ಕರ್ಕಶ ಹಾರ್ನ್ ಹಾಕುತ್ತೀರಾ? ಶಿವಮೊಗ್ಗ ಟ್ರಾಫಿಕ್ ಪೊಲೀಸರ ಶಿಕ್ಷೆಗೆ ಸುಸ್ತಾದ ಚಾಲಕರು

Published : Jan 20, 2025, 05:01 PM ISTUpdated : Jan 20, 2025, 05:09 PM IST
ಕರ್ಕಶ ಹಾರ್ನ್ ಹಾಕುತ್ತೀರಾ? ಶಿವಮೊಗ್ಗ ಟ್ರಾಫಿಕ್ ಪೊಲೀಸರ ಶಿಕ್ಷೆಗೆ ಸುಸ್ತಾದ ಚಾಲಕರು

ಸಾರಾಂಶ

ಚಾಲಕರು ಸುಮ್ಮನೆ ಕರ್ಕಶ ಹಾರ್ನ್ ಹಾಕಿ ಸಾರ್ವಜನಿಕರಿಗೆ ಕಿರಿಕಿರಿ, ಶಬ್ದ ಮಾಲಿನ್ಯ ಸೃಷ್ಟಿಸುವುದು ನಡೆಯುತ್ತಲೇ ಇರುತ್ತದೆ. ಹೀಗೆ ಅನಗತ್ಯವಾಗಿ ಕರ್ಕಶ ಹಾರ್ನ್ ಮಾಡಿ ಜನರಿಗೆ ತೊಂದರೆ ನೀಡುತ್ತಿದ್ದ ಚಾಲಕರಿಗೆ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಸರಿಯಾಗಿ ಉತ್ತರ ನೀಡಿದ್ದಾರೆ.  

ಶಿವಮೊಗ್ಗ(ಜ.20) ನಗರ ಪಟ್ಟಣ, ಹಳ್ಳಿಗಳಲ್ಲೂ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕರ್ಕಶ ಶಬ್ದ ಹಲವು ಸಮಸ್ಯಗಳಿಗೂ ಕಾರಣವಾಗುತ್ತಿದೆ. ಅದರಲ್ಲೂ ಕೆಲ ವಾಹನಗಳು ವಿಪರೀತ ಕರ್ಕಶ ಹಾರ್ನ್ ಬಳಕೆ ಮಾಡುತ್ತದೆ. ಈ ಕುರಿತು ಪೊಲೀಸರು ಕಾರ್ಯಾಚರಣೆ ನಡೆಸಿ ದಂಡ ವಿಧಿಸುತ್ತಾರೆ. ಆದರೆ ಈ ಬಾರಿ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಕರ್ಕಶ ಹಾರ್ನ್ ಮೂಲಕ ಜನರಿಗೆ ತೊಂದರೆ ಕೊಡುತ್ತಿದ್ದ ವಾಹನ ಚಾಲಕರಿಗೆ ತಕ್ಕ ಉತ್ತರ ನೀಡಿದ್ದಾರೆ. ಇನ್ನೆಂದು ಈ ರೀತಿ ಹಾರ್ನ್ ಹಾಕಿ ಜನರಿಗೆ ಸಮಸ್ಯೆ ಮಾಡದಂತೆ ಜಾಗೃತಿ ಮೂಡಿಸಿದ್ದಾರೆ.

ಶಿವಮೊಗ್ಗ ಟ್ರಾಫಿಕ್ ಪೊಲೀಸರು ಕರ್ಕಶ ಹಾರ್ನ್ ಹಾಕಿ ಸಾರ್ವಜನರಿಗೆ ತೊಂದರೆ ಕೊಡುತ್ತಿದ್ದ ವಾಹನ ಹಾಗೂ ಚಾಲಕರಿಗೆ ತಕ್ಕ ಉತ್ತರ ನೀಡಲು ಮುಂದಾಗಿದ್ದಾರೆ. ಇದಕ್ಕಾಗಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಪಟ್ಟಣದ ಹಲವು ಭಾಗದಲ್ಲಿ ಟ್ರಾಫಿಕ್ ಪೊಲೀಸರು ನಿಂತು ವಾಹನಗಳ ಹಾರ್ನ್ ಗಮನಿಸಿದ್ದಾರೆ. ಅನಗತ್ಯವಾಗಿ ಹಾರ್ನ್ ಹಾಕುವುದು, ಕರ್ಕಶ ಹಾರ್ನ್ ಬಳಕೆ ಮಾಡುವುದರ ವಿರುದ್ಧ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.

ವಿಶೇಷ ರೀತಿ ಹೊಸ ವರ್ಷ ಸ್ವಾಗತಿಸಿದ ಭಾರತೀಯ ರೈಲ್ವೇ, ಪ್ರಯಾಣಿಕರಿಂದ ಭರ್ಜರಿ ಚಿಯರ್‌ಅಪ್

ಹೀಗೆ ಕರ್ಕಶ ಹಾರ್ನ್ ಮೂಲಕ ತೊಂದರೆ ನೀಡುತ್ತಿದ್ದ ವಾಹನಗಳನ್ನು ಪೊಲೀಸರು ಹಿಡಿದಿದ್ದಾರೆ. ಬಸ್, ಲಾರಿ, ಸೇರಿದಂತೆ ಘನ ವಾಹನಗಳ ಕರ್ಕಶ ಹಾರ್ನ್ ಶಬ್ದ ಹಾಗೂ ಅನಗತ್ಯ ಬಳಕೆ ಮಾಡಿದ ಚಾಲಕರನ್ನು ಪೊಲೀಸರು ಹಿಡಿದಿದ್ದಾರೆ. ಬಳಿಕ ಚಾಲಕರನ್ನು ವಾಹನ ಮುಂಭಾಗ ನಿಲ್ಲಿಸಿ ಪೊಲೀಸರು ಹಾರ್ನ್ ಹಾಕಿದ್ದಾರೆ. ಈ ಶಬ್ದ ಎಷ್ಟು ಕಿರಿ ಕಿರಿ ಹಾಗೂ ಅಪಾಯ ಮಾಡಬಲ್ಲದು ಅನ್ನೋದರ ಅರಿವನ್ನು ಚಾಲಕರಿಗೆ ಮಾಡಿಸಿದ್ದಾರೆ. ಸಾರ್ವಜನಿಕರಿಗೆ ನೀವು ಹಾಕುವ ಹಾರ್ನ್‌ನಿಂದ ತೀವ್ರ ಸಮಸ್ಯೆಯಾಗುತ್ತಿದೆ. ಕರ್ಕಶ ಹಾರ್ನ್ ಬಳಕೆ ಮಾಡುವುದು, ಅನತ್ಯವಾಗಿ ಬಳಕೆ ಮಾಡುವುದು ಸರಿಯಲ್ಲ ಎಂದು ಸೂಚಿಸಿದ್ದಾರೆ. 

 

 

ವಾಹನ ನಿಲ್ಲಿಸಿ ಚಾಲಕರನ್ನು ಕೆಳಗಿಳಿಸಿ ಅವರದ್ದೇ ವಾಹನ ಮುಂದೆ ನಿಲ್ಲಿಸಿ ಹಾರ್ನ್ ಹಾಕಲಾಗಿದೆ. ವಿಪರೀತ ಹಾರ್ನ್ ಶಬ್ದಕ್ಕೆ ಚಾಲಕರ ಕಿವಿ ಒಡೆದಂತೆ ಭಾಸವಾಗಿದೆ. ಹಲವು ಚಾಲಕರು ತಮ್ಮ ವಾಹನದ ಹಾರ್ನ್ ಶಬ್ದ ಹೊರಗಿನಿಂದ ಹೇಗೆ ಕೇಳಿಸುತ್ತಿದೆ ಅನ್ನೋದು ಕೇಳಲು ಕೂಡ ಬಯಸಿಲ್ಲ. ಆದರೆ ಪೊಲೀಸರು ಕಡ್ಡಾಯವಾಗಿ ಕೇಳಿಸಿದ್ದಾರೆ. ಈ ವಿನೂತನ ಪ್ರಯತ್ನದಿಂದ ಇದೀಗ ಶಿವಮೊಗ್ಗದ ಸಾಗರ ಸೇರಿದಂತೆ ಕೆಲ ಪಟ್ಟಣಗಳಲ್ಲಿ ಕರ್ಕಶ ಹಾರ್ನ್ ಬಳಕೆ ಪ್ರಮಾಣ ಕಡಿಮೆ ಮಾಡುವ ಸಾಧ್ಯತೆ ಇದೆ.

ಲಾರಿ ಹಿಂದೆ 'ಹಾರ್ನ್ ಓಕೆ ಪ್ಲೀಸ್' ಬರೆಯೋದ್ಯಾಕೆ? ಇಲ್ಲಿದೆ ನೋಡಿ ಕಾರಣ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್