*ಸಾಂಪ್ರದಾಯಿಕ ಮಾಧ್ಯಮಗಳಿಗಿರುವಂತೆ ಡಿಜಿಟಲ್ ಮಾಧ್ಯಮಗಳಿಗೂ ಕಾನೂನಿನ ಚೌಕಟ್ಟು
*ಮಾಧ್ಯಮದಲ್ಲಿ ಸುಧಾರಣೆ ತರಲು ಅಗತ್ಯ ಮಾರ್ಪಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ
*ನೋಂದಣಿ ಸೇರಿದಂತೆ ಅನೇಕ ಪ್ರಕ್ರಿಯೆಗಳನ್ನು ಸರಳಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ
ಡಿಜಿಟಲ್ ಮಾಧ್ಯಮವನ್ನು (Digital Media) ನಿಯಂತ್ರಿಸಲು ಸರ್ಕಾರವು ಮಸೂದೆಯನ್ನು (Bill) ರಚಿಸುತ್ತಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ (Anurag Thakur) ಘೋಷಿಸಿದ್ದಾರೆ. ಸುದ್ದಿ ಪ್ರಸಾರವು ಹಿಂದೆ ಏಕಮುಖಿಯಾಗಿತ್ತು. ಆದರೆ ಈಗ ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮಗಳ ಬೆಳವಣಿಗೆಯಿಂದಾಗಿ ಬಹು ಆಯಾಮಗಳನ್ನು ಒಳಗೊಂಡಂತೆ ವಿಕಸನಗೊಂಡಿದೆ ಎಂದು ಅವರು ಪ್ರತಿಪಾದಿಸಿದರು. ಹಳ್ಳಿಯ ಸ್ಥಳೀಯ ಸುದ್ದಿಗಳು ಸಹ ಈಗ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರವಾಗಬಹುದು. ಈ ವ್ಯಾಪಕತೆಯನ್ನು ಸೃಷ್ಟಿಸಿಕೊಟ್ಟಿರುವ ಡಿಜಿಟಲ್ ಮಾಧ್ಯಮಗಳಿಗೆ ಧನ್ಯವಾದ ಹೇಳಬೇಕು ಸಚಿವ ಅನುರಾಗ್ ಠಾಕೂರ್ ಅವರು ಹೇಳಿದರು. ಹೆಚ್ಚಿನ ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮಗಳು ಸ್ವಯಂ ನಿಯಂತ್ರಣಕ್ಕೆ ಒಳಪಟ್ಟಿವೆ ಎಂದು ಅವರು ಹೇಳುತ್ತಾರೆ.
ಭಾರತದಲ್ಲಿ ಕಳೆದ ಒಂದು ಒಂದೆರಡು ದಶಕದಲ್ಲಿ ಡಿಜಿಟಲ್ ಮಾಧ್ಯಮಗಳು ಬಹಳ ವೇಗವಾಗಿ ಪ್ರವರ್ಧಮಾನಕ್ಕೆ ಬಂದಿವೆ. ಆದರೆ, ಸಾಂಪ್ರದಾಯಿಕ ಮಾಧ್ಯಮಗಳಿಗೆ ಇರುವಂತೆ ನಿಯಂತ್ರಣ, ಕಾನೂನಿನ ಚೌಕಟ್ಟುಗಳು ಈ ಡಿಜಿಟಲ್ ಮಾಧ್ಯಮಗಳಿಗೆ ಇಲ್ಲ. ಸ್ವಯಂ ನಿಯಂತ್ರಣ ಕೂಡ ಪರಿಣಾಮಕಾರಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಡಿಜಿಟಲ್ ಮಾಧ್ಯಮಗಳನ್ನು ನಿಯಮಗಳ ಚೌಕಟ್ಟಿನೊಳಗೇ ತರಬೇಕೆಂಬ ಬೇಡಿ ಇದೆ. ಜತಗೇ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ ಮಾಡುವ ಪತ್ರಕರ್ತರನ್ನು ಗುರುತಿಸುವ ಕೆಲಸವಾಗಬೇಕೆಂಬ ಕೂಗು ಮೊದಲಿನಿಂದಲೂ ಇದೆ. ಈ ಹಿನ್ನೆಲೆಯಲ್ಲಿ ಸಚಿವ ಅನುರಾಗ್ ಠಾಕೂರ್ ಅವರು ಹೇಳಿರುವ ಮಾತುಗಳು ಮಹತ್ವ ಪಡೆದುಕೊಂಡಿವೆ.
WhatsApp ವೆಬ್ ಬಳಕೆದಾರರಿಗಾಗಿ ಸ್ಕ್ರೀನ್ ಲಾಕ್ ಫೀಚರ್
undefined
ಸಾಂಪ್ರದಾಯಿಕ ಮಾಧ್ಯಮಗಳಂತೆ (Traditional Media) ಡಿಜಿಟಲ್ ಮಾಧ್ಯಮಗಳಿಂದ (Digital Media) ಪ್ರಯೋಜನಗಳು ಮತ್ತು ನಷ್ಟಗಳು ಇದ್ದೇ ಇವೆ. ನಾವುಗಳನ್ನು ಸರಿಯಾದದ್ದನ್ನು ಆಯ್ದುಕೊಳ್ಳಬೇಕು. ಆದರೆ, ಇಂದಿನ ದಿನಗಳಲ್ಲಿ ಡಿಜಿಟಲ್ ಮಾಧ್ಯಮಗಳಲ್ಲಿ ನಕಾರಾತ್ಮಕ ಸುದ್ದಿಗಳು ಬಹಳ ಬೇಗ ಮನ್ನಣೆ ಪಡೆದುಕೊಳ್ಳುತ್ತಿವೆ ಎಂದು ಅವರು ಪ್ರತಿಪಾದಿಸಿದರು. ಡಿಜಿಟಲ್ ಮಾಧ್ಯಮಕ್ಕೆ ಸಂಬಂಧಿಸಿದಂತೆ ಸೂಕ್ಷ್ಮ ಸಮತೋಲನವನ್ನು ಕಾಯ್ದುಕೊಳ್ಳಲು ಏನು ಮಾಡಬಹುದು ಎಂಬುದನ್ನು ಕೇಂದ್ರ ಸರ್ಕಾರವು ಅಧ್ಯಯನ ಮಾಡುತ್ತಿದೆ. ನಿಮ್ಮ ಕೆಲಸವನ್ನು ಸರಳ ಮತ್ತು ಸರಳವಾಗಿಸಲು, ಶಾಸನಕ್ಕೆ ಹೊಂದಾಣಿಕೆಗಳನ್ನು ಮಾಡಬೇಕು ಮತ್ತು ನಾವು ಅದನ್ನು ಮಾಡುತ್ತೇವೆ ಎಂದು ನಾನು ಸಲಹೆ ನೀಡುತ್ತೇನೆ. ಈ ನಿಟ್ಟಿನಲ್ಲಿ ನಾವು ಒಂದಿಷ್ಟು ನಿಯಮಗಳನ್ನು ರೂಪಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಕೇಂದ್ರ ವಾರ್ತಾ ಮಾಹಿತಿ ಪ್ರಸಾರ ಇಲಾಖೆಯ ಸಚಿವರು ತಿಳಿಸಿದರು.
ಇದರ ಜೊತೆಗೆ, 1867 ರ ಪ್ರೆಸ್ ಮತ್ತು ರಿಜಿಸ್ಟ್ರೇಶನ್ ಆಫ್ ಬುಕ್ಸ್ ಆಕ್ಟ್ (Press and Registration of Books Act) ಬದಲಿಗೆ ಕೇಂದ್ರ ಸರ್ಕಾರವು ಶೀಘ್ರದಲ್ಲೇ ಹೊಸ ಕಾನೂನನ್ನು ಪರಿಚಯಿಸಲಿದೆ ಮತ್ತು ಪತ್ರಿಕೆಗಳ ನೋಂದಣಿ (Registration Method) ವಿಧಾನವನ್ನು ಸುವ್ಯವಸ್ಥಿತಗೊಳಿಸಲಾಗುವುದು ಎಂದು ಠಾಕೂರ್ ಅವರು ಘೋಷಿಸಿದರು. ಹೊಸ ಕಾನೂನಿನ ಪ್ರಕಾರ, ಈಗ ನಾಲ್ಕು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವ ನೋಂದಣಿ ಪ್ರಕ್ರಿಯೆಯು ಆನ್‌ಲೈನ್ ಮೋಡ್ ಮೂಲಕ ಒಂದು ವಾರದಲ್ಲಿ ಪೂರ್ಣಗೊಳ್ಳಬಹುದು.
ಮುಂದಿನ ವರ್ಷಕ್ಕೆ iPhone 15, ಈ ಸಂಗತಿಗಳು ತಿಳಿದಿದೆಯಾ?
ಹೆಚ್ಚುವರಿಯಾಗಿ, ಅವರು ತಮ್ಮ ಕರ್ತವ್ಯಗಳನ್ನು 'ಜವಾಬ್ದಾರಿಯಿಂದ' ನಿರ್ವಹಿಸಲು ಮತ್ತು 'ಭಯ ಮತ್ತು ಅನಿಶ್ಚಿತತೆಯನ್ನು' ಹರಡುವುದನ್ನು ತಡೆಯಲು ಮಾಧ್ಯಮಗಳು ಮುಂದಾಗಬೇಕೆಂದು ಅನುರಾಗ್ ಠಾಕೂರ್ ಅವರು ಇದೇ ವೇಳೆ ತಿಳಿಸಿದರು. ಸರಕಾರದ ಲೋಪದೋಷಗಳ ಜತೆಗೆ ಜನಕಲ್ಯಾಣ ಯೋಜನೆಗಳು ಹಾಗೂ ಸರಕಾರದ ನೀತಿಗಳು ಜನಸಾಮಾನ್ಯರಿಗೆ ತಲುಪಬೇಕು ಎಂದರು. ಸಮಾರಂಭದಲ್ಲಿ ಕೇಂದ್ರವು ಅವರ ಹಿತಾಸಕ್ತಿಗಳನ್ನು ನೋಡಿಕೊಳ್ಳುತ್ತದೆ ಎಂದು ಪತ್ರಕರ್ತರಿಗೆ ಧೈರ್ಯ ತುಂಬುವ ಸಂದರ್ಭದಲ್ಲಿ ಕೋವಿಡ್‌ನಿಂದ ನಿಧನರಾದ ಪತ್ರಕರ್ತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಯಿತು ಎಂದು ಸಚಿವರು ಪ್ರಸ್ತಾಪಿಸಿದರು.