Dec 31, 2020, 11:59 AM IST
2020ನೇ ವರ್ಷದ ಕೊನೆಯ ದಿನ. ವರ್ಷವಿಡೀ ಅನೇಕ ವಿಚಾರಗಳು ವಸದ್ದು ಮಾಡಿವೆ. ಅದರಲ್ಲೂ ವಿಶೇಷವಾಗಿ ಕೊರೋನಾ ಅಟ್ಟಹಾಸ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಒಂದು ವರ್ಷವಾದರೂ ಇದರ ಅಬ್ಬರ ಮಾತ್ರ ಕುಂದಿಲ್ಲ. ಸಾಲದೆಂಬಂತೆ ಇದರ ಹೊಸ ತಳಿ ಮತ್ತೆ ಜನರ ನಿದ್ದೆ ಕೆಡಿಸಿದೆ. ವರ್ಷದಾರಂಭದಲ್ಲಿ ಸದ್ದು ಮಾಡಿದ ವಿಚಾರವೇ ಕೊನೆಯ ದಿನವೂ ಸುದ್ದಿಯಲ್ಲಿದೆ.
ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಲಿದೆ ಸೌರ ಮಂಡಲ; ರೂಪಾಂತರಿ ವೈರಸ್‌ನಿಂದ ಜಗತ್ತೇ ವಿಲವಿಲ!
ಇದರೊಂದಿಗೆ 2020ರಲ್ಲಿ ಅಮೆರಿಕನ್ನರ ಮೆಚ್ಚುಗೆ ಗಳಿಸುವಲ್ಲಿ ಟ್ರಂಪ್ ಯಶಸ್ವಿಯಾಗಿದ್ದಾರೆ. 2008ರಿಂದಲೂ ಈ ಗೌರವ ಒಬಾಮಾಗೇ ಸಿಗುತ್ತಿತ್ತು ಎಂಬುವುದು ವಿಶೇಷ. ಇನ್ನು ಕೊರೋನಾ ಅಟ್ಟಹಾಸ ಹಿನ್ನೆಲೆ ಈ ಬಾರಿ ವಿಶ್ವಾದ್ಯಂತ ಹೊಸ ವರ್ಷಾಚರಣೆ ಕಳೆಗುಂದುವುದರಲ್ಲಿ ಅನುಮಾನವಿಲ್ಲ. ವಿದೇಶಗಳಲ್ಲೂ ಹೊಸ ವರ್ಷದ ಎಣ್ಣೆ ಪಾರ್ಟಿಗೆ ಕಡಿವಾಣ ಬಿದ್ದಿದ್ದು, 8ರ ನಂತರ ಇಲ್ಲ ಎಣ್ಣೆ ಮಾರಾಟಕ್ಕೆ ಅವಕಾಶ ಸಿಗಲಿದೆ. ಇಷ್ಟೇ ಅಲ್ಲದೇ ಡಿಸೆಂಬರ್ 31, 2020ರಂದು ವಿಶ್ವಾದ್ಯಂತ ಟ್ರೆಂಡ್ ಆದ ಗ್ಲೋಬಲ್ ನ್ಯೂಸ್ ಇಲ್ಲಿದೆ ನೋಡಿ.