ಮೈಸೂರು ಮೂಲದ ವೈದ್ಯೆಗೆ ಅಮೆರಿಕನ್ನರ ಸಲಾಂ: ವಿಡಿಯೋ ವೈರಲ್!

Apr 21, 2020, 1:04 PM IST

ವಾಷಿಂಗ್ಟನ್(ಏ.21): ಅಮೆರಿಕಾದಲ್ಲಿ ವೈದ್ಯರಾಗಿರುವ ಮೈಸೂರು ಮೂಲದ ಡಾ.ಉಮಾ ಮಧುಸೂಧನ್​ಗೆ ಅಲ್ಲಿಯ ಜನರು ವಿಶೇಷ ಗೌರವವೊಂದನ್ನು ಸಲ್ಲಿಸಿದ್ದಾರೆ.

ಪ್ಲಾಸ್ಮಾ ಥೆರಪಿ ಯಶಸ್ವಿ: ದೆಹಲಿ ರೋಗಿ ಚೇತರಿಕೆ!

ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡುತ್ತಿದ್ದ ಇವರಿಂದ ಗುಣಮುಖರಾದವರು, ಅಲ್ಲಿನ ಸರ್ಕಾರಿ ಸಂಸ್ಥೆಗಳ ಸಿಬ್ಬಂದಿ, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ತಮ್ಮ ವಾಹನಗಳ ಮೂಲಕ ಉಮಾರ ಮನೆ ಮುಂದೆ ಪರೇಡ್​ ನಡೆಸಿದ್ದಾರೆ.  ಈ ವೇಳೆ ಪ್ಲೇಕಾರ್ಡ್​ ಹಿಡಿದು ಕೃತಜ್ಞತೆ, ಗೌರವ ತೋರಿದ್ಧಾರೆ.

ಅಮೆರಿಕಾದಲ್ಲಿ ವೈದ್ಯರಾಗಿರುವ ಮೈಸೂರು ಮೂಲದ ಡಾ.ಉಮಾ ಮಧುಸೂಧನ್ ರವರಿಂದ ಗುಣಮುಖರಾದವರು, ಅಲ್ಲಿನ ಸರ್ಕಾರಿಸಂಸ್ಥೆಗಳು ಕೃತಜ್ಞತೆ, ಗೌರವ ತೋರಿದ ರೀತಿ ನೋಡಿ ತುಂಬಾ ಸಂತೋಷವಾಯಿತು. ಡಾ.ಉಮಾರವರ ಸೇವೆಗಳಿಗೆ ಧನ್ಯವಾದಗಳು ಎಂದು ಪ್ಲೇಕಾರ್ಡ್ ಪ್ರದರ್ಶಿಸುತ್ತಾ ಸಾಲು ಸಾಲು ವಾಹನಗಳು ಮುಂದೆ ಸಾಗಿದವು. ನಿಜಕ್ಕೂ ಸಾರ್ಥಕತೆಯನ್ನು ಕಂಡಂತಾಯಿತು.👍 pic.twitter.com/imhgvEVDTf

— Dr Sudhakar K (@mla_sudhakar)

ಅಲ್ಲಿನ ಜನರು ತೋರಿರುವ ಈ ಪ್ರೀತಿಯನ್ನು ನೋಡಿ ಸಾರ್ಥಕತೆಯನ್ನು ಕಂಡಂತಾಯ್ತು ಅಂತಾ ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್​ ಟ್ವೀಟ್​ ಮಾಡಿದ್ದಾರೆ.