ಏಳು ಪ್ರೇತಾತ್ಮ, ದೆವ್ವಗಳು ನನ್ನು ಕಾಡುತ್ತಿದೆ. ಹೀಗಾಗಿ ನಾನು ಈ ಜನ್ಮದ ದೇಹ ತೊರೆಯುತ್ತಿದ್ದೇನೆ. ಮುಂದಿನ ಜನ್ಮದಲ್ಲಿ ಮತ್ತೆ ಮೂಲ ದೇಹಕ್ಕೆ ಹಿಂದಿರುಗುತ್ತೇನೆ. ಅದು ನನಗೆ ಕಾಟ ನೀಡಿದವರ ಸರ್ವನಾಶ ಖಚಿತ ಎಂದು ಬರೆದಿಟ್ಟು 28ರ ಹರೆಯುದ ಯುವಕ ಬದುಕು ಅಂತ್ಯಗೊಳಿಸಿದ್ದಾನೆ. ಈತನ ನೋಟ್‌ನಲ್ಲಿ ಏನೇನಿದೆ?
ಭೋಪಾಲ್(ಸೆ.24) ಒಂದಲ್ಲ ಎರಡಲ್ಲ 7 ಪ್ರೇತಾತ್ಮ, ದೆವ್ವಗಳು ನನಗೆ ಬೆಂಬಿಡದೆ ಕಾಟ ಕೊಡುತ್ತಿದೆ. ಇದರ ಜೊತೆ ಕೆಲವರು ನನಗೆ ತೊಂದರೆ ಕೊಟ್ಟಿದ್ದಾರೆ. ಹೀಗಾಗಿ ಈ ಜನ್ಮದ ಬದುಕು ಅಂತ್ಯಗೊಳಿಸುತ್ತಿದ್ದೇನೆ. ಆದರೆ ಮುಂದಿನ ಜನ್ಮದಲ್ಲಿ ಮತ್ತೆ ಬರುತ್ತೇನೆ, ನನಗೆ ಕಾಟ ನೀಡಿದವರ ಸರ್ವನಾಶ ಮಾಡುತ್ತೇನೆ ಎಂದು ಬರೆದಿಟ್ಟು 28ರ ಹರೆಯದ ಯುವಕ ಬದುಕು ಅಂತ್ಯಗೊಳಿಸಿದ ಘಟನೆ ಮಧ್ಯಪ್ರದೇಶದ ಖುಷಿಪುರಾದಲ್ಲಿ ನಡೆದಿದೆ. ಬಾಡಿಗೆ ಮನೆಯಲ್ಲೇ ಈತ ಬದಕು ಅಂತ್ಯಗೊಳಿಸಿದ್ದಾನೆ.
ಈತ ಕೊಳೆತ ಶವವನ್ನು ಪೊಲೀಸರು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ಮುಗಿಸಿ ಮೃತನ ಸಹೋದರಿಗೆ ಹಸ್ತಾಂತರಿಸಿದ್ದಾರೆ. ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಘಟನೆ ಕುರಿತು ಎಂಪಿ ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತನನ್ನು ತರುಣ್ ಶರ್ಮಾ ಎಂದು ಗುರುತಿಸಲಾಗಿದೆ. ಶಹಪುರ ಗ್ರಾಮದ ನಿವಾಸಿಯಾಗಿರುವ ಈತ ಭೋಪಾಲ್‌ನಲ್ಲಿ ಕೆಲಸದ ನಿಮಿತ್ತ ಬಾಡಿಗೆ ಮನೆಯಲ್ಲಿ ವಾಸವಿದ್ದ ಎಂದು ಪೊಲೀಸರು ಹೇಳಿದ್ದಾರೆ.
ನಡುರಾತ್ರಿ ಏಕಾಏಕಿ ಫ್ಯಾನ್ ತಿರುಗಿ, ಗೊಂಬೆ ಚಲಿಸಿದಾಗ... ಭಯಾನಕ ಅನುಭವ ತೆರೆದಿಟ್ಟ ನಟ ವಿಶ್ವಾಸ್
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶರ್ಮಾ, ತನಗೆ 7 ದೆವ್ವಗಳು, ಪ್ರೇತಾತ್ಮಗಳು ಕಾಟ ನೀಡುತ್ತಿದೆ ಎಂದು ನೋಟ್‌ನಲ್ಲಿ ಹೇಳಿಕೊಂಡಿದ್ದಾನೆ. ದೆವ್ವಗಳ ಕಾಟಗಳಿಂದ ನಾನು ಬಳಲಿದ್ದೇನೆ. ನನ್ನನ್ನು ಬದುಕಲು ಈ ದೆವ್ವಗಳು ಬಿಡುತ್ತಿಲ್ಲ. ಇದರ ಜೊತೆಗೆ ಕೆಲವರು ನನಗೆ ಕಾಟ ನೀಡಿದ್ದಾರೆ. ಈ ಜನ್ಮದಲ್ಲಿ ನಾನು ದೇಹ ತೊರೆಯುತ್ತಿದ್ದೇನೆ. ಆದರೆ ಮುಂದಿನ ಜನ್ಮದಲ್ಲಿ ಮತ್ತೆ ಮೂಲ ದೇಹ ಸೇರಿಕೊಳ್ಳುತ್ತೇನೆ. ಈ ದೆವ್ವಗಳ ಕಾಟವನ್ನು ಅಂತ್ಯಗೊಳಿಸುತ್ತೇನೆ ಎಂದು ನೋಟ್‌ನಲ್ಲಿ ಬರೆದುಕೊಂಡಿದ್ದಾನೆ.
ಶರ್ಮಾ ಕಳೆದ ವರ್ಷ ಪೋಷಕರನ್ನು ಕಳೆದುಕೊಂಡಿದ್ದ. ತರುಣ್ ಶರ್ಮಾ ಹಾಗೂ ಈತನ ಸಹೋದರಿ ಪೋಷಕರಿಲ್ಲದೆ ಕಂಗಾಲಾಗಿದ್ದರು. ತರುಣ್ ಶರ್ಮಾ ಸಹೋದರಿ ಅಜ್ಜಿ ಆರೈಕೆಯಲ್ಲಿದ್ದಾಳೆ. ಆದರೆ ಪೋಷಕರ ಅಗಲಿಕೆಯಿಂದ ತರುಣ್ ಶರ್ಮಾ ತೀವ್ರವಾಗಿ ನೊಂದಿದ್ದಾನೆ. ಮಾನಸಿಕವಾಗಿ ಬಳಲಿದ್ದಾನೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಕಳೆದ ಮೂರು ನಾಲ್ಕು ತಿಂಗಳಿನಿಂದ ಮನೆಗೆ ಮರಳಿದ್ದರೂ ಸ್ವಭಾವದಲ್ಲಿ ಕೆಲ ಬದಲಾವಣೆಗಳಾಗಿತ್ತು. ಪೋಷಕರ ಅಗಲಿಕೆಯ ನೋವಿನಿಂದ ಹೊರಬರಲು ತರುಣ್ ಶರ್ಮಾಗೆ ಸಾಧ್ಯವಾಗಿರಲಿಲ್ಲ ಎಂದು ಸಹೋದರಿ ಹೇಳಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತರುಣ್ ಶರ್ಮಾ ಫೋನ್‌ನಲ್ಲಿರುವ ಕಾಲ್ ಲಿಸ್ಟ್ ಸೇರಿದಂತೆ ಇತರ ಕೆಲ ಮಾಹಿತಿಗಳನ್ನು ಪಡೆದಿದ್ದಾರೆ. ಸಾವಿನ ಹಿಂದೆ ಬೇರೆ ಕಾರಣವಿದೆಯಾ ಅನ್ನೋದನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಭೂತ ಪ್ರೇತಗಳು ಯಾರನ್ನ ತುಂಬಾ ಕಾಡುತ್ತೆ? ಇಲ್ಲಿದೆ ಪ್ರೇತಾತ್ಮಗಳ ಕುರಿತು ಇಂಟ್ರೆಸ್ಟಿಂಗ್ ವಿಷ್ಯ