೆಪಿಜಿ ಯಾರೇ ಆಗಲಿ ಅದರಲ್ಲೂ ಮಹಿಳೆಯರು ಐವತ್ತು ದಾಟುತ್ತಿದ್ದಂತೆ ಜೀವನವೇ ಮುಗಿದು ಹೋಯಿತು ಎಂಬಂತೆ ಭಾವಿಸುತ್ತಾರೆ. ಮನಸ್ಸು ಇದ್ದರೆ ಖಂಡಿತಾ ಮಾರ್ಗ ಉಂಟು. ಧೈರ್ಯ, ಸಾಹಸ ಮನೋಭಾವ ಇದ್ದಲ್ಲಿ ವಯಸ್ಸು ಲೆಕ್ಕಕ್ಕೇ ಇಲ್ಲ. ನಮ್ಮ ತಂಡ ಹಲವಾರು ಅಡ್ಡಿ ಆತಂಕಗಳು ಎದುರಾದರೂ ಕ್ಲಿಷ್ಟಕರ ಪ್ರದೇಶಗಳಲ್ಲಿ ಯಶಸ್ವಿಯಾಗಿ ಚಾರಣ ನಡೆಸಿ, ದಾಖಲೆ ನಿರ್ಮಿಸಿದೆ ಅಂತ ಮೈಸೂರಿನ ಶ್ಯಾಮಲಾ ಪದ್ಮಾನಾಭನ್ ತಿಳಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ತಂಡ
2.ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ತಂಡ
10. ಶ್ಯಾಮಲಾ ಹಾಗೂ ವಸುಮತಿ
5- ತಂಡದ ನಾಯಕಿ ಬಜೇಂದ್ರಿಪಾಲ್ ಜೊತೆ ಶ್ಯಾಮಲಾ
4,7,8- ಹನ್ನೊಂದು ಮಂದಿ ಮಹಿಳೆಯರ ತಂಡದ ಚಾರಣ