19 ವರ್ಷದ ಯುವತಿಯೋರ್ವಳು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಅರೆ ಅದ್ರಲ್ಲೇನು ವಿಶೇಷ, ಟ್ವಿನ್ಸ್ ಯಾರಿಗೆ ಹುಟ್ಟೋದೆ ಇಲ್ವಾ ಅನ್ಬೇಡಿ. ಈ ಅವಳಿ ಮಕ್ಕಳ ಜನನದಲ್ಲಿದೆ ಒಂದು ಅಚ್ಚರಿಯ ವಿಚಾರವಿದೆ, ಅದೇನಂದ್ರೆ ಯುವತಿ ಜನ್ಮ ನೀಡಿದ ಅವಳಿ ಮಕ್ಕಳ ತಂದೆ ಒಬ್ಬರೇ ಅಲ್ಲ, ಬೇರೆ ಬೇರೆ.
ಅವಳಿ ಮಕ್ಕಳು ಹುಟ್ಟಿದ್ದೊಂದೇ ಆದರೆ ಸುದ್ದಿಯಾಗುತ್ತಿರಲಿಲ್ಲ. ಆದರೆ ಎರಡೂ ಮಕ್ಕಳ ತಂದೆ ಒಬ್ಬರೇ ಅಲ್ಲ, ಬೇರೆ ಬೇರೆ ಅನ್ನೋದು ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ. 19 ವರ್ಷದ ಯುವತಿಯೊಬ್ಬಳು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅದರೇ ಈ ಅವಳಿ ಮಕ್ಕಳಿಗೆ ತಂದೆಯಂದಿರು ಬೇರೆ ಬೇರೆ. ಅದು ಹೇಗೆ ಎಂದು ಆಶ್ಚರ್ಯಕರವಾಗುವುದು ಸಹಜ. ಇಂತಹ ವಿರಳ ಪ್ರಸಂಗ ಹೆಟೆರೊಪಟರ್ನಲ್ ಸೂಪರ್‌ಫೆಕಂಡೇಶನ್ (Heteropaternal Superfecundation) ಎಂದು ಕರೆಯಲಾಗುತ್ತದೆ. ಒಂದೇ ದಿನದಲ್ಲಿ ಇಬ್ಬರು ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದರಿಂದ ಹೀಗೆ ಬೇರೆ ಬೇರೆ ವ್ಯಕ್ತಿಗಳಿಂದ ಒಟ್ಟಿಗೆ ಅವಳಿ ಮಕ್ಕಳು ಹುಟ್ಟಿದ್ದಾರೆ. ಈ ಯುವತಿಯ ಗರ್ಭಧಾರಣೆಯು ಒಂದು ಮಿಲಿಯನ್ ನಲ್ಲಿ ಒಂದು ಮಾತ್ರ ಎಂಬುದಾಗಿ ವೈದ್ಯರು ಹೇಳಿದ್ದಾರೆ.
ಋತುಚಕ್ರದ ಸಮಯದಲ್ಲಿ ಒಂದೇ ದಿನ ಇಬ್ಬರು ವ್ಯಕ್ತಿಗಳ ಜೊತೆ ಲೈಂಗಿಕ ಕ್ರಿಯೆ ನಡೆಸಿದ ಕಾರಣ ಈ ವಿರಳ ವಿದ್ಯಮಾನ ಘಟಿಸಿದೆ ಎಂದು ಎಂದು ಜರ್ನಲ್ ಬಯೋಮೆಡಿಕಾ ತಿಳಿಸಿದೆ. ಮಕ್ಕಳು (Children) ಹುಟ್ಟಿದಾಗ ಈ ವಿಷಯ ತಿಳಿದಿರಲಿಲ್ಲ. ಅವರ ಮೊದಲ ಹುಟ್ಟುಹಬ್ಬದ ಸಮಯದಲ್ಲಿ ತಾಯಿಗೆ (Mother) ಈ ಮಕ್ಕಳ ತಂದೆ ಯಾರು ಎಂದು ನೋಡುವ ಹಂಬಲವಾಗಿದೆ. ಆದ್ದರಿಂದ ಡಿಎನ್ಎ ಪರೀಕ್ಷೆ ಮಾಡಲಾಗಿದೆ. ಆದರೆ ವೈದ್ಯರಿಗೇ ಅಚ್ಚರಿ ಎನ್ನುವಂತೆ ಇಬ್ಬರು ಮಕ್ಕಳ ಡಿಎನ್ಎ ಪರೀಕ್ಷೆ ಬೇರೆ ಬೇರೆ ರೀತಿ ಬಂದಿದೆ.
3 ವರ್ಷದ ಸಯಾಮಿ ಬಾಲಕರ ಯಶಸ್ವಿಯಾಗಿ ಬೇರ್ಪಡಿಸಿದ ವೈದ್ಯರು: 27 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆ
ಪಿತೃತ್ವ ಪರೀಕ್ಷೆಯಲ್ಲಿ ಅಚ್ಚರಿಯ ಸಂಗತಿ ಬಹಿರಂಗ
ಒಂದೇ ದಿನದಲ್ಲಿ ಇಬ್ಬರು ಪುರುಷ (Men)ರೊಂದಿಗೆ ಲೈಂಗಿಕ ಸಂಪರ್ಕ (Sex)ದಲ್ಲಿ ತೊಡಗಿದ್ದರಿಂದ ಅಪರೂಪದ ವಿದ್ಯಮಾನ ಸಂಭವಿಸಿದೆ. ಹೀಗೆ ಒಂದೇ ದಿನದಲ್ಲಿ ಇಬ್ಬರು ಪುರುಷರೊಂದಿಗೆ ಲೈಂಗಿಕ ಸಂಪರ್ಕದಲ್ಲಿ ತೊಡಗಿದ ಒಂಬತ್ತು ತಿಂಗಳ ನಂತರ ಈ ಯುವತಿ ಅವಳಿ ಮಕ್ಕಳಿಗೆ (Twins) ಜನ್ಮ ನೀಡಿದ್ದಾರೆ. ಮಕ್ಕಳ ಮೊದಲ ಹುಟ್ಟುಹಬ್ಬದಂದು ಪಿತೃತ್ವ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಆದರೆ ಈ ಮಹಿಳೆ ಲೈಂಗಿಕ ಸಂಪರ್ಕ ಬೆಳೆಸಿದ ಓರ್ವ ಪುರುಷನ ಜೊತೆ ಒಂದು ಮಗುವಿನ ಡಿಎನ್ಎ ಹೊಂದಿಕೆಯಾಗಿಲ್ಲ.
ಒಂದೇ ದಿನ ಇಬ್ಬರು ಪುರುಷರ ಜೊತೆ ಸಂಬಂಧ ಇಟ್ಟುಕೊಂಡಿದ್ದ ಯುವತಿ
ಆಗಲೇ ಈ ಮಹಿಳೆಗೆ ತಾನು ಅದೇ ದಿನ ಇನ್ನೋರ್ವ ಪುರುಷನ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದು ನೆನಪಾಗಿದೆ. ಆ ವ್ಯಕ್ತಿಯ ಜೊತೆ ಮಗುವಿನ ಡಿಎನ್ಎ ಪರೀಕ್ಷೆ ನಡೆಸಿದಾಗ ಫಲಿತಾಂಶ ಮ್ಯಾಚ್ ಆಗಿದೆ. ಎರಡೂ ಮಕ್ಕಳಲ್ಲೂ ತುಂಬಾ ಹೋಲಿಕೆ ಇದ್ದು ತನಗೂ ಆಶ್ಚರ್ಯವಾಗಿದೆ ಎಂದು ಯುವತಿ ತಿಳಿಸಿದ್ದಾರೆ. ಈ ಪ್ರಕರಣ ಅತ್ಯಂತ ಅಪರೂಪವಾಗಿದ್ದು, ಪ್ರಪಂಚದಲ್ಲಿ ಕೇವಲ 20 ಹೆಟೆರೊಪರೆಂಟಲ್ ಸೂಪರ್ ಫೆಕಂಡೇಶನ್ ಪ್ರಕರಣಗಳಿವೆ ಎಂದು ವರದಿಯಾಗಿದೆ.
ಗರ್ಭಿಣಿಯಾಗಿದ್ದಾಗಲೇ ಮತ್ತೊಮ್ಮೆ ಗರ್ಭಿಣಿಯಾದ ಮಹಿಳೆ ! ಅರೆ ಇದು ಹೇಗೆ ಸಾಧ್ಯ?
ವಿಭಿನ್ನ ಚರ್ಮದ ಬಣ್ಣದ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ
ಮಹಿಳೆ ಸಂಪೂರ್ಣವಾಗಿ ವಿಭಿನ್ನ ಚರ್ಮದ ಬಣ್ಣದ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇದು ಮಿಲಿಯನ್‌ನಲ್ಲಿ ಒಂದು ಅಪರೂಪದ ಪ್ರಕರಣವಾಗಿದೆ ಎಂದು ತಿಳಿದುಬಂದಿದೆ. 29 ವರ್ಷದ ಚಾಂಟೆಲ್ಲೆ ಬ್ರೌಟನ್ ಏಪ್ರಿಲ್‌ನಲ್ಲಿ ಅಯೋನ್ ಮತ್ತು ಅಜಿರಾ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆಕೆಯ ಮಗ ಅಯೋನ್ ತೆಳ್ಳಗಿನ ಚರ್ಮದ ಟೋನ್ ಮತ್ತು ಹಸಿರು ಕಣ್ಣುಗಳೊಂದಿಗೆ ಜನಿಸಿದರೆ, ಅವಳ ಮಗಳು ಅಜಿರಾ ಗಾಢವಾದ ಚರ್ಮದ ಮೈಬಣ್ಣ ಮತ್ತು ಕಂದು ಕಣ್ಣುಗಳನ್ನು ಹೊಂದಿದ್ದಾರೆ.
ಹುಟ್ಟಿದಾಗ ಅವಳಿಗಳು ಪರಸ್ಪರ ಭಿನ್ನವಾಗಿ ಕಾಣಲಿಲ್ಲ ಎಂದು ತಾಯಿ ಚಾಂಟೆಲ್ಲೆ ಹೇಳಿದರು, ಆದರೆ, ಸಮಯ ಕಳೆದಂತೆ, ಅಜೀರಾ ಅವರ ಚರ್ಮದ ಬಣ್ಣವು ಕಪ್ಪು ಮತ್ತು ಗಾಢವಾಗಲು ಪ್ರಾರಂಭಿಸಿತು ಎಂದು ತಿಳಿಸಿದ್ದಾರೆ. ಮಗಳು ಬಿಳಿಯಾಗಿ ಕಾಣುತ್ತಾಳೆ. ಯಾಕೆಂದರೆ ಅಜ್ಜ ನೈಜೀರಿಯನ್ ಆಗಿದ್ದರಿಂದ ಮಿಶ್ರ ಜನಾಂಗದವಳು ಎಂದು ಚಾಂಟೆಲ್ಲೆ ಹೇಳಿದರು. ಅವಳ ಸಂಗಾತಿ ಆಶ್ಟನ್, 29, ಅರ್ಧ ಜಮೈಕಾ, ಅರ್ಧ ಸ್ಕಾಟಿಷ್ ಎಂದು ತಿಳಿದುಬಂದಿದೆ. ಸಂಪೂರ್ಣವಾಗಿ ವಿಭಿನ್ನ ಚರ್ಮದ ಬಣ್ಣಗಳನ್ನು ಹೊಂದಿರುವ ಅವಳಿಗಳ ಜನನವು ಮಿಲಿಯನ್‌ಗೆ ಒಂದು ಎಂದು ತಜ್ಞರು ಅಂದಾಜಿಸಿದ್ದಾರೆ.