ಕೋಲಾರ ಸರ್ಕಾರಿ ಆಸ್ಪತ್ರೆ ನಿರ್ಲಕ್ಷ್ಯ, ಹೆರಿಗೆ ಶಸ್ತ್ರಚಿಕಿತ್ಸೆ ಬಳಿಕ ಹೊಟ್ಟೆಯಲ್ಲಿ 3 ಅಡಿ ಬಟ್ಟೆ ಬಿಟ್ಟ ವೈದ್ಯೆ!

By Chethan KumarFirst Published May 17, 2024, 8:21 PM IST
Highlights

ಹೆರಿಗೆಗೆ ಕೋಲಾರ ಸರ್ಕಾರಿ ಜಿಲ್ಲಾಸ್ಪತ್ರೆಗೆ ಬಂದ ಮಹಿಳೆಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿದೆ. ಆದರೆ 5 ದಿನಗಳ ಬಳಿಕ ತೀವ್ರ ನೋವಿನಿಂದ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಆಘಾತ ಎದುರಾಗಿದೆ. 3 ಅಡಿ ಉದ್ದದ ಬಟ್ಟೆಯನ್ನು ಮಹಿಳೆ ಹೊಟ್ಟೆಯಲ್ಲೇ ಬಿಟ್ಟ ಘಟನೆ ವರದಿಯಾಗಿದೆ.
 

ಕೋಲಾರ(ಮೇ.17) ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಇದೀಗ ಜನರು ಹಿಂದೇಟು ಹಾಕುವ ಪರಿಸ್ಥಿತಿ ಎದುರಾಗಿದೆ. ಹಲವು ನಿರ್ಲಕ್ಷ್ಯದ ಘಟನೆಗಳು ಈಗಾಗಲೇ ವರದಿಯಾಗಿದೆ. ಇದೀಗ ಕೋಲಾರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಎಡವಟ್ಟಿಗೆ ಕ್ಷಮೆಯೇ ಇಲ್ಲದಾಗಿದೆ. ಹೆರಿಗೆಗೆಂದು ಆಸ್ಪತ್ರೆ ಆಗಮಿಸಿದ ಮಹಿಳೆಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿದೆ. ಆದರೆ ಹೆರಿಗೆ ವೇಳೆ ವೈದ್ಯೆ ಬಳಸಿದ ಬಟ್ಟೆಯನ್ನು ಮಹಿಳೆ ಹೊಟ್ಟೆಯಲ್ಲೇ ಬಿಟ್ಟಿದ್ದಾರೆ. 5 ದಿನಗಳ ಬಳಿಕ ತೀವ್ರ ನೋವು ಕಾಣಿಸಿಕೊಂಡು ಮತ್ತೆ ಆಸ್ಪತ್ರೆ ಬೇಟಿ ಮಾಡಿದರೆ ಮುಲಾಮು ಹಚ್ಚಿ ಎಂದು ಮತ್ತೆ ನಿರ್ಲಕ್ಷ್ಯ ತೋರಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ವೈದ್ಯರ ಎಡವಟ್ಟು ಬಯಲಾಗಿದೆ.

ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ರಾಮಸಾಗರ ನಿವಾಸಿ ಚಂದ್ರಿಕಾ ಹೆರಿಗಾಗಿ ಜಿಲ್ಲಾ ಆಸ್ಪತ್ರೆಗೆ ಆಗಮಿಸಿದ್ದಾರೆ. ಪತಿ ರಾಜೇಶ್ ಜೊತೆ ಆಗಮಿಸಿದ ಚಂದ್ರಿಕಾ ಅಗತ್ಯ ದಾಖಲೆ ಪತ್ರ ನೀಡಿ ಅಡ್ಮಿಷನ್ ಮಾಡಿಸಿಕೊಂಡಿದ್ದಾರೆ. ಹೆರಿಗೆ ನೋವು ಹೆಚ್ಚಾದಾಗ ನಾರ್ಮಲ್ ಡೆಲವರಿ ಕಷ್ಟವಾಗುತ್ತಿದೆ. ಹೀಗಾಗಿ ಸರ್ಜರಿ ಮಾಡುವುದಾಗಿ ವೈದ್ಯೆ ನಾಗವೇಣಿ ಸೂಚಿಸಿದ್ದಾರೆ.

Latest Videos

ಡಾಕ್ಟರ್ ಬದ್ಲು ಕಾಂಪೌಂಡರ್ ಮಾಡಿದ ಫ್ಯಾಮಿಲಿ ಪ್ಲಾನಿಂಗ್ ಆಪರೇಷನ್‌ಗೆ ಮಹಿಳೆ ಬಲಿ!

ಚಂದ್ರಿಕಾ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮಗು ಆರೋಗ್ಯವಾಗಿತ್ತು. ಮರು ದಿನವೇ ಚಂದ್ರಿಕಾ ಹೊಟ್ಟೆಯ ಭಾಗದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ತೀವ್ರ ನೋವ ಉಲ್ಭಣಗೊಂಡಿದೆ. ಈ ಕುರಿತು ವೈದ್ಯೆ ನಾಗವೇಣಿ ಬಳಿ ಹೇಳಿಕೊಂಡಿದ್ದಾರೆ. ತಾಪಸಣೆ ನಡೆಸಿದ ವೈದ್ಯೆ ನಾಗವೇಣಿ, ಏನೂ ಸಮಸ್ಯೆ ಇಲ್ಲ, ಮುಲಾಮ್ ಹಚ್ಚಿ ಎಂದಿದ್ದಾರೆ. 

ಆದರೆ 5 ದಿನಗಳ ಬಳಿಕ ತೀವ್ರ ನೋವು ಕಾಣಿಸಿಕೊಂಡಿದೆ. ಆರೋಗ್ಯ ಏರುಪೇರಾಗಲು ಆರಂಭಿಸಿದೆ. ಹೀಗಾಗಿ ಪತಿ ರಾಜೇಶ್ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷಿಸಲು ಮುಂದಾಗಿದ್ದಾರೆ. ಕೋಲಾರದ ಖಾಸಗಿ ಆಸ್ಪತ್ರೆಗೆ ಪತ್ನಿ ಚಂದ್ರಿಕಾಳನ್ನು ಕರೆದುಕೊಂಡು ಹೋಗಿ ಆಡ್ಮಿಟ್ ಮಾಡಿಸಲಾಗಿದೆ. ವೈದ್ಯರು ಸ್ಕ್ರಾನ್ ಮಾಡಿ ನೋಡಿದಾಗಗ ಆಘಾವಾಗಿದೆ. ಬರೋಬ್ಬರಿ 3 ಅಡಿ ಉದ್ದದ ಬಟ್ಟೆಯನ್ನು ಶಸ್ತ್ರಚಿಕಿತ್ಸೆ ವೇಳೆ ಮಹಿಳೆಯ ಹೊಟ್ಟೆಯಲ್ಲಿ ಬಿಡಲಾಗಿದೆ.

ಖಾಸಗಿ ಆಸ್ಪತ್ರೆಯಲ್ಲಿ ಮತ್ತೆ ಸರ್ಜರಿ ಮಾಡಿ ಬಟ್ಟೆ ಹೊರತೆಗೆಯಲಾಗಿದೆ. ಇತ್ತ ಚಂದ್ರಿಕಾ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆ ವೈದ್ಯರ ಎಡವಟ್ಟು, ನಿರ್ಲಕ್ಷ್ಯದ ವಿರುದ್ಧ ಪತಿ ರಾಜೇಶ್ ಹಾಗೂ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದರೆ. ಕೋಲಾರ ಜಿಲ್ಲಾಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ. ವಿಜಯ್ ಕುಮಾರ್‌ಗೆ ದೂರು ನೀಡಲಾಗಿದೆ.

ವೈದ್ಯಾಧಿಕಾರಿ ನಿರ್ಲಕ್ಷ್ಯ ದಿಂದ ಹೆರಿಗೆ ಬಳಿಕ ತೀವ್ರ ರಕ್ತಸ್ರಾವದಿಂದ ಮಹಿಳೆ ಸಾವು!
 

click me!