ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!

ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!

Published : Nov 25, 2025, 02:46 PM IST

ಹೌದು ಖುಷಿಯಾಗೇ ಹೋದೆ ಖುಷಿಯಾಗಿ ಬಂದೆ ಅನ್ನೋ ರಿಷಾ , ಈ ಜರ್ನಿಯಿಂದ ತುಂಬಾ ಕಲಿತಿದ್ದೀನಿ ಅಂತಾರೆ. ಕಡಿಮೆ ಸಮಯ ಇದ್ರೂ ರಿಷಾ ದೊಡ್ಮನೆಯಲ್ಲಿ ದೊಡ್ಡ ಸಂಚಲನ ಮೂಡಿಸಿದ್ದು ಸುಳ್ಳಲ್ಲ. ಅದ್ರಲ್ಲೂ ಗಿಲ್ಲಿ ಮೇಲೆ ಹಲ್ಲೆ ಮಾಡಿದ ಎಪಿಸೋಡ್ ಅಂತೂ ರಾಜ್ಯಾದ್ಯಂತ ಸದ್ದು ಮಾಡಿತ್ತು.

ಬಿಗ್​ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದ ರಿಷಾ ಗೌಡ (Risha Gowda) ದೊಡ್ಮನೆಯಿಂದ ಹೊರಗೆ ಬಂದಿದ್ದಾರೆ. ಬಿಗ್​ಬಾಸ್ ಮನೆಯೊಳಗೆ ಬೆಂಕಿ ಬಿರುಗಾಳಿಯಂತೆ ಎಂಟ್ರಿ ಕೊಟ್ಟಿದ್ದ ರಿಷಾ ಬಹುಬೇಗ ತಣ್ಣಗಾಗಿ ಹೊರಬಂದಿದ್ದಾರೆ. ರಿಷಾ ಬಿಗ್​ ಜರ್ನಿ ಇಷ್ಟು ಬೇಗ ಮುಗಿದ್ದೇಕೆ..? ಖುದ್ದು ರಿಷಾ ಏನಂತಾರೆ ನೋಡೋಣ ಬನ್ನಿ.

ಬೆಂಕಿಯಂತೆ ಎಂಟ್ರಿ ಕೊಟ್ಟಿದ್ದ ರಿಷಾ ಗೌಡ, ಐದೇ ವಾರಕ್ಕೆ ಔಟ್ ಆದ ಜಂಬದ ಹುಡುಗಿ
ಯೆಸ್ ಈ ಸಾರಿಯ ಬಿಗ್​ಬಾಸ್​​ಗೆ ಮೂವರು ಸ್ಪರ್ಧಿಗಳು ಒಟ್ಟೊಟ್ಟಿಗೆ ಎಂಟ್ರಿ ಕೊಟ್ಟಿದ್ರು. ರಘು, ಸೂರಜ್ ಜೊತೆಗೆ ದೊಡ್ಮನೆ ಒಳಗೆ ಹೋಗಿದ್ದ ರಿಷಾ ಗೌಡ, ಆರಂಭದಲ್ಲೇ ಬೆಂಕಿ ಬಿರುಗಾಳಿಯಂತೆ ಕಾಣಿಸಿದ್ರು. ಆದ್ರೆ ಬಂದಷ್ಟೇ ವೇಗದಲ್ಲಿ ರಿಷಾ ಮನೆಯಿಂದ ಹೊರಬಂದಿದ್ದಾರೆ.

ಹೌದು ಖುಷಿಯಾಗೇ ಹೋದೆ ಖುಷಿಯಾಗಿ ಬಂದೆ ಅನ್ನೋ ರಿಷಾ , ಈ ಜರ್ನಿಯಿಂದ ತುಂಬಾ ಕಲಿತಿದ್ದೀನಿ ಅಂತಾರೆ. ಕಡಿಮೆ ಸಮಯ ಇದ್ರೂ ರಿಷಾ ದೊಡ್ಮನೆಯಲ್ಲಿ ದೊಡ್ಡ ಸಂಚಲನ ಮೂಡಿಸಿದ್ದು ಸುಳ್ಳಲ್ಲ. ಅದ್ರಲ್ಲೂ ಗಿಲ್ಲಿ ಮೇಲೆ ಹಲ್ಲೆ ಮಾಡಿದ ಎಪಿಸೋಡ್ ಅಂತೂ ರಾಜ್ಯಾದ್ಯಂತ ಸದ್ದು ಮಾಡಿತ್ತು.

ಗಿಲ್ಲಿ ಮೇಲೆ ಹಲ್ಲೆ ಮಾಡಿದ್ದೇ ರಿಷಾಗೆ ಮುಳ್ಳಾಯ್ತಾ..?
ಹೌದು ರಿಷಾ ಗೌಡ ಸಿಟ್ಟಿನ ಭರದಲ್ಲಿ ಗಿಲ್ಲಿಗೆ ಹೊಡೆದಿದ್ದು ಜನರ ಕೋಪ ಕೆರಳುವಂತೆ ಮಾಡಿತ್ತು. ಬಿಗ್ ಬಾಸ್ ಸ್ಪರ್ಧಿಗಳು ಕ್ಷಮಿಸಿದ್ರೂ ರಿಷಾನ ಜನರು ಕ್ಷಮಿಸಲಿಲ್ಲ.

ಹೊರಗೆ ಬಂದ ಮೇಲೂ ಗಿಲ್ಲಿ ಜೊತೆ ಚೆನ್ನಾಗಿ ಇರ್ತೀನಿ ಅಂತಾರೆ ರಿಷಾ. ಇನ್ನೂ ಈ ಸಾರಿ ಬಿಗ್ ಬಾಸ್ ಟ್ರೋಫಿಯನ್ನ ಹೆಣ್ಣುಮಕ್ಕಳು ಗೆಲ್ಲಬೇಕು ಅನ್ನೋದು ರಿಷಾ ಆಸೆ. ಅದ್ರಲ್ಲೂ ಅಶ್ವಿನಿ ತನ್ನ ಅಹಂಕಾರ ಬಿಟ್ಟು ಆಟ ಆಡಿದ್ರೆ ಅವರೇ ಗೆಲ್ಲೋದು ಅಂತಾರೆ, ಮಿಸ್ ಆದ್ರೆ ರಕ್ಷಿತಾ ಕೂಡ ಗೆಲ್ಲೋ ಸ್ಪರ್ಧಿ ಅಂತಾರೆ ರಿಷಾ ಗೌಡ.

ಒಟ್ಟಾರೆ ರಿಷಾ ಬಿಗ್ ಬಾಸ್ ಆಟ ಮುಗಿದಿದೆ. ರಿಷಾ ಆಸೆಯಂತೆ ಈ ಸಾರಿ ದೊಡ್ಮನೆಯಲ್ಲಿ ಮಹಿಳಾ ಸ್ಪರ್ಧಿ ವಿನ್ನರ್ ಆಗಬಹುದಾ..? ಕಾದುನೋಡಬೇಕಿದೆ.

05:43ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:12BBK 12: ಅಂಥಂಥ ಮಾತಾಡಿ ಅಶ್ವಿನಿ ಗೌಡಗೆ ಕ್ಯಾಪ್ಟನ್ಸಿ ಸಿಗದಂತೆ ಮಾಡಿದ ಗಿಲ್ಲಿ ನಟ!
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
06:04ಬಿಗ್​ಬಾಸ್ ಅಗ್ನಿ ಪರೀಕ್ಷೆ, ಬಿಗ್​ ಬಾಸ್ ಮನೆಯಲ್ಲಿ ಗಿಲ್ಲಿಯ ಪ್ರೇಮಕಾವ್ಯ..!
06:01ಗಿಲ್ಲಿ ಮೇಲೆ ಹಲ್ಲೆ ಮಾಡಿಯೂ ಬಚಾವ್ ಆದ್ರಾ ರಿಷಾ ಗೌಡ? ಕಿಚ್ಚ ಸುದೀಪ್ ಎದುರೇ ಕಿಕ್​ ಔಟ್?
05:38ಅಂದು ಒಳ್ಳೆ ಹುಡುಗ ಪ್ರಥಮ್‌ ಸೀಸನ್‌ನಲ್ಲಿ ನಡೆದ ಘಟನೆ ಈಗ Bigg Boss Kannada 12 ಶೋನಲ್ಲಿ ನಡೆದುಹೋಯ್ತು!
02:28ಆಡಿಕೊಳ್ಳೋರಿಗೆ ಒಂದೇ ಒಂದು ಫೋಟೋದಲ್ಲಿ ಬಾಯಿ ಮುಚ್ಚಿಸಿದ Bollywood Actor Salman Khan
06:42ಬಿಗ್​ ಬಾಸ್ ಮನೆಯೊಳಗೆ ನಡೀತಿದೆಯಾ ಕಳ್ಳಾಟ? ಕಲರ್ ಕಲರ್ ಗೇಮ್ ಆಡ್ತಾ ಇರೋದು ಯಾರು?
Read more