Russia Ukraine Crisis: ಕೈಯಲ್ಲಿ ಬಾಂಬು, ಬಾಯಲ್ಲಿ ಶಾಂತಿ ಮಂತ್ರ ಪಠಿಸುತ್ತಿದೆ ರಷ್ಯಾ

Mar 1, 2022, 12:11 PM IST

ಕೈಯಲ್ಲಿ ಬಾಂಬ್, ಕ್ಷಿಪಣಿಗಳನ್ನು ಹಿಡಿದುಕೊಂಡು ಯುದ್ಧ ಮುಂದುವರೆಸುತ್ತಿರುವ ರಷ್ಯಾ, ಬಾಯಲ್ಲಿ ಮಾತ್ರ ಶಾಂತಿ ಮಂತ್ರ ಜಪಿಸುತ್ತಿದೆ. ಸಂಧಾನದ ಬೆನ್ನಲ್ಲೇ ಉಕ್ರೇನ್ ಜನರ ಮೇಲೆ ದಾಳಿ ನಡೆಸಲ್ಲ ಎಂದಿದ್ದ ರಷ್ಯಾ, ಖಾರ್ಕೀವ್ ಜನವಸತಿ ಪ್ರದೇಶಗಳ ಮೇಲೆ ದಾಳಿ ನಡೆಸಿದೆ. ಅಪಾರ್ಟ್‌ಮೆಂಟ್‌ಗಳ ಮೇಲೆ ಕ್ಲಸ್ಟರ್ ದಾಳಿ ನಡೆಸಿದೆ. 

Operation Ganga: ಉಕ್ರೇನ್‌ನಿಂದ ಇಂದು ಐವರು ವಾಪಸ್

ಅಮೆರಿಕಾ ಸರ್ಕಾರ ಉಕ್ರೇನ್‌ನಲ್ಲಿ ಸಿಕ್ಕಿ ಬಿದ್ದಿರುವ ತನ್ನ ನಾಗರೀಕರ ತೆರವು ಕಾರ್ಯಾಚರಣೆ ತನ್ನ ಹೊಣೆಯಲ್ಲ ಎಂದು ಕೈತೊಳೆದುಕೊಂಡಿದೆ. ಇನ್ನೊಂದೆಡೆ ಭಾರತ 'ಆಪರೇಷನ್ ಗಂಗಾ' ಮೂಲಕ ಭಾರತೀಯರ ರಕ್ಷಣೆ ಮಾಡುತ್ತಿದೆ. ಭಾರತದ ಈ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತವಾಗಿದೆ.