ಪೈಝರ್‌ ಲಸಿಕೆಗೆ ಭಾರತ ಅನುಮತಿ ಕೊಡದಿರಲು ಬಲವಾದ ಕಾರಣವಿದು.!

May 7, 2021, 2:56 PM IST

ಬೆಂಗಳೂರು (ಮೇ. 07): ‘ನಿಮಗೆ ಕೊರೋನಾ ಲಸಿಕೆ ಬೇಕೇ? ಹಾಗಿದ್ದರೆ ನಿಮ್ಮ ದೇಶದ ದೂತಾವಾಸ ಕಟ್ಟಡ, ಸೇನಾ ನೆಲೆ, ವಿದೇಶಿ ಮೀಸಲಿನ ಒಂದು ಭಾಗವನ್ನು ನಮ್ಮಲ್ಲಿ ಒತ್ತೆಯಿಡಿ!’

ಹೀಗೆಂದು ಅಮೆರಿಕ ಮೂಲದ ಬಹುರಾಷ್ಟ್ರೀಯ ಔಷಧ ಕಂಪನಿ ಫೈಝರ್‌ ಬೇರೆ ಬೇರೆ ದೇಶಗಳಿಗೆ ಷರತ್ತು ವಿಧಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ತನಿಖಾ ಪತ್ರಕರ್ತರ ಸಂಘಟನೆ ಈ ವಿಷಯವನ್ನು ಬಹಿರಂಗಪಡಿಸಿದ್ದು, ಫೈಝರ್‌ ಕಂಪನಿಯು ಬಡ ದೇಶಗಳ ಮೇಲೆ ಲಸಿಕೆಯ ಹೆಸರಿನಲ್ಲಿ ದಬ್ಬಾಳಿಕೆ ನಡೆಸುತ್ತಿದೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಟೀಕೆ ಕೇಳಿಬಂದಿದೆ.

ಆಕ್ಸಿಜನ್ ಉತ್ಪಾದನೆ ಹೆಚ್ಚಿಸಲು ಸರ್ಕಾರದ ಪ್ಲ್ಯಾನ್ ಇದು..!