ರವಿಮಾಮನ ಎದುರು ಗಿಲ್ಲಿ ಲವ್ ಸ್ಟೋರಿ: ರಾಜಾಹುಲಿ ಕಥೆ ಹೇಳಿ ಯಾಮಾರಿಸಿದ್ನಾ ಗಿಲ್ಲಿ?

ರವಿಮಾಮನ ಎದುರು ಗಿಲ್ಲಿ ಲವ್ ಸ್ಟೋರಿ: ರಾಜಾಹುಲಿ ಕಥೆ ಹೇಳಿ ಯಾಮಾರಿಸಿದ್ನಾ ಗಿಲ್ಲಿ?

Published : Dec 20, 2025, 07:25 PM IST

ಬಿಗ್​ ಬಾಸ್ ನೋಡುಗರಿಗೆಲ್ಲಾ ಗಿಲ್ಲಿ-ಕಾವ್ಯಾ ಲವ್ ಸ್ಟೋರಿ ಗೊತ್ತೇ ಇದೆ. ಆದ್ರೆ ಈಗ ಗಿಲ್ಲಿ ತನ್ನ ಅಸಲಿ ಲವ್ ಸ್ಟೋರಿ ಹೇಳಿದ್ದಾನೆ. ಬಿಗ್ ಬಾಸ್ ಮನೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ವಿಸಿಟ್ ಕೊಟ್ಟ ವೇಳೆ ತನ್ನ ಪ್ರೇಮಲೋಕ ತೆರೆದಿಟ್ಟಿದ್ದಾನೆ ಗಿಲ್ಲಿ ನಟ.

ಬಿಗ್​ ಬಾಸ್ ನೋಡುಗರಿಗೆಲ್ಲಾ ಗಿಲ್ಲಿ-ಕಾವ್ಯಾ ಲವ್ ಸ್ಟೋರಿ ಗೊತ್ತೇ ಇದೆ. ಆದ್ರೆ ಈಗ ಗಿಲ್ಲಿ ತನ್ನ ಅಸಲಿ ಲವ್ ಸ್ಟೋರಿ ಹೇಳಿದ್ದಾನೆ. ಬಿಗ್ ಬಾಸ್ ಮನೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ವಿಸಿಟ್ ಕೊಟ್ಟ ವೇಳೆ ತನ್ನ ಪ್ರೇಮಲೋಕ ತೆರೆದಿಟ್ಟಿದ್ದಾನೆ ಗಿಲ್ಲಿ ನಟ. ಈ ವಾರ ಬಿಗ್ ಬಾಸ್ ಮನೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಭೇಟಿ ಕೊಟ್ಟಿದ್ದಾರೆ. ಅಷ್ಟಕ್ಕೂ ರವಿಮಾಮ ದೊಡ್ಮನೆಗೆ ಹೋಗಿದ್ದು ಅವರು ನಟನೆ ಮಾಡಿರೋದು ಪ್ಯಾರ್ ಅನ್ನೋ ಸಿನಿಮಾದ ಪ್ರಚಾರಕ್ಕಾಗಿ. ವಿಶೇಷ ಅಂದ್ರೆ ಈ ಸಿನಿಮಾದಲ್ಲಿ ಬಿಗ್ ಬಾಸ್ ಸ್ಪರ್ಧಿ ರಾಶಿಕಾನೇ ನಾಯಕಿ. ರಾಶಿಕಾ ತಂದೆ ಪಾತ್ರ ಮಾಡಿದ್ದಾರೆ ಕ್ರೇಜಿಸ್ಟಾರ್ ರವಿಚಂದ್ರನ್. ರವಿಚಂದ್ರನ್ ಇದ್ದಲ್ಲಿ ಪ್ರೇಮಕಥೆ ಇರಲೇಬೇಕಲ್ವಾ.

ಸೋ ಬಿಗ್ ಬಾಸ್ ಸದಸ್ಯರನ್ನ ಕೂರಿಸಿಕೊಂಡು ಅವರ ಮೊದಲ ಪ್ರೇಮಕಥೆ ಹೇಳಿಸಿದ್ದಾರೆ ರವಿಚಂದ್ರನ್. ಜೊತೆಗೆ ತಮ್ಮ ಮೊದಲ ಪ್ರೇಮಕಥೆಯನ್ನೂ ಸ್ಪರ್ಧಿಗಳ ಮುಂದೆ ಹೇಳಿದ್ದಾರೆ. ಯೆಸ್ ಒಬ್ಬೊಬ್ರೆ ಸ್ಪರ್ಧಿಗಳು ಅವರವರ ಪ್ರೇಮ್ ಕಹಾನಿ ಹೇಳಿದ್ದಾರೆ. ಗಿಲ್ಲಿ ನಟ ಕೂಡ ತನ್ನ ಲವ್ ಸ್ಟೋರಿನ ಹೇಳಿಕೊಂಡಿದ್ದಾನೆ. ಈ ಸೀಸನ್​ ಗೆ ಬಂದಾಗಿಂದಲೂ ಕಾವು ಕಾವು ಹೇಳ್ತಾ, ಕಾವ್ಯಾ ಹಿಂದೆ ಬಿದ್ದಿರೋ ಗಿಲ್ಲಿ ತನ್ನ ಅಸಲಿ ಪ್ರೇಮಕಾವ್ಯನ ತೆರೆದಿಟ್ಟಿದ್ದಾನೆ. ಹೌದು ಗಿಲ್ಲಿ ಐಟಿಐ ಓದೋವಾಗ ಬಸ್​ ನಲ್ಲಿ ಒಂದು ಹುಡುಗಿ ನೋಡ್ತಾ ಇದ್ದೆ.. ಆಕೆ ಮೇಲೆ ಲವ್ ಆಗಿತ್ತು ಅಂತ ಕಥೆ ಹೇಳಿದ್ದಾನೆ. ಆದ್ರೆ ಇದನ್ನ ಕೇಳಿದ ರವಿಮಾಮ ರಾಜಾಹುಲಿ ಕಥೆ ಹೇಳ್ತಾ ಇದ್ದಿಯೇನೋ ಅಂತ ತರಾಟೆ ತೆಗೆದುಕೊಂಡಿದ್ದಾರೆ.

ಅಸಲಿಗೆ ಗಿಲ್ಲಿಯ ಲವ್ ಎಪಿಸೋಡ್ ಒಂದಲ್ಲಾ ಎರಡಲ್ಲ. ಒಂದೊಂದು ರಿಯಾಲಿಟಿ ಶೋನಲ್ಲೂ ಗಿಲ್ಲಿಯದ್ದು ಲವ್ ಟ್ರ್ಯಾಕ್ ಇದ್ದೇ ಇರುತ್ತೆ. ಭರ್ಜರಿ ಭ್ಯಾಚುಲರ್ ನಲ್ಲಿ ಯಶಸ್ವಿನಿ ಜೊತೆ ಗಿಲ್ಲಿ ಲವ್ ಸಾಂಗ್ ಹಾಡಿದ್ದ. ಇನ್ನೂ ಡಿಕೆಡಿಗೆ ಬಂದ ಮೇಲೆ ಗಿಲ್ಲಿ-ಗಗನ ಲವ್ ಸ್ಟೋರಿ ಶುರುವಾಯ್ತು. ಈ ಜೋಡಿಯಂತೂ ಕರ್ನಾಟಕದಲ್ಲಿ ಮನೆಮಾತಾಗಿಬಿಟ್ಟಿತ್ತು. ಮತ್ತೀಗ ಬಿಗ್ ಬಾಸ್​​ಗೆ ಬಂದ ಮೇಲೆ ಗಿಲ್ಲಿ ಕಾವ್ಯಾ ಹಿಂದೆ ಸುತ್ತತಾ ಇನ್ನೊಂದು ಲವ್ ಟ್ರಾಕ್ ಓಪನ್ ಮಾಡಿದ್ದ. ಈಗ ನೋಡಿದ್ರೆ ರವಿಮಾಮನ ಎದರು ತನ್ನ ಅಸಲಿ ಲವ್ ಸ್ಟೋರಿ ಅಂತ ರಾಜಾಹುಲಿ ಸ್ಟೋರಿ ಹೇಳಿದ್ದಾನೆ.  ಇದನ್ನ ನೋಡಿದ ಜನ ಗಿಲ್ಲಿನ ಭಲೇ ಕಿಲಾಡಿ ಅಂತಿದ್ದಾರೆ.

04:49ದೊಡ್ಮನೆಯಲ್ಲಿ ಪ್ರೇಮ, ಜಗಳ, ಡ್ರಾಮಾ: ಸೇರಿಗೆ ಸವಾ ಸೆರ್.. ಕಾವ್ಯಗೆ ಗಿಲ್ಲಿ ಕೌಂಟರ್!
06:49ಕ್ಯಾಪ್ಟನ್ಸಿ ಟಾಸ್ಕ್‌ಗಾಗಿ ರಕ್ತ ಹರಿಸಿದ ಸ್ಪರ್ಧಿಗಳು: ರಜತ್-ಚೈತ್ರಾ ನಡುವೆ ತಂದಿಕ್ಕಿ ತಮಾಷೆ ನೋಡಿದ ಗಿಲ್ಲಿ
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
03:58ಬಿಗ್ ​ಬಾಸ್​ನಿಂದ ಬಿಗ್​ ಬಾಸೇ ಔಟ್.. ದೊಡ್ಮನೆಯಲ್ಲಿ ವಿಲನ್ ಟಾಸ್ಕ್‌ಗಳಿಂದ ಬೆಚ್ಚಿಬಿದ್ದ ಸ್ಪರ್ಧಿಗಳು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
05:43ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
Read more