2500 ವರ್ಷಗಳ ನಂತರ ಮಮ್ಮಿಗಳ ಕೆಫಿನ್‌ಗಳನ್ನು ತೆರೆದಾಗ ಕಂಡಿದ್ದೇನು? ಕಾದಿತ್ತು ಅಚ್ಚರಿ!

Oct 8, 2020, 1:46 PM IST

ಬೆಂಗಳೂರು (ಅ. 08): ಎರಡೂವರೆ ಸಾವಿರ ವರ್ಷಗಳ ಬಳಿಕ ಅಗೋಚರ ಶಕ್ತಿಯೊಂದು ಗೋರಿಯಿಂದ ಮೇಲೆದ್ದು ಬಂದಿದೆ. ಕೆಲವು ತಿಂಗಳುಗಳಿಂದ ಈಜಿಪ್ಟ್‌ನಲ್ಲಿ ಸಾಕಷ್ಟು ಮಮ್ಮಿ ಸಮಾಧಿಗಳು ಪತ್ತೆಯಾಗುತ್ತಲೇ ಇವೆ. ಈಜಿಪ್ಟ್‌ನಲ್ಲಿ ಸಕಾರ ಎನ್ನುವ ದೊಡ್ಡ ಮರಳುಗಾಡು ಪ್ರದೇಶವಿದೆ. ಥಾಸಕೇರ ಎನ್ನುವ ದೇವರ ಹೆಸರಿನ ಜಾಗ ಇದು. ಇಲ್ಲಿ ಮಮ್ಮಿಗಳ ಅನ್ವೇಷಣೆ ನಡೆಯುತ್ತಿದೆ. 

ಜಮೀನನ್ನು ಲೀಸ್‌ ಕೊಡುವ ಮುನ್ನ ರೈತರೇ ಎಚ್ಚರ; ಚಿತ್ರದುರ್ಗದಲ್ಲಿ ಖದೀಮರು ಏನ್ಮಾಡಿದ್ದಾರೆ ನೋಡಿ..!

ಇಲ್ಲಿ ಕೆಲವು ದಿನಗಳ ಹಿಂದೆ 24 ಗೋರಿಗಳು ಪತ್ತೆಯಾದರೆ, ಅದರ ಬೆನ್ನಲ್ಲೇ ಒಂದು ಕಡೆ 13, ಇನ್ನೊಂದು ಕಡೆ 14 ಗೋರಿಗಳು ಪತ್ತೆಯಾದವು. ಇವೆಲ್ಲವನ್ನು ನೋಡುತ್ತಿದ್ದ ಹಾಗೆ ಸಂಶೋಧಕರಿಗೆ ಕುತೂಹಲ ಉಂಟಾಯಿತು. ನೂರಾರು ಜನರ ಎದುರು ಲೈವ್‌ನಲ್ಲಿಯೇ ಓಪನ್ ಮಾಡಿದರು.