
Bigg Boss Kannada Season 12 Updates: ಬಿಗ್ ಬಾಸ್ ನಲ್ಲಿ ಈ ವಾರವಿಡೀ ಗಿಲ್ಲಿ ಆಂಡ್ ಅಶ್ವಿನಿ ಗೌಡ ವಾರ್ ಕಂಟಿನ್ಯೂ ಆಗಿದೆ. ಅದರಲ್ಲೂ ಶುಕ್ರವಾರ ಸಿಕ್ಕ ಟಾಸ್ಕ್ ನ ಬಳಸಿಕೊಂಡು ಅಶ್ವಿನಿಯನ್ನ ರೋಸ್ಟ್ ಮಾಡಿ ಹಾಕಿದ್ದಾನೆ ಗಿಲ್ಲಿ.
ಈ ವಾರದ ಶುರುವಿನಿಂದಲೂ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟನ ನಡುವೆ ನಡೆದ ವಾರ್ ವಿಷ್ಯ ಗೊತ್ತೇ ಇದೆ. ಟಾಸ್ಕ್ ಒಂದರಲ್ಲಿ ಉಸ್ತುವಾರಿ ಆಗಿದ್ದ ಗಿಲ್ಲಿ, ಅಶ್ವಿನಿ ಆಟ ನಿಲ್ಲಿಸಿ ಪರಸ್ಪರ ಕಿತ್ತಾಟಕ್ಕೆ ಇಳಿದುದ್ರು. ರಘು ಏಕವಚನದಲ್ಲಿ ಮಾತನಾಡಿದರು ಅಂತ ಅಶ್ವಿನಿ ಉಪವಾಸ ಶುರು ಮಾಡಿದ್ರು. ಗುರುವಾರ ಟಾಸ್ಕ್ ನಲ್ಲಿ ಚಾನ್ಸ್ ಸಿಕ್ಕಿದ್ದೇ ಸಿಕ್ಕಿದ್ದು, ಗಿಲ್ಲಿ ಅಶ್ವಿನಿ ಕಳ್ಳಾಟ ನೆಲ್ಲಾ ಬಯಲು ಮಾಡಿದ್ದಾನೆ. ನೀವು ಏಕವಚನದಲ್ಲಿ ಮಾತನಾಡಿದ್ರೆ ಸರಿ, ನಾವು ಆಡಿದ್ರೆ ತಪ್ಪ ಅಂತಾ ಪ್ರಶ್ನೆ ಮಾಡಿ ಬೆಂಡೆತ್ತಿದ್ದಾನೆ. ನಿನ್ನಂಥವರನ್ನ ತುಂಬಾ ಜನ ನೋಡಿದ್ದೀನಿ ಅಂತ ಅಶ್ವಿನಿ ಹೇಳಿದ್ದಕ್ಕೆ , ಆದ್ರೆ ನನ್ನನ್ನ ನೋಡಿರೋಕೆ ಸಾಧ್ಯ ಇಲ್ಲ ಬಿಡಿ ಅಂತ ಸವಾಲ್ ಹಾಕಿದ್ದಾನೆ ಗಿಲ್ಲಿ. ಕಾಲು ಮೇಲೆ ಹಾಕಿ ಕೂತು ಅಶ್ವಿನಿ ಕೋಪಕ್ಕೆ ತುಪ್ಪ ಸುರಿದಿದ್ದಾನೆ. ಈ ಸಾರಿ ಬಿಗ್ ಬಾಸ್ ಶೋ ಆರಂಭದಿಂದಲೂ ಗಿಲ್ಲಿ ಆಂಡ್ ಅಶ್ವಿನಿ ಗೌಡ ನಡುವೆ ಮಾರಾಮಾರಿ ನಡೀತಾನೆ ಇದೆ. ಇಬ್ಬರ ಈ ಜುಗಲ್ ಬಂದಿ ವೀಕ್ಷಕರಿಗೆ ಸಖತ್ ಥ್ರಿಲ್ ಕೊಟ್ಟಿದೆ. ಈ ವಾರ ನಡೆದ ಈ ವಾರ್ ಗೆ ಕಿಚ್ಚ ಪಂಚಾಯ್ತಿಯಲ್ಲಿ ಏನ್ ತೀರ್ಪು ಕೊಡ್ತಾರೆ ಕಾದುನೋಡಬೇಕು.