ಬಾಹುಬಲಿ ಚಿತ್ರದ ಸೀನ್​​​​​ ಕಾಪಿ ಮಾಡಿದ ಉಕ್ರೇನ್​: ಡ್ಯಾಮ್​​​ ಒಡೆದು ರಷ್ಯಾ ಸೇನೆಗೆ ಕೌಂಟರ್‌!

May 19, 2022, 10:17 PM IST

ನವದೆಹಲಿ (ಮೇ 19): ರಷ್ಯಾ ಉಕ್ರೇನ್​​ ಯುದ್ಧ (Russia Ukraine War) ನಡೆದು ತುಂಬಾ ದಿನಗಳೇ ಕಳೆದಿವೆ. ತುಂಬಾ ದಿನಗಳ ನಂತರ ಈ ಯುದ್ಧ ನೆನಪಿಸಲು ಒಂದು ಕಾರಣವಿದೆ. ಮೊನ್ನೆ ಯುದ್ಧದ ಒಂದು ಘಟನೆ ಬಾಹುಬಲಿ ಸಿನಿಮಾವನನ್ನು (Bahubali Movie) ನೆನಪು ಮಾಡಿದೆ. ವೈರಿಗಳನ್ನು ಸೆದೆ ಬಡಿಯಲು ಬಾಹುಬಲಿ ಚಿತ್ರದಲ್ಲಿ ಮಾಡಲಾಗಿದ್ದ ಪ್ಲಾನನ್ನೇ ಉಕ್ರೇನ್​ ಸೇನೆ ಮಾಡಿದೆ. ಆ ಪ್ಲಾನ್​ ಮೂಲಕ ರಷ್ಯಾ ಸೇನೆಯನ್ನು ಬಡಿದೋಡಿಸಿದೆ ಉಕ್ರೇನ್​ ಸೇನೆ. 

ಎಸ್​​, ಇದು ಅಚ್ಚರಿಯಾದ್ರು ನಿಜ. ನಂಬಲು ಒಮ್ಮೆ ಯೋಚಿಸೋ ವಿಷಯವಾದ್ರು ಇದು ನಿಜ. ಕೇಳಲು ತಮಾಷೆಯಾಗಿದ್ರು ಕೂಡ ಇದು ನಿಜ. ರಷ್ಯಾ ಉಕ್ರೇನ್​ ಯುದ್ಧ ಆರಂಭವಾಗಿ ಬರೋಬ್ಬರಿ 83 ದಿನಗಳಾಯ್ತು. ಇತ್ತ ರಷ್ಯಾ ಗೆಲ್ಲುತ್ತಿಲ್ಲ, ಅತ್ತ ಉಕ್ರೇನ್​​​​​ ಸೋಲುತ್ತಿಲ್ಲ. ಎರಡೂ ದೇಶಗಳ ನಡುವೆ 83 ದಿನಗಳಿಂದ ನಿರಂತರ ಯುದ್ಧ ನಡೆದೇ ಇದೆ. 

ಎರಡು ದೇಶಗಳ ನಡುವೆ ನಡೆದ ಈ ಯುದ್ಧದಲ್ಲಿ, ಶತ್ರುಗಳನ್ನು ಸೆದೆಬಡಿಯಲು ಮೊದಲಿಂದಲೂ ತಂತ್ರ-ರಣತಂತ್ರ ನಡೆದೇ ಇದೆ. ಎರಡೂ ದೇಶಗಳು ಭರ್ಜರಿ ರಣತಂತ್ರಗಳಿಂದಲೇ ಯುದ್ಧ ಮಾಡುತ್ತಿವೆ. ಆದ್ರೆ ಮೊನ್ನೆ ಶತ್ರು ಸಂಹಾರಕ್ಕಾಗಿ ಉಕ್ರೇನ್​​ ಸೇನೆ ಒಂದು ಮಾಸ್ಟರ್​​ ಪ್ಲಾನ್​ ಮಾಡಿತ್ತು. ಮಾಡಿದ್ದ ಆ ಪ್ಲಾನ್​ ಸಕ್ಸಸ್​​ ಕೂಡ ಆಗಿದೆ. ಆ ಪ್ಲಾನ್​ ಬಗ್ಗೆ ನಾವಿಲ್ಲಿ ಮಾತ್ನಾಡಬೇಕಿದೆ. ಯಾಕೆಂದ್ರೆ ಉ್ರಕೇನ್​ ಸೇನೆಯ ಆ ಮಾಸ್ಟರ್​ ಪ್ಲಾನ್​​ ಬಾಹುಬಲಿ ಚಿತ್ರವನ್ನು ನೆನಪು ಮಾಡುತ್ತೆ. ಯಾಕೆಂದ್ರೆ ಉಕ್ರೇನ್​​ ಪ್ಲಾನ್​​ ಬಾಹುಬಲಿ ಚಿತ್ರದ ಒಂದು ಸೀನ್​​ ಕಾಪಿ ಮಾಡಿದಂತಿದೆ. 

ಇದನ್ನೂ ನೋಡಿ: ಸೈನಿಕರ ಮೃತದೇಹದ ಜೊತೆಗೆ ಚಿನ್ನ, ಫ್ರಿಜ್‌ನಲ್ಲಿ ಹೆಣಗಳ ರಾಶಿ: ಉಕ್ರೇನ್‌ ರಷ್ಯಾ ಯುದ್ಧದ ಕರಾಳ ಸತ್ಯ

ಬಾಹುಬಲಿ 2 ಸಿನಿಮಾದಲ್ಲಿ, ಒಂದು ಯುದ್ಧದ ಸೀನ್​​ ಬರುತ್ತೆ. ದೇವಸೇನಾ ಕೋಟೆ ಮೇಲೆ ಶತ್ರು ಸೇನೆ ದಾಳಿ ಮಾಡುತ್ತೆ. ಆ ಸಂದರ್ಭದಲ್ಲಿ ಬಾಹುಬಲಿ ಅಲ್ಲೇ ಇರ್ತಾನೆ. ಬಾಹುಬಲಿ ಕೂಡ ಶತ್ರಗಳ ವಿರುದ್ಧ ಹೋರಾಡುತ್ತಾನೆ.  ದಾಳಿ ಮಾಡಿದ್ದ ಶತ್ರು ಸೇನಾಶಕ್ತಿ ದೊಡ್ಡದಿರುತ್ತೆ. ಹೀಗಾಗಿ ಬಾಹುಬಲಿ ಶತ್ರುಗಳನ್ನು ಸೆದೆಬಡಿಯಲು ಅನೇಕ ಪ್ಲಾನ್​ಗಳನ್ನು ಮಾಡ್ತಾನೆ ದನಗಳ ಕೊಂಬಿಗೆ ಬಟ್ಟೆ ಸುತ್ತಿ, ಕೊಂಬುಗಳಿಗೆ ಬೆಂಕಿ ಹಚ್ಚಿ ಬಿಡಲಾಗುತ್ತೆ. ಇದರಿಂದ ಶತ್ರು ಸೇನೆ ದಿಕ್ಕು ತಪ್ಪುತ್ತೆ. 

ಇದೇ ರೀತಿ ಶತ್ರುಗಳು ಕೋಟೆಗೆ ನುಗ್ಗದಂತೆ ಕೊಚ್ಚಿ ಹೋಗಲೆಂದು ಬಾಹುಬಲಿ ಪಕ್ಕದಲ್ಲಿದ್ದ ಡ್ಯಾಮ್​ ಒಡೆದು ಬಿಡುತ್ತಾನೆ. ಆಗ ಶತ್ರುಗಳು ಕೊಚ್ಚಿ ಹೋಗುತ್ತಾರೆ. ಎಸ್​​, ಇದೇ ಸೀನ್​​​​​ ಮೊನ್ನೆ ಉಕ್ರೇನ್​ ಯುದ್ಧದಲ್ಲಿ ಕಾಪಿಯಾಗಿದೆ. ಬಾಹುಬಲಿಯಲ್ಲಿ ರೀಲ್​​ ಆಗಿದ್ದ ಈ ಸೀನ್​​, ರಷ್ಯಾ ಉಕ್ರೇನ್​​ ಯುದ್ಧದಲ್ಲಿ ರಿಯಲ್​​​ ಆಗಿದೆ.

ಇದನ್ನೂ ನೋಡಿ: ವಿಭೀಷಣನಾಗಿ ಬಂದ ರಾನಿಲ್ ವಿಕ್ರಮಸಿಂಘೆ ಏನಾಗಲಿದೆ ಲಂಕಾ ಮುಂದಿನ ಭವಿಷ್ಯ..?

ಕಳೆದ ಒಂದು ವಾರದಿಂದ ರಷ್ಯಾ ಉಕ್ರೇನ್​ ಯುದ್ಧ, ವೇಗ ಪಡೆದಂತಿದೆ ಎರಡೂ ಕಡೆಯ ಸೇನಾ ಪಡೆಗಳು ಚುರುಕು ಪಡೆದುಕೊಂಡಿವೆ. ಮೊನ್ನೆದಿನ ರಷ್ಯಾದ ಬಲಾಢ್ಯ ಸೇನಾ ಪಡೆ ಉಕ್ರೇನ್​ನ ಡೆಮಿಡಿವ್​​​ ಪ್ರದೇಶಕ್ಕೆ ದಾಳಿ ಇಡುತ್ತೆ. ರಷ್ಯಾ ಸೇನಾ ಬಲವನ್ನು ಎದುರಿಸುವಷ್ಟು ಶಕ್ತಿ ಆ ಕ್ಷಣಕ್ಕೆ ಉಕ್ರೇನ್​​ ಸೇನೆಗೆ ಇರುವುದಿಲ್ಲ. ಹೀಗಾಗಿ ಉಕ್ರೇನ್​​ ಸೇನೆಯಲ್ಲಿ ಬಹುಶ ಒಬ್ಬ ಬಾಹುಬಲಿ ಇದ್ದನೆಂದು ಕಾಣುತ್ತೆ. ಅಥವಾ ಸೇನೆಯಲ್ಲಿರವ ಒಬ್ಬ ಸೈನಿಕನಿಗೆ ಬಾಹುಬಲಿ ಸಿನಿಮಾದ ಐಡಿಯಾ ನೆನಪಿಗೆ ಬಂದಿರಬೇಕು. ರಷ್ಯಾ ಸೇನಾಬಲ ತಡೆಯಲು ಇಲ್ಲಿ ಅದನ್ನೇ ಮಾಡಿದ್ದಾರೆ. 

ರಷ್ಯಾ ಸೇನೆ ದಾಳಿ ಮಾಡಿದ ಜಾಗದಿಂದ ಸ್ವಲ್ಪ ದೂರದಲ್ಲಿ ದೊಡ್ಡ ಆಣೆಕಟ್ಟು ಇತ್ತು. ರಷ್ಯಾ ಸೇನೆ ನದಿ ದಡದವರೆಗೂ ಜಮಾವಣೆ ಆಗುವವರೆಗೂ ಸುಮ್ಮನಿದ್ದು, ನಂತರ ಆಣೆಕಟ್ಟು ಒಡೆಯಲಾಗಿದೆ. ಆಣೆಕಟ್ಟು ಒಡೆದಿದ್ದರ ಪರಿಣಾಮ, ಅದೆಷ್ಟೋ ರಷ್ಯಾ ಸೈನಿಕರು ಕೊಚ್ಚಿಕೊಂಡು ಹೋಗಿದ್ದಾರೆ. ಈ ಕುರಿತ ಕಂಪ್ಲೀಟ್‌ ವರದಿ ಇಲ್ಲಿದೆ