Kids Safety: ಮಕ್ಕಳು ಒಬ್ಬರೇ ಮನೆಯಲ್ಲಿ ಇರೋದಾದ್ರೆ ಕಿಚನ್ ಹೀಗಿರಲೇ ಬೇಕು!

By Suvarna NewsFirst Published Sep 3, 2022, 11:51 AM IST
Highlights

ಮಕ್ಕಳು ಅಡುಗೆ ಮನೆಗೆ ಬರದೆ ಇರಲು ಸಾಧ್ಯವೇ ಇಲ್ಲ. ಒಂದಲ್ಲ ಒಂದು ನೆಪ ಹೇಳ್ಕೊಂಡು ಮಕ್ಕಳು ಅಡುಗೆ ಮನೆಗೆ ಬರ್ತಾವೆ. ಹಾಗೆ ಅಲ್ಲಿ ಇಲ್ಲಿ ಗಾಯ ಮಾಡ್ಕೊಳ್ಳುತ್ತವೆ. ಮಕ್ಕಳು ಕಿಚನ್ ಗೆ ಬಂದ್ರೆ ಭಯ ಎನ್ನುವ ತಾಯಂದಿರುವ ಮಕ್ಕಳ ರಕ್ಷಣೆಗಾಗಿ ಕೆಲ ಟಿಪ್ಸ್ ಫಾಲೋ ಮಾಡ್ಬಹುದು.
 

ಮಕ್ಕಳಿಗೆ ಅದೆಷ್ಟೇ ಆಟಿಕೆ ಸಾಮಾನುಗಳಿರಲಿ, ಮಕ್ಕಳಿಗೆ ಅಡುಗೆ ಮನೆ ಪಾತ್ರೆಗಳ ಮೇಲೆ ವಿಶೇಷ ಪ್ರೀತಿಯಿರುತ್ತದೆ. ಪಾತ್ರೆಗಳ ಜೊತೆ ಆಟವಾಡಲು ಮಕ್ಕಳು ಬಯಸ್ತಾರೆ. ಸದಾ ಅಮ್ಮನ ಜೊತೆ ಅಡುಗೆ ಮನೆಯಲ್ಲಿರುವ ಮಕ್ಕಳ ಸಂಖ್ಯೆ ಹೆಚ್ಚು. ಮಕ್ಕಳನ್ನು ಎಷ್ಟು ಪುಸಲಾಯಿಸಿ ಬೇರೆ ಕಡೆ ಬಿಟ್ಟು ಬಂದ್ರೂ ಮಕ್ಕಳು ವಾಪಸ್ ಬರೋದು ಕಿಚನ್ ಗೆ. ಒಮ್ಮೆ ಹೋದ ಮಕ್ಕಳು ಮತ್ತೊಂದು ನೆಪ ಹೇಳಿ ಅಡುಗೆ ಮನೆಗೆ ನುಗ್ತಾರೆ. ಅನೇಕ ಬಾರಿ ತಾಯಂದಿರ ಜೊತೆ ಅಡುಗೆ ಮಾಡುವ ಹಠ ಮಾಡ್ತಾರೆ ಮಕ್ಕಳು. ಅಡುಗೆ ಮನೆಯಲ್ಲಿ ಚಾಕು, ಕತ್ತರಿ ಸೇರಿದಂತೆ ಹರಿತ ವಸ್ತುಗಳಿರುತ್ತವೆ. ಜೊತೆಗೆ ಗ್ಯಾಸ್ ನಂತಹ ಅಪಾಯಕಾರಿ ವಸ್ತುಗಳಿರುತ್ತವೆ. ಮಕ್ಕಳು, ಪಾಲಕರ ಅರಿವಿಗೆ ಬಾರದಂತೆ ಗ್ಯಾಸ್ ಆನ್ ಮಾಡಿ ಬಂದಿರ್ತಾರೆ. ಇಲ್ಲವೆ ಚಾಕು ಹಿಡಿದು ಆಟವಾಡ್ತಾರೆ. ಮಕ್ಕಳನ್ನು ಹಿಡಿದುಕೊಂಡು ಅಡುಗೆ ಮಾಡೋದು ಸವಾಲಾಗುತ್ತದೆ. ಸದಾ ಅಮ್ಮನ ಸೆರಗಿನ ಹಿಂದೆ ಮಕ್ಕಳು ಅಡುಗೆ ಮನೆಯಲ್ಲಿರ್ತಾರೆ, ಅವರ ಸೇಫ್ಟಿ ಕಷ್ಟವಾಗಿದೆ ಎನ್ನುವ ಅಮ್ಮಂದಿರು ಈ ಕೆಲ ಟಿಪ್ಸ್ ಪಾಲನೆ ಮಾಡ್ಬಹುದು. 

ಮಕ್ಕಳ (Children) ಮೇಲೆ ಗಮನವಿರಲಿ : ಅಡುಗೆ (Cooking) ಮಾಡುವಾಗ ಗ್ಯಾಸ್ (Gas) ಒಲೆ ಮೇಲಿಟ್ಟು ಒಗ್ಗರಣೆ ಮೇಲೆ ಗಮನವಿರುವುದು ಸಹಜ. ಆದ್ರೆ ಮಕ್ಕಳು ಅಡುಗೆ ಮನೆಯಲ್ಲಿದ್ದಾರೆ ಎಂದಾಗ ಒಗ್ಗರಣೆಗಿಂತ ಮಕ್ಕಳ ಮೇಲೆ ಹೆಚ್ಚು ಗಮನವಿರಲಿ. ಮಕ್ಕಳು ಅಡುಗೆ ಮನೆಗೆ ಬರ್ತಿದ್ದಾರೆ ಎನ್ನುವಷ್ಟರಲ್ಲಿ ಚಾಕು, ಕತ್ತರಿಗಳನ್ನು ಮಕ್ಕಳಿಗೆ ಸಿಗದ ಜಾಗದಲ್ಲಿ ಇಡಿ. ಹಾಗೆ ಮಕ್ಕಳು ಗ್ಯಾಸ್ ಕಡೆ ಹೋಗದಂತೆ ನೋಡಿಕೊಳ್ಳಿ. ಅಪಾಯವೆನ್ನಿಸುವ ಹಾಗೂ ಕಡಿಮೆ ಬಳಕೆ ಮಾಡುವ ವಸ್ತುಗಳಿದ್ದರೆ ಮೇಲಿಡಿ. 

ಕಿಚನ್ ಹೀಗಿರಲಿ : ಮಕ್ಕಳಿದ್ದಾರೆ ಎಂದ್ಮೇಲೆ ಎಚ್ಚರಿಕೆ ತೆಗೆದುಕೊಳ್ಳಲೇಬೇಕು. ಹಾಗಾಗಿ ಕಿಚನ್ ಇಂಟೀರಿಯರ್ (Kitchen Interior) ಬದಲಿಸಿ. ಮಕ್ಕಳಿಗೆ ಹಾನಿ ಮಾಡುವ ಯಾವುದೇ ವಸ್ತು ಕೆಳಗೆ ಇರದಂತೆ ನೋಡಿಕೊಳ್ಳಿ. ಹಾಗೆಯೇ ಪಾತ್ರೆಗಳನ್ನು ಕೂಡ ಮೇಲಕ್ಕೆ ಎತ್ತಿಡಿ. ಗ್ಲಾಸ್ ವಸ್ತುಗಳು (Glass Items), ಪಾತ್ರೆಗಳು ಕೂಡ ಅಪಾಯ. ಹಾಗಾಗಿ ಅವುಗಳನ್ನು ಮಕ್ಕಳಿಗೆ ಸಿಗುವಂತೆ  ಜಾಗದಲ್ಲಿ ಇಡಬೇಡಿ.

ಗರ್ಭಾವಸ್ಥೆಯಲ್ಲಿ Weight ಹೆಚ್ಚಾಗೋದು ಎಷ್ಟು ಕಾಮನ್?

ಗ್ಯಾಸ್ ಬಗ್ಗೆ ಮಕ್ಕಳಿಗಿರಲಿ ಜ್ಞಾನ : ಮಕ್ಕಳು ಸ್ವಲ್ಪ ದೊಡ್ಡವರಾಗ್ತಿದ್ದು, ಅವರನ್ನೊಬ್ಬರೇ ಮನೆಯಲ್ಲಿ ಬಿಟ್ಟು ನೀವು ಕೆಲಸಕ್ಕೆ ಹೋಗ್ತಿದ್ದರೆ ಮೊದಲು ಮಕ್ಕಳಿಗೆ ಗ್ಯಾಸ್ ಬಗ್ಗೆ ಮಾಹಿತಿ ನೀಡಿ. ಗ್ಯಾಸ್ ವಾಸನೆ ಬಂದ್ರೆ ಏನು ಮಾಡ್ಬೇಕು ಎಂಬುದನ್ನು ಹೇಳಿ. ರೆಗ್ಯೂಲೇಟರ್ ಬಂದ್ ಮಾಡೋದು ಹೇಗೆ ಎಂಬುದನ್ನು ಮಕ್ಕಳಿಗೆ ತಿಳಿಸಿ. ಹಾಗೆ ಗ್ಯಾಸ್ ಆನ್ ಆಪ್ ಬಗ್ಗೆಯೂ ಅವರಿಗೆ ಗೊತ್ತಿರಲಿ. 

ಅಡುಗೆ ಮನೆಗೆ ಬರುವ ಮೊದಲು ಸ್ವಚ್ಚತೆ : ಅಡುಗೆ ಮನೆ ರೋಗ (Disease) ಹರಡುವ ಜಾಗ. ಹಾಗಾಗಿ ಅಡುಗೆ ಮನೆ ಸದಾ ಸ್ವಚ್ಛವಾಗಿರಬೇಕು (Clean). ನಿಮ್ಮ ಮಕ್ಕಳಿಗೆ ಅಡುಗೆ ಮನೆಗೆ ಬರುವ ಮೊದಲು ಏನು ಮಾಡ್ಬೇಕು ಎಂಬುದನ್ನು ಕಲಿಸಿ. ಮಕ್ಕಳು ಕೈ ಕಾಲು ತೊಳೆಯದೆ ಅಡುಗೆ ಮನೆಗೆ ಬಂದ್ರೆ ಮಕ್ಕಳಿಗೆ ವಿವರಿಸಿ ಹೇಳಿ. ಹೊರಗಿನ ಬ್ಯಾಕ್ಟೀರಿಯಾ (Bacteria) ಆಹಾರಕ್ಕೆ ಸೇರಿ ಏನೆಲ್ಲ ಅನಾಹುತವಾಗುತ್ತದೆ ಎಂಬುದನ್ನು ವಿವರಿಸಿ.  
Womens Health: ತಿಂಗಳಿಗೆ ಎರಡೇ ದಿನ ಮುಟ್ಟಾಗ್ತಿದ್ಯಾ ? ಕಾರಣವೇನು ತಿಳ್ಕೊಳ್ಳಿ

ಮಕ್ಕಳನ್ನು ಎತ್ತಿಕೊಂಡು ಕೆಲಸ ಮಾಡ್ಬೇಡಿ : ಅನೇಕ ಬಾರಿ ಅಮ್ಮಂದಿರುವ ಮಕ್ಕಳನ್ನು ಹೆಗಲಿಗೆ ಹಾಕಿಕೊಂಡು ಅಡುಗೆ ಮಾಡ್ತಾರೆ. ಇದು ಅಪಾಯಕಾರಿ ಎನ್ಬಹುದು. ಯಾಕೆಂದ್ರೆ ಎಣ್ಣೆ ಸಿಡಿಯುವ ಸಾಧ್ಯತೆಯಿರುತ್ತದೆ. ಇಲ್ಲವೆ ಗ್ಯಾಸ್ ಒಲೆಯಲ್ಲಿ ಕೈ, ಕಾಲು ಸುಡುವ ಭಯವಿರುತ್ತದೆ. ಮಕ್ಕಳು ಕುಣಿದಾಡಿದ್ರೆ ಅವರಿಗೆ ಬಿಸಿ ತಾಗುತ್ತದೆ. ಚಾಕುವಿನಿಂದ ನಿಮ್ಮಿಬ್ಬರಿಗೂ ಹಾನಿಯಾಗಬಹುದು.  ಹಾಗಾಗಿ ಎಂದೂ ಮಕ್ಕಳನ್ನು ಎತ್ತಿಕೊಂಡು ಅಡುಗೆ ಕೆಲಸ ಮಾಡ್ಬೇಡಿ.

 

 

click me!