Asianet Suvarna News Asianet Suvarna News

ಜಮೀನನ್ನು ಲೀಸ್‌ ಕೊಡುವ ಮುನ್ನ ರೈತರೇ ಎಚ್ಚರ; ಚಿತ್ರದುರ್ಗದಲ್ಲಿ ಖದೀಮರು ಏನ್ಮಾಡಿದ್ದಾರೆ ನೋಡಿ!

Oct 8, 2020, 12:45 PM IST

ಬೆಂಗಳೂರು (ಅ. 08): ಚಿತ್ರದುರ್ಗದ ಕೆಲ ಭಾಗಗಳಲ್ಲಿ 3 ತಿಂಗಳಿಂದ ಗಾಂಜಾ ಘಾಟು ಸದ್ದು ಮಾಡುತ್ತಿದೆ. ಹೊಳಲ್ಕೆರೆ, ಮೊಳಕಾಲ್ಮೂರು, ಚಳ್ಳಕೆರೆ ಪ್ರದೇಶಗಳಲ್ಲಿ ಟೊಮ್ಯಾಟೋ ಬೆಳೆಯುತ್ತೇವೆ, ಬದನೆಕಾಯಿ ಬೆಳೆಯುತ್ತೇವೆ ಎಂದು ರೈತರಿಂದ ಜಮೀನನ್ನು ಬಾಡಿಗೆಗೆ ಪಡೆದು, ಗಾಂಜಾ ಬೆಳೆದಿದ್ದಾರೆ. ಇದೀಗ ಪೊಲೀಸರು ದಾಳಿ ಮಾಡಿ 28 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. 

ಕಲಬುರಗಿ ತೊಗರಿ ಕಣಜವೋ, ಗಾಂಜಾ ಅಡ್ಡೆಯೋ?

ರೈತರಿಂದ ಜಮೀನನ್ನು ಬಾಡಿಗೆಗೆ ಪಡೆದು ರುದ್ರೇಶ್ ಎಂಬುವವರು ಸುಮಾರು 9 ಕೋಟಿ ಮೌಲ್ಯದ ಗಾಂಜಾ ಬೆಳೆದಿದ್ದಾರೆ. ಇದೀಗ ಪೊಲೀಸರು ರುದ್ರೇಶ್‌ನನ್ನು ಹುಡುಕಾಡುತ್ತಿದ್ದಾರೆ. ಲೀಸ್‌ ಕೊಟ್ಟಿರುವ ರೈತರು ಪೊಲೀಸ್ ಸ್ಟೇಷನ್‌ಗೆ ಅಲೆಯುತ್ತಿದ್ದಾರೆ. ಜಮೀನು ಕೊಟ್ಟ ತಪ್ಪಿಗೆ ಪೊಲೀಸ್‌ ಸ್ಟೇಷನ್‌ಗೆ ಅಲೆಯುವಂತಾಗಿದೆ. 

Video Top Stories