ಮಾಧ್ಯಮ ಕ್ಷೇತ್ರದಲ್ಲಿ ಏಷ್ಯಾನೆಟ್ ಸುವರ್ಣಾ ನ್ಯೂಸ್ ನ ಹಿರಿಯ ವಿಡಿಯೋ ಎಡಿಟರ್ ಕೆ. ನಂದಾ ಅವರು ಮಹಿಳಾ ಸಾಧಕಿ ಪ್ರಶಸ್ತಿ ಪಡೆದಿದ್ದಾರೆ.
ಬೆಂಗಳೂರು(ಮಾ.31): ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (Press Council of India) ಮತ್ತು ದಿ ನ್ಯೂಸ್ ಪೇಪರ್ ಅಸೋಸಿಯೇಷನ್ ಆಫ್ ಕರ್ನಾಟಕ (The Newspapers Association Of Karnataka) ವತಿಯಿಂದ ಮಹಿಳಾ ಸಾಧಕಿಯರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಮಾಧ್ಯಮ ಕ್ಷೇತ್ರದಲ್ಲಿ ಏಷ್ಯಾನೆಟ್ ಸುವರ್ಣಾ ನ್ಯೂಸ್ ನ ಹಿರಿಯ ವಿಡಿಯೋ ಎಡಿಟರ್ ಕೆ. ನಂದಾ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸ್ತ್ರೀರೋಗ ತಜ್ಞೆ Dr Archana Sharma ಆತ್ಮಹತ್ಯೆ ಪ್ರಕರಣದಲ್ಲಿ ಪತ್ರಕರ್ತ, ರಾಜಕಾರಣಿಗಳಿಗೆ ನಂಟು!
ಕಾರ್ಯಕ್ರಮದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಭಾಗಿಯಾಗಿದ್ರು. ಇದೇ ವೇಳೆ ನಟಿ ಪೂಜಾ ಲೋಕೇಶ್ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕಿಯರಿಗೂ ಪ್ರಶಸ್ತಿ ನೀಡಿ ಗೌರವಿಸಲಾಯ್ತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಂದಾ ಅವರು ತನಗೆ ಬೆನ್ನೆಲುಬಾಗಿ ನಿಂತ ಕುಟುಂಬ, ಸಹುದ್ಯೋಗಿಗಳು, ಸ್ನೇಹಿತರಿಗೆ ಕೃತಜ್ಞ ಎಂದಿದ್ದಾರೆ.