ರಶ್ಮಿಕಾ 10ನೇ ಕ್ಲಾಸಲ್ಲಿರುವಾಗ ತಂಗಿ ಹುಟ್ಟಿದ್ದು, ಇವಳು ಡಿಗ್ರಿಯಲ್ಲಿರುವಾಗ ಅಮ್ಮನಿಗೆ ಮತ್ತೊಂದು ಮಗು!

Published : Mar 21, 2023, 01:43 PM IST
ರಶ್ಮಿಕಾ 10ನೇ ಕ್ಲಾಸಲ್ಲಿರುವಾಗ ತಂಗಿ ಹುಟ್ಟಿದ್ದು,  ಇವಳು ಡಿಗ್ರಿಯಲ್ಲಿರುವಾಗ ಅಮ್ಮನಿಗೆ ಮತ್ತೊಂದು ಮಗು!

ಸಾರಾಂಶ

ಕೊಡಗಿನ ಕುವರಿ, ಕಿರಿಕ್ ಪಾರ್ಟಿ ಮೂಲಕ ಸ್ಯಾಂಡಲ್‌ವುಡ್‌‌ಗೆ ಎಂಟ್ರಿ ಕೊಟ್ಟ ನ್ಯಾಷನಲ್‌ ಕ್ರಶ್ ರಶ್ಮಿಕಾ ಮಂದಣ್ಣ ಅವರಿಗೆ ಪುಟ್ಟು ತಂಗಿ ಇದ್ದಾಳೆ. ಆಕೆ ಬಗ್ಗೆ ಅಲ್ಲಿ ಇಲ್ಲಿ ಹೇಳಿ ಕೊಂಡಿದ್ದಿದೆ. ಅದೇ ರೀತಿ ಹ್ಯೂಮನ್ಸ್ ಆಫ್ ಬಾಂಬೆ ಸೋಷಿಯಲ್ ಮೀಡಿಯಾದಲ್ಲಿ ಪೇಜಿನಲ್ಲಿ ಯುವತಿಯೊಬ್ಬಳು ತಂಗಿ ಹುಟ್ಟಿದ ಕಥೆ ಹೇಳಿ ಕೊಂಡಿದ್ದಾಳೆ. 

ಪೋಷಕರು ಕೇರಳದಲ್ಲಿದ್ದರು. ಈಕೆಯೋ ಡಿಗ್ರಿ ಓದಲು ಬೆಂಗಳೂರಿಗೆ ಬಂದಿದ್ದಳು. ಎಲ್ಲವೂ ನಾರ್ಮಲ್ ಆಗಿಯೇ ಇತ್ತು ಜೀವನ. ಆದರೆ ಮನೆಯಿಂದ ಬಂದ ಆ ಕರೆ ಇವಳಿಗೆ ಮಾತು ಹೊರಡದಂತೆ ಮಾಡಿತ್ತು. ಅಷ್ಟಕ್ಕೂ ಫೋನ್ ಮಾಡಿದ ಅಪ್ಪ ಮಗಳಿಗೆ ಹೇಳಿದ್ದೇನು ಗೊತ್ತಾ? 

ಅಪ್ಪ ಫೋನ್ ಮಾಡಿ, ಮಗಳೇ ನಿಮ್ಮ ಅಮ್ಮ ಗರ್ಭಿಣಿ. ನಿಂಗೊಂದು ತಮ್ಮನೋ, ತಂಗಿಯೋ ಹುಟ್ಟುತ್ತೆ ಎಂದಾಗ, ಇವಳಿಗೆ ಶಾಕ್. ಅಷ್ಟೊತ್ತಿಗೆ ಅಮ್ಮ ಎಂಟು ತಿಂಗಳ ಗರ್ಭಿಣಿ. ಇಷ್ಟು ದಿನ ಆದ್ಮೇಲೆ ಪೋಷಕರು ಹೇಳ್ತಾ ಇದಾರಲ್ಲ ಎನ್ನುವ ಕೋಪ ಬೇರೆ. ಆದರೆ, ಸಮಾಧಾನದಿಂದ ಆಗಿದ್ದೇನೆಂದು ಕೇಳಿ ಕೊಂಡಿದ್ದಾಳೆ. ಆಗ ಅಪ್ಪ ಎಲ್ಲವನ್ನೂ ವಿವರವಾಗಿ ಮಗಳ ಜೊತೆ ಹಂಚಿ ಕೊಂಡಿದ್ದಾರೆ. 

ಅಮ್ಮನಿಗೆ ಆಗಲೇ 47 ವರ್ಷವಾಗಿತ್ತು ಮುಟ್ಟು ನಿಲ್ಲುವ ಹೊತ್ತು. ಹಾಗೆಯೇ ಪಿರಿಯಡ್ಸ್ ನಿಂತು ಹೋಗಿದೆ ಎಂದು ಕೊಂಡಿದ್ದಾರೆ. ಆದರೆ, ದೇವಸ್ಥಾನಕ್ಕೆ ಹೋದಾಗ ತಾಯಿ ತಲೆ ಸುದ್ದಿ ಬಿದ್ದಿದ್ದಾಳೆ. ತಕ್ಷಣವೇ ಅಪ್ಪ ಆಸ್ಪತ್ರೆಗೆ ಕರೆದುಕೊಂಡ ಹೋದಾಗ ಅಮ್ಮ ಕನ್ಸೀವ್ ಆಗಿರುವ ವಿಷಯ ಗೊತ್ತಾಗಿದೆ. ಸಮಾಜ ಸುಮ್ಮನಿರಬೇಕಲ್ಲ. ಈ ಬಗ್ಗೆ ಕುಹಕವಾಗಿ ಮಾತನಾಡಿದೆ. ಬೆಳೆದು ನಿಂತ ಮಗಳಿದ್ದಾಳೆ. ಅವಳಿಗೆ ಈ ವಿಷಯವನ್ನು ಹೇಗೆ ಹೇಳುವುದೆಂದು ಸಹಜವಾಗಿಯೇ ಚಿಂತಿತವಾಗಿದ್ದಾರೆ ಪೋಷಕರು. ಆದರೆ, ಇಂಥ ವಿಷಯವನ್ನು ಎಷ್ಟು ದಿನ ತಾನೇ ಮುಚ್ಚಿಡಲು ಸಾಧ್ಯ ಹೇಳಿ? ಸತ್ಯ ಗೊತ್ತಾಗಲೇಬೇಕು. ತಿಂಗಳ ನಂತರ ಧೈರ್ಯ ಮಾಡಿ ಮಗಳಿಗೆ ಫೋನ್ ಮಾಡಿ ಎಲ್ಲ ವಿಷಯವನ್ನೂ ಹೇಳಿಕೊಂಡಿದ್ದಾರೆ. ಸದಾ ನಂಗೊಂದು ತಂಗಿಯೋ, ತಮ್ಮನೋ ಇರಬಾರದಾ ಎಂದು ಯೋಚಿಸುತ್ತಿದ್ದ ಇವಳಿಗೆ ಆ ಕ್ಷಣ ಈ ವಿಷಯವನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲದಿದ್ದರೂ, ಮತ್ತೆ ಸಿಕ್ಕಾಪಟ್ಟೆ ಖುಷಿಯಾಗಿದೆ. ಬಿಡುವು ಮಾಡಿಕೊಂಡು ಅಮ್ಮನನ್ನು ನೋಡಲು ಬಂದವಳಿಗೆ ಖುಷಿಯೋ ಖುಷಿ. 

ಗರ್ಭಾವಸ್ಥೆಯಲ್ಲಿ ಕೆಮ್ಮು: ಏನೇನೋ ಔಷಧಿ ಬಳಸೋ ಬದಲಿ ಈ ಮನೆ ಮದ್ದು ಟ್ರೈ ಮಾಡಿ

ನಮ್ಮನೆಗೆ ಒಂದು ಪಾಪು ತರೋಣ ಎಂದಾಗ, ಅಮ್ಮನ ಅನಾರೋಗ್ಯದ ಕಾರಣ ಅದು ಅಸಾಧ್ಯವಾಗಿತ್ತು. ಆದರೆ, ಈ ವಯಸ್ಸಿನಲ್ಲಿ ದೇವರು ಮತ್ತೊಂದು ಮಗುವನ್ನು ಬರ ಮಾಡಿ ಕೊಡಲು ಅವಕಾಶ ಕೊಟ್ಟಿದ್ದಕ್ಕೆ ಖುಷಿಯಾಯಿತು, ಅಂದಿದ್ದಾಳೆ ಯುವತಿ. 

ಇದಾದ ನಂತ್ರ ತಾಯಿ – ಮಗಳು ಸಮಯ ಕಳೆದ್ರಂತೆ. ಈ ವೇಳೆ ತಾಯಿ, ತಾನು ಗರ್ಭಿಣಿಯಾಗಿದ್ದು ಹೇಗೆ ತಿಳಿಯಿತು ಎನ್ನುವ ಕಥೆ ಹೇಳಿದ್ರಂತೆ. ಒಂದು ದಿನ ದೇವಸ್ಥಾನಕ್ಕೆ ಹೋದಾಗ ತಾಯಿ ತಲೆಸುತ್ತಿ ಬಿದ್ದಿದ್ದರಂತೆ. ವೈದ್ಯರ ಬಳಿ ಹೋದಾಗ ಗರ್ಭಿಣಿ ಎಂಬುದು ಗೊತ್ತಾಯ್ತಂತೆ. ಆದ್ರೆ ತಾಯಿಗೆ ಈಗಾಗಲೇ ಮುಟ್ಟು ನಿಂತಿತ್ತಂತೆ. ಅಲ್ಲದೆ ಹೊಟ್ಟೆ ಕೂಡ ಬಂದಿರಲಿಲ್ಲವಂತೆ. ಇದೊಂದು ಚಮತ್ಕಾರ ಎನ್ನುತ್ತಾಳೆ ಪಾರ್ವತಿ.

ಸೆಕ್ಸ್ ನಂತರ ಮೂತ್ರ ವಿಸರ್ಜನೆ: ಸತ್ಯ, ಮಿಥ್ಯಗಳೇನು?

ನಿಧಾನವಾಗಿ ವಿಷ್ಯವನ್ನು ಸಂಬಂಧಿಕರು, ಸ್ನೇಹಿತರಿಗೆ ಹೇಳಿದ್ದರಂತೆ. ಕೆಲವರು ಇದಕ್ಕೆ ಒಪ್ಪಿದ್ರೆ ಮತ್ತೆ ಕೆಲವರು ಅವಮಾನ ಮಾಡಿದ್ದರಂತೆ. ಆದ್ರೆ ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ಕೆಲ ತಿಂಗಳ ಹಿಂದೆ ತಾಯಿಗೆ ಸುರಕ್ಷಿತ ಹೆರಿಗೆಯಾಗಿದೆ. ನನಗೊಂದು ಮುದ್ದಾದ ತಂಗಿ ಬಂದಿದ್ದಾಳೆ. ನನಗೆ ತುಂಬಾ ಖುಷಿಯಾಗಿದೆ ಎನ್ನುತ್ತಾಳೆ ಪಾರ್ವತಿ.  ಪಾರ್ವತಿಯ ಈ ಪೋಸ್ಟ್ ವೈರಲ್ ಆಗಿದೆ. ಬಳಕೆದಾರರು ಅನೇಕ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ವೈದ್ಯರ ಪ್ರಕಾರ 40 ವರ್ಷ ದಾಟಿದ ಮೇಲೆ ಗರ್ಭಧರಿಸೋದು ಬಹಳ ಅಪಾಯಕಾರಿ. ಈ ಸಂದರ್ಭದಲ್ಲಿ ತಾಯಿ ಹಾಗೂ ಮಗು ಇಬ್ಬರಿಗೂ ಅಪಾಯವಾಗುವ ಸಾಧ್ಯತೆಯಿರುತ್ತದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಎಂತೆಂಥವರ ಮಧ್ಯೆ 'ಕ್ಯಾಬರೆ ಡಾನ್ಸರ್' ಕೂಡ ನೆಟ್ಟಗೆ ಸಂಸಾರ ಮಾಡಬಹುದು ಎಂದು ಹೇಳಿಕೊಟ್ಟ ಈ ನಟಿ ನೆನಪಿದೆಯಾ?
Kitchen Tips: ಮೈಕ್ರೋವೇವ್ ಬಳಸುವಾಗ ಈ 7 ತಪ್ಪು ಮಾಡ್ಬೇಡಿ