ಪ್ರಾಂಕ್ ವಿಡಿಯೋಗೆ ಹಿರಿಯ ವ್ಯಕ್ತಿ ಮೇಲೆ ಶೇವಿಂಗ್ ಕ್ರೀಮ್ ಸ್ಪ್ರೇ ಮಾಡಿದ ಯೂಟ್ಯೂಬರ್ ಅರೆಸ್ಟ್!

By Chethan KumarFirst Published Sep 25, 2024, 12:13 AM IST
Highlights

ಪ್ರಾಂಕ್ ವಿಡಿಯೋಗಾಗಿ ಸೈಕಲ್ ತುಳಿದು ಸಾಗುತ್ತಿದ್ದ ಹಿರಿಯ ವ್ಯಕ್ತಿ ಮೇಲೆ ಶಿವಿಂಗ್ ಕ್ರೀಮ್ ಎರಚಿ ವಿಕೃತಿ ಮೆರೆದ ಯೂಟ್ಯೂಬರ್‌ನ ಪೊಲೀಸರು ಅರೆಸ್ಟ್ ಮಾಡಿ ತಕ್ಕ ಶಾಸ್ತಿ ಮಾಡಿದ್ದಾರೆ.

ಲಖನೌ(ಸೆ.24) ವಿಡಿಯೋ, ರೀಲ್ಸ್‌ಗಾಗಿ ಹಲವರು ಹುಚ್ಚರಾಗಿದ್ದಾರೆ. ತಮ್ಮ ವಿಡಿಯೋ ಹೆಚ್ಚು ವೈರಲ್ ಆಗಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ ಅನ್ನೋದು ಹಲವು ಬಾರಿ ಸಾಬೀತಾಗಿದೆ. ಇದೀಗ ಉತ್ತರ ಪ್ರದೇಶದ ಲಖನೌದಲ್ಲಿ ಯೂಟ್ಯೂಬರ್ ಪ್ರಾಂಕ್  ವಿಡಿಯೋಗಾಗಿ ಸೈಕಲ್ ತುಳಿದು ಸಾಗುತ್ತಿದ್ದ ಹಿರಿಯ ವ್ಯಕ್ತಿ ಮೇಲೆ ಶೇವಿಂಗ್ ಕ್ರೀಮ್ ಸ್ಪ್ರೇ ಮಾಡಿದ್ದ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ತಕ್ಷಣವೆ ಕಾರ್ಯಪ್ರವೃತ್ತರಾದ ಪೊಲೀಸರು ಯೂಟ್ಯೂಬರ್ ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದ್ದಾರೆ.

ಯೂಟ್ಯೂಬರ್ ವಿನಯ್ ಯಾದವ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಒಂದು ಸುತ್ತಿನ ಕಜ್ಜಾಯವನ್ನೂ ನೀಡಲಾಗಿದ್ದು, ಇದೀಗ ದಮ್ಮಯಾ ಬಿಟ್ಟುಬಿಡಿ ಎಂದು ಅಂಗಲಾಚುತ್ತಿದ್ದಾನೆ.ಪ್ರಾಂಕ್ ವಿಡಿಯೋಗಾಗಿ ಅತೀರೇಖದಿಂದ ವರ್ತಿಸಿದ ಯೂಟ್ಯೂಬರ್ ವಿರುದ್ಧ ಪ್ರಕರಣ ದಾಖಿಲಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

Latest Videos

ರೀಲ್ಸ್‌ಗಾಗಿ ಮಗುವನ್ನೇ ಅಪಾಯಕ್ಕೆ ತಳ್ಳಿದ ತಾಯಿ: ವಿಡಿಯೋ ವೈರಲ್

ಸೈಕಲ್ ಮೇಲೆ ತೆರಳುತ್ತಿದ್ದ ಹಿರಿಯ ವ್ಯಕ್ತಿಗೆ ಏಕಾಏಕಿ ಬೈಕ್ ಮೂಲಕ ಆಗಮಿಸಿದ ಯೂಟ್ಯೂಬರ್ ಯಾದವ್ ಶೇವಿಂಗ್ ಕ್ರೀಮ್ ಎರಚಿದ್ದ. ದಿಢೀರ್ ದಾಳಿಯಿಂದ ವ್ಯಕ್ತಿಯ ಬಾಯಿ, ಕಣ್ಣು ಸೇರಿದಂತೆ ಸಂಪೂರ್ಣ ಮುಖ ಕ್ರೀಮ್‌ನಿಂದ ಮುಚ್ಚಿ ಹೋಗಿತ್ತು. ಸೈಕಲ್ ತುಳಿಯಲು ಸಾಧ್ಯವಾಗದೆ, ಮುಖದಲ್ಲಿನ ಕ್ರಿಮ್ ತೆಗೆಯಲು ಸಾಧ್ಯವಾಗದೇ ಪರದಾಡಿದ್ದರು. ಈ ವಿಡಿಯೋವನ್ನು ಚಿತ್ರೀಕರಿಸಿಕೊಂಡ ಟ್ಯೂಬರ್ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ.

ತನ್ನ ವಿಡಿಯೋ ಭಾರಿ ವೈರಲ್ ಆಗಲಿದೆ ಎಂದು ಲೆಕ್ಕಾಚಾರ ಹಾಗಿ ವಿಡಿಯೋ ಹರಿಬಿಟ್ಟಿದ್ದ. ಆದರೆ ಈ ವಿಡಿಯೋ ಯೂಟ್ಯೂಬರ್ ಅಂದುಕೊಂಡ ರೀತಿಯಲ್ಲಿ ವೈರಲ್ ಆಗಲಿಲ್ಲ. ಆದರೆ ವಿಡಿಯೋಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಹಲವರು ಈ ವಿಡಿಯೋವನ್ನು ಯುಪಿ ಪೊಲೀಸರ ಸೋಶಿಯಲ್ ಮೀಡಿಯಾ ಖಾತೆಗೆ ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದರು. ಇದರ ಪರಿಣಾಮ ಪೊಲೀಸರು ಈ ಯೂಟ್ಯೂಬರ್ ಪತ್ತೆ ಹಚ್ಚಿ ಎತ್ತಂಗಡಿ ಮಾಡಿದ್ದಾರೆ. 

 

Reel बनाने के लिए साइकिल चलते बुजुर्ग पर "snow spray"

झांसी पुलिस ने तुरंत पकड़ कर "विनय यादव" को पैरों पर थिरकने के लिए मजबूर कर दिया
Jhansi police doaa srahani karya
👏👏👏😂😂😂
pic.twitter.com/Vz2h8ohj86

— Akash yadav (@akashyadavy2001)

 

ಅರೆಸ್ಟ್ ಆಗುತ್ತಿದ್ದಂತೆ ವಿನಯ್ ಯಾದವ್ ವರಸೆ ಬದಲಾಗಿದೆ. ಇದು ಪ್ರಾಂಕ್ ವಿಡಿಯೋಗಾಗಿ ಮಾಡಲಾಗಿದೆ. ಇದರಲ್ಲಿ ಯಾವುದೇ ದುರುದ್ದೇಶ ಇಲ್ಲ ಎಂದು ವಾದಿಸಲು ಆರಂಭಿಸಿದ್ದಾನೆ. ಪೊಲೀಸರ ಭಾಷೆಯಲ್ಲಿ ಉತ್ತರಿಸಿದಾಗ ತನ್ನಿಂದ ತಪ್ಪಾಗಿದೆ ಎಂದು ಕಾಲಿಗೆ ಎರಗಿದ್ದಾನೆ. ಆದರೆ ವಿಕೃತಿ ಮೆರೆದ ವಿನಯ್ ಯಾದವ್ ವಿರುದ್ದ ಪ್ರಕರಣ ದಾಖಲಿಸಿ ಕಂಬಿ ಹಿಂದೆ ಕಳುಹಿಸಲಾಗಿದೆ. ಪೊಲೀಸರು ಕ್ಷಿಪ್ರ ಕಾರ್ಯಾಚರಣೆಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ರೀತಿ ರೀಲ್ಸ್ ಹಾಗೂ ಪ್ರಾಂಕ್ ವಿಡಿಯೋ ಮಾಡುವ ಹಲವರಿಗೆ ಇದು ಪಾಠವಾಗಬೇಕು ಎಂದಿದ್ದಾರೆ. 

ಐಶ್ವರ್ಯಾ-ಹೃತಿಕ್‌ ಸ್ಟೈಲ್‌ ರೀತಿ ರಾಜಧಾನಿಯ ರಸ್ತೆಯಲ್ಲಿ ಜೋಡಿಯ ಖುಲ್ಲಂ ಖುಲ್ಲಾ ರೊಮ್ಯಾನ್ಸ್!


 

सड़क पर साइकिल से चलते बुजुर्ग व्यक्ति के चेहरे पर स्प्रे करने वाले युवक को पुलिस द्वारा गिरफ्तार कर की जा रही कार्यवाही के संबंध में पुलिस अधीक्षक नगर की वीडियो बाइट- pic.twitter.com/wBAhjDmIIL

— Jhansi Police (@jhansipolice)
click me!