Animal Love: ತನಗೆ ಊಟವಿಲ್ಲದಿದ್ದರೂ ಬೆಕ್ಕುಗಳಿಗೆ ಆಹಾರ ನೀಡ್ತಾಳೆ ಈ ಇಂಗ್ಲೆಂಡ್ ಮಹಿಳೆ

By Sumana LakshmeeshaFirst Published Mar 19, 2023, 5:20 PM IST
Highlights

ಇಂಗ್ಲೆಂಡಿನಲ್ಲಿ ಈಗ ಹಸಿವಿನ ಸಂಕಷ್ಟ ಹೆಚ್ಚಾಗಿದೆ. ಒಂದು ಹೊತ್ತಿನ, ದಿನದ ಊಟ ಬಿಟ್ಟವರು ಅದೆಷ್ಟೋ ಮಂದಿ. ತಮಗಿಲ್ಲದಿದ್ದರೂ ಪರವಾಗಿಲ್ಲ, ತಮ್ಮ ಪ್ರೀತಿಪಾತ್ರರಿಗೆ ಊಟ ದೊರೆಯುವಂತೆ ಹಲವರು ಪ್ರಯತ್ನಿಸುತ್ತಿದ್ದಾರೆ. ಅವರಲ್ಲಿ ಯಾಸ್ಮಿನ್ ಕಫ್ತಾನ್ ವಿಭಿನ್ನವಾಗಿ ಕಾಣುತ್ತಾರೆ, ಏಕೆಂದರೆ, ಈಕೆ ತನ್ನ ಬೆಕ್ಕುಗಳಿಗೆ ಪ್ರತಿದಿನ ಊಟ ನೀಡಿ ತಾನು ವಾರಕ್ಕೊಮ್ಮೆ ಆಹಾರ ಸೇವನೆ ಮಾಡುತ್ತಾಳೆ. 
 

ಹಸಿವಿನ ಸಂಕಟ ಅನುಭವಿಸಿದವರಿಗಷ್ಟೇ ಗೊತ್ತು. ಹಸಿವಿನ ಮುಂದೆ ಬೇರೇನೂ ಇಲ್ಲ, ಹೀಗಾಗಿಯೇ, “ಅನ್ನ ದೇವರು ಮುಂದೆ ಇನ್ನ ದೇವರು ಇಲ್ಲ’ ಎನ್ನುವ ನಾಣ್ಣುಡಿ ಹುಟ್ಟಿಕೊಂಡಿದ್ದು. ದಿನಕ್ಕೆ ಒಮ್ಮೆಯಾದರೂ ಊಟ ಮಾಡದಿದ್ದರೆ ಭಯಂಕರ ಸಂಕಟವಾಗುತ್ತದೆ. ಮೂರು ಹೊತ್ತು ಊಟ, ಉಣಿಸು ಮಾಡಿಕೊಂಡಿರುವವರಿಗೆ ಒಂದೇ ಒಂದು ಹೊತ್ತು ಉಪವಾಸ ಮಾಡು ಎಂದರೂ ಕಷ್ಟವಾಗುತ್ತದೆ. ಅಂತಹ ಹಸಿವಿನ ಸಂಕಟವನ್ನು ಈಗ ಇಂಗ್ಲೆಂಡ್ ಜನ ಎದುರಿಸುತ್ತಿದ್ದಾರೆ. ಅಲ್ಲೀಗ, ಜೀವನ ವೆಚ್ಚ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಊಟ ಮಾಡಿದರೆ ವಿದ್ಯುತ್, ನೀರಿನ ಬಿಲ್ ಭರಿಸಲು ಸಾಧ್ಯವಿಲ್ಲ, ಬಿಲ್ ಭರಿಸಿದರೆ ಊಟಕ್ಕೆ ಹಣವಿಲ್ಲ ಎನ್ನುವ ಸ್ಥಿತಿಯನ್ನು ಮಧ್ಯಮ ವರ್ಗದ ಸುಧಾರಿತ ಕುಟುಂಬಗಳೇ ಎದುರಿಸುತ್ತಿವೆ. ಮಕ್ಕಳು ಊಟ ಮಾಡಲಿ ಎಂದು ಎರಡು ದಿನಕ್ಕೊಮ್ಮೆ ಆಹಾರ ಸೇವಿಸುವ ಅಮ್ಮಂದಿರು ಅಲ್ಲಿದ್ದಾರೆ. ಪುಟ್ಟ ತಂಗಿ ತಿನ್ನಲಿ ಎಂದು ತನ್ನ ಆಹಾರ ಬಿಟ್ಟುಕೊಟ್ಟ ಅಕ್ಕನಿದ್ದಾಳೆ. ಎಲ್ಲರೂ ತಮ್ಮ ಪ್ರೀತಿಪಾತ್ರರು ಊಟ ಮಾಡಲಿ, ಅವರಿಗೆ ಹಸಿವಿನ ಸಂಕಟ ತಟ್ಟದಿರಲಿ ಎಂದು ಪ್ರಯತ್ನಿಸುತ್ತಿದ್ದಾರೆ.

ಇಂತಹ ಸನ್ನಿವೇಶದಲ್ಲಿ ಸಾಕುಪ್ರಾಣಿಗಳ ಕಡೆಗೆ ಗಮನ ನೀಡುವವರು ಕಡಿಮೆಯೇ. ಆದರೆ, ಈ ಮಹಿಳೆಯೊಬ್ಬಳಿಗೆ (Woman) ಬೆಕ್ಕುಗಳೆಂದರೆ (Cats) ಪಂಚಪ್ರಾಣ. 6 ಬೆಕ್ಕುಗಳನ್ನು ಮನೆಯಲ್ಲಿ ಸಾಕಿದ್ದಾಳೆ. ಅವುಗಳಿಗೆ ಹೊತ್ತೊತ್ತಿಗೆ ಹಾಲು (Milk), ಆಹಾರದ (Food) ವ್ಯವಸ್ಥೆ ಆಗಬೇಕು. ಆದರೆ, ಏರುತ್ತಿರುವ ಜೀವನ ವೆಚ್ಚಕ್ಕೆ (Life Cast) ಈಕೆ ಕಂಗಾಲಾಗಿದ್ದಾಳೆ. ಹೀಗಾಗಿ, ಕಂಡುಕೊಂಡ ಮಾರ್ಗವೆಂದರೆ, ತಾನೇ ಊಟವನ್ನು ತ್ಯಜಿಸುವುದು! ಹೌದು, ಈಕೆ ವಾರಕ್ಕೆ ಒಮ್ಮೆ ಮಾತ್ರ ಊಟ (Meal) ಮಾಡುತ್ತಾಳೆ. 

ಪಿರಿಯಡ್ ಟೈಂನಲ್ಲಿ ಬ್ಲ್ಯಾಕ್ ಬ್ಲಡ್ ಯಾಕೆ ಬರುತ್ತೆ ಗೊತ್ತಾ?

ಯಾಸ್ಮೀನ್ ಕಫ್ತಾನ್ (Yasmen Kaphtan) ಎಂಬಾಕೆ ಉತ್ತರ ಲಂಡನ್ ನಲ್ಲಿ (North London) ವಾಸವಾಗಿದ್ದಾಳೆ. ಇವಳು ಆಸ್ಟಿಯೋಪೊರೊಸಿಸ್ ರೋಗಿಯಾಗಿದ್ದಾಳೆ. ಈಕೆಗೆ ತಿಂಗಳಿಗೆ 400 ಪೌಂಡ್ ಅಂಗವಿಕಲರ (Disable) ಮಾಸಾಶನ ಬರುತ್ತದೆ. ಇದರಲ್ಲಿ ಬಾಡಿಗೆ (Rent) ಮತ್ತು ವಿವಿಧ ಬಿಲ್ ಗಳಿಗೆ ಬಹುತೇಕ ಹಣ ವ್ಯಯವಾಗುತ್ತದೆ. ತನ್ನ ಸಂಗಾತಿಯಿಂದ ಅಲ್ಪ ಹಣ ಪಡೆದುಕೊಳ್ಳುತ್ತಾಳೆ. ಇದರಲ್ಲೇ ಕೆಲ ಭಾಗವನ್ನು ಬೆಕ್ಕುಗಳ ಆಹಾರ, ಆರೈಕೆಗಾಗಿ ಮೀಸಲಿಟ್ಟಿದ್ದಾಳೆ.

ಬೆಕ್ಕುಗಳು ಸಾಯಲು ಬಿಡಲಾರೆ: ತನ್ನ ಸಾಕುಪ್ರಾಣಿ ಬೆಕ್ಕುಗಳ ಕುರಿತು ಸಿಕ್ಕಾಪಟ್ಟೆ ಪ್ರೀತಿ ಹೊಂದಿರುವ ಯಾಸ್ಮೀನ್, ಸಂಗಾತಿಯಿಂದ (Partner) ದೊರೆಯುವ  69 ಪೌಂಡ್ ಹಣದಲ್ಲಿ ಸುಮಾರು 60 ಪೌಂಡ್ ಅನ್ನು ಬೆಕ್ಕುಗಳಿಗಾಗಿ ವೆಚ್ಚ ಮಾಡುತ್ತಾಳೆ. ಬೆಕ್ಕುಗಳ ಆಹಾರ, ಹಾಲು, ಇತ್ಯಾದಿ ಕಾರಣಕ್ಕೆ ಹಣ ವೆಚ್ಚವಾಗಿ, ಈಕೆಯ ಆಹಾರಕ್ಕೆ ಏನೆಂದರೆ ಏನೂ ಉಳಿಯುವುದಿಲ್ಲ. ಹೀಗಾಗಿ, ಈಕೆ ಕಳೆದ ಒಂದು ವರ್ಷದಿಂದ ವಾರಕ್ಕೆ ಒಮ್ಮೆ ಮಾತ್ರ ಆಹಾರ ಸೇವನೆ ಮಾಡುತ್ತಿದ್ದಾಳೆ. 

“ಬೆಕ್ಕುಗಳನ್ನು ಸಾಕಷ್ಟು ಹಣ (Money) ನೀಡಿ ಕೊಂಡುಕೊಂಡಿದ್ದೇನೆ. ಅವು ಆಹಾರವಿಲ್ಲದೆ ಸೊರಗುವುದನ್ನು ನೋಡಲಾರೆ. ಹೀಗಾಗಿ, ಅವುಗಳಿಗೆ ಪ್ರಥಮ ಆದ್ಯತೆ’ ಎನ್ನುತ್ತಾಳೆ. ಈಕೆಯ ಪತಿ (Husband) ಈ ಬಗ್ಗೆ ಇತ್ತೀಚೆಗೆ ಆತಂಕಿತರಾಗುತ್ತಿದ್ದಾರೆ. ಏಕೆಂದರೆ, ಕಳೆದೊಂದು ವರ್ಷದಿಂದ ವಾರಕ್ಕೊಮ್ಮೆ ಆಹಾರ ಸೇವಿಸುವುದು ಪದ್ಧತಿಯಾಗಿಬಿಟ್ಟಿದೆ. 2022ರಲ್ಲಿ ಈಕೆ ತನ್ನ ಉದ್ಯೋಗ (Job) ಬಿಟ್ಟಿದ್ದಾಳೆ. ಮೂಳೆಗಳನ್ನು ದುರ್ಬಲ ಮಾಡುವ ಆಸ್ಟಿಯೋಪೊರೊಸಿಸ್ ಪತ್ತೆಯಾದ ಬಳಿಕ ಈ ನಿರ್ಧಾರ ಮಾಡಿದ್ದಾಳೆ. 

Gold Investment: ಬರೀ ಚಿನ್ನ ಕೊಳ್ಳೋದಲ್ಲ, ಹೀಗೂ ಮಾಡಬಹುದು ಹೂಡಿಕೆ

31 ಕೆಜಿ ತೂಕ ಇಳಿಕೆ: “ಪ್ರತಿದಿನವೂ ಅಳುತ್ತೇನೆ. ಕೆಲವೊಮ್ಮೆ ಕುಸಿದು ಹೋಗುತ್ತೇನೆ. ಕೇವಲ ದ್ರವಾಹಾರದಿಂದ (Liquid Food) ನನ್ನನ್ನು ನಾನು ನೋಡಿಕೊಳ್ಳುತ್ತಿದ್ದೇನೆ. ಕಳೆದ ಒಂದು ವರ್ಷದಲ್ಲಿ 31 ಕೆಜಿ ತೂಕ ಕಳೆದುಕೊಂಡಿದ್ದೇನೆ. ಸಿಕ್ಕಾಪಟ್ಟೆ ಸೋತು ಹೋಗಿದ್ದೇನೆ. ವಾರಕ್ಕೊಮ್ಮೆ ಹಸಿರು ತರಕಾರಿ, ಸಲಾಡ್ ಸೇವನೆ ಮಾಡುವ ಯಾಸ್ಮಿನ್, ಬೆಕ್ಕುಗಳಿಗೆ ಮಾತ್ರ ಆಹಾರವಿಲ್ಲದಂತೆ ಮಾಡಿಲ್ಲ. ಈಕೆಯ ಪ್ರಾಣಿಪ್ರೇಮಕ್ಕೆ ಸಲಾಮ್ ಎನ್ನಲೇ ಬೇಕು.

click me!