ತಾಲಿಬಾನ್‌ಗೆ ಎಲ್ಲಿಂದಲೂ ಸಿಕ್ತಿಲ್ಲ ಆರ್ಥಿಕ ಸಹಾಯ, ನೆರವಿಗೆ ನಿಂತ ಚೀನಾ

Oct 4, 2021, 4:49 PM IST

ಕಾಬೂಲ್ (ಅ.04): ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿ ಶುರುವಾದಾಗಿನಿಂದ ಅಲ್ಲಿನ ನಾಗರೀಕರ ಸ್ಥಿತಿ ಹೇಳತೀರದಂತಾಗಿದೆ. ಬಡತನ, ಹಸಿವಿನಿಂದ ಜನ ತತ್ತರಿಸಿ ಹೋಗಿದ್ದಾರೆ. ಇನ್ನು ತಾಲಿಬಾನ್ ಆರ್ಥಿಕತೆ ನೆಲ ಕಚ್ಚಿದೆ. ಸರ್ಕಾರದ ಬೊಕ್ಕಸದಲ್ಲಿ ಆದಾಯವಿಲ್ಲದಂತಾಗಿದೆ. 

ಮಹಿಳಾ ಕಾನೂನು ಹೇಗಿರಬೇಕು? ಕತಾರ್ ನೋಡಿ ಕಲಿಯಿರಿ: ತಾಲಿಬಾನ್‌ಗೆ ಕ್ಲಾಸ್!

ಅಫ್ಘಾನಿಸ್ತಾನ್ ಸೆಂಟ್ರಲ್ ಬ್ಯಾಂಕ್‌ನ 74.26 ಸಾವಿರ ಕೋಟಿ ವಿದೇಶಿ ರಿಸರ್ವ್ ಹಣವನ್ನು ಅಮೆರಿಕಾ ಫ್ರೀಜ್ ಮಾಡಿದೆ. ಅಫ್ಘನ್ ಪರಿಸ್ಥಿತಿ ನೋಡಿಯೂ ವಿಶ್ವಬ್ಯಾಂಕ್ ಆರ್ಥಿಕ ಸಹಾಯ ಮಾಡದಿರಲು ನಿರ್ಧರಿಸಿದೆ. ನಾಟೋ ಒಟಾನ್ ಸಹ ಅಫ್ಘನ್‌ಗೆ ಮಾಡಲಾಗುವ ಆರ್ಥಿಕ ಸಹಾಯಕ್ಕೆ ಬ್ರೇಕ್ ಹಾಕಿದೆ.