ಕೊರೋನಾ ನಡುವೆ ಶಾಲೆ ಪುನಾರಂಭಿಸಿದ ದೇಶಗಳ ಪರಿಸ್ಥಿತಿ ಇದು!

Jun 4, 2020, 9:49 AM IST

ಬೆಂಗಳೂರು (ಜೂ. 04): ಕೊರೋನಾ ಸಂಕಷ್ಟದ ನಡುವೆಯೇ ಶಾಲೆಗಳನ್ನು ಪುನಾರಂಭಿಸುಉವ ಬಗ್ಗೆ ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳು ಸಿದ್ಧತೆ ಆರಂಭಿಸಿವೆ. ಶಾಲೆ ಆರಂಭದ ಬಗ್ಗೆ ಇದೀಗ ಪರ- ವಿರೋಧ ಚರ್ಚೆ ಶುರುವಾಗಿದೆ. ಇದೇ ರೀತಿ ಬ್ರಿಟನ್, ಫ್ರಾನ್ಸ್, ಇಸ್ರೇಲ್ ಹಾಗೂ ಇತರೆ ದೇಶಗಳು ಲಾಕ್‌ಡೌನ್‌ಗೆ ರಿಲೀಫ್ ನೀಡಿ ಶಾಲೆಗಳನ್ನು ಆರಂಭಿಸಿವೆ. ಇದರ ಜೊತೆಗೆ ಕೊರೊನಾ ಪಾಸಿಟೀವ್‌ ಕೇಸ್‌ಗಳು ಹೆಚ್ಚಾಗಿವೆ. 

ಬ್ರಿಟನ್‌ನ ಡರ್ಬಿಯಲ್ಲಿನ ಪ್ರಾಥಮಿಕ ಶಾಲೆಯೊಂದರಲ್ಲಿ ಏಳು ಮಂದಿ ಸಿಬ್ಬಂದಿಗೆ ಕೊರೋನಾ ವೈರಸ್‌ ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಬ್ರಿಟನ್‌ನ ಶಾಲೆಗಳಲ್ಲಿ ಇನ್ನಷ್ಟುಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸಲಾಗುತ್ತಿದೆ.

ಶಾಲೆ ಆರಂಭ ಬಳಿಕ ವಿದೇಶಗಳಲ್ಲಿ ಮಕ್ಕಳಿಗೆ ಕೊರೋನಾ ಸೋಂಕು!

ಇದೇ ವೇಳೆ ಫ್ರಾನ್ಸ್‌ನಲ್ಲಿ ಕಳೆದ ವಾರದಿಂದ ಶಾಲೆಗಳು ಆರಂಭವಾಗಿದ್ದು, ವಿವಿಧ ಶಾಲೆಗಳಲ್ಲಿ 70 ಕೊರೋನಾ ವೈರಸ್‌ ಪ್ರಕರಣಗಳು ಪತ್ತೆಯಾಗಿವೆ. ಹಲವು ಮಕ್ಕಳಿಗೂ ಸೋಂಕು ಕಾಣಿಸಿಕೊಂಡಿದೆ. ಅದೇ ರೀತಿ ಇಸ್ರೇಲ್‌ನಲ್ಲಿಯೂ ಶಾಲೆಗಳು ಆರಂಭವಾದ ಬಳಿಕ ಕೊರೋನಾ ವೈರಸ್‌ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ. ಕಳೆದ ಕೆಲವು ದಿನಗಳಲ್ಲಿ 220 ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಕೊರೋನಾ ವೈರಸ್‌ ಸೋಂಕು ತಗುಲಿರುವುದು ದೃಢಪಟ್ಟಿದೆ.