Viral Video: ಸಾಗುವ ವಾಹನಗಳನ್ನು ಎಳೆದೆಳೆದು ಬೀಳಿಸುವ ವಿಚಿತ್ರ ರಸ್ತೆ!

Jul 9, 2022, 4:41 PM IST

Viral Video: ಕೆಲವೊಮ್ಮೆ ಸಾಕಷ್ಟು ಜಾಗರೂಕತೆಯಿಂದ ವಾಹನ ಚಲಾಯಿಸಿದರೂ ಆಪತ್ತು ಒಕ್ಕರಿಸಿಕೊಂಡುಬಿಡುತ್ತೆ. ಅದೆಷ್ಟೋ ವೇಳೆ ವಾಹನಗಳು ಸ್ಕಿಡ್‌ ಆಗಿ ಬಿದ್ದು ಅಪಘಾತಗಳು (Accidents) ಸಂಭವಿಸುತ್ತವೆ. ಆದರೆ ಇಲ್ಲೊಂದು ಕಡೆ ವಿಚಿತ್ರವಾದ ರಸ್ತೆಯಿದ್ದು, ಇಲ್ಲಿ ಸಾಗುವ ಎಲ್ಲ ವಾಹನಗಳನ್ನು ಈ ರಸ್ತೆ ಎಳೆದೆಳದು ಬೀಳಿಸುತ್ತೆ. ಈ ರಸ್ತೆಯಲ್ಲಿ ವಾಹನಗಳು ಸಾಲುಸಾಲಾಗಿ ಬಂಸು ಸ್ಕಿಡ್‌ ಆಗುತ್ತವೆ. ಈ ರೀತಿ ಘಟನೆಗಳು ಯಾಕಾಗುತ್ತಿವೆ ಎಂಬ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ವಾಹನಗಳಷ್ಟೇ ಅಲ್ಲದೇ ಈ ಜಾಗದಲ್ಲಿ ಮನುಷ್ಯರೂ ಕೂಡ ಜಾರಿ ಬಿದ್ದಿದ್ದಾರೆ. 

ಅಷ್ಟಕ್ಕೂ ಅನೇಕ ಅಪಘಾತಗಳಿಗೆ ಕಾರಣವಾಗುತ್ತಿರುವ ಈ ರೋಡ್ ಕೆನಡಾದ ಮೆಕ್ಸಿಕೋದಲ್ಲಿದೆ. ‌ ಈ ರಸ್ತೆಯನ್ನು ಹೈಡ್ರೋಲಿಕ್‌ ಕಾಂಕ್ರೀಟ್‌ನಿಂದ ತಯಾರಿಸಲಾಗಿದ್ದು, ಹೀಗಾಗಿ ಮಳೆಯ ವಾತಾವರಣದಿಂದ ವಾಹನಗಳು ಜಾರುತ್ತಿವೆ ಎನ್ನಲಾಗುತ್ತಿದೆ. ಸದ್ಯ ಈ ರಸ್ತೆಯಲ್ಲಿ ವಾಹನಗಳು ಜಾರಿ ಬೀಳುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. 

ಇದನ್ನೂ ನೋಡಿ: ಗಣೇಶನ ಮುಂದೆ ಕುಣಿಯುತ್ತಾ ಮಸಣ ಸೇರಿದ ಯುವಕ: ವಿಡಿಯೋ ವೈರಲ್‌