Work from Home: Laptop ಸ್ಪೀಡ್ ಕಡಿಮೆಯಾದ್ರೆ ಟೆನ್ಷನ್ ಬೇಡ, ಇಲ್ಲಿವೆ ಟಿಪ್ಸ್

Published : Sep 07, 2022, 05:30 PM IST
Work from Home: Laptop ಸ್ಪೀಡ್ ಕಡಿಮೆಯಾದ್ರೆ ಟೆನ್ಷನ್ ಬೇಡ, ಇಲ್ಲಿವೆ ಟಿಪ್ಸ್

ಸಾರಾಂಶ

ಒಂದೇ ಸ್ಪೀಡ್ ನಲ್ಲಿ ಕೆಲಸ ನಡೆಯುತ್ತಿರುತ್ತದೆ. ಏಕಾಏಕಿ ಲ್ಯಾಪ್ ಟಾಪ್ ಹ್ಯಾಂಗ್ ಆಗುತ್ತೆ. ಏನ್ ಮಾಡ್ಬೇಕು ಗೊತ್ತಾಗೋದಿಲ್ಲ. ಕೆಲಸ ಸರಿಯಾದ ಸಮಯಕ್ಕೆ ಆಗಲ್ಲ ಎಂಬ ಟೆನ್ಷನ್ ಬೇರೆ ಇರುತ್ತೆ. ಆ ಸಂದರ್ಭದಲ್ಲಿ ಕೆಲ ಟ್ರಿಕ್ಸ್  ಬಳಸಿ ಲ್ಯಾಪ್ ಟಾಪ್ ಸರಿ ಮಾಡ್ಬಹುದು.  

ಇತ್ತೀಚಿನ ದಿನಗಳಲ್ಲಿ ವರ್ಕ್ ಫ್ರಂ ಹೋಮ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಮನೆಯಲ್ಲೇ ಕೆಲಸ ಮಾಡುವ ಬಹುತೇಕರು ಲ್ಯಾಪ್ ಟಾಪ್ ಬಳಕೆ ಮಾಡ್ತಾರೆ. ಇಡೀ ದಿನ ಲ್ಯಾಪ್ ಟಾಪ್ ಬಳಕೆ ಮಾಡೋದ್ರಿಂದ ಲ್ಯಾಪ್ ಟಾಪ್ ವೇಗ ನಿಧಾನವಾಗುತ್ತದೆ. ಇದ್ರಿಂದ ಕೆಲಸ ನಿಧಾನವಾಗುತ್ತದೆ. ನಾವು ಹೇಳಿದಂತೆ ಲ್ಯಾಪ್ ಟಾಪ್ ಕೇಳ್ತಿಲ್ಲ, ನಿಧಾನವಾಗಿದೆ ಎಂದಾಗ ಕಿರಿಕಿರಿಯಾಗುತ್ತದೆ. ಅನೇಕ ಮಹಿಳೆಯರಿಗೆ ಅದನ್ನು ಸರಿಮಾಡಿಕೊಳ್ಳುವ ವಿಧಾನ ತಿಳಿದಿರೋದಿಲ್ಲ. ಪ್ರತಿ ಬಾರಿ ಪುರುಷರ ಸಹಾಯ ಪಡೆಯಬೇಕು ಎನ್ನುವವರಿದ್ದಾರೆ. ಅಂತವರು ಸುಲಭವಾಗಿ ಲ್ಯಾಪ್ ಟಾಪ್ ಸ್ಪೀಡ್ ಜಾಸ್ತಿ ಮಾಡಿಕೊಳ್ಳಬಹುದು. ಅದನ್ನು ಹೇಗೆ ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.

ಲ್ಯಾಪ್ ಟಾಪ್ (Laptop) ಸ್ಪೀಡ್ ಹೆಚ್ಚು ಮಾಡಲು ಈ ವಿಧಾನ ಅನುಸರಿಸಿ :

ಬ್ರೌಸರ್ (Browser) ಹಿಸ್ಟರಿ ಕ್ಲೀನ್ ಮಾಡಿ : ಲ್ಯಾಪ್ ಟಾಪ್ ನಲ್ಲಿ ಇಂಟರ್ನೆಟ್ ಬಳಕೆ ಮಾಡುವಾಗ ಅನೇಕ ವಿಷ್ಯಗಳನ್ನು ನಾವು ನೋಡಿರ್ತೇವೆ. ಆದ್ರೆ ಅದ್ರ ಹಿಸ್ಟರಿ ಕ್ಲೀನ್ ಮಾಡಿರೋದಿಲ್ಲ. ದಿನಕ್ಕೆ ನೂರಾರು ಸೈಟ್ ವೀಕ್ಷಣೆ ಮಾಡುವವರಿದ್ದಾರೆ. ಈ ಎಲ್ಲವೂ ಸೆಟ್ಟಿಂಗ್ ಹಿಸ್ಟರಿಯಲ್ಲಿ ಹೋಗಿರುತ್ತದೆ. ಈ ಹಿಸ್ಟರಿ ಕ್ಲೀನ್ ಮಾಡುವುದು ಬಹಳ ಮುಖ್ಯ. ಲ್ಯಾಪ್ ಟಾಪ್ ಸ್ಲೋ ಆಗಿದೆ ಎನ್ನಿಸಿದ್ರೆ ಮೊದಲು ಇಂಟರ್ನೆಟ್ ಟ್ಯಾಬ್ ನ ಹಿಸ್ಟರಿ ಕ್ಲೀನ್ ಮಾಡಿ. ಗೂಗಲ್ ಗೆ ಹೋಗಿ ನ್ಯೂ ಟ್ಯಾಬ್ ಓಪನ್ ಮಾಡಿ. ಕೊನೆಯಲ್ಲಿ ಮೂರು ಚುಕ್ಕಿ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದಾಗ ಹಿಸ್ಟರಿ ಕಾಣಿಸುತ್ತದೆ. ಅಲ್ಲಿ ಮತ್ತೊಂದು ಲಿಂಕ್ ಕಾಣಿಸುತ್ತದೆ. ಅಲ್ಲಿ ಹಿಸ್ಟರಿ ಮೇಲೆ ಕ್ಲಿಕ್ ಮಾಡ್ಬೇಕು. ಹಿಸ್ಟರಿಯಲ್ಲಿ ನಿಮಗೆ ಕ್ಲಿಯರ್ ಬ್ರೌಸಿಂಗ್ ಡೇಟಾ ಕಾಣಿಸುತ್ತದೆ. ಅದ್ರ ಮೇಲೆ ಕ್ಲಿಕ್ ಮಾಡಿ, ಎಷ್ಟು ದಿನದ ಬ್ರೌಸಿಂಗ್ ಡೇಟಾ ಡಿಲಿಟ್ ಆಗ್ಬೇಕೆಂದು ನೀವು ಕ್ಲಿಕದ ಮಾಡಿದ್ರೆ ಅದು ಡಿಲಿಟ್ ಆಗುವ ಜೊತೆಗೆ ಲ್ಯಾಪ್ ಟಾಪ್ ಸ್ಪೀಡ್ ಹೆಚ್ಚಾಗುತ್ತದೆ. 

ಬ್ರೌಸರ್ ಟ್ಯಾಬ್ (Browser Tab) ಬಗ್ಗೆ ಗಮನವಿರಲಿ : ಬ್ರೌಸರ್‌ನಲ್ಲಿ ಎಲ್ಲಾ ಟ್ಯಾಬ್‌ಗಳನ್ನು ಓಪನ್ ಮಾಡಿದಾಗ ಲ್ಯಾಪ್‌ಟಾಪ್‌ನ ರ್ಯಾಮ್ ಮತ್ತು ಪ್ರೊಸೆಸರ್‌ನಲ್ಲಿ ಸಾಕಷ್ಟು ಲೋಡ್ ಆಗುತ್ತದೆ. ಇದರಿಂದಾಗಿ ಲ್ಯಾಪ್‌ಟಾಪ್‌ನ ವೇಗವು ನಿಧಾನವಾಗುತ್ತದೆ. ಹಾಗಾಗಿ ಯಾವುದೇ ಪ್ರಯೋಜನವಿಲ್ಲದ ಟ್ಯಾಬ್‌ಗಳನ್ನು ಸುಮ್ಮನೆ ಓಪನ್ ಮಾಡಿಡಬೇಡಿ. ಅವಶ್ಯಕತೆ ಇಲ್ಲ ಎಂದಾದ್ರೆ ಟ್ಯಾಬ್ ಮುಚ್ಚಿ. 

ನೆನಪಿಡಿ, ಇವುಗಳ ಮೇಲೆ ಹಣ ಹೂಡುವುದು ಇನ್ವೆಸ್ಟ್‌ಮೆಂಟ್ ಅಲ್ಲ!

ರಿಸೈಕಲ್ ಬಿನ್ (Recycle Bin) ಖಾಲಿ ಮಾಡಿ : ಡಿಲಿಟ್ ಮಾಡಿದ ಫೈಲ್ ಗಳು ರಿಸೈಕಲ್ ಬಿನ್ ನ ಸಾಕಷ್ಟು ಜಾಗವನ್ನು ತೆಗೆದುಕೊಳ್ಳುತ್ತದೆ. ಹಾಗಾಗಿ ನೀವು ಲ್ಯಾಪ್ ಟಾಪ್ ನಲ್ಲಿರುವ ಬೇಡದ ವಿಷ್ಯಗಳನ್ನು ಡಿಲಿಟ್ ಮಾಡಿದ್ರೆ ಸಾಕಾಗುವುದಿಲ್ಲ. ರಿಸೈಕಲ್ ಬಿನ್ ನಲ್ಲಿರುವ ಡಿಲಿಟ್ ಫೈಲ್ ಕೂಡ ಡಿಲಿಟ್ ಮಾಡ್ಬೇಕು. ರಿಸೈಕಲ್ ಬಿನ್ ಖಾಲಿಯಾದ್ರೆ  ಲ್ಯಾಪ್‌ಟಾಪ್ ಹ್ಯಾಂಗ್ ಆಗುವುದಿಲ್ಲ. ಸುಲಭವಾಗಿ ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡಬಹುದಾಗಿದೆ.  

ಕೆಲವು ಪ್ರೋಗ್ರಾಂಗಳನ್ನು ಅನ್ ಇನ್ಸ್ಟಾಲ್ (Uninstall) ಮಾಡಿ : ಲ್ಯಾಪ್‌ಟಾಪ್‌ನಲ್ಲಿ ನೀವು ಬಳಸದ ಕೆಲವು ಪ್ರೋಗ್ರಾಂಗಳಿರುತ್ತವೆ. ಅವು ನಿಮ್ಮ ಲ್ಯಾಪ್ ಟಾಪ್ ಸ್ಪೀಡ್ ಕಡಿಮೆ ಮಾಡುತ್ತವೆ. ಹಾಗಾಗಿ ಈ ಪ್ರೋಗ್ರಾಂಗಳನ್ನು ಅನ್ ಇನ್ಸ್ಟಾಲ್ ಮಾಡಿ. ಇದ್ರಿಂದ ಲ್ಯಾಪ್ ಟಾಪ್ ನಲ್ಲಿ ಸ್ಪೇಸ್ ಜಾಸ್ತಿಯಾಗುವ ಜೊತೆಗೆ ಸ್ಪೀಡ್ ಹೆಚ್ಚಾಗುತ್ತದೆ.

ಇದ್ರ ಬಳಕೆ ಕಡಿಮೆ ಮಾಡಿ : ಕೆಲಸ ಮಾಡುವಾಗ ಫ್ರೋರ್ ಗ್ರೌಂಡ್ ಹಾಗೂ ಬ್ಯಾಗ್ ಗ್ರೌಂಡ್ ನಲ್ಲಿ ಕೆಲ ಪ್ರೋಗ್ರಾಂ ಚಾಲನೆಯಲ್ಲಿರುತ್ತದೆ. ಇವುಗಳಲ್ಲಿ ಹೆಚ್ಚಿನವು ಯಾವುದೇ ಪ್ರಯೋಜನ ಹೊಂದಿಲ್ಲ.  ಇದ್ರಿಂದ ಲ್ಯಾಪ್ ಟಾಪ್ ಸ್ಪೀಡ್ ಕಡಿಮೆಯಾಗುತ್ತದೆ. ಹಾಗಾಗಿ ಅವುಗಳನ್ನು ಆನ್ ಮಾಡ್ಬೇಡಿ. 

ಕೂತಲ್ಲೇ ಕೂತು ಕೆಲಸ ಮಾಡೋರು ಗಮನಿಸಲೇ ಬೇಕಾದ ವಿಷ್ಯಗಳಿವು!

ರಿಸ್ಟಾರ್ಟ್ ಮಾಡಿ : ಲ್ಯಾಪ್ ಟಾಪ್ ಸ್ಲೋ ಆಗಿದೆ ಎನ್ನುವ ಸಂದರ್ಭದಲ್ಲಿ ನೀವು ಲ್ಯಾಪ್ ಟಾಪ್ ರಿಸ್ಟಾರ್ಟ್ ಮಾಡ್ಬಹುದು. ಇದು ತಾತ್ಕಾಲಿಕ ಮೆಮೊರಿಯನ್ನು ತೆರವುಗೊಳಿಸುತ್ತದೆ ಮತ್ತು ನಿಮ್ಮ ಲ್ಯಾಪ್‌ಟಾಪ್‌ಗೆ ಹೊಸ ಪ್ರಾರಂಭವನ್ನು ನೀಡುತ್ತದೆ. 

 


 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಾವ್ಯಾರಿಗೂ ಕಮ್ಮಿ ಇಲ್ಲ ಬ್ರೋ... ಆಹಾ ಭಾರತೀಯ ನಾರಿ ಕುಡಿದು ರಾಪಿಡೋ ಏರಿ ಬಿದ್ದಳು ಕೆಳಗೆ ಜಾರಿ: ವೀಡಿಯೋ
ಸಾವಿರ ಕೋಟಿ ಕುಬೇರ 'ಮಹಾಪುರುಷ'ನಿಗೆ ಡಿವೋರ್ಸ್ ಕೊಡ್ತಾರಾ ಈ ನಟಿ? ಇದೆಂಥ ಶಾಕಿಂಗ್ ಮ್ಯಾಟರ್!